logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾರ್ನ್‌ಫ್ಲೋರ್‌, ರಾಗಿ ಸೇರಿದಂತೆ ದೀರ್ಘ ಸಮಯದವರೆಗೆ ಕೆಡದಂತೆ ಬಳಸಬಹುದಾದ ಆಹಾರ ಪದಾರ್ಥಗಳು

ಕಾರ್ನ್‌ಫ್ಲೋರ್‌, ರಾಗಿ ಸೇರಿದಂತೆ ದೀರ್ಘ ಸಮಯದವರೆಗೆ ಕೆಡದಂತೆ ಬಳಸಬಹುದಾದ ಆಹಾರ ಪದಾರ್ಥಗಳು

Dec 22, 2024 10:53 PM IST

ಸಾಮಾನ್ಯವಾಗಿ ಬಹುತೇಕ ಆಹಾರ ಸಾಮಗ್ರಿಗಳಿಗೆ ಎಕ್ಸ್‌ಪೈರಿ ದಿನಾಂಕ ಇರುತ್ತದೆ. ಕೆಲವೊಂದು ನಿಗದಿತ ದಿನಾಂಕಕ್ಕಿಂದ ಮುನ್ನವೇ ಹಾಳಾಗಿಬಿಡುತ್ತವೆ. ಆದರೆ ಕೆಲವೊಂದು ಆಹಾರ ಪದಾರ್ಥಗಳಿಗೆ ಬಹಳ ದೀರ್ಘಕಾಲ ಎಕ್ಸ್‌ಪೈರಿ ದಿನಾಂಕ ಇರುತ್ತದೆ

 ಅಂಗಡಿಗೆ ಹೋದಾಗ ಎಲ್ಲಾ ವಸ್ತುಗಳ ಪ್ಯಾಕೆಟ್‌ ಮೇಲೆ ಬೆಸ್ಟ್ ಬಿಫೋರ್ ಲೇಬಲ್ ಇರುತ್ತದೆ. ಅಂದರೆ ಆ ದಿನಾಂಕದೊಳಗೆ ನೀವು ಐಟಂ ಅನ್ನು ಬಳಸಬೇಕು. ಆದರೆ, ನಮ್ಮ ಅಡುಗೆಮನೆಯಲ್ಲಿನ ಹೆಚ್ಚಿನ ಪದಾರ್ಥಗಳು ಅಂತಹ ಮುಕ್ತಾಯ ದಿನಾಂಕವನ್ನು ಹೊಂದಿರುವುದಿಲ್ಲ. ಕೆಲವನ್ನು ವರ್ಷಗಳ ನಂತರವೂ ಬಳಸಬಹುದು.  
(1 / 9)
 ಅಂಗಡಿಗೆ ಹೋದಾಗ ಎಲ್ಲಾ ವಸ್ತುಗಳ ಪ್ಯಾಕೆಟ್‌ ಮೇಲೆ ಬೆಸ್ಟ್ ಬಿಫೋರ್ ಲೇಬಲ್ ಇರುತ್ತದೆ. ಅಂದರೆ ಆ ದಿನಾಂಕದೊಳಗೆ ನೀವು ಐಟಂ ಅನ್ನು ಬಳಸಬೇಕು. ಆದರೆ, ನಮ್ಮ ಅಡುಗೆಮನೆಯಲ್ಲಿನ ಹೆಚ್ಚಿನ ಪದಾರ್ಥಗಳು ಅಂತಹ ಮುಕ್ತಾಯ ದಿನಾಂಕವನ್ನು ಹೊಂದಿರುವುದಿಲ್ಲ. ಕೆಲವನ್ನು ವರ್ಷಗಳ ನಂತರವೂ ಬಳಸಬಹುದು.  (freepik)
ಜೇನುತುಪ್ಪ ಮತ್ತು ಸಕ್ಕರೆಯಂತಹ ಕೆಲವು ಆಹಾರ ಪದಾರ್ಥಗಳನ್ನು ಸರಿಯಾಗಿ ಶೇಖರಿಸಿಟ್ಟರೆ ಅನೇಕ ದಿನಗಳವರೆಗೆ ಬಳಸಬಹುದು. ಅದರ ಜೊತೆಗೆ ಈ ವಸ್ತುಗಳನ್ನು ಕೂಡಾ ಹೆಚ್ಚಿನ ಕಾಲ ಕೆಡದಂತೆ ಇಡಬಹುದಾಗಿದೆ. 
(2 / 9)

ಜೇನುತುಪ್ಪ ದೀರ್ಘ ಕಾಲ ಕೆಡುವುದಿಲ್ಲ, ಒಂದು ವೇಳೆ ಕೆಟ್ಟರೆ ಅದು ನಕಲಿ ಜೇನು ಎಂದು ಹೇಳಲಾಗುತ್ತದೆ. ಒಂದು ವೇಳೆ ಬಾಟಲಿಯಲ್ಲಿ ಸಂಗ್ರಹಿಸಿದ ಜೇನುತುಪ್ಪ ಗಟ್ಟಿಯಾದರೆ ಅದನ್ನು ಬಿಸಿನೀರಿನಲ್ಲಿ ಇಟ್ಟರೆ ನಂತರ ಮೊದಲಿನ ರೀತಿ ಆಗುತ್ತದೆ. 
(3 / 9)

ಸಕ್ಕರೆ, ಎಲ್ಲರ ಅಡುಗೆ ಮನೆಯಲ್ಲಿರುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾಗಿದೆ. ಇದನ್ನು ಬಹುತೇಕ ಪ್ರತಿದಿನ ಬಳಸಲಾಗುತ್ತದೆ. ಸಕ್ಕರೆಯನ್ನು ಸರಿಯಾದ ಪಾತ್ರೆಯಲ್ಲಿ ಇಟ್ಟರೆ ಇದಕ್ಕೆ ಕೂಡಾ ಎಕ್ಸ್‌ಪೈರಿ ದಿನಾಂಕ ಎನ್ನುವುದು ಇರುವುದಿಲ್ಲ. ಸಕ್ಕರೆಯನ್ನು ತೆಗೆದುಕೊಳ್ಳಲು ಒದ್ದೆಯಾದ ಚಮಚವನ್ನು ಬಳಸದಂತೆ ನೋಡಿಕೊಳ್ಳಿ. ಸಕ್ಕರೆಯನ್ನು ತೇವಾಂಶದಿಂದ ದೂರವಿಟ್ಟರೆ ವರ್ಷಾನುಗಟ್ಟಲೆ ಸಂಗ್ರಹಿಸಬಹುದು. ಸಕ್ಕರೆಯನ್ನು ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ಯಾವಾಗಲೂ ತೇವಾಂಶ ಮತ್ತು ಶಾಖದಿಂದ ದೂರವಿಡಬೇಕು. 
(4 / 9)

ನಾವು ಪ್ರತಿದಿನ ಉಪ್ಪನ್ನು ಬಳಸುತ್ತೇವೆ. ಉಪ್ಪು ಹಾಕದೆ ಯಾವುದೇ ಪದಾರ್ಥಗಳನ್ನು ತಯಾರಿಸುವುದಿಲ್ಲ. ಉಪ್ಪು ಇಲ್ಲದ ಊಟ ರುಚಿಯೂ ಇರುವುದಿಲ್ಲ.  ಉಪ್ಪಿನಕಾಯಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳು ಹೆಚ್ಚು ದಿನ ಬಾಳಿಕೆ ಬರಲು ಕೂಡಾ ಉಪ್ಪನ್ನು ಬಳಸಲಾಗುತ್ತದೆ.   ಏಕೆಂದರೆ ಇದು ನೈಸರ್ಗಿಕ ಸಂರಕ್ಷಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಉಪ್ಪು, ಜೇನುತುಪ್ಪದಂತೆ, ಬ್ಯಾಕ್ಟೀರಿಯಾವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ನೀವು ಅದನ್ನು ಸರಿಯಾಗಿ ಸಂಗ್ರಹಿಸಿದರೆ ವರ್ಷಗಳವರೆಗೆ ಬಳಸಬಹುದು. 
(5 / 9)

