logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  74th Republic Day: ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಡಗರ, ಮಕ್ಕಳ ಕಣ್ಣಲ್ಲಿ ಸಂಭ್ರಮ | ಚಿತ್ರಗಳನ್ನು ನೋಡಿ

74th Republic Day: ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಡಗರ, ಮಕ್ಕಳ ಕಣ್ಣಲ್ಲಿ ಸಂಭ್ರಮ | ಚಿತ್ರಗಳನ್ನು ನೋಡಿ

Jan 26, 2023 11:21 AM IST

ದೇಶದೆಲ್ಲೆಡೆ ಇಂದು ಗಣರಾಜ್ಯೋತ್ಸವದ ಸಂಭ್ರಮ. ವಿಶೇಷವಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಕರ್ಷಕ ಪಥಸಂಚಲನ ನಡೆಯುತ್ತಿದೆ. ವಿವಿಧೆಡೆಯ ಗಣರಾಜ್ಯೋತ್ಸವದ ಸಂಭ್ರಮದ ಚಿತ್ರಗಳು ಇಲ್ಲಿವೆ.

  • ದೇಶದೆಲ್ಲೆಡೆ ಇಂದು ಗಣರಾಜ್ಯೋತ್ಸವದ ಸಂಭ್ರಮ. ವಿಶೇಷವಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಕರ್ಷಕ ಪಥಸಂಚಲನ ನಡೆಯುತ್ತಿದೆ. ವಿವಿಧೆಡೆಯ ಗಣರಾಜ್ಯೋತ್ಸವದ ಸಂಭ್ರಮದ ಚಿತ್ರಗಳು ಇಲ್ಲಿವೆ.
ಭಾರತದಲ್ಲಿ ಇಂದು 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ದೆಹಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವಕ್ಕೆ ಈಜಿಪ್ಟ್‌ ಅಧ್ಯಕ್ಷ ಅಬ್ದುಲ್ಲಾ ಫತ್ಹಾಹ್‌ ಆಲ್‌ ಸಿಸಿ ಮುಖ್ಯ ಅತಿಥಿಯಾಗಿದ್ದಾರೆ. 
(1 / 6)
ಭಾರತದಲ್ಲಿ ಇಂದು 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ದೆಹಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವಕ್ಕೆ ಈಜಿಪ್ಟ್‌ ಅಧ್ಯಕ್ಷ ಅಬ್ದುಲ್ಲಾ ಫತ್ಹಾಹ್‌ ಆಲ್‌ ಸಿಸಿ ಮುಖ್ಯ ಅತಿಥಿಯಾಗಿದ್ದಾರೆ. (HT Photo/Sanjeev Sharma)
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯಪಥ (ರಾಜಪಥ)ದಲ್ಲಿ ರಾಷ್ಟ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
(2 / 6)
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯಪಥ (ರಾಜಪಥ)ದಲ್ಲಿ ರಾಷ್ಟ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.(Bloomberg)
ಭಾರತದ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುವ ಪಥಸಂಚಲನಕ್ಕೆ ಕರ್ತವ್ಯಪಥ ಸಾಕ್ಷಿಯಾಗುತ್ತಿದೆ. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಗಳು ದೇಶದ ಮುಂದೆ ಹಲವು ಸಾಹಸಗಳನ್ನು ಪ್ರದರ್ಶಿಸಲಿವೆ. 
(3 / 6)
ಭಾರತದ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುವ ಪಥಸಂಚಲನಕ್ಕೆ ಕರ್ತವ್ಯಪಥ ಸಾಕ್ಷಿಯಾಗುತ್ತಿದೆ. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಗಳು ದೇಶದ ಮುಂದೆ ಹಲವು ಸಾಹಸಗಳನ್ನು ಪ್ರದರ್ಶಿಸಲಿವೆ. (Bloomberg)
ಈಗ ದೆಹಲಿ ಕರ್ತವ್ಯಪಥದಲ್ಲಿ ಆಕರ್ಷಕ ಪಥಸಂಚಲನ, ಟ್ಯಾಬ್ಲೊ ಶೋ ನಡೆಯುತ್ತಿದ್ದು, ಚುಮುಚುಮು ಚಳಿಯಲ್ಲಿಯೂ ಜನರು ಗಣರಾಜ್ಯೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. 
(4 / 6)
ಈಗ ದೆಹಲಿ ಕರ್ತವ್ಯಪಥದಲ್ಲಿ ಆಕರ್ಷಕ ಪಥಸಂಚಲನ, ಟ್ಯಾಬ್ಲೊ ಶೋ ನಡೆಯುತ್ತಿದ್ದು, ಚುಮುಚುಮು ಚಳಿಯಲ್ಲಿಯೂ ಜನರು ಗಣರಾಜ್ಯೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. (ANI)
ಈ ಬಾರಿ ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಪ್ರದರ್ಶನಗೊಳ್ಳಲಿದೆ. 
(5 / 6)
ಈ ಬಾರಿ ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಪ್ರದರ್ಶನಗೊಳ್ಳಲಿದೆ. (Bloomberg)
ಆಗಸ್ಟ್ 15, 1947 ರಲ್ಲಿ ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡ ದಿನವಾದರೆ, ಜನವರಿ 26, 1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನವಾಗಿದೆ. ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾಗಿದೆ. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ.
(6 / 6)
ಆಗಸ್ಟ್ 15, 1947 ರಲ್ಲಿ ಬ್ರಿಟಿಷರಿಂದ ತಾತ್ವಿಕವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡ ದಿನವಾದರೆ, ಜನವರಿ 26, 1950 ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿದ ದಿನವಾಗಿದೆ. ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ತನ್ನ ನಿಜ ಅಸ್ಥಿತ್ವವನ್ನು ಸ್ಥಾಪಿಸಿದ ದಿನವಾಗಿದೆ. ಈ ಕಾರಣಕ್ಕಾಗಿ ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ.(PTI)

    ಹಂಚಿಕೊಳ್ಳಲು ಲೇಖನಗಳು