logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Swachhata Hi Seva: ಗಾಂಧಿ ಜಯಂತಿ: ಕರ್ನಾಟಕದಲ್ಲೂ ಸ್ವಚ್ಛತಾ ಕಾರ್ಯಕ್ಕೆ ಜತೆಗೂಡಿದ ಸಾವಿರಾರು ಕೈಗಳು

Swachhata Hi Seva: ಗಾಂಧಿ ಜಯಂತಿ: ಕರ್ನಾಟಕದಲ್ಲೂ ಸ್ವಚ್ಛತಾ ಕಾರ್ಯಕ್ಕೆ ಜತೆಗೂಡಿದ ಸಾವಿರಾರು ಕೈಗಳು

Oct 01, 2023 02:45 PM IST

cleanliness drive ಭಾರತದಲ್ಲಿ ಸ್ವಚ್ಚತಾ ಅಭಿಯಾನ ಜೋರಾಗಿಯೇ ಇದೆ. ಮಹಾತ್ಮಗಾಂಧಿ ಅವರ ಆಶಯದಂತೆ ನಿಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಎನ್ನುವ ಕರೆಗೆ ಸ್ಪಂದಿಸಿ ಭಾನುವಾರ ಸ್ವಚ್ಚತಾ ಹೀ ಸೇವಾ ಆಂದೋಲನ ನಡೆಸಲಾಯಿತು. ಪ್ರಧಾನಿ ಮೋದಿ ದೆಹಲಿಯಲ್ಲಿ ಭಾಗಿಯಾದರೆ ಕರ್ನಾಟಕದಲ್ಲೂ ಸಹಸ್ರಾರು ಕೈಗಳು ಸ್ವಚ್ಛತೆಗೆ ಕೈ ಜೋಡಿಸಿದವು. ಹೀಗಿತ್ತು ಅಭಿಯಾನದ ನೋಟ..

  • cleanliness drive ಭಾರತದಲ್ಲಿ ಸ್ವಚ್ಚತಾ ಅಭಿಯಾನ ಜೋರಾಗಿಯೇ ಇದೆ. ಮಹಾತ್ಮಗಾಂಧಿ ಅವರ ಆಶಯದಂತೆ ನಿಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಎನ್ನುವ ಕರೆಗೆ ಸ್ಪಂದಿಸಿ ಭಾನುವಾರ ಸ್ವಚ್ಚತಾ ಹೀ ಸೇವಾ ಆಂದೋಲನ ನಡೆಸಲಾಯಿತು. ಪ್ರಧಾನಿ ಮೋದಿ ದೆಹಲಿಯಲ್ಲಿ ಭಾಗಿಯಾದರೆ ಕರ್ನಾಟಕದಲ್ಲೂ ಸಹಸ್ರಾರು ಕೈಗಳು ಸ್ವಚ್ಛತೆಗೆ ಕೈ ಜೋಡಿಸಿದವು. ಹೀಗಿತ್ತು ಅಭಿಯಾನದ ನೋಟ..
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸ್ವಚ್ಛತಾ ಅಭಿಯಾನಕ್ಕೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ, ಎಸ್ಪಿ ಯತೀಶ್‌, ಹೆಚ್ಚುವರಿ ಡಿಸಿ ಡಾ.ನಾಗರಾಜ್‌ ಮತ್ತಿತರರು ಭಾಗಿಯಾದರು.
(1 / 9)

ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ಖುದ್ದು ಶಾಸಕ ಯು.ಬಿ.ಬಣಕಾರ್‌ ಸ್ವಚ್ಛಗೊಳಿಸುವ ಜತೆಗೆ ಕಸವನ್ನು ಗಾಡಿಗೆ ತುಂಬಿದರು.
(2 / 9)

ರಾಯಚೂರು ಜಿಲ್ಲೆ ಮಾನ್ವಿ ಬಸ್‌ ನಿಲ್ದಾಣದಲ್ಲಿ ಶಾಸಕ ಹಂಪಯ್ಯ ನಾಯಕ ಬಲ್ಲಟಗಿ ನೇತೃತ್ವದಲ್ಲಿ ಸ್ವಚ್ಛತಾ ಚಟುವಟಿಕೆಗಳು ನಡೆದವು.
(3 / 9)

ಮಂಡ್ಯದ ಆಯುಷ್‌ ಇಲಾಖೆ ಆವರಣದಲ್ಲಿ ಅಲ್ಲಿನ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿದರು,.
(4 / 9)

ಆದಾಯ ತೆರಿಗೆ ಕರ್ನಾಟಕ ಹಾಗೂ ಗೋವಾ ವೃತ್ತದ ಅಧಿಕಾರಿಗಳು ಹಾಸನ ಜಿಲ್ಲೆ ಬೇಲೂರು ಚನ್ನಕೇಶವ ದೇಗುಲ ಆವರಣ ಸ್ವಚ್ಛಗೊಳಿಸಿ ಅಭಿಯಾನಕ್ಕೆ ಸಾಥ್‌ ನೀಡಿದರು.
(5 / 9)

ರಾಯಚೂರು ನಗರದ ಹಲವು ಬಡಾವಣೆಗಳಲ್ಲಿ ಸುತ್ತು ಹಾಕಿ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಎನ್‌.ಎಸ್‌.ಬೋಸರಾಜು ಚಾಲನೆ ನೀಡಿದರು.
(6 / 9)

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಅಂಡಗಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿಬ್ಬಂದಿ ನೀರಿನ ತೊಂಬೆಯ ಆವರಣದಲ್ಲಿ ಸ್ವಚ್ಛಗೊಳಿಸಿದರು.
(7 / 9)

ಬೆಂಗಳೂರಿನಲ್ಲಿರುವ ಏರ್‌ಫೋರ್ಸ್‌ ತಾಂತ್ರಿಕ ಮಹಾವಿದ್ಯಾಲಯದ ಸುತ್ತಲೂ ಅಲ್ಲಿನ ಸಿಬ್ಬಂದಿ ಸ್ವಚ್ಛತಾ ಚಟುವಟಿಕೆ ಕೈಗೊಂಡರು.
(8 / 9)

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿ ವಾರ್ಡಿನ ಸಾದರಮಂಗಲ ಸ್ಲಂ ಬೋರ್ಡ್‌ನಲ್ಲಿ ನಡೆದ "ಒಂದು ಗಂಟೆ ಸ್ವಚ್ಛತೆಗಾಗಿ ಶ್ರಮದಾನ" ಕಾರ್ಯಕ್ರಮ ನಡೆಯಿತು.
(9 / 9)

    ಹಂಚಿಕೊಳ್ಳಲು ಲೇಖನಗಳು