logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಯಶಸ್ಸಿನ ಸೂತ್ರವಿದು; ಬ್ರಾಹ್ಮಿ ಮುಹೂರ್ತದಲ್ಲಿ ಏಳೋದ್ರಿಂದ ಇಷ್ಟೊಂದು ಪ್ರಯೋಜನ

ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಯಶಸ್ಸಿನ ಸೂತ್ರವಿದು; ಬ್ರಾಹ್ಮಿ ಮುಹೂರ್ತದಲ್ಲಿ ಏಳೋದ್ರಿಂದ ಇಷ್ಟೊಂದು ಪ್ರಯೋಜನ

Aug 22, 2024 11:36 AM IST

ಆಪಲ್‌ ಸಿಇಒ ಟಿಮ್ ಕುಕ್‌ನಿಂದ ಇಂದ್ರಾ ನೂಯಿವರೆಗೆ ಜಗತ್ತಿನ ಸಾಧಕರ ಪಟ್ಟಿಯಲ್ಲಿರುವ ಹಲವರು ಬೆಳಿಗ್ಗೆ ಬೇಗ ಏಳ್ತಾರಂತೆ. ನಮ್ಮ ಪೂರ್ವಜರು ಕೂಡ ಬ್ರಹ್ಮಮುಹೂರ್ತದಲ್ಲಿ ಏಳುವುದಕ್ಕೆ ಪ್ರಾಮುಖ್ಯ ನೀಡಿದ್ದರು. ಈ ಸಮಯದಲ್ಲಿ ಏಳುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೀವು ತಿಳಿಯಲೇಬೇಕು.

  • ಆಪಲ್‌ ಸಿಇಒ ಟಿಮ್ ಕುಕ್‌ನಿಂದ ಇಂದ್ರಾ ನೂಯಿವರೆಗೆ ಜಗತ್ತಿನ ಸಾಧಕರ ಪಟ್ಟಿಯಲ್ಲಿರುವ ಹಲವರು ಬೆಳಿಗ್ಗೆ ಬೇಗ ಏಳ್ತಾರಂತೆ. ನಮ್ಮ ಪೂರ್ವಜರು ಕೂಡ ಬ್ರಹ್ಮಮುಹೂರ್ತದಲ್ಲಿ ಏಳುವುದಕ್ಕೆ ಪ್ರಾಮುಖ್ಯ ನೀಡಿದ್ದರು. ಈ ಸಮಯದಲ್ಲಿ ಏಳುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೀವು ತಿಳಿಯಲೇಬೇಕು.
ನಮ್ಮ ಪೂರ್ವಜರು ಬ್ರಹ್ಮ ಮುಹೂರ್ತದಲ್ಲಿ ಏಳುವುದಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಅತಿಯಾದ ಬಳಕೆಯು ತಮ್ಮ ನಿದ್ದೆಯ ಚಕ್ರಕ್ಕೆ ಅಡ್ಡಿಪಡಿಸಿದೆ. ತಡವಾಗಿ ಮಲಗಿ, ತಡವಾಗಿ ಏಳುವುದು ಹಲವರಿಗೆ ಅಭ್ಯಾಸವಾಗಿರಬಹುದು. ಆದರೆ ಬೆಳಿಗ್ಗೆ ಬೇಗ ಏಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಜಗತ್ತಿನ ಹಲವು ಯಶಸ್ವಿ ವ್ಯಕ್ತಿಗಳು ಬೆಳಗಿನ ಜಾವದಲ್ಲೇ ಏಳುತ್ತಾರಂತೆ. ಹಾಗಾದರೆ ಬ್ರಹ್ಮಮುಹೂರ್ತ ಎಂದರೇನು, ಯಾವ ಸಮಯವನ್ನು ಬ್ರಾಹ್ಮಿ ಮುಹೂರ್ತ ಎನ್ನುತ್ತಾರೆ, ಆ ಸಮಯದಲ್ಲಿ ಏಳುವುದರಿಂದ ಆಗುವ ಲಾಭಗಳೇನು ಎಂಬ ವಿವರ ಇಲ್ಲಿದೆ. 
(1 / 8)

ಬ್ರಾಹ್ಮಿ ಮುಹೂರ್ತ ಎಂದರೇನು?: ಬ್ರಹ್ಮ ಮುಹೂರ್ತವು ಸೂರ್ಯೋದಯದ ಸಮಯವನ್ನು ಅವಲಂಬಿಸಿರುತ್ತದೆ. ಸೂರ್ಯೋದಯಕ್ಕೆ ಸುಮಾರು ಒಂದೂವರೆ ಗಂಟೆಗಳ ಮೊದಲು ಎಂದು ಪರಿಗಣಿಸಲಾಗಿದೆ. ನೀವು ಈ ಸಮಯವನ್ನು 3:30 ರಿಂದ 5:00 ರವರೆಗೆ ಪರಿಗಣಿಸಬಹುದು. ಹಿಂದೂ ನಂಬಿಕೆಯ ಪ್ರಕಾರ, ಈ ಸಮಯದಲ್ಲಿ ಧನಾತ್ಮಕ ಶಕ್ತಿ ಹೆಚ್ಚು. ಈ ಮುಹೂರ್ತದಲ್ಲಿ ಮಾಡಿದ ಕೆಲಸಗಳು ಸಕಾರಾತ್ಮಕ ಫಲಿತಾಂಶ ಪಡೆಯುತ್ತವೆ. ವಿಜ್ಞಾನವು ವಿಭಿನ್ನ ನಂಬಿಕೆಯನ್ನು ಹೊಂದಿದೆ.
(2 / 8)

ಬೆಳಿಗ್ಗೆ ಮಾಲಿನ್ಯ ಕಡಿಮೆ: ಬೆಳಗಿನ ಹೊತ್ತು ಮಾಲಿನ್ಯದ ಪ್ರಮಾಣ ಕಡಿಮೆ ಮತ್ತು ಓಝೋನ್ ಸಾಂದ್ರತೆಯು ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯ ಉದಯಿಸುವ ಮೊದಲು ಆಮ್ಲಜನಕದ ಪ್ರಮಾಣ ಹೆಚ್ಚಾಗಿರುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡುವವರಿಗೆ ಈ ಸಮಯ ಉತ್ತಮ. 
(3 / 8)

10 ರಿಂದ 11 ರವರೆಗೆ ಮಲಗಲು ಉತ್ತಮ ಸಮಯ: ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗಿನ ಸಮಯವನ್ನು ಮಲಗಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ, ದೇಹವನ್ನು ಸುವ್ಯವಸ್ಥೆಗೊಳಿಸುವ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ನಾವು ನಿದ್ದೆ ಮಾಡಿ ಬೇಗ ಎದ್ದರೆ ಇತರರಿಗಿಂತ ನಮಗೆ ಹೆಚ್ಚು ಸಮಯ ಸಿಗುತ್ತದೆ.
(4 / 8)

ಹಿಂದಿನವರ ಆರೋಗ್ಯದ ಗುಟ್ಟು: ಹಿಂದಿನ ಕಾಲದಲ್ಲಿ ವಿದ್ಯುತ್‌ನಂತಹ ಬೆಳಕಿನ ವ್ಯವಸ್ಥೆ ಇಲ್ಲದ ಕಾಲದಲ್ಲಿ ಜನ ಸೂರ್ಯಾಸ್ತಕ್ಕೂ ಮುನ್ನ ಆಹಾರ ಸೇವಿಸುತ್ತಿದ್ದರು. ತಿಂದ 2-3 ಗಂಟೆಗಳ ನಂತರ ಮಲಗುತ್ತಿದ್ದರು. ಇದರಿಂದ ಅವರ ಜೀರ್ಣಕ್ರಿಯೆ ವ್ಯವಸ್ಥೆ ಚೆನ್ನಾಗಿತ್ತು. ಬೊಜ್ಜು ಸೇರಿದಂತೆ ಹಲವು ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಆಗ ಬಾಧಿಸುತ್ತಿರಲಿಲ್ಲ. ನೀವು ನಮ್ಮ ಪೂರ್ವಜರಂತೆ ಆರಾಮವಾಗಿರಲು ಬಯಸಿದರೆ, ಮೊದಲನೆಯದಾಗಿ ನಿಮ್ಮ ಮಲಗುವ-ಏಳುವ ದಿನಚರಿಯನ್ನು ಬದಲಿಸಿಕೊಳ್ಳಬೇಕು. 
(5 / 8)

ನೀವು ಅಂತರ್ಜಾಲದಲ್ಲಿ ಹುಡುಕಿದರೆ, ಜಗತ್ತಿನ ಅತ್ಯಂತ ಯಶಸ್ವಿ ವ್ಯಕ್ತಿಗಳು 5 ಗಂಟೆಗೆ ಅಥವಾ  ಅದಕ್ಕೂ ಮೊದಲು ಎಚ್ಚರಗೊಳ್ಳುತ್ತಾರೆ. ಆಪಲ್ ಸಿಇಒ ಟಿಮ್ ಕುಕ್ ಮತ್ತು ಡಿಸ್ನಿ ಸಿಇಒ ರಾಬರ್ಟ್ ಇಗರ್ ಸೇರಿದಂತೆ ಜಗತ್ತಿನ ಹಲವು ಪ್ರಸಿದ್ಧ ವ್ಯಕ್ತಿಗಳ ಬೆಳಿಗ್ಗೆ ಬೇಗ ಏಳುತ್ತಾರೆ. 
(6 / 8)

ಬೇಗ ಏಳಲು ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳಬೇಕು. ಬೇಗ ಮಲಗಿ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಂಡು ದೇಹವನ್ನು ಅದಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು. ರಾತ್ರಿ ಮಲಗುವ ಮುನ್ನ ಮೊಬೈಲ್‌, ಕಂಪ್ಯೂಟರ್‌ನಂತಹ ಸಾಧನಗಳಿಂದ ದೂರವಿರಬೇಕು. 
(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(8 / 8)

    ಹಂಚಿಕೊಳ್ಳಲು ಲೇಖನಗಳು