logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀರ್ಘಕಾಲದವರೆಗೆ ಮಲ ವಿಸರ್ಜನೆ ಮಾಡದೇ ತಡೆದುಕೊಂಡಿರುತ್ತೀರಾ, ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ

ದೀರ್ಘಕಾಲದವರೆಗೆ ಮಲ ವಿಸರ್ಜನೆ ಮಾಡದೇ ತಡೆದುಕೊಂಡಿರುತ್ತೀರಾ, ಈ ಗಂಭೀರ ಸಮಸ್ಯೆಗಳು ಕಾಡಬಹುದು ಎಚ್ಚರ

Oct 01, 2024 04:07 PM IST

ಮನುಷ್ಯನ ದೈಹಿಕ ಪ್ರಕ್ರಿಯೆಯಲ್ಲಿ ಮಲ, ಮೂತ್ರ ವಿಸರ್ಜನೆ ಕೂಡ ಒಂದು. ಪ್ರತಿದಿನ ಮಲ, ಮೂತ್ರ ಹೊರ ಹಾಕಲೇಬೇಕು. ಆದರೆ ಇತ್ತೀಚಿನ ಒತ್ತಡದ ಜೀವನದಲ್ಲಿ ಮಲ ವಿರ್ಸಜನೆಗೂ ಜನರಿಗೆ ಸಮಯವಿಲ್ಲದಂತಾಗಿದೆ. ಆ ಕಾರಣಕ್ಕೆ ದೀರ್ಘಕಾಲದವರೆಗೆ ಮಲವನ್ನು ವಿಸರ್ಜನೆಯನ್ನು ತಡೆದುಕೊಳ್ಳುತ್ತಾರೆ. ಇದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತದೆ ನೋಡಿ.

