logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hair Fall Remedies: 7 ದಿನಗಳಲ್ಲಿ ತಲೆ ಕೂದಲು ಉದುರುವಿಕೆ ನಿಲ್ಲಬೇಕಾ; ಹೀಗೆ ಮಾಡಿ

Hair Fall Remedies: 7 ದಿನಗಳಲ್ಲಿ ತಲೆ ಕೂದಲು ಉದುರುವಿಕೆ ನಿಲ್ಲಬೇಕಾ; ಹೀಗೆ ಮಾಡಿ

Jan 09, 2024 07:50 PM IST

ಒಂದೇ ವಾರದಲ್ಲಿ ತಲೆ ಕೂದಲು ಉದರುವುದನ್ನು ತಡೆಯಬಹುದು.  7 ದಿನ ಮೆಂತ್ಯದಿಂದ 7 ರೀತಿಯ ಕೆಲಸಗಳನ್ನು ಮಾಡಿದ್ರೆ ನಿಮ್ಮ ಕೂದಲು ಉದುರುವಿಕೆಯನ್ನು ತಡೆಯಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.

ಬದಲಾದ ಜೀವನ ಶೈಲಿಯಿಂದಾಗಿ ಬಹುತೇಕ ಎಲ್ಲರೂ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ಇದು ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಗಿರುತ್ತೆ. ಕೂದಲ ಉದುರುವಿಕೆಯನ್ನು ತಡೆಯಲು ದುಬಾರಿ ಬೆಲೆಯ ಶಾಂಪೂ ಅಥವಾ ಎಣ್ಣೆಗಳನ್ನು ಬಳಸಬೇಕಾಗಿಲ್ಲ. ಮೆಂತ್ಯದಲ್ಲಿ ಇದಕ್ಕೆ ಪರಿಹಾರ ಇದೆ.
(1 / 9)

ಆರೋಗ್ಯಕರ ಕೂದಲು ಬೆಳವಣಿಗೆಗೆ ಮೆಂತ್ಯ ರಾಮಬಾಣವಿದ್ದಂತೆ. ಕೂದಲಿನ ಬುಡಕ್ಕೆ ಇದು ಪೋಷಣೆಯನ್ನು ನೀಡುತ್ತೆ ಎಂದು ತಜ್ಞರು ಹೇಳುತ್ತಾರೆ. ತಲೆಹೊಟ್ಟು ಹಾಗೂ ಬೂದು ಕೂದಲನ್ನು ಸಹ ಇದು ತಡೆಯುತ್ತದೆ. ಮೆಂತ್ಯದಲ್ಲಿ ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲ ಕೂದಲಿನ ಬೇರುಗಳನ್ನು ಬಲಪಡಿಸುತ್ತೆ. ಕೂದಲ ಉದ್ದ ಹಾಗೂ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತೆ. 7 ದಿನಗಳವರೆಗೆ ಮೆಂತ್ಯವನ್ನು ಹೇಗೆ ಬಳಸೋದು ಅನ್ನೋದರ ಮಾಹಿತಿ ಇಲ್ಲಿದೆ. 
(2 / 9)

ಮೊದಲ ದಿನ:  ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಕನಿಷ್ಠ 8 ರಿಂದ 10 ಗಂಟೆಗಳ ಕಾಲ ನೆನೆಸಿದ ನಂತರ ಮೆಂತ್ಯ ಬೀಜಗಳನ್ನು ಬಳಸಲು ಸೂಕ್ತವಾಗಿರುತ್ತದೆ.
(3 / 9)

ಎರಡನೇ ದಿನ: ಮರುದಿನ ನೆನೆಸಿದ ಮೆಂತ್ಯವನ್ನು ರುಬ್ಬಿಕೊಳ್ಳಿ. ಈ ಮೆಂತ್ಯದ ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಿ. ಇದಾದ ಬಳಿಕ ಅರ್ಧ ಗಂಟೆ ಬಿಡಿ. ನಂತರ ಶಾಂಪೂವಿನಿಂದ ತಲೆ ಸ್ನಾನ ಮಾಡಿ.
(4 / 9)

ಮೂರನೇ ದಿನ: ಬಾಂಡಲಿಯನ್ನು ಬಿಸಿ ಮಾಡಿ ಮೆಂತ್ಯ ಬೀಜಗಳನ್ನು ಹುರಿಯಿರಿ. ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಅದನ್ನು ತಣ್ಣಗಾಗಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಮೆಂತ್ಯದ ಪುಡಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನೆತ್ತಿ ಮತ್ತು ಕೂಡಲಿಗೆ ಚೆನ್ನಾಗಿ ಹಚ್ಚಿ. ಒಂದು ಗಂಟೆಯ ನಂತರ ಶಾಂಪೂವಿನಿಂದ ತಲೆ ಸ್ನಾನ ಮಾಡಿ. 
(5 / 9)

ನಾಲ್ಕನೇ ದಿನ: ಮೊದಲ ದಿನದ ರೀತಿಯಲ್ಲಿ ಮೆಂತ್ಯ ಬೀಜಗಳನ್ನು ರಾತ್ರಿ ನೀರನಲ್ಲಿ ನೆನೆಸಿಡಿ. ಈ ಸಲವೂ ಕನಿಷ್ಠ 8 ರಿಂದ 10 ಗಂಟೆಗಳ ಕಾಲ ನೆನೆಸಿಡಿ
(6 / 9)

ಐದನೇ ದಿನ: ಮೆಂತ್ಯವನ್ನು ನೀರಿನಲ್ಲಿ ಸ್ವಲ್ಪ ಸಮಯ ಕುದಿಸಿದ ನಂತರ ಸೋಸಿಕೊಳ್ಳಿ. ನೀವು ಈ ನೀರನ್ನು ತಂಪಾಗಿಸಬಹುದು. ನಿಮ್ಮ ಕೂದಲನ್ನು ತೊಳೆಯಲು ಇದನ್ನು ಬಳಸಬಹುದು. 
(7 / 9)

ಆರನೇ ದಿನ: ಹುಳಿ ಮೊಸರಿನ ಜೊತೆಗೆ ಮೆಂತ್ಯ ಪುಡಿಯನ್ನು ಬೆರೆಸಿ ಕೂದಲಿಗೆ ಚೆನ್ನಾಗಿ ಹಚ್ಚಿ. ಅರ್ಧ ಗಂಟೆಯ ನಂತರ ನಿಮ್ಮ ತಲೆಯನ್ನು ನೀರಿನಿಂದ ತೊಳೆಯಿರಿ
(8 / 9)

ಏಳನೇ ದಿನ:  ಮತ್ತೆ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಈ ರೀತಿ 4-6 ವಾರಗಳ ಕಾಲ ಮಾಡಿ. ಇದು ಕೂದಲು ಉದುರುವುದನ್ನು ತಡೆಯುತ್ತದೆ. ಕೂದಲಿನ ಬೇರು ಬಲವಾಗಿರುವ ಜೊತೆಗೆ ಹೊಸ ಕೂದಲು ಬೆಳೆಯುತ್ತದೆ. 
(9 / 9)

    ಹಂಚಿಕೊಳ್ಳಲು ಲೇಖನಗಳು