logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Happy Birthday Meena: ನಟಿ ಮೀನಾಳ ತದ್ರೂಪಿ ಈ ಪುಟಾಣಿ.. ಅವಳಿ ಅಮ್ಮ ಮಗಳು ಹೇಗಿದ್ದಾರೆ ನೋಡಿ..

Happy Birthday Meena: ನಟಿ ಮೀನಾಳ ತದ್ರೂಪಿ ಈ ಪುಟಾಣಿ.. ಅವಳಿ ಅಮ್ಮ ಮಗಳು ಹೇಗಿದ್ದಾರೆ ನೋಡಿ..

Sep 16, 2022 12:09 PM IST

ಬೊಗಸೆ ಕಂಗಳ ಚೆಲುವೆ ಮೀನಾ ಬರ್ತ್‌ಡೇ (ಸೆ. 16) ಸಂಭ್ರಮದಲ್ಲಿದ್ದಾರೆ. ಒಂದೇ ಭಾಷೆಗೆ ಸೀಮಿತವಾಗದೇ ಇಡೀ ಸೌತ್‌ ಸಿನಿ ದುನಿಯಾದಲ್ಲಿ ಮೀನಾ ಗುರುತಿಸಿಕೊಂಡಿದ್ದಾರೆ. ಹಿಂದಿಯಲ್ಲಿಯೂ ಮೋಡಿ ಮಾಡಿದ್ದಾರೆ. ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಮೀನಾ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲ ನಟಿಯಾಗಿ ಸಿನಿಮಾರಂಗಕ್ಕೆ ಬಂದು, ಸ್ಟಾರ್‌ ನಟರ ಸಿನಿಮಾಗಳಿಗೆ ನಾಯಕಿಯಾಗಿಯೂ ನಟಿಸಿದ್ದಾರೆ. 'ಪುಟ್ನಂಜ' ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಮೀನಾವರನ್ನು ಕನ್ನಡಿಗರು ಸ್ವೀಕರಿಸಿದರು. ಈ ಸಿನಿಮಾ ನಂತರ 'ಚೆಲುವ', 'ಮೊಮ್ಮಗ', 'ಶ್ರೀ ಮಂಜುನಾಥ', 'ಗ್ರಾಮ ದೇವತೆ', 'ಸಿಂಹಾದ್ರಿಯ ಸಿಂಹ' ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ. 2010ರಲ್ಲಿ ತೆರೆ ಕಂಡ 'ಹೆಂಡ್ತೀರ್‌ ದರ್ಬಾರ್‌' ನಂತರ ಅವರು ಮತ್ತೆ ಕನ್ನಡಕ್ಕೆ ಬಂದಿಲ್ಲ. ಇದೀಗ ಬರ್ತ್‌ಡೇ ಪ್ರಯುಕ್ತ ಮೀನಾ ಮತ್ತವರ ಪಡಿಯಚ್ಚು ಪುತ್ರಿಯ ಫೋಟೋಗಳು ಇಲ್ಲಿವೆ.

