logo
ಕನ್ನಡ ಸುದ್ದಿ  /  Photo Gallery  /  I Am Not Amazed At Congress Saying Bad Things About Me Says Pm Modi

PM Hits Back Kharge: ಖರ್ಗೆ "ರಾವಣ" ಹೇಳಿಕೆಯನ್ನು ಮತವಾಗಿ ಪರಿವರ್ತಿಸಿದ ಮೋದಿ?: ಹೀಗೊಂದು "ನಯವಾದ ಹೊಡೆತ"!

Dec 01, 2022 03:17 PM IST

ಪಂಚಮಹಲ್:‌ ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಮಲ್ಲಿಕಾರ್ಜುನ ಖರ್ಗೆ ಅವರ "ರಾವಣ" ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಖರ್ಗೆ ಅವರ ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ. ಈ ಮಧ್ಯೆ ತಮ್ಮ ವಿರುದ್ಧದ ಖರ್ಗೆ ಹೇಳಿಕೆಗೆ ತಿರುಗೇಟು ನೀಡಲು ಖುದ್ದು ಪ್ರಧಾನಿ ಮೋದಿ ಅಖಾಡಕ್ಕೆ ಧುಮುಕಿದ್ದಾರೆ. ಪಂಚಮಹಲ್‌ನ ಕಲೋಲ್‌ನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮಭಕ್ತರ ನಾಡಾದ ಗುಜರಾತ್‌ಗೆ ಬಂದು ನನ್ನನ್ನು ಖರ್ಗೆ ಅವರು "ರಾವಣ" ಎಂದು ಕರೆಯಬಾರದಿತ್ತು ಎಂದು ಗುಡುಗಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..

