logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pumpkin Seeds Health Benefits: ಲೈಂಗಿಕ ನಿಶ್ಯಕ್ತಿ ಬಾಧಿಸಿದೆಯೇ? ಕುಂಬಳಕಾಯಿ ಬೀಜ ಚಿಕ್ಕದಿದ್ದರೂ ದೇಹಕ್ಕೆ ಅದರ ಉಪಯೋಗ ಸಣ್ಣದೇನಲ್ಲ...

Pumpkin seeds health benefits: ಲೈಂಗಿಕ ನಿಶ್ಯಕ್ತಿ ಬಾಧಿಸಿದೆಯೇ? ಕುಂಬಳಕಾಯಿ ಬೀಜ ಚಿಕ್ಕದಿದ್ದರೂ ದೇಹಕ್ಕೆ ಅದರ ಉಪಯೋಗ ಸಣ್ಣದೇನಲ್ಲ...

Mar 08, 2023 08:21 PM IST

Pumpkin Seeds Health Benefits: ಕುಂಬಳಕಾಯಿಯ ಬೀಜ ನೋಡಲು ಚಿಕ್ಕದಾದರೂ, ಅದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಆಗುವ ಅನುಕೂಲತೆಗಳು ಒಂದೆರಡಲ್ಲ… 

  • Pumpkin Seeds Health Benefits: ಕುಂಬಳಕಾಯಿಯ ಬೀಜ ನೋಡಲು ಚಿಕ್ಕದಾದರೂ, ಅದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಆಗುವ ಅನುಕೂಲತೆಗಳು ಒಂದೆರಡಲ್ಲ… 
ಕೆಲಸದ ಒತ್ತಡ, ಮಾನಸಿನ ಒತ್ತಡ ಸೇರಿ ವಿವಿಧ ಕಾರಣಗಳಿಂದ ಲೈಂಗಿಕ ಶಕ್ತಿ ಕಡಿಮೆಯಾಗಬಹುದು. ಈ ಎಲ್ಲ ಸಮಸ್ಯೆಗೆ ಕುಂಬಳಕಾಯಿ ಬೀಜವು ಪರಿಹಾರದ ರೀತಿಯಲ್ಲಿ ಕೆಲಸ ಮಾಡುತ್ತದೆ.  
(1 / 9)

ಕುಂಬಳಕಾಯಿ ಬೀಜದಲ್ಲಿ ಫೈಬರ್, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್, ಸತು, ಥಯಾಮಿನ್ ಖನಿಜ ಲವಣಗಳು ಮತ್ತು ಪೋಷಕಾಂಶಗಳನ್ನು ಹೊಂದಿರುತ್ತದೆ.
(2 / 9)

ಈ ಬೀಜಗಳನ್ನು ನಿಯಮಿತವಾಗಿ ತಿನ್ನುವುದರಿಂದ ಲೈಂಗಿಕ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಖಚಿತಪಡಿಸಿದ್ದಾರೆ. ಲೈಂಗಿಕ ಸಮಸ್ಯೆ ಜೊತೆಗೆ ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
(3 / 9)

ಕುಂಬಳಕಾಯಿ ಬೀಜದ ನಿಯಮಿತ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ನಿಯಮಿತವಾಗಿ ಸೇವಿಸಬಹುದು.
(4 / 9)

ಕುಂಬಳಕಾಯಿ ಬೀಜಗಳು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೊಟ್ಟೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.  
(5 / 9)

ಕುಂಬಳಕಾಯಿ ಬೀಜಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವುಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಶೇಖರಣೆ ಆಗದಂತೆ ಇದು ತಡೆಯಲಿದೆ.  
(6 / 9)

ಕುಂಬಳಕಾಯಿ ಬೀಜಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿ. ಈಗಾಗಲೇ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕುಂಬಳಕಾಯಿ ಬೀಜಗಳಿಂದ ಪರಿಹಾರದಂತೆ ಸೇವಿಸಬಹುದು.
(7 / 9)

ಕುಂಬಳಕಾಯಿ ಬೀಜ ಸೇವನೆಯಿಂದ ಉರಿಯೂತ ನಿವಾರಣೆ ಆಗಲಿದೆ. ಕೀಲು ನೋವು, ಸ್ನಾಯು ನೋವು ಮತ್ತು ಮೂಳೆ ನೋವಿನ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.
(8 / 9)

ಕುಂಬಳಕಾಯಿ ಬೀಜಗಳನ್ನು ಹಾಲಿನಲ್ಲಿ ಅಥವಾ ನೀರಿನಲ್ಲಿ ನೆನೆಸಿ ಸೇವಿಸಬಹುದು. ಒಣಗಿಸಿ ಪುಡಿ ರೂಪದಲ್ಲಿಯೂ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳ ಪುಡಿಯೊಂದಿಗೆ ಬೆರೆಸಿಯೂ ತಿನ್ನಬಹುದು. ಇದರಿಂದ ಬೆನ್ನು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
(9 / 9)

    ಹಂಚಿಕೊಳ್ಳಲು ಲೇಖನಗಳು