logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahindra Xuv400 Ev: ಹೀಗಿದೆ ನೋಡಿ ಹೊಸ ಮಹೀಂದ್ರ ಎಕ್ಸ್‌ಯುವಿ400 ಎಲೆಕ್ಟ್ರಿಕ್‌ ಇವಿ, ಚಿತ್ರಗಳನ್ನು ನೋಡಿ

Mahindra XUV400 EV: ಹೀಗಿದೆ ನೋಡಿ ಹೊಸ ಮಹೀಂದ್ರ ಎಕ್ಸ್‌ಯುವಿ400 ಎಲೆಕ್ಟ್ರಿಕ್‌ ಇವಿ, ಚಿತ್ರಗಳನ್ನು ನೋಡಿ

Sep 08, 2022 10:22 PM IST

- ನೂತನ ಮಹೀಂದ್ರ ಎಕ್ಸ್‌ಯುವಿ400 "ಫನ್‌, ಫಾಸ್ಟ್‌ ಮತ್ತು ಫಿಯರ್‌ಲೆಸ್‌ʼʼ ಎಂಬ ಮೂರು ಚಾಲನಾ ಆಯ್ಕೆಗಳಲ್ಲಿ ಆಗಮಿಸಿದೆ. - ನೂತನ ಮಹೀಂದ್ರ ಎಲೆಕ್ಟ್ರಿಕ್‌ ಕಾರು ಜನವರಿ 2023ಕ್ಕೆ ರಸ್ತೆಗಿಳಿಯಲಿದೆ.

- ನೂತನ ಮಹೀಂದ್ರ ಎಕ್ಸ್‌ಯುವಿ400 "ಫನ್‌, ಫಾಸ್ಟ್‌ ಮತ್ತು ಫಿಯರ್‌ಲೆಸ್‌ʼʼ ಎಂಬ ಮೂರು ಚಾಲನಾ ಆಯ್ಕೆಗಳಲ್ಲಿ ಆಗಮಿಸಿದೆ. 

- ನೂತನ ಮಹೀಂದ್ರ ಎಲೆಕ್ಟ್ರಿಕ್‌ ಕಾರು ಜನವರಿ 2023ಕ್ಕೆ ರಸ್ತೆಗಿಳಿಯಲಿದೆ.

ಮಹೀಂದ್ರ ಎಕ್ಸ್‌ಯುವಿ400 ಎಲೆಕ್ಟ್ರಿಕ್‌ ಕಾರು ಹೇಗಿರಲಿದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. ಇದೀಗ ನೂತನ ಮಹೀಂದ್ರ ಎಕ್ಸ್‌ಯುವಿ400 ಅನಾವರಣ ಮಾಡಲಾಗಿದ್ದು, ಅದರ ವಿನ್ಯಾಸವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಮಹೀಂದ್ರ ಕಂಪನಿಯ ಪ್ರಕಾರ ನೂತನ ಎಲೆಕ್ಟ್ರಿಕ್‌ ಕಾರಿನಲ್ಲಿ ಒಂದು ಪೂರ್ತಿ ಚಾರ್ಜ್‌ಗೆ 456 ಕಿ.ಮೀ. ದೂರ ಸಾಗಬಹುದಂತೆ.
(1 / 8)

ಮಹೀಂದ್ರ ಎಕ್ಸ್‌ಯುವಿ400ನಲ್ಲಿ 39.5 ಕೆಡಬ್ಲ್ಯುಎಚ್‌ ಬ್ಯಾಟರಿ ಪ್ಯಾಕ್‌ ಇದೆ. Mahindra XUV400 EV ಅನ್ನು ಮೊದಲ ಬಾರಿಗೆ ೨೦೨೨೦ರ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿಡಲಾಗಿತ್ತು. ಆದರೆ, ಆಗ ಪ್ರೊಟೋಟೈಪ್‌ ಮಾದರಿಯನ್ನು ಅನಾವರಣ ಮಾಡಲಾಗಿತ್ತು. ಇದೀಗ ನೂತನ ಕಾರನ್ನು ಅನಾವರಣ ಮಾಡಲಾಗಿದೆ.
(2 / 8)

