logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Anti Ageing Tips: ಮುಪ್ಪಿನಲ್ಲೂ ಯೌವನದ ಹುರುಪು ನಿಮ್ಮಲ್ಲಿರಬೇಕು ಅಂದ್ರೆ, ಇಂದಿನಿಂದಲೇ ನಿಮ್ಮ ದಿನಚರಿಯನ್ನು ಹೀಗೆ ಬದಲಿಸಿಕೊಳ್ಳಿ

Anti Ageing Tips: ಮುಪ್ಪಿನಲ್ಲೂ ಯೌವನದ ಹುರುಪು ನಿಮ್ಮಲ್ಲಿರಬೇಕು ಅಂದ್ರೆ, ಇಂದಿನಿಂದಲೇ ನಿಮ್ಮ ದಿನಚರಿಯನ್ನು ಹೀಗೆ ಬದಲಿಸಿಕೊಳ್ಳಿ

Apr 01, 2024 11:12 AM IST

ತಮ್ಮ ಅಂದ, ಆರೋಗ್ಯ ಸದಾ ಯೌವನದ ದಿನಗಳಲ್ಲಿ ಇದ್ದಂತೆ ಇರಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ ವಯಸ್ಸಾಗುತ್ತಿದ್ದಂತೆ ಎಲ್ಲವೂ ಬದಲಾಗುತ್ತದೆ. ಆದರೂ ಕೂಡ ವಯಸ್ಸಿನಲ್ಲಿ ಇದ್ದಂತೆ ಸದಾ ಉತ್ಸಾಹ, ಹುಮ್ಮಸ್ಸು ಅಂದ, ಆರೋಗ್ಯ ನಿಮ್ಮದಾಗಬೇಕು ಎಂದರೆ ನಿಮ್ಮ ಬೆಳಗಿನ ದಿನಚರಿಯನ್ನು ಇಂದಿನಿಂದಲೇ ಹೀಗೆ ಬದಲಿಸಿಕೊಳ್ಳಿ. 

  • ತಮ್ಮ ಅಂದ, ಆರೋಗ್ಯ ಸದಾ ಯೌವನದ ದಿನಗಳಲ್ಲಿ ಇದ್ದಂತೆ ಇರಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ ವಯಸ್ಸಾಗುತ್ತಿದ್ದಂತೆ ಎಲ್ಲವೂ ಬದಲಾಗುತ್ತದೆ. ಆದರೂ ಕೂಡ ವಯಸ್ಸಿನಲ್ಲಿ ಇದ್ದಂತೆ ಸದಾ ಉತ್ಸಾಹ, ಹುಮ್ಮಸ್ಸು ಅಂದ, ಆರೋಗ್ಯ ನಿಮ್ಮದಾಗಬೇಕು ಎಂದರೆ ನಿಮ್ಮ ಬೆಳಗಿನ ದಿನಚರಿಯನ್ನು ಇಂದಿನಿಂದಲೇ ಹೀಗೆ ಬದಲಿಸಿಕೊಳ್ಳಿ. 
ಆಳವಾದ ಉಸಿರಾಟದ ವ್ಯಾಯಾಮಗಳಾದ ಭ್ರಮರಿ ಪ್ರಾಣಾಯಾಮ, ಭಸ್ತ್ರಿಕಾ ಪ್ರಾಣಾಯಾಮ, ಅನುಲೋಮ್ ವಿಲೋಮ್ ಪ್ರಾಣಾಯಾಮ, ಕಪಾಲಭಾತಿ ಪ್ರಾಣಾಯಾಮ ನಿಮ್ಮ ಶ್ವಾಸಕೋಶವನ್ನು ಬಲಪಡಿಸುತ್ತದೆ. ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡಿ. 