  • ಬೊಗಸೆ ಕಂಗಳ ಚೆಲುವೆ ಮೀನಾ ಬರ್ತ್‌ಡೇ (ಸೆ. 16) ಸಂಭ್ರಮದಲ್ಲಿದ್ದಾರೆ. ಒಂದೇ ಭಾಷೆಗೆ ಸೀಮಿತವಾಗದೇ ಇಡೀ ಸೌತ್‌ ಸಿನಿ ದುನಿಯಾದಲ್ಲಿ ಮೀನಾ ಗುರುತಿಸಿಕೊಂಡಿದ್ದಾರೆ. ಹಿಂದಿಯಲ್ಲಿಯೂ ಮೋಡಿ ಮಾಡಿದ್ದಾರೆ. ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಮೀನಾ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲ ನಟಿಯಾಗಿ ಸಿನಿಮಾರಂಗಕ್ಕೆ ಬಂದು, ಸ್ಟಾರ್‌ ನಟರ ಸಿನಿಮಾಗಳಿಗೆ ನಾಯಕಿಯಾಗಿಯೂ ನಟಿಸಿದ್ದಾರೆ. 'ಪುಟ್ನಂಜ' ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಮೀನಾವರನ್ನು ಕನ್ನಡಿಗರು ಸ್ವೀಕರಿಸಿದರು. ಈ ಸಿನಿಮಾ ನಂತರ 'ಚೆಲುವ', 'ಮೊಮ್ಮಗ', 'ಶ್ರೀ ಮಂಜುನಾಥ', 'ಗ್ರಾಮ ದೇವತೆ', 'ಸಿಂಹಾದ್ರಿಯ ಸಿಂಹ' ಸೇರಿ ಅನೇಕ ಕನ್ನಡ ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ. 2010ರಲ್ಲಿ ತೆರೆ ಕಂಡ 'ಹೆಂಡ್ತೀರ್‌ ದರ್ಬಾರ್‌' ನಂತರ ಅವರು ಮತ್ತೆ ಕನ್ನಡಕ್ಕೆ ಬಂದಿಲ್ಲ. ಇದೀಗ ಬರ್ತ್‌ಡೇ ಪ್ರಯುಕ್ತ ಮೀನಾ ಮತ್ತವರ ಪಡಿಯಚ್ಚು ಪುತ್ರಿಯ ಫೋಟೋಗಳು ಇಲ್ಲಿವೆ.
ಬಹುಭಾಷಾ ನಟಿ ಮೀನಾ ವಿದ್ಯಾ ಸಾಗರ್‌, ಇದೀಗ 47ನೇ ವಯಸ್ಸಿಗೆ ಪದಾರ್ಪಣೆ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ನಟಿಗೀಗ ಶುಭಾಶಯಗಳ ಸುರಿಮಳೆ ಹರಿಸುತ್ತಿದ್ದಾರೆ ಅಭಿಮಾನಿಗಳು.
(1 / 5)
ಬಹುಭಾಷಾ ನಟಿ ಮೀನಾ ವಿದ್ಯಾ ಸಾಗರ್‌, ಇದೀಗ 47ನೇ ವಯಸ್ಸಿಗೆ ಪದಾರ್ಪಣೆ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ನಟಿಗೀಗ ಶುಭಾಶಯಗಳ ಸುರಿಮಳೆ ಹರಿಸುತ್ತಿದ್ದಾರೆ ಅಭಿಮಾನಿಗಳು.(Instagram/ Meena Sagar)
ಇದೇ ಮೀನಾ ಅವರ ಮಗಳು ನೈನಿಕಾ ಥೇಟ್‌ ಅಮ್ಮನನ್ನೇ ಹೋಲುತ್ತಾಳೆ. ಮಗಳ ಜತೆಗಿನ ಫೋಟೋಗಳನ್ನು ಹಾಗಾಗ ಹಂಚಿಕೊಳ್ಳುವ ಅವರು, ನೆಟ್ಟಿಗರಿಂದಲೂ ಇದೇ ಕಮೆಂಟ್‌ ಪಡೆಯುತ್ತಾರೆ.
(2 / 5)
ಇದೇ ಮೀನಾ ಅವರ ಮಗಳು ನೈನಿಕಾ ಥೇಟ್‌ ಅಮ್ಮನನ್ನೇ ಹೋಲುತ್ತಾಳೆ. ಮಗಳ ಜತೆಗಿನ ಫೋಟೋಗಳನ್ನು ಹಾಗಾಗ ಹಂಚಿಕೊಳ್ಳುವ ಅವರು, ನೆಟ್ಟಿಗರಿಂದಲೂ ಇದೇ ಕಮೆಂಟ್‌ ಪಡೆಯುತ್ತಾರೆ.(Instagram/ Meena Sagar)
ಅಂದಹಾಗೆ, ಮೀನಾ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. ಅದೇ ರೀತಿ ಪುತ್ರಿ ನೈನಿಕಾ ಸಹ ವಿಜಯ್‌ ನಟನೆಯ ಥೇರಿ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು.
(3 / 5)
ಅಂದಹಾಗೆ, ಮೀನಾ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. ಅದೇ ರೀತಿ ಪುತ್ರಿ ನೈನಿಕಾ ಸಹ ವಿಜಯ್‌ ನಟನೆಯ ಥೇರಿ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು.(Instagram/ Meena Sagar)
ಪುಟ್ನಂಜ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಮೀನಾ, ಅದಾದ ಮೇಲೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಎಲ್ಲರ ಮನದಲ್ಲಿ ಮನೆ ಮಗಳಂತೆ ಪ್ರೀತಿಗೆ ಪಾತ್ರರಾದರು.
(4 / 5)
ಪುಟ್ನಂಜ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಮೀನಾ, ಅದಾದ ಮೇಲೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಎಲ್ಲರ ಮನದಲ್ಲಿ ಮನೆ ಮಗಳಂತೆ ಪ್ರೀತಿಗೆ ಪಾತ್ರರಾದರು.(Instagram/ Meena Sagar)
ಸದ್ಯ ಹಲವು ಸಿನಿಮಾಗಳಲ್ಲಿ ಮೀನಾ ಬಿಜಿಯಾಗಿದ್ದಾರೆ. ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
(5 / 5)
ಸದ್ಯ ಹಲವು ಸಿನಿಮಾಗಳಲ್ಲಿ ಮೀನಾ ಬಿಜಿಯಾಗಿದ್ದಾರೆ. ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.(Instagram/ Meena Sagar)

    ಹಂಚಿಕೊಳ್ಳಲು ಲೇಖನಗಳು