logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Festivals: ಭಾರತದಲ್ಲಿ ನಡೆಯುವ ಅಪರೂಪದ ಕುತೂಹಲ ಹುಟ್ಟಿಸುವ ಆಚರಣೆ, ಜಾತ್ರೆಗಳಿವು; ಇವುಗಳ ಸೊಬಗನ್ನು ನೀವೂ ಕಣ್ತುಂಬಿಕೊಳ್ಳಿ

Indian Festivals: ಭಾರತದಲ್ಲಿ ನಡೆಯುವ ಅಪರೂಪದ ಕುತೂಹಲ ಹುಟ್ಟಿಸುವ ಆಚರಣೆ, ಜಾತ್ರೆಗಳಿವು; ಇವುಗಳ ಸೊಬಗನ್ನು ನೀವೂ ಕಣ್ತುಂಬಿಕೊಳ್ಳಿ

May 25, 2023 01:12 PM IST

Indian Local Festival: ದೀಪಾವಳಿ, ಗಣೇಶ ಚತುರ್ಥಿ, ಹೋಳಿ, ಆಯುಧಪೂಜೆ ಇಂತಹ ಜನಪ್ರಿಯ ಹಬ್ಬಗಳನ್ನು ಹೊರತು ಪಡಿಸಿ ಭಾರತದಲ್ಲಿ ಹಲವು ರೀತಿಯ ವಿಶಿಷ್ಟ, ವಿಭಿನ್ನ, ಕುತೂಹಲ ಹುಟ್ಟಿಸುವ ಆಚರಣೆ ಹಾಗೂ ಜಾತ್ರೆಗಳಿವೆ. ಈ ಸ್ಥಳೀಯ ಆಚರಣೆಗಳು ಅಸಮಾನ್ಯ ಎನ್ನಿಸುವ ಜೊತೆಗೆ ಕುತೂಹಲ ಹುಟ್ಟಿ ಹಾಕಿ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ.

  • Indian Local Festival: ದೀಪಾವಳಿ, ಗಣೇಶ ಚತುರ್ಥಿ, ಹೋಳಿ, ಆಯುಧಪೂಜೆ ಇಂತಹ ಜನಪ್ರಿಯ ಹಬ್ಬಗಳನ್ನು ಹೊರತು ಪಡಿಸಿ ಭಾರತದಲ್ಲಿ ಹಲವು ರೀತಿಯ ವಿಶಿಷ್ಟ, ವಿಭಿನ್ನ, ಕುತೂಹಲ ಹುಟ್ಟಿಸುವ ಆಚರಣೆ ಹಾಗೂ ಜಾತ್ರೆಗಳಿವೆ. ಈ ಸ್ಥಳೀಯ ಆಚರಣೆಗಳು ಅಸಮಾನ್ಯ ಎನ್ನಿಸುವ ಜೊತೆಗೆ ಕುತೂಹಲ ಹುಟ್ಟಿ ಹಾಕಿ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ಭಾರತ ದೇಶ ಸಂಸ್ಕೃತಿ, ಸಂಪ್ರದಾಯದ ನಾಡು. ನಮ್ಮ ದೇಶದಲ್ಲಿ ಲೆಕ್ಕವಿಲ್ಲದಷ್ಟು ವೈವಿಧ್ಯಮಯ ನಂಬಿಕೆಗಳು ಹಾಗೂ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಗತ ವೈಭವ ಸಾರುವ ಹಲವು ಹಬ್ಬ, ಆಚರಣೆಗಳು ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ. ವೈಭವ, ರೋಮಾಂಚಕ ಹಬ್ಬಗಳಿಂದ ಹಿಡಿದು ಅಸಾಮಾನ್ಯ, ವಿಭಿನ್ನ ಹಬ್ಬಗಳವರೆಗೆ ದೇಶದಲ್ಲಿ ವರ್ಷವಿಡೀ ವರ್ಣರಂಜಿತ ಉತ್ಸವಗಳ ಸರಣಿ ನಡೆಯುತ್ತಿರುತ್ತದೆ. ಆ ಮೂಲಕ ಪ್ರಪಂಚದಾದ್ಯಂತದ ಜನರಿಗೆ ಅನನ್ಯ ಭಾರತೀಯ ವೈವಿಧ್ಯತೆಯನ್ನು ವೀಕ್ಷಿಸುವ ಅವಕಾಶವನ್ನು ನೀಡುತ್ತದೆ. ಆದರೆ ಸ್ಥಳಿಯವಾಗಿ ನಡೆಯುವ ಹೆಚ್ಚು ಪ್ರಸಿದ್ಧವಲ್ಲದ ಕುತೂಹಲ ಹುಟ್ಟಿಸುವ ಹಬ್ಬಗಳು ದೇಶದಲ್ಲಿ ಸಾಕಷ್ಟಿವೆ. ಅವುಗಳ ಕುರಿತು ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. 