(1 / 9)
ಆಳವಾದ ಉಸಿರಾಟದ ವ್ಯಾಯಾಮಗಳಾದ ಭ್ರಮರಿ ಪ್ರಾಣಾಯಾಮ, ಭಸ್ತ್ರಿಕಾ ಪ್ರಾಣಾಯಾಮ, ಅನುಲೋಮ್ ವಿಲೋಮ್ ಪ್ರಾಣಾಯಾಮ, ಕಪಾಲಭಾತಿ ಪ್ರಾಣಾಯಾಮ ನಿಮ್ಮ ಶ್ವಾಸಕೋಶವನ್ನು ಬಲಪಡಿಸುತ್ತದೆ. ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡಿ. (Pixabay)
ಆರೋಗ್ಯಕರ ಕೊಬ್ಬಿನೊಂದಿಗೆ ದಿನ ಆರಂಭಿಸಿ: ಆರೋಗ್ಯಕರ ಕೊಬ್ಬಿನಾಂಶವು ದೇಹ ಹಾಗೂ ಮನಸ್ಸಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ದಿನವಿಡೀ ದೇಹಕ್ಕೆ ಶಕ್ತಿ ಒದಗಿಸುವುದು ಮಾತ್ರವಲ್ಲ, ನೆನಪಿನ ಶಕ್ತಿ ಹಾಗೂ ಅರಿವಿನ ಕೌಶಲ ಹೆಚ್ಚಲು ಸಹಾಯ ಮಾಡುತ್ತವೆ. ಆವಕಾಡೊಗಳು, ಎಣ್ಣೆಯುಕ್ತ ಮೀನು, ಅಗಸೆಬೀಜ, ಬಾದಾಮಿ, ಆಕ್ರೋಟ್‌ ಮುಂತಾದ ಆರೋಗ್ಯಕರ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ದಿನವನ್ನು ಪ್ರಾರಂಭಿಸುವುದು ಒಟ್ಟಾರೆ ಯೋಗಕ್ಷೇಮಕ್ಕೆ ಉತ್ತಮ. ಇದು ಉರಿಯೂತವನ್ನು ಕಡಿಮೆ ಮಾಡಿ, ಇನ್ಸುಲಿನ್‌ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. 
(2 / 9)
ಆರೋಗ್ಯಕರ ಕೊಬ್ಬಿನೊಂದಿಗೆ ದಿನ ಆರಂಭಿಸಿ: ಆರೋಗ್ಯಕರ ಕೊಬ್ಬಿನಾಂಶವು ದೇಹ ಹಾಗೂ ಮನಸ್ಸಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ದಿನವಿಡೀ ದೇಹಕ್ಕೆ ಶಕ್ತಿ ಒದಗಿಸುವುದು ಮಾತ್ರವಲ್ಲ, ನೆನಪಿನ ಶಕ್ತಿ ಹಾಗೂ ಅರಿವಿನ ಕೌಶಲ ಹೆಚ್ಚಲು ಸಹಾಯ ಮಾಡುತ್ತವೆ. ಆವಕಾಡೊಗಳು, ಎಣ್ಣೆಯುಕ್ತ ಮೀನು, ಅಗಸೆಬೀಜ, ಬಾದಾಮಿ, ಆಕ್ರೋಟ್‌ ಮುಂತಾದ ಆರೋಗ್ಯಕರ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ದಿನವನ್ನು ಪ್ರಾರಂಭಿಸುವುದು ಒಟ್ಟಾರೆ ಯೋಗಕ್ಷೇಮಕ್ಕೆ ಉತ್ತಮ. ಇದು ಉರಿಯೂತವನ್ನು ಕಡಿಮೆ ಮಾಡಿ, ಇನ್ಸುಲಿನ್‌ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. (Unsplash)
ಬೆಳಿಗ್ಗೆ ಬೇಗ ಏಳುವುದು: ಬೆಳಿಗ್ಗೆ ಬೇಗ ಏಳುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಸೂರ್ಯನ ಎಳೆ ಬಿಸಿಲಿಗೆ ದೇಹವನ್ನು ಒಡ್ಡಿ. ಇದರಿಂದ ದೇಹಕ್ಕೆ ವಿಟಮಿನ್‌ ಡಿ ಲಭಿಸುತ್ತದೆ. ಸೂರ್ಯನ ಬೆಳಕು ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಹೆಚ್ಚಲು ನೆರವಾಗುತ್ತದೆ. ಉತ್ತಮ ನಿದ್ದೆಗೆ ಸಹಕರಿಸುವ ಮೆಲಟೊನಿನ್‌ ಉತ್ಪಾದನೆ ಹೆಚ್ಚಲು ಸೂರ್ಯನ ಬೆಳಕು ಅವಶ್ಯ. 