ಮನುಷ್ಯನ ದೈಹಿಕ ಪ್ರಕ್ರಿಯೆಯಲ್ಲಿ ಮಲ, ಮೂತ್ರ ವಿಸರ್ಜನೆ ಕೂಡ ಒಂದು. ಪ್ರತಿದಿನ ಮಲ, ಮೂತ್ರ ಹೊರ ಹಾಕಲೇಬೇಕು. ಆದರೆ ಇತ್ತೀಚಿನ ಒತ್ತಡದ ಜೀವನದಲ್ಲಿ ಮಲ ವಿರ್ಸಜನೆಗೂ ಜನರಿಗೆ ಸಮಯವಿಲ್ಲದಂತಾಗಿದೆ. ಆ ಕಾರಣಕ್ಕೆ ದೀರ್ಘಕಾಲದವರೆಗೆ ಮಲವನ್ನು ವಿಸರ್ಜನೆಯನ್ನು ತಡೆದುಕೊಳ್ಳುತ್ತಾರೆ. ಇದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತದೆ ನೋಡಿ.
ಮನೆ, ಕಚೇರಿ ಅಥವಾ ಸಾರ್ವಜನಿಕ ಸ್ಥಳ ಎಲ್ಲೇ ಆಗಿರಲಿ ಕೆಲವು ಸಂದರ್ಭಗಳಲ್ಲಿ ನಾವು ಮಲ, ಮೂತ್ರ ವಿಸರ್ಜನೆ ಮಾಡದೇ ತಡೆದಿಟ್ಟುಕೊಳ್ಳುತ್ತೇವೆ. ನೀವೂ ಈ ಸಾಲಿಗೆ ಸೇರುವವರಾದ್ರೆ ನಿಮಗೆ ತಿಳಿಯದಂತೆ ನೀವು ಹಲವಾರು ರೋಗಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವವರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 
(1 / 8)
ಮನೆ, ಕಚೇರಿ ಅಥವಾ ಸಾರ್ವಜನಿಕ ಸ್ಥಳ ಎಲ್ಲೇ ಆಗಿರಲಿ ಕೆಲವು ಸಂದರ್ಭಗಳಲ್ಲಿ ನಾವು ಮಲ, ಮೂತ್ರ ವಿಸರ್ಜನೆ ಮಾಡದೇ ತಡೆದಿಟ್ಟುಕೊಳ್ಳುತ್ತೇವೆ. ನೀವೂ ಈ ಸಾಲಿಗೆ ಸೇರುವವರಾದ್ರೆ ನಿಮಗೆ ತಿಳಿಯದಂತೆ ನೀವು ಹಲವಾರು ರೋಗಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವವರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. (shutterstock)
ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವುದರಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ. ಸ್ನಾಯುವು ಗುದನಾಳದಿಂದ ಮಲವನ್ನು ಮತ್ತೆ ದೊಡ್ಡ ಕರುಳಿಗೆ ತಳ್ಳುವ ಕೆಲಸ ಮಾಡುತ್ತದೆ. ಇದರಿಂದ ಮಲದಲ್ಲಿನ ನೀರು ಮತ್ತೆ ದೇಹಕ್ಕೆ ಸೇರಿಕೊಳ್ಳುತ್ತದೆ, ಮಲ ಒಣಗುತ್ತದೆ. ಈ ಪ್ರಕ್ರಿಯೆಯ ನಂತರ ಸರಾಗ ಮಲ ವಿಸರ್ಜನೆಗೆ ನಿಮಗೆ ತೊಂದರೆ ಎದುರಾಗಬಹುದು.  
(2 / 8)
ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವುದರಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ. ಸ್ನಾಯುವು ಗುದನಾಳದಿಂದ ಮಲವನ್ನು ಮತ್ತೆ ದೊಡ್ಡ ಕರುಳಿಗೆ ತಳ್ಳುವ ಕೆಲಸ ಮಾಡುತ್ತದೆ. ಇದರಿಂದ ಮಲದಲ್ಲಿನ ನೀರು ಮತ್ತೆ ದೇಹಕ್ಕೆ ಸೇರಿಕೊಳ್ಳುತ್ತದೆ, ಮಲ ಒಣಗುತ್ತದೆ. ಈ ಪ್ರಕ್ರಿಯೆಯ ನಂತರ ಸರಾಗ ಮಲ ವಿಸರ್ಜನೆಗೆ ನಿಮಗೆ ತೊಂದರೆ ಎದುರಾಗಬಹುದು.  (shutterstock)
ವೈದ್ಯರ ಪ್ರಕಾರ, ಅನಿವಾರ್ಯ ಕಾರಣಗಳಿಂದ ಅ‍‍ಪರೂಪಕ್ಕೊಮ್ಮೆ ಮಲ ವಿರ್ಸಜನೆ ಮಾಡದೇ ತಡೆದುಕೊಳ್ಳುವುದು ಸರಿ, ಆದರೆ ನಿಯಮಿತವಾಗಿ ಮಲವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವು ಮಲಬದ್ಧತೆ ಸಮಸ್ಯೆ ಆರಂಭವಾಗಲು ಕಾರಣವಾಗುತ್ತದೆ.  
(3 / 8)
ವೈದ್ಯರ ಪ್ರಕಾರ, ಅನಿವಾರ್ಯ ಕಾರಣಗಳಿಂದ ಅ‍‍ಪರೂಪಕ್ಕೊಮ್ಮೆ ಮಲ ವಿರ್ಸಜನೆ ಮಾಡದೇ ತಡೆದುಕೊಳ್ಳುವುದು ಸರಿ, ಆದರೆ ನಿಯಮಿತವಾಗಿ ಮಲವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವು ಮಲಬದ್ಧತೆ ಸಮಸ್ಯೆ ಆರಂಭವಾಗಲು ಕಾರಣವಾಗುತ್ತದೆ.  (shutterstock)
ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವ ಅನಾನುಕೂಲಗಳು: ಹೊಟ್ಟೆಯಬ್ಬರ ಮತ್ತು ಗ್ಯಾಸ್ಟ್ರಿಕ್‌: ವ್ಯಕ್ತಿಯ ಮಲವು ಕೊಲೊನ್‌ನಲ್ಲಿ ಹೆಚ್ಚು ಕಾಲ ಉಳಿಯುತ್ತದೆ, ಹೀಗೆ ದೀರ್ಘಕಾಲ ಹಿಡಿದಿಟ್ಟುಕೊಳ್ಳುವುದು ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಅತಿಯಾದ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು.  
(4 / 8)
ದೀರ್ಘಕಾಲದವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವ ಅನಾನುಕೂಲಗಳು: ಹೊಟ್ಟೆಯಬ್ಬರ ಮತ್ತು ಗ್ಯಾಸ್ಟ್ರಿಕ್‌: ವ್ಯಕ್ತಿಯ ಮಲವು ಕೊಲೊನ್‌ನಲ್ಲಿ ಹೆಚ್ಚು ಕಾಲ ಉಳಿಯುತ್ತದೆ, ಹೀಗೆ ದೀರ್ಘಕಾಲ ಹಿಡಿದಿಟ್ಟುಕೊಳ್ಳುವುದು ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಅತಿಯಾದ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು.  (shutterstock)
ಹೆಚ್ಚು ಸಮಯದವರೆಗೆ ಕರುಳಿನ ಚಲನೆಯನ್ನು ಹೊಂದಿಲ್ಲದಿರುವಂತೆ ಆಯಾಸಗೊಳಿಸುವುದರಿಂದ ಮೂತ್ರಕೋಶವನ್ನು ನಿಯಂತ್ರಿಸುವ ಸ್ನಾಯುಗಳಿಗೆ ಹಾನಿಯಾಗುತ್ತದೆ, ಇದು ಮೂತ್ರ ಸೋರಿಕೆಗೆ ಕಾರಣವಾಗಬಹುದು.
(5 / 8)
ಹೆಚ್ಚು ಸಮಯದವರೆಗೆ ಕರುಳಿನ ಚಲನೆಯನ್ನು ಹೊಂದಿಲ್ಲದಿರುವಂತೆ ಆಯಾಸಗೊಳಿಸುವುದರಿಂದ ಮೂತ್ರಕೋಶವನ್ನು ನಿಯಂತ್ರಿಸುವ ಸ್ನಾಯುಗಳಿಗೆ ಹಾನಿಯಾಗುತ್ತದೆ, ಇದು ಮೂತ್ರ ಸೋರಿಕೆಗೆ ಕಾರಣವಾಗಬಹುದು.(shutterstock)
ತಮ್ಮ ಕರುಳಿನಲ್ಲಿ ನಿಯಮಿತವಾಗಿ ಮಲವನ್ನು ಹಿಡಿದಿಟ್ಟುಕೊಳ್ಳುವ ಜನರ ದೇಹ ಯಾವಾಗಲೂ ಊದಿಕೊಂಡತೆ ಇರುತ್ತದೆ ಮತ್ತು ಅವರಲ್ಲಿ ಬ್ಯಾಕ್ಟೀರಿಯಾದ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ಒಂದು ಅಧ್ಯಯನವು ಹೇಳಿದೆ. ಈ ಎರಡೂ ಅಂಶಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ಸೃಷ್ಟಿಸುತ್ತವೆ.
(6 / 8)
ತಮ್ಮ ಕರುಳಿನಲ್ಲಿ ನಿಯಮಿತವಾಗಿ ಮಲವನ್ನು ಹಿಡಿದಿಟ್ಟುಕೊಳ್ಳುವ ಜನರ ದೇಹ ಯಾವಾಗಲೂ ಊದಿಕೊಂಡತೆ ಇರುತ್ತದೆ ಮತ್ತು ಅವರಲ್ಲಿ ಬ್ಯಾಕ್ಟೀರಿಯಾದ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ಒಂದು ಅಧ್ಯಯನವು ಹೇಳಿದೆ. ಈ ಎರಡೂ ಅಂಶಗಳು ಕರುಳಿನ ಕ್ಯಾನ್ಸರ್ ಅಪಾಯವನ್ನು ಸೃಷ್ಟಿಸುತ್ತವೆ.(shutterstock)
ಮಲವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದು ನಿಮ್ಮ ಗುದದ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಮಲವು ಗಟ್ಟಿಯಾಗಲು ಮತ್ತು ಒಣಗಲು ಕಾರಣವಾಗುತ್ತದೆ, ಮಲಬದ್ಧತೆ, ಮೂಲವ್ಯಾಧಿ ಮತ್ತು ಗುದದ ಬಿರುಕುಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
(7 / 8)
ಮಲವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದು ನಿಮ್ಮ ಗುದದ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಮಲವು ಗಟ್ಟಿಯಾಗಲು ಮತ್ತು ಒಣಗಲು ಕಾರಣವಾಗುತ್ತದೆ, ಮಲಬದ್ಧತೆ, ಮೂಲವ್ಯಾಧಿ ಮತ್ತು ಗುದದ ಬಿರುಕುಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.(shutterstock)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(8 / 8)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

    ಹಂಚಿಕೊಳ್ಳಲು ಲೇಖನಗಳು