(1 / 5)
ಭಾರತ ದೇಶ ಸಂಸ್ಕೃತಿ, ಸಂಪ್ರದಾಯದ ನಾಡು. ನಮ್ಮ ದೇಶದಲ್ಲಿ ಲೆಕ್ಕವಿಲ್ಲದಷ್ಟು ವೈವಿಧ್ಯಮಯ ನಂಬಿಕೆಗಳು ಹಾಗೂ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಗತ ವೈಭವ ಸಾರುವ ಹಲವು ಹಬ್ಬ, ಆಚರಣೆಗಳು ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ. ವೈಭವ, ರೋಮಾಂಚಕ ಹಬ್ಬಗಳಿಂದ ಹಿಡಿದು ಅಸಾಮಾನ್ಯ, ವಿಭಿನ್ನ ಹಬ್ಬಗಳವರೆಗೆ ದೇಶದಲ್ಲಿ ವರ್ಷವಿಡೀ ವರ್ಣರಂಜಿತ ಉತ್ಸವಗಳ ಸರಣಿ ನಡೆಯುತ್ತಿರುತ್ತದೆ. ಆ ಮೂಲಕ ಪ್ರಪಂಚದಾದ್ಯಂತದ ಜನರಿಗೆ ಅನನ್ಯ ಭಾರತೀಯ ವೈವಿಧ್ಯತೆಯನ್ನು ವೀಕ್ಷಿಸುವ ಅವಕಾಶವನ್ನು ನೀಡುತ್ತದೆ. ಆದರೆ ಸ್ಥಳಿಯವಾಗಿ ನಡೆಯುವ ಹೆಚ್ಚು ಪ್ರಸಿದ್ಧವಲ್ಲದ ಕುತೂಹಲ ಹುಟ್ಟಿಸುವ ಹಬ್ಬಗಳು ದೇಶದಲ್ಲಿ ಸಾಕಷ್ಟಿವೆ. ಅವುಗಳ ಕುರಿತು ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. (Instagram/@pradnyag_/@khiamniungans, AFP)
ಸುಮೆ-ಗೆಲಿರಾಕ್ ಹಬ್ಬ, ಒಡಿಶಾ: ಈ ಹಬ್ಬದಂದು ಮಾಂಸಾಹಾರ ಸೇವನೆ ಇರುವುದಿಲ್ಲ. ಮದ್ಯ ಸೇವನೆಯ ಮೂಲಕ ಪ್ರಾಯಶ್ಚಿತ್ತ ಮಾಡುವಂತಹ ಆಚರಣೆಯನ್ನು ಈ ಹಬ್ಬದಲ್ಲಿದೆ. ಹಬ್ಬದ ಸಮಯದಲ್ಲಿ, ಪೂಜೆ ಮತ್ತು ನೈವೇದ್ಯದ ನಂತರ ನಡೆಯುವ ನೃತ್ಯದ ಸಮಯದಲ್ಲಿ ಮಹಿಳೆಯರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಬಹುದು.
(2 / 5)
ಸುಮೆ-ಗೆಲಿರಾಕ್ ಹಬ್ಬ, ಒಡಿಶಾ: ಈ ಹಬ್ಬದಂದು ಮಾಂಸಾಹಾರ ಸೇವನೆ ಇರುವುದಿಲ್ಲ. ಮದ್ಯ ಸೇವನೆಯ ಮೂಲಕ ಪ್ರಾಯಶ್ಚಿತ್ತ ಮಾಡುವಂತಹ ಆಚರಣೆಯನ್ನು ಈ ಹಬ್ಬದಲ್ಲಿದೆ. ಹಬ್ಬದ ಸಮಯದಲ್ಲಿ, ಪೂಜೆ ಮತ್ತು ನೈವೇದ್ಯದ ನಂತರ ನಡೆಯುವ ನೃತ್ಯದ ಸಮಯದಲ್ಲಿ ಮಹಿಳೆಯರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಬಹುದು.(Instagram/@solitarytraveller37)
ಕಿಲಾ ರಾಯಪುರ್ ಗ್ರಾಮೀಣ ಒಲಿಂಪಿಕ್ಸ್, ಪಂಜಾಬ್: ಇದು ಕಿಲಾ ರಾಯ್‌ಪುರದಲ್ಲಿ ವಾರ್ಷಿಕವಾಗಿ ಜನವರಿ ಮತ್ತು ಫೆಬ್ರುವರಿ ನಡುವೆ ನಡೆಯುವ ಸ್ಥಳೀಯ ಕ್ರೀಡಾಕೂಟವಾಗಿದೆ. ಈ ಹಬ್ಬದಂದು ಬುಲ್ ಕಾರ್ಟ್ ರೇಸ್, ಹೇಸರಗತ್ತೆ ಓಟ, ಕುದುರೆ ಬಂಡಿ ಓಟ, ಕಬಡ್ಡಿ, ಶಾಟ್ ಪುಟ್, ಹಗ್ಗಜಗ್ಗಾಟ, 100 ಮೀಟರ್-1500 ಮೀಟರ್ ಓಟ, ಎತ್ತರ ಮತ್ತು ಉದ್ದ ಜಿಗಿತ, ಮತ್ತು ಟ್ರಾಕ್ಟರ್ ನಡುವಿನ ಓಟ ಸೇರಿವೆ. ಈ ಹಬ್ಬದ ಸಮಯದಲ್ಲಿ ನಡೆಯುವ ಇತರ ಅಸಾಮಾನ್ಯ ಚಟುವಟಿಕೆಗಳೆಂದರೆ ಬೈಸಿಕಲ್ ಅಥವಾ ಏಣಿಗಳನ್ನು ಹಲ್ಲುಗಳಿಂದ ಎತ್ತುವುದು, ಕೂದಲು, ಹಲ್ಲು ಅಥವಾ ಕಿವಿಗಳಿಂದ ಕಾರುಗಳನ್ನು ಎಳೆಯುವುದು ಮತ್ತು ಬೈಕ್‌ಗಳು ಮತ್ತು ಕುದುರೆಗಳ ಮೇಲಿನ ಇತರ ಡೇರ್‌ಡೆವಿಲ್ ಸಾಹಸಗಳು.
(3 / 5)
ಕಿಲಾ ರಾಯಪುರ್ ಗ್ರಾಮೀಣ ಒಲಿಂಪಿಕ್ಸ್, ಪಂಜಾಬ್: ಇದು ಕಿಲಾ ರಾಯ್‌ಪುರದಲ್ಲಿ ವಾರ್ಷಿಕವಾಗಿ ಜನವರಿ ಮತ್ತು ಫೆಬ್ರುವರಿ ನಡುವೆ ನಡೆಯುವ ಸ್ಥಳೀಯ ಕ್ರೀಡಾಕೂಟವಾಗಿದೆ. ಈ ಹಬ್ಬದಂದು ಬುಲ್ ಕಾರ್ಟ್ ರೇಸ್, ಹೇಸರಗತ್ತೆ ಓಟ, ಕುದುರೆ ಬಂಡಿ ಓಟ, ಕಬಡ್ಡಿ, ಶಾಟ್ ಪುಟ್, ಹಗ್ಗಜಗ್ಗಾಟ, 100 ಮೀಟರ್-1500 ಮೀಟರ್ ಓಟ, ಎತ್ತರ ಮತ್ತು ಉದ್ದ ಜಿಗಿತ, ಮತ್ತು ಟ್ರಾಕ್ಟರ್ ನಡುವಿನ ಓಟ ಸೇರಿವೆ. ಈ ಹಬ್ಬದ ಸಮಯದಲ್ಲಿ ನಡೆಯುವ ಇತರ ಅಸಾಮಾನ್ಯ ಚಟುವಟಿಕೆಗಳೆಂದರೆ ಬೈಸಿಕಲ್ ಅಥವಾ ಏಣಿಗಳನ್ನು ಹಲ್ಲುಗಳಿಂದ ಎತ್ತುವುದು, ಕೂದಲು, ಹಲ್ಲು ಅಥವಾ ಕಿವಿಗಳಿಂದ ಕಾರುಗಳನ್ನು ಎಳೆಯುವುದು ಮತ್ತು ಬೈಕ್‌ಗಳು ಮತ್ತು ಕುದುರೆಗಳ ಮೇಲಿನ ಇತರ ಡೇರ್‌ಡೆವಿಲ್ ಸಾಹಸಗಳು.(HT Photo/Gurpreet Singh)
ತೈಪುಸಂ ಉತ್ಸವ, ತಮಿಳುನಾಡು: ಇದು ಭಾರತದಲ್ಲಿ ನಡೆಯುವ ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ಭಗವಾನ್ ಶಿವ ಮತ್ತು ದೇವಿ ಪಾರ್ವತಿಯ ಪುತ್ರ ಕಾರ್ತಿಕೇಯ (ಲಾರ್ಡ್ ಮುರುಗನ್) ದೇವರನ್ನು ಭಜಿಸುವ ಆಚರಣೆ ಇದಾಗಿದೆ. ಭಾರತದಲ್ಲಿನ ತಮಿಳು ಭಕ್ತರು ಮಾತ್ರವಲ್ಲದೆ ಶ್ರೀಲಂಕಾದ ತಮಿಳು ಸಮುದಾಯದಿಂದ ಆಚರಿಸುವ ಅಸಾಮಾನ್ಯ ಹಬ್ಬಗಳಲ್ಲಿ ಒಂದಾಗಿದೆ. ಸಿಂಗಾಪುರ, ಮತ್ತು ಮಾರಿಷಸ್‌ನಲ್ಲೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ಭಕ್ತರು ನಾಲಿಗೆ, ಮೂಗಿಗೆ ಕಬ್ಬಿಣದ ಕಡ್ಡಿಯಿಂದ ಚುಚ್ಚಿಕೊಳ್ಳುತ್ತಾರೆ. ಕೊರಳಿಗೆ ನಿಂಬೆಹಣ್ಣಿನ ದಾರ ಹಾಗೂ ಹೂವಿನ ದಾರವನ್ನು ಹಾಕಿಕೊಂಡು ನೃತ್ಯ ಮಾಡುತ್ತಾರೆ. ಮಹಿಳೆಯರು ಪೂರ್ಣಕುಂಭ ಹೊರುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ.  
(4 / 5)
ತೈಪುಸಂ ಉತ್ಸವ, ತಮಿಳುನಾಡು: ಇದು ಭಾರತದಲ್ಲಿ ನಡೆಯುವ ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ಭಗವಾನ್ ಶಿವ ಮತ್ತು ದೇವಿ ಪಾರ್ವತಿಯ ಪುತ್ರ ಕಾರ್ತಿಕೇಯ (ಲಾರ್ಡ್ ಮುರುಗನ್) ದೇವರನ್ನು ಭಜಿಸುವ ಆಚರಣೆ ಇದಾಗಿದೆ. ಭಾರತದಲ್ಲಿನ ತಮಿಳು ಭಕ್ತರು ಮಾತ್ರವಲ್ಲದೆ ಶ್ರೀಲಂಕಾದ ತಮಿಳು ಸಮುದಾಯದಿಂದ ಆಚರಿಸುವ ಅಸಾಮಾನ್ಯ ಹಬ್ಬಗಳಲ್ಲಿ ಒಂದಾಗಿದೆ. ಸಿಂಗಾಪುರ, ಮತ್ತು ಮಾರಿಷಸ್‌ನಲ್ಲೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ಭಕ್ತರು ನಾಲಿಗೆ, ಮೂಗಿಗೆ ಕಬ್ಬಿಣದ ಕಡ್ಡಿಯಿಂದ ಚುಚ್ಚಿಕೊಳ್ಳುತ್ತಾರೆ. ಕೊರಳಿಗೆ ನಿಂಬೆಹಣ್ಣಿನ ದಾರ ಹಾಗೂ ಹೂವಿನ ದಾರವನ್ನು ಹಾಕಿಕೊಂಡು ನೃತ್ಯ ಮಾಡುತ್ತಾರೆ. ಮಹಿಳೆಯರು ಪೂರ್ಣಕುಂಭ ಹೊರುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ.  
ಭಗೋರಿಯಾ ಹಬ್ಬ, ಮಧ್ಯಪ್ರದೇಶ: ಇದು ಬುಡಕಟ್ಟು ವಿವಾಹದ ಹಬ್ಬವಾಗಿದ್ದು, ಇಲ್ಲಿ ಭಿಲ್ ಮತ್ತು ಭಿಲಾಲ ಬುಡಕಟ್ಟಿನ ಹುಡುಗರು ತಾವು ಮದುವೆಯಾಗಲು ಬಯಸುವ ಹುಡುಗಿಯ ಮುಖದ ಮೇಲೆ ಕೆಂಪು ಪುಡಿ ಎರಚುತ್ತಾ. ಹುಡುಗಿಗೆ ಮದುವೆಗೆ ಒಪ್ಪಿಗೆ ಇದ್ದರೆ ಅವರು ಮತ್ತೆ ಹುಡುಗನ ಮುಖಕ್ಕೆ ಅದೇ ಪುಡಿಯನ್ನು ಹಾಕುತ್ತಾಳೆ..
(5 / 5)
ಭಗೋರಿಯಾ ಹಬ್ಬ, ಮಧ್ಯಪ್ರದೇಶ: ಇದು ಬುಡಕಟ್ಟು ವಿವಾಹದ ಹಬ್ಬವಾಗಿದ್ದು, ಇಲ್ಲಿ ಭಿಲ್ ಮತ್ತು ಭಿಲಾಲ ಬುಡಕಟ್ಟಿನ ಹುಡುಗರು ತಾವು ಮದುವೆಯಾಗಲು ಬಯಸುವ ಹುಡುಗಿಯ ಮುಖದ ಮೇಲೆ ಕೆಂಪು ಪುಡಿ ಎರಚುತ್ತಾ. ಹುಡುಗಿಗೆ ಮದುವೆಗೆ ಒಪ್ಪಿಗೆ ಇದ್ದರೆ ಅವರು ಮತ್ತೆ ಹುಡುಗನ ಮುಖಕ್ಕೆ ಅದೇ ಪುಡಿಯನ್ನು ಹಾಕುತ್ತಾಳೆ..(HT Photo/Raajessh Kashyap)

    ಹಂಚಿಕೊಳ್ಳಲು ಲೇಖನಗಳು