(3 / 9)
ಬೆಳಿಗ್ಗೆ ಬೇಗ ಏಳುವುದು: ಬೆಳಿಗ್ಗೆ ಬೇಗ ಏಳುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಸೂರ್ಯನ ಎಳೆ ಬಿಸಿಲಿಗೆ ದೇಹವನ್ನು ಒಡ್ಡಿ. ಇದರಿಂದ ದೇಹಕ್ಕೆ ವಿಟಮಿನ್‌ ಡಿ ಲಭಿಸುತ್ತದೆ. ಸೂರ್ಯನ ಬೆಳಕು ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಹೆಚ್ಚಲು ನೆರವಾಗುತ್ತದೆ. ಉತ್ತಮ ನಿದ್ದೆಗೆ ಸಹಕರಿಸುವ ಮೆಲಟೊನಿನ್‌ ಉತ್ಪಾದನೆ ಹೆಚ್ಚಲು ಸೂರ್ಯನ ಬೆಳಕು ಅವಶ್ಯ. (Pixabay)
ಅನುಲೋಮ್ ವಿಲೋಮ್: ಪ್ರಾಚೀನ ಋಷಿಗಳು ಶಿಫಾರಸು ಮಾಡಿದ ಪ್ರಮುಖ ಪ್ರಾಣಾಯಾಮ ತಂತ್ರವಿದು. ವಯಸ್ಸಾಗುವುದನ್ನು ತಡೆಯಲು ಇದು ಸಹಕಾರಿ. ಈ ವ್ಯಾಯಾಮವು ದೇಹದ ಜೀವಕೋಶಗಳನ್ನು ಪುನರ್ಯೌವನಗೊಳಿಸುತ್ತದೆ. ದೇಹಕ್ಕೆ ತಾಜಾ ಆಮ್ಲಜನಕ ಒದಗಿಸುತ್ತದೆ. ಇದು ಒತ್ತಡ ನಿವಾರಣೆಗೂ ಸಹಕಾರಿ.
(4 / 9)
ಅನುಲೋಮ್ ವಿಲೋಮ್: ಪ್ರಾಚೀನ ಋಷಿಗಳು ಶಿಫಾರಸು ಮಾಡಿದ ಪ್ರಮುಖ ಪ್ರಾಣಾಯಾಮ ತಂತ್ರವಿದು. ವಯಸ್ಸಾಗುವುದನ್ನು ತಡೆಯಲು ಇದು ಸಹಕಾರಿ. ಈ ವ್ಯಾಯಾಮವು ದೇಹದ ಜೀವಕೋಶಗಳನ್ನು ಪುನರ್ಯೌವನಗೊಳಿಸುತ್ತದೆ. ದೇಹಕ್ಕೆ ತಾಜಾ ಆಮ್ಲಜನಕ ಒದಗಿಸುತ್ತದೆ. ಇದು ಒತ್ತಡ ನಿವಾರಣೆಗೂ ಸಹಕಾರಿ.(Twitter/shailendrverma)
ನಾಲಿಗೆ ಸ್ವಚ್ಛ ಮಾಡಿಕೊಳ್ಳುವುದು: ಪ್ರತಿದಿನ ಬೆಳಗೆದ್ದು ಬ್ರಷ್‌ ಮಾಡಿದ ನಂತರ ನಾಲಿಗೆಯನ್ನು ಸ್ವಚ್ಛ ಮಾಡುವುದಕ್ಕೆ ಮರೆಯಬೇಡಿ. ತಾಮ್ರದ ಸ್ಕ್ಯಾಪರ್‌ ಬಳಸುವುದು ಉತ್ತಮ. ಇದು ನಾಲಿಗೆಯಿಂದ ವಿಷ ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ನಾಲಿಗೆ ಸ್ವಚ್ಛ ಮಾಡುವುದು ಉತ್ತಮ ಬ್ಯಾಕ್ಟೀರಿಯಾಗಳ ಸಮತೋಲನಕ್ಕೂ ಅವಶ್ಯ. ಇದು ಹಳೆಯ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ಕೂಡ ಸಹಕಾರಿ. 
(5 / 9)
ನಾಲಿಗೆ ಸ್ವಚ್ಛ ಮಾಡಿಕೊಳ್ಳುವುದು: ಪ್ರತಿದಿನ ಬೆಳಗೆದ್ದು ಬ್ರಷ್‌ ಮಾಡಿದ ನಂತರ ನಾಲಿಗೆಯನ್ನು ಸ್ವಚ್ಛ ಮಾಡುವುದಕ್ಕೆ ಮರೆಯಬೇಡಿ. ತಾಮ್ರದ ಸ್ಕ್ಯಾಪರ್‌ ಬಳಸುವುದು ಉತ್ತಮ. ಇದು ನಾಲಿಗೆಯಿಂದ ವಿಷ ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ನಾಲಿಗೆ ಸ್ವಚ್ಛ ಮಾಡುವುದು ಉತ್ತಮ ಬ್ಯಾಕ್ಟೀರಿಯಾಗಳ ಸಮತೋಲನಕ್ಕೂ ಅವಶ್ಯ. ಇದು ಹಳೆಯ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ಕೂಡ ಸಹಕಾರಿ. 
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಿರಿ: ಪ್ರತಿದಿನ ಬೆಳಗೆದ್ದು ತಾಮ್ರದ ಪಾತ್ರೆಯಲ್ಲಿ 300 ಮಿಲಿ ನೀರು ಕುಡಿಯಿರಿ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ತಡೆಯಲು ಕೂಡ ಸಹಕಾರಿ. ಇದು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ.
(6 / 9)
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಿರಿ: ಪ್ರತಿದಿನ ಬೆಳಗೆದ್ದು ತಾಮ್ರದ ಪಾತ್ರೆಯಲ್ಲಿ 300 ಮಿಲಿ ನೀರು ಕುಡಿಯಿರಿ. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ತಡೆಯಲು ಕೂಡ ಸಹಕಾರಿ. ಇದು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ.(Unsplash)
ಸನ್‌ಸ್ಕ್ರೀನ್ ಹಚ್ಚಿ: ಸನ್‌ಸ್ಕ್ರೀನ್ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವುದನ್ನು ತಡೆಯುತ್ತದೆ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
(7 / 9)
ಸನ್‌ಸ್ಕ್ರೀನ್ ಹಚ್ಚಿ: ಸನ್‌ಸ್ಕ್ರೀನ್ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವುದನ್ನು ತಡೆಯುತ್ತದೆ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಪ್ರೊಟೀನ್‌ ಸಮೃದ್ಧ ಉಪಾಹಾರ ಸೇವಿಸಿ: ಪ್ರೊಟೀನ್‌ ಸಮೃದ್ಧ ಉಪಾಹಾರ ಸೇವನೆಯಿಂದ ಜೀವಕೋಶಗಳ ದುರಸ್ತಿಯಾಗುವ ಜೊತೆಗೆ ಪುನರ್ಯೌವನ ಮರಳಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಆಹಾರ ಕಡುಬಯಕೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.  
(8 / 9)
ಪ್ರೊಟೀನ್‌ ಸಮೃದ್ಧ ಉಪಾಹಾರ ಸೇವಿಸಿ: ಪ್ರೊಟೀನ್‌ ಸಮೃದ್ಧ ಉಪಾಹಾರ ಸೇವನೆಯಿಂದ ಜೀವಕೋಶಗಳ ದುರಸ್ತಿಯಾಗುವ ಜೊತೆಗೆ ಪುನರ್ಯೌವನ ಮರಳಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಆಹಾರ ಕಡುಬಯಕೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.  (Freepik)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(9 / 9)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

    ಹಂಚಿಕೊಳ್ಳಲು ಲೇಖನಗಳು