logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Haveri News: ಹಾವೇರಿಗೆ ಹೋದರೆ ವಿಶಾಲ ಗಾಂಧಿಭವನ ನೋಡಿ ಬನ್ನಿ, ಹೀಗಿದೆ ನೂತನ ಸ್ಮಾರಕ Photos

Haveri News: ಹಾವೇರಿಗೆ ಹೋದರೆ ವಿಶಾಲ ಗಾಂಧಿಭವನ ನೋಡಿ ಬನ್ನಿ, ಹೀಗಿದೆ ನೂತನ ಸ್ಮಾರಕ photos

Feb 20, 2024 05:36 PM IST

Gandhi Bhavan ಮಧ್ಯ ಕರ್ನಾಟಕದ ಹಾವೇರಿಗೂ ಮಹಾತ್ಮಗಾಂಧಿ ಭೇಟಿ ನೀಡಿದ ನೆನಪುಗಳ ಅಧಿಕ. ಇದರಿಂದಲೇ ಇಲ್ಲಿ ಗಾಂಧಿಭವನವನ್ನು ನಿರ್ಮಿಸಿ ಅವರ ಭೇಟಿ ಚಿರಸ್ಥಾಯಿಯಾಗಿಸಲಾಗಿದೆ. ಹಾವೇರಿ ರೈಲ್ವೆ ನಿಲ್ದಾಣ ಬಳಿ ಕರ್ನಾಟಕ ಸರ್ಕಾರ ಗಾಂಧಿಭವನ ನಿರ್ಮಿಸಿದೆ.

  • Gandhi Bhavan ಮಧ್ಯ ಕರ್ನಾಟಕದ ಹಾವೇರಿಗೂ ಮಹಾತ್ಮಗಾಂಧಿ ಭೇಟಿ ನೀಡಿದ ನೆನಪುಗಳ ಅಧಿಕ. ಇದರಿಂದಲೇ ಇಲ್ಲಿ ಗಾಂಧಿಭವನವನ್ನು ನಿರ್ಮಿಸಿ ಅವರ ಭೇಟಿ ಚಿರಸ್ಥಾಯಿಯಾಗಿಸಲಾಗಿದೆ. ಹಾವೇರಿ ರೈಲ್ವೆ ನಿಲ್ದಾಣ ಬಳಿ ಕರ್ನಾಟಕ ಸರ್ಕಾರ ಗಾಂಧಿಭವನ ನಿರ್ಮಿಸಿದೆ.
ಮಹಾತ್ಮಗಾಂಧಿ ಸ್ವಾತಂತ್ರ್ಯ ಚಳವಳಿ ವೇಳೆ ನಿರಂತರ ಪ್ರವಾಸ ಕೈಗೊಂಡಿದ್ದರು. ಕರ್ನಾಟಕದ ಹಾವೇರಿಗೂ ಬಂದ ನೆನಪಿಗಾಗಿ ಕರ್ನಾಟಕ ಸರ್ಕಾರವು ವಾರ್ತಾ ಇಲಾಖೆ ಮೂಲಕ ಗಾಂಧಿ ಭವನವನ್ನು ಮೂರು ಕೋಟಿ ರೂ.  ವೆಚ್ಚದಲ್ಲಿ ವಿಭಿನ್ನವಾಗಿ ರೂಪಿಸಲಾಗಿದೆ. 
(1 / 8)

ಹಾವೇರಿ ನಗರದ ರೈಲು ನಿಲ್ದಾಣದ ಎದುರಿನ ಹಳೆಯ ಧರ್ಮಶಾಲಾ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಿರ್ಮಿಸಿರುವ ಗಾಂಧಿ ಭವನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಉದ್ಘಾಟಿಸಿದರು.
(2 / 8)

ಗಾಂಧೀಜಿ ಅವರು ಹಾವೇರಿ ಭಾಗಕ್ಕೆ 1934ರಲ್ಲಿ ಬಂದಾಗ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರ ನೆನಪಿಗೆ ಗಾಂಧಿಭವನದಲ್ಲಿ ಕಲಾ ರೂಪ ನೀಡಲಾಗಿದೆ.
(3 / 8)

ಮಹಾತ್ಮ ಗಾಂಧೀಜಿ ಪ್ರತಿಮೆ, ಮೋಹನದಾಸ್ ಕುಟೀರ,ಕಸ್ತೂರಬಾ ಕುಟೀರ,ಸ್ವದೇಶಿ,ಚರಕ ,ಫೀನಿಕ್ಸ್,ಸಬರಮತಿ ಕುಟೀರಗಳು,ಸತ್ಯಾನ್ವಷಣೆ ಗ್ರಂಥಾಲಯ,ಸತ್ಯಶೋಧನೆ ಅಧ್ಯಯನ ಕೊಠಡಿ,ಹೃದಯಕುಂಜ್ ಪ್ರಾರ್ಥನಾ ಮಂದಿರ ಗಾಂಧಿಭವನದ ಆಕರ್ಷಣೆಗಳು.
(4 / 8)

ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ ಅವರೊಂದಿಗಿದ್ದ ಸನ್ನಿವೇಶದ ಪ್ರತಿಕೃತಿ,ದಂಡಿ ಯಾತ್ರೆ ಕಲಾಕೃತಿಗಳನ್ನು ತಾಳ್ಮೆಯಿಂದ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು ಗಾಂಧಿ ಪ್ರತಿಮೆಗೆ ನಮಸ್ಕರಿಸಿದರು.
(5 / 8)

ಕರ್ನಾಟಕದಲ್ಲಿ ಗಾಂಧಿ ಬಂದು ಹೋಗಿರುವ ಸ್ಥಳ, ದಿನಾಂಕ ಹಾಗೂ ಮಹತ್ವ ಕುರಿತು ಹಾವೇರಿ ಗಾಂಧಿಭವನದಲ್ಲಿ ಮಾಹಿತಿ ಫಲಕವನ್ನು ಹಾಕಲಾಗಿದ್ದು, ಸಿಎಂ ಸಿದ್ದರಾಮಯ್ಯ, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ವೀಕ್ಷಿಸಿದರು.
(6 / 8)

ಹಾವೇರಿ ಗಾಂಧಿಭವನದಲ್ಲಿ ನಿರ್ಮಿಸಲಾಗಿರುವ ಸತ್ಯಾಗ್ರಹ ಸಭಾಂಗಣ, ರಂಗಚಟುವಟಿಕೆಗಳಿಗಾಗಿ ಬಾಪೂಜಿ ಬಯಲು ರಂಗಮಂದಿರನ್ನು ವೀಕ್ಷಿಸಿದ ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿ,ಗಣ್ಯರ ಭೇಟಿಯ ಸಂದರ್ಶನ ಪುಸ್ತಕದಲ್ಲಿ ಅಭಿಪ್ರಾಯ ದಾಖಲಿಸಿದರು. 
(7 / 8)

ಗಾಂಧಿಭವನದಲ್ಲಿ ರೂಪಿಸಲಾಗಿರುವ ಮೋಹನದಾಸ್ ಟು ಮಹಾತ್ಮ ಬೆಳವಣಿಗೆಯ ಗಾಂಧೀಜಿಯವರ ಜೀವನದರ್ಶನ ಕುರಿತ ಛಾಯಾಚಿತ್ರಗಳ ಪ್ರದರ್ಶನಾಲಯವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವೀಕ್ಷಿಸಿದರು.
(8 / 8)

    ಹಂಚಿಕೊಳ್ಳಲು ಲೇಖನಗಳು