logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hitlar Kalyana Actress: 'ಹಿಟ್ಲರ್‌ ಕಲ್ಯಾಣ'ದ ಲೀಲಾ ಅಲಿಯಾಸ್‌ ಮಲೈಕಾ ಫೋಟೋ ಗ್ಯಾಲರಿ

Hitlar kalyana Actress: 'ಹಿಟ್ಲರ್‌ ಕಲ್ಯಾಣ'ದ ಲೀಲಾ ಅಲಿಯಾಸ್‌ ಮಲೈಕಾ ಫೋಟೋ ಗ್ಯಾಲರಿ

Oct 04, 2022 09:21 PM IST

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಹಿಟ್ಲರ್‌ ಕಲ್ಯಾಣ' ಧಾರಾವಾಹಿ ವೀಕ್ಷಕರಿಗೆ ಈ ನಟಿಯ ಪರಿಚಯವಿರುತ್ತದೆ. ಧಾರಾವಾಹಿಯಲ್ಲಿ ಎಡವಟ್‌ ಲೀಲಾ ಎಂದೇ ಕರೆಸಿಕೊಳ್ಳುವ ಈ ಚೆಲುವೆ ಹೆಸರು ಮಲೈಕಾ ವಸುಪಾಲ್.‌ 

  • ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಹಿಟ್ಲರ್‌ ಕಲ್ಯಾಣ' ಧಾರಾವಾಹಿ ವೀಕ್ಷಕರಿಗೆ ಈ ನಟಿಯ ಪರಿಚಯವಿರುತ್ತದೆ. ಧಾರಾವಾಹಿಯಲ್ಲಿ ಎಡವಟ್‌ ಲೀಲಾ ಎಂದೇ ಕರೆಸಿಕೊಳ್ಳುವ ಈ ಚೆಲುವೆ ಹೆಸರು ಮಲೈಕಾ ವಸುಪಾಲ್.‌ 
ಮಲೈಕಾ ವಸುಪಾಲ್‌ ನೋಡಲು ಬಹಳ ಮುದ್ದಾಗಿದ್ದಾರೆ. ಹಿಟ್ಲರ್‌ ಕಲ್ಯಾಣ ಧಾರಾವಾಹಿಯ ಲೀಲಾ ಪಾತ್ರಕ್ಕೆ ಆಕೆ ಹೇಳಿ ಮಾಡಿಸಿದಂತಿದ್ದಾರೆ. 
(1 / 9)
ಮಲೈಕಾ ವಸುಪಾಲ್‌ ನೋಡಲು ಬಹಳ ಮುದ್ದಾಗಿದ್ದಾರೆ. ಹಿಟ್ಲರ್‌ ಕಲ್ಯಾಣ ಧಾರಾವಾಹಿಯ ಲೀಲಾ ಪಾತ್ರಕ್ಕೆ ಆಕೆ ಹೇಳಿ ಮಾಡಿಸಿದಂತಿದ್ದಾರೆ. (PC: Malaika T Vasupal social media)
ಧಾರಾವಾಹಿಯಲ್ಲಿ ಹೆಚ್ಚಾಗಿ ಕುರ್ತಾದಲ್ಲಿ ಕಾಣಿಸಿಕೊಳ್ಳುವ ಈ ಬ್ಯೂಟಿ, ವಿವಿಧ ಕಾಸ್ಟ್ಯೂಮ್‌ ಧರಿಸಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಒಂದಕ್ಕಿಂದ ಒಂದು ಬಹಳ ಸುಂದರವಾಗಿವೆ. 
(2 / 9)

ಮಲೈಕಾ ವಸುಪಾಲ ದಾವಣಗೆರೆಗೆ ಸೇರಿದವರು. ಚಿಕ್ಕಂದಿನಿಂದ ನಟನೆಯಲ್ಲಿ ಆಸಕ್ತಿ ಇದ್ದರೂ, ಮನೆಯರ ಸೂಚನೆ ಮೇರೆಗೆ ಮೊದಲು ವಿದ್ಯಾಭ್ಯಾಸದತ್ತ ಗಮನಹರಿಸಿದರು. 
(3 / 9)

ಇಂಜಿನಿಯರಿಂಗ್‌ ಪದವೀಧರೆ ಮಲೈಕಾ, ಓದು ಮುಗಿದ ನಂತರ ಅನೇಕ ಧಾರಾವಾಹಿಗಳಿಗೆ ಆಡಿಷನ್‌ ನೀಡಿದರು. ಕೊನೆಗೆ ಸೆಲೆಕ್ಟ್‌ ಆಗಿದ್ದು 'ಹಿಟ್ಲರ್‌ ಕಲ್ಯಾಣ' ಧಾರಾವಾಹಿಗೆ. 
(4 / 9)

ತನಗಿಂತ ಬಹಳ ಹಿರಿಯ ವ್ಯಕ್ತಿಯನ್ನು ಆಕಸ್ಮಿಕ ಸನ್ನಿವೇಶದಲ್ಲಿ ಮದುವೆಯಾಗುವ ಲೀಲಾ ಪಾತ್ರದಲ್ಲಿ ಮಲೈಕಾ ಅದ್ಭುತವಾಗಿ ನಟಿಸುತ್ತಿದ್ದಾರೆ. 
(5 / 9)

ಮಲೈಕಾಗೆ ಪರಭಾಷೆಯ ಧಾರಾವಾಹಿಗಳಲ್ಲಿ ಕೂಡಾ ಬಹಳ ಆಫರ್‌ ಬರುತ್ತಿದೆಯಂತೆ. ಬೆಳ್ಳಿತೆರೆಯಲ್ಲಿ ಕೂಡಾ ಅವರಿಗೆ ಚಾನ್ಸ್‌ ದೊರೆತಿದೆ. 
(6 / 9)

ಮಲೈಕಾ ವಸುಪಾಲ್‌  ಚಿಕ್ಕಣ್ಣ ಜೊತೆ ಉಪಾಧ್ಯಕ್ಷ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಚಿತ್ರೀಕರಣ ಮುಗಿದು ಡಬ್ಬಿಂಗ್‌ ಹಂತದಲ್ಲಿದೆ. 
(7 / 9)

ಧಾರಾವಾಹಿಯಲ್ಲಿ ಮುಗ್ಧ ಹುಡುಗಿ ಪಾತ್ರದಲ್ಲಿ ನಟಿಸಿರುವ ಮಲೈಕಾ, ಉಪಾಧ್ಯಕ್ಷ ಚಿತ್ರದಲ್ಲಿ ಯಾವ ರೀತಿ ನಟಿಸಿದ್ದಾರೆ ಎಂದು ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ. 
(8 / 9)

 ಒಂದು ಧಾರಾವಾಹಿ, ಒಂದು ಸಿನಿಮಾದಲ್ಲಿ ನಟಿಸಿರುವ ಮಲೈಕಾ ವಸುಪಾಲ್‌ಗೆ ಅತಿ ಕಡಿಮೆ ಸಮಯದಲ್ಲಿ ಸಾಕಷ್ಟು ಜನಪ್ರಿಯತೆ ದೊರೆತಿದೆ. ಈಗಾಗಲೇ ಅವರ ಹೆಸರಿನಲ್ಲಿ ಫ್ಯಾನ್‌ ಪೇಜ್‌ ಕೂಡಾ ಕ್ರಿಯೇಟ್‌ ಆಗಿದೆ. 
(9 / 9)

    ಹಂಚಿಕೊಳ್ಳಲು ಲೇಖನಗಳು