Mahindra XUV400 ಉದ್ದ 4200 ಮೀ.ಮೀ. ಉದ್ದವಿದೆ, 1,634 ಮಿ.ಮೀ. ಅಗಲವಿದೆ ಮತ್ತು 1,821 ಮೀಟರ್‌ ಎತ್ತರವಿದೆ.
(3 / 8)

ಮಹೀಂದ್ರ ಎಕ್ಸ್‌ಯುವಿ400ನ ವೀಲ್‌ಬೇಸ್‌ 2,600 ಮೀ.ಮೀ. ಇದೆ. ಟಾಟಾ ಮೋಟಾರ್ಸ್‌ ಕಂಪನಿಯು ನೆಕ್ಸಾನ್‌ ಇವಿ ಮತ್ತು ನೆಕ್ಸಾನ್‌ ಮ್ಯಾಕ್ಸ್‌ ಇವಿ ಪರಿಚಯಿಸಿದ ಸಂದರ್ಭದಲ್ಲಿ ಮಹೀಂದ್ರ ಕಂಪನಿಯು ಇದೇ ಮೊದಲ ಬಾರಿಗೆ ಮಾಸ್‌ ಇವಿ ಮಾರುಕಟ್ಟೆಗೆ Mahindra XUV400 EV ಮೂಲಕ ಲಗ್ಗೆಯಿಟ್ಟಿದೆ.
(4 / 8)

ನೂತನ ಮಹೀಂದ್ರ ಎಕ್ಸ್‌ಯುವಿ400 ಕೇವಲ 8.3 ಸೆಕೆಂಡಿನಲ್ಲಿ 0-100 ಕಿ.ಮೀ. ಆಕ್ಸಿಲರೇಟರ್‌ ಪವರ್‌ ಪಡೆದುಕೊಳ್ಳಲಿದೆ.
(5 / 8)

ನೂತನ ಎಕ್ಸ್‌ಯುವಿ400ನಲ್ಲಿ 418 ಲೀಟರ್‌ನ ಬೂಟ್‌ ಸ್ಪೇಸ್‌ ಇದೆ. ಹೀಗಾಗಿ, ಕಾರಿನ ಹಿಂಭಾಗದಲ್ಲಿ ತಕ್ಕಮಟ್ಟಿಗೆ ಉತ್ತಮವಾದ ಸ್ಥಳಾವಕಾಶ ಇದೆ ಎನ್ನಬಹುದು.
(6 / 8)

ಎಕ್ಸ್‌ಯುವಿ400ಗೆ ಎಲ್‌ಇಡಿ ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ ದೊರಕಿದೆ. ಇದರಲ್ಲಿ ಎಲ್‌ಇಡಿ ಹಗಲು ಹೊತ್ತಿನಲ್ಲಿ ಮಿಣುಗುವ ಲೈಟ್‌ಗಳೂ ಇವೆ.
(7 / 8)

ನೂತನ ಮಹೀಂದ್ರ ಎಕ್ಸ್‌ಯುವಿ400 "ಫನ್‌, ಫಾಸ್ಟ್‌ ಮತ್ತು ಫಿಯರ್‌ಲೆಸ್‌ʼʼ ಎಂಬ ಮೂರು ಚಾಲನಾ ಆಯ್ಕೆಗಳಲ್ಲಿ ಆಗಮಿಸಿದೆ. ಒಟ್ಟಾರೆ, ನೂತನ ಎಲೆಕ್ಟ್ರಿಕ್‌ ವೆಹಿಕಲ್‌ ಹಲವು ಹೊಸ ಫೀಚರ್‌ಗಳೊಂದಿಗೆ ಆಗಮಿಸಿದ್ದು, ಮುಂದಿನ ವರ್ಷ ದೇಶದ ರಸ್ತೆಯಲ್ಲಿ ಹೊಸ ಹವಾ ಕ್ರಿಯೆಟ್‌ ಮಾಡುವ ನಿರೀಕ್ಷೆಯಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು