logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧನು ರಾಶಿಗೆ ಸೂರ್ಯ ಸಂಚಾರ; ಈ 3 ರಾಶಿಯವರು ಭಾರಿ ಅದೃಷ್ಟವಂತರು, ಆದಾಯ ಮತ್ತು ಗೌರವ ಹೆಚ್ಚಾಗುತ್ತೆ

ಧನು ರಾಶಿಗೆ ಸೂರ್ಯ ಸಂಚಾರ; ಈ 3 ರಾಶಿಯವರು ಭಾರಿ ಅದೃಷ್ಟವಂತರು, ಆದಾಯ ಮತ್ತು ಗೌರವ ಹೆಚ್ಚಾಗುತ್ತೆ

Dec 15, 2024 08:30 AM IST

ಸೂರ್ಯನ ಸಂಚಾರವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದೆ. ಸೂರ್ಯನು ಡಿಸೆಂಬರ್ 15ರ ಭಾನುವಾರ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದು ಕೆಲವು ರಾಶಿಯವರಿಗೆ ಪ್ರಯೋಜನಗಳನ್ನು ತರುತ್ತದೆ. ಹೆಚ್ಚು ಲಾಭಗಳನ್ನು ಪಡೆಯಲಿರುವ 3 ರಾಶಿಯವರಲ್ಲಿ ನೀವು ಇದ್ದೀರಾ ನೋಡಿ.

  • ಸೂರ್ಯನ ಸಂಚಾರವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದೆ. ಸೂರ್ಯನು ಡಿಸೆಂಬರ್ 15ರ ಭಾನುವಾರ ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದು ಕೆಲವು ರಾಶಿಯವರಿಗೆ ಪ್ರಯೋಜನಗಳನ್ನು ತರುತ್ತದೆ. ಹೆಚ್ಚು ಲಾಭಗಳನ್ನು ಪಡೆಯಲಿರುವ 3 ರಾಶಿಯವರಲ್ಲಿ ನೀವು ಇದ್ದೀರಾ ನೋಡಿ.
ಜ್ಯೋತಿಷ್ಯದ ಪ್ರಕಾರ ಸೂರ್ಯನು ರಾಶಿಚಕ್ರ ಚಿಹ್ನೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಾನೆ. ವರ್ಷದ ಕೊನೆಯಲ್ಲಿ ಸೂರ್ಯ ತಮ್ಮ ರಾಶಿಯ ಸ್ಥಾನವನ್ನು ಬದಲಾಯಿಸುತ್ತಿದ್ದಾನೆ.
(1 / 7)

2024ರ ಡಿಸೆಂಬರ್ 15ರ ಭಾನುವಾರ ರಾತ್ರಿ 10:19 ಕ್ಕೆ ಸೂರ್ಯನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. 2025ರ ಜನವರಿ 14 ರವರಿಗೆ ಇದೇ ರಾಶಿಯಲ್ಲಿರುತ್ತಾನೆ. ಸೂರ್ಯನು ಸುಮಾರು ಒಂದು ತಿಂಗಳ ಕಾಲ ಧನು ರಾಶಿಯಲ್ಲಿರುತ್ತಾನೆ. ಈ ಅವಧಿಯಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳು ಹೆಚ್ಚಿನ ಅದೃಷ್ಟವನ್ನು ಹೊಂದಿರುತ್ತವೆ. 
(2 / 7)

ಧನು ರಾಶಿಗೆ ಸೂರ್ಯನ ಪ್ರವೇಶವು ಕೆಲವು ರಾಶಿಯವರ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರುತ್ತದೆ. ಅದರಲ್ಲೂ ಮೇಷ, ಸಿಂಹ ಹಾಗೂ ವೃಶ್ಟಿಕ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಲಾಭಗಳಿವೆ. ಶುಭಫಲಗಳನ್ನು ಇಲ್ಲಿ ನೀಡಲಾಗಿದೆ.
(3 / 7)

ವೃಶ್ಚಿಕ ರಾಶಿ: ಈ ಅವಧಿಯಲ್ಲಿ, ವೃಶ್ಚಿಕ ರಾಶಿಯವರಿಗೆ ಎಲ್ಲಾ ರೀತಿಯಲ್ಲಿ ಪ್ರಯೋಜನಗಳು ಇರಲಿವೆ. ಉದ್ಯಮಿಗಳು ಉತ್ತಮ ಆದಾಯವನ್ನು ಗಳಿಸುತ್ತಾರೆ, ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ, ಉದ್ಯೋಗಿಗಳು ಸಹ ಅನೇಕ ವಿಷಯಗಳಲ್ಲಿ ಲಾಭಗಳನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. 
(4 / 7)

ಮೇಷ ರಾಶಿ: ಈ ಅವಧಿಯಲ್ಲಿ ಮೇಷ ರಾಶಿಯವರು ಅದೃಷ್ಟವನ್ನು ಪಡೆಯುತ್ತಾರೆ. ಈ ರಾಶಿಯ ಉದ್ಯಮಿಗಳು ಎಲ್ಲಾ ರೀತಿಯಲ್ಲೂ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು, ಹೊಸ ಆದಾಯದ ಮೂಲಗಳು ಲಭ್ಯವಿರುತ್ತವೆ, ಉದ್ಯೋಗಿಗಳು ಪ್ರಗತಿಯನ್ನು ಕಾಣುತ್ತಾರೆ, ದೂರ ಪ್ರಯಾಣಿಸಬೇಕಾಗಬಹುದು, ನಿಮ್ಮ ಸಂಗಾತಿಯೊಂದಿಗಿನ ಬಂಧವು ಮತ್ತಷ್ಟು ಬಲಗೊಳ್ಳುತ್ತದೆ. 
(5 / 7)

ಸಿಂಹ ರಾಶಿ: ಧನು ರಾಶಿಯಲ್ಲಿ ಸೂರ್ಯನ ಸಂಚಾರದ ಅವಧಿಯು ಸಿಂಹ ರಾಶಿಯವರ ಅದೃಷ್ಟವನ್ನು ಹೆಚ್ಚಿಸುತ್ತದೆ. ಆರ್ಥಿಕವಾಗಿ ಪರಿಸ್ಥಿತಿ ಸುಧಾರಿಸಲಿದೆ. ಹಠಾತ್ ಹಣಕಾಸಿನ ಲಾಭದ ಸಾಧ್ಯತೆ ಇರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಹೆಚ್ಚಿನ ಯಶಸ್ಸನ್ನು ಪಡೆಯುತ್ತೀರಿ. ಒಡಹುಟ್ಟಿದವರ ಬೆಂಬಲ ಹೆಚ್ಚಾಗುತ್ತದೆ.
(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
(7 / 7)

    ಹಂಚಿಕೊಳ್ಳಲು ಲೇಖನಗಳು