  • ಪಂಚಮಹಲ್:‌ ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಮಲ್ಲಿಕಾರ್ಜುನ ಖರ್ಗೆ ಅವರ "ರಾವಣ" ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಖರ್ಗೆ ಅವರ ಕ್ಷಮೆಯಾಚನೆಗೆ ಆಗ್ರಹಿಸುತ್ತಿದೆ. ಈ ಮಧ್ಯೆ ತಮ್ಮ ವಿರುದ್ಧದ ಖರ್ಗೆ ಹೇಳಿಕೆಗೆ ತಿರುಗೇಟು ನೀಡಲು ಖುದ್ದು ಪ್ರಧಾನಿ ಮೋದಿ ಅಖಾಡಕ್ಕೆ ಧುಮುಕಿದ್ದಾರೆ. ಪಂಚಮಹಲ್‌ನ ಕಲೋಲ್‌ನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮಭಕ್ತರ ನಾಡಾದ ಗುಜರಾತ್‌ಗೆ ಬಂದು ನನ್ನನ್ನು ಖರ್ಗೆ ಅವರು "ರಾವಣ" ಎಂದು ಕರೆಯಬಾರದಿತ್ತು ಎಂದು ಗುಡುಗಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..
ನಾನು ವೈಯಕ್ತಿಕವಾಗಿ ಮಲ್ಲಿಕಾರ್ಜಿನ ಖರ್ಗೆ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ಆದರೆ ಗುಜರಾತ್‌ ರಾಮಭಕ್ತರ ನಾಡು ಎಂಬುದು ಪಾಪ ಖರ್ಗೆ ಅವರಿಗೆ ಗೊತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದು ನನ್ನನ್ನು ರಾವಣ ಎಂದು ಕರೆದಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
(1 / 5)
ನಾನು ವೈಯಕ್ತಿಕವಾಗಿ ಮಲ್ಲಿಕಾರ್ಜಿನ ಖರ್ಗೆ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ಆದರೆ ಗುಜರಾತ್‌ ರಾಮಭಕ್ತರ ನಾಡು ಎಂಬುದು ಪಾಪ ಖರ್ಗೆ ಅವರಿಗೆ ಗೊತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದು ನನ್ನನ್ನು ರಾವಣ ಎಂದು ಕರೆದಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.(Verified Twitter)
ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ನನ್ನ ವಿರುದ್ಧ ಇಷ್ಟು ಕೆಳಮಟ್ಟಕ್ಕೆ ಇಳಿದು ಪ್ರಚಾರ ಮಾಡುತ್ತಿರಲಿಲ್ಲ. ಕಾಂಗ್ರೆಸ್‌ ಯಾವಾಗಲೂ ಒಂದು ಕುಟುಂಬವನ್ನು ನಂಬುತ್ತದೆಯೇ ಹೊರತು ಪ್ರಜಾಪ್ರಭುತ್ವವನ್ನಲ್ಲ. ಕಾಂಗ್ರೆಸ್‌ ನಾಯಕರು ಈ ಕುಟುಂಬವನ್ನು ಸಂತುಷ್ಟಗೊಳಿಸಲು ಬಯಸುತ್ತಾರೆಯೇ ವಿನಃ ಅವರಿಗೆ ಕಿಂಚಿತ್ತೂ ದೇಶದ ಕಾಳಜಿ ಇಲ್ಲ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಗಾಂಧಿ ಕುಟುಂಬವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
(2 / 5)
ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ನನ್ನ ವಿರುದ್ಧ ಇಷ್ಟು ಕೆಳಮಟ್ಟಕ್ಕೆ ಇಳಿದು ಪ್ರಚಾರ ಮಾಡುತ್ತಿರಲಿಲ್ಲ. ಕಾಂಗ್ರೆಸ್‌ ಯಾವಾಗಲೂ ಒಂದು ಕುಟುಂಬವನ್ನು ನಂಬುತ್ತದೆಯೇ ಹೊರತು ಪ್ರಜಾಪ್ರಭುತ್ವವನ್ನಲ್ಲ. ಕಾಂಗ್ರೆಸ್‌ ನಾಯಕರು ಈ ಕುಟುಂಬವನ್ನು ಸಂತುಷ್ಟಗೊಳಿಸಲು ಬಯಸುತ್ತಾರೆಯೇ ವಿನಃ ಅವರಿಗೆ ಕಿಂಚಿತ್ತೂ ದೇಶದ ಕಾಳಜಿ ಇಲ್ಲ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಗಾಂಧಿ ಕುಟುಂಬವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.(Verified Twitter)
ಮೋದಿಗೆ ಯಾರು ಹೆಚ್ಚು ಕೆಟ್ಟ ಪದಗಳಿಂದ ಬೈಯುತ್ತಾರೆ ಎಂದು ಕಾಂಗ್ರೆಸ್‌ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಗುಜರಾತ್‌ನಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ನೀವು ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿದರು.
(3 / 5)
ಮೋದಿಗೆ ಯಾರು ಹೆಚ್ಚು ಕೆಟ್ಟ ಪದಗಳಿಂದ ಬೈಯುತ್ತಾರೆ ಎಂದು ಕಾಂಗ್ರೆಸ್‌ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಗುಜರಾತ್‌ನಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ನೀವು ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿದರು.(ANI)
ರಾಮನ ಅಸ್ತಿತ್ವವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ, ಅಯೋಧ್ಯೆಯ ರಾಮಮಂದಿರದಲ್ಲಿ ಅದಕ್ಕೆ ನಂಬಿಕೆ ಇಲ್ಲ ಎಂಬುದು ನಮಗೆ ತಿಳಿದಿದೆ. ಅವರಿಗೆ ರಾಮಸೇತು ಕೂಡ ಕಣ್ಣು ಕುಕ್ಕುತ್ತದೆ. ರಾಮ ವಿರೋಧಿಗಳು ಸದಾ ರಾವಣನನ್ನೇ ಜಪಿಸುತ್ತಿರುತ್ತಾರೆ ಎಂದು ಪ್ರಧಾನಿ ಮೋದಿ ಕಾಲೆಳೆದರು.
(4 / 5)
ರಾಮನ ಅಸ್ತಿತ್ವವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ, ಅಯೋಧ್ಯೆಯ ರಾಮಮಂದಿರದಲ್ಲಿ ಅದಕ್ಕೆ ನಂಬಿಕೆ ಇಲ್ಲ ಎಂಬುದು ನಮಗೆ ತಿಳಿದಿದೆ. ಅವರಿಗೆ ರಾಮಸೇತು ಕೂಡ ಕಣ್ಣು ಕುಕ್ಕುತ್ತದೆ. ರಾಮ ವಿರೋಧಿಗಳು ಸದಾ ರಾವಣನನ್ನೇ ಜಪಿಸುತ್ತಿರುತ್ತಾರೆ ಎಂದು ಪ್ರಧಾನಿ ಮೋದಿ ಕಾಲೆಳೆದರು.(ANI)
ಒಟ್ಟಿನಲ್ಲಿ ತಮ್ಮ ವಿರುದ್ಧದ ಖರ್ಗೆ ಹೇಳಿಕೆಗೆ ನಯವಾಗಿ ತಿರುಗೇಟು ನೀಡುವ ಮೂಲಕ, ಪ್ರಧಾನಿ ಮೋದಿ ಅವರು ಈ ಹೇಳಿಕೆಯನ್ನು ಮತವನ್ನಾಗಿ ಪರಿವರ್ತಿಸುವಲ್ಲಿ ಸಫಲರಾಗುವ ಸಾಧ್ಯತೆ ಹೆಚ್ಚು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
(5 / 5)
ಒಟ್ಟಿನಲ್ಲಿ ತಮ್ಮ ವಿರುದ್ಧದ ಖರ್ಗೆ ಹೇಳಿಕೆಗೆ ನಯವಾಗಿ ತಿರುಗೇಟು ನೀಡುವ ಮೂಲಕ, ಪ್ರಧಾನಿ ಮೋದಿ ಅವರು ಈ ಹೇಳಿಕೆಯನ್ನು ಮತವನ್ನಾಗಿ ಪರಿವರ್ತಿಸುವಲ್ಲಿ ಸಫಲರಾಗುವ ಸಾಧ್ಯತೆ ಹೆಚ್ಚು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.(ANI)

    ಹಂಚಿಕೊಳ್ಳಲು ಲೇಖನಗಳು