ಕಾರ್ನ್‌ಫ್ಲೋರ್‌ ಮುಖ್ಯವಾಗಿ ಗ್ರೇವಿಗಳು, ಸಾಸ್‌ಗಳು ಮತ್ತು ಸೂಪ್‌ ಗಟ್ಟಿಯಾಗಲು ಬಳಸಲಾಗುತ್ತದೆ. ಇದನ್ನು ದೀರ್ಘಕಾಲ ಸಂಗ್ರಹಿಸಬಹುದು. ಆದರೆ ತೇವಾಂಶದಿಂದ ದೂರವಿಡಬೇಕು. ಮೆಕ್ಕೆಜೋಳದ ಹಿಟ್ಟನ್ನು ಗಾಳಿಯಾಡದ ಜಾರ್‌ನಲ್ಲಿ ಸಂಗ್ರಹಿಸಿ ವರ್ಷಗಳವರೆಗೆ ಬಳಸಬಹುದು.
(6 / 9)

ದೀರ್ಘಕಾಲ ಶೇಖರಿಸಿಡಬಹುದಾದ ಆಹಾರ ಪದಾರ್ಥಗಳಲ್ಲಿ ಅಕ್ಕಿಯೂ ಒಂದು. ಅಕ್ಕಿಯನ್ನು ಯಾವಾಗಲೂ ಗಾಳಿಯಾಡದ ಡಬ್ಬದಲ್ಲಿ ಇರಿಸಿ. ಸಾಮಾನ್ಯವಾಗಿ ಅಕ್ಕಿಯನ್ನು ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ನಮ್ಮ ಅಗತ್ಯಕ್ಕೆ ಅನುಗುಣವಾಗಿ ಸ್ವಲ್ಪ ಅಕ್ಕಿಯನ್ನು ದಿನನಿತ್ಯದ ಬಳಕೆಗಾಗಿ ಸಣ್ಣ ಪಾತ್ರೆಯಲ್ಲಿ ಪ್ರತ್ಯೇಕವಾಗಿ ಇಡಬಹುದು. ಹೀಗೆ ಮಾಡುವುದರಿಂದ ದೊಡ್ಡ ಪಾತ್ರೆಯಲ್ಲಿ ಇಟ್ಟಿರುವ ಅಕ್ಕಿ ತೇವಾಂಶಕ್ಕೆ ತುತ್ತಾಗುವುದಿಲ್ಲ.
(7 / 9)

ಅನೇಕ ರೆಸಾರ್ಟ್‌ಗಳಲ್ಲಿ ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ಸೋಯಾ ಸಾಸ್ ಬಳಸಲಾಗುತ್ತದೆ. ಸೋಯಾ ಸಾಸ್ ಬಾಟಲಿಯನ್ನು ತೆರೆಯದಿದ್ದರೆ ದೀರ್ಘ ಕಾಲ ಬಾಳಿಕೆ ಬರುತ್ತದೆ. ಇದನ್ನು ಸುಮಾರು 2-3 ವರ್ಷಗಳವರೆಗೆ ರೆಫ್ರಿಜರೇಟರ್‌ನಲ್ಲಿ ಇಡಬಹುದು.  
(8 / 9)

ಭತ್ತ ಹಾಗೂ ರಾಗಿಯನ್ನು ಕೂಡಾ ಬಹಳ ವರ್ಷಗಳವರೆಗೆ ಶೇಖರಿಸಿ ಇಡಬಹುದು, ತೇವಾಂಶ ಇಲ್ಲದೆ ಕಡೆ , ಕೀಟಗಳಿಂದ ರಕ್ಷಣೆ ಮಾಡಿದರೆ ಸುಮಾರು 5-6 ವರ್ಷಗಳವರೆಗೂ ಶೇಖರಿಸಿ ಇಡಬಹುದು. 
(9 / 9)

    ಹಂಚಿಕೊಳ್ಳಲು ಲೇಖನಗಳು