logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೇರಳೆ ಹಣ್ಣಿನಿಂದ ಮೀನಿನವರೆಗೆ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ 7 ಆಹಾರ ಪದಾರ್ಥಗಳು ಸಹಕಾರಿ

ನೇರಳೆ ಹಣ್ಣಿನಿಂದ ಮೀನಿನವರೆಗೆ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ 7 ಆಹಾರ ಪದಾರ್ಥಗಳು ಸಹಕಾರಿ

Sep 03, 2024 03:19 PM IST

ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಆಹಾರದಲ್ಲಿ ಈ 7 ಆಹಾರ ಪದಾರ್ಥಗಳನ್ನು ಸೇರಿಸಹುದು. ಇವುಗಳನ್ನು ಸೇವಿಸುವುದರಿಂದ ಖಂಡಿತಾ ಧನ್ಮಾತಕ ಫಲಿತಾಂಶವನ್ನು ಪಡೆಯಬಹುದು.

ಅಧಿಕ ರಕ್ತದ ಸಕ್ಕರೆಯ ಮಟ್ಟವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಈ 7 ಆಹಾರ ಪದಾರ್ಥಗಳನ್ನು ಸೇವಿಸಿ, ಪ್ರಯೋಜನಗಳನ್ನು ಪಡೆಯಬಹುದು.
(1 / 8)

ನೇರಳೆ ಹಣ್ಣುಗಳು: ನೇರಳೆ ಹಣ್ಣುಗಳು ನಿಮ್ಮ ದೇಹವು ಗ್ಲೂಕೋಸ್ ಅನ್ನು ಪ್ರಕ್ರಿಯೆಗೊಳಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
(2 / 8)

ಕಾಳುಗಳು: ಇವುಗಳಲ್ಲಿ ವಿಶೇಷವಾಗಿ ರಾಜ್ಮಾ ಕಾಳು (kidney beans), ಪಿಂಟೊ ಬೀನ್ಸ್ (ಮಧ್ಯಮ ಗಾತ್ರದ ಹುರುಳಿ), ಕಪ್ಪು ಬೀನ್ಸ್ (black beans) ಇತ್ಯಾದಿ ದ್ವಿದಳ ಧಾನ್ಯಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ಅತ್ಯಂತ ಪ್ರಯೋಜನಕಾರಿ. ಕಾಳುಗಳಲ್ಲಿ ನಾರಿನಾಂಶ ಹೆಚ್ಚಿದ್ದು, ಇವು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ.
(3 / 8)

ಒಣಹಣ್ಣುಗಳು ಮತ್ತು ಬೀಜಗಳು: ಬಾದಾಮಿ, ವಾಲ್‌ನಟ್ಸ್, ಕಾಮ ಕಸ್ತೂರಿ ಬೀಜ (Chia Seeds) ಮತ್ತು ಅಗಸೆ ಬೀಜಗಳು ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
(4 / 8)

ಮೊಸರು: ಇದು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ ಹಾಗೂ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತದೆ. ಮುಖ್ಯವಾಗಿ ಸಿಹಿಗೊಳಿಸದ, ಗ್ರೀಕ್ ಶೈಲಿಯ ಮೊಸರು ಸೇವಿಸುವ ಜನರ ಸಕ್ಕರೆಯ ಮಟ್ಟ ಹೆಚ್ಚಾಗುವುದಿಲ್ಲ.
(5 / 8)

ಧಾನ್ಯಗಳು: ಓಟ್ಸ್, ನವಣೆ ಮತ್ತು ಕಂದು ಅಕ್ಕಿ ಇತ್ಯಾದಿ ಧಾನ್ಯಗಳು ಹೆಚ್ಚಿನ ನಾರಿನಾಂಶವನ್ನು ಹೊಂದಿರುತ್ತವೆ. ಇದು ರಕ್ತಪ್ರವಾಹಕ್ಕೆ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.
(6 / 8)

ಸೊಪ್ಪು ತರಕಾರಿಗಳು: ಸೊಪ್ಪು ತರಕಾರಿಗಳು ಆಂಟಿಆಕ್ಸಿಡೆಂಟ್‌ಗಳು ಮತ್ತು ನಾರಿನಾಂಶಗಳಿಂದ ಅಧಿಕವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(7 / 8)

ಕೊಬ್ಬಿನಾಮ್ಲವಿರುವ ಮೀನು: ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವು ಸುಧಾರಿತ ಇನ್ಸುಲಿನ್ ಸೂಕ್ಷ್ಮತೆಗೆ ಸಂಬಂಧಿಸಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು