logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jaidev Thackeray: ಏಕನಾಥ್ ಶಿಂಧೆಗೆ ಉದ್ಧವ್‌ ಠಾಕ್ರೆ ಸಹೋದರ ಸಾಥ್:‌‌ ಯಾರು ಜೈದೇವ್‌ ಠಾಕ್ರೆ?

Jaidev Thackeray: ಏಕನಾಥ್ ಶಿಂಧೆಗೆ ಉದ್ಧವ್‌ ಠಾಕ್ರೆ ಸಹೋದರ ಸಾಥ್:‌‌ ಯಾರು ಜೈದೇವ್‌ ಠಾಕ್ರೆ?

Oct 06, 2022 07:20 AM IST

ಮುಂಬೈ: ಶಿವಸೇನೆ ಪಕ್ಷ ಸ್ಥಾಪನೆಯಾಗಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಪಕ್ಷದ ಎರಡು ಭಿನ್ನ ಬಣಗಳಿಂದ ಪ್ರತ್ಯೇಕ ದಸರಾ ರ‍್ಯಾಲಿ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಈ ಬಾರಿ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜಿದ್ದವು. ಮಹಾರಾಷ್ಟ್ರ ರಾಜಧಾನಿ ಮುಂಬೈನ ಬಾಂದ್ರಾದಲ್ಲಿರುವ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಏಕನಾಥ್‌ ಶಿಂಧೆ ಬಣ ಆಯೋಜಿಸಿದ್ದ ದಸರಾ ರ‍್ಯಾಲಿಯಲ್ಲಿ, ಶಿವಸೇನೆ ಸಂಸ್ಥಾಪಕ ಭಾಳ್‌ ಸಾಹೇಬ್‌ ಠಾಕ್ರೆ ಅವರ ಎರಡನೇ ಪುತ್ರ ಮತ್ತು ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರ ಅಣ್ಣ  ಜೈದೇವ್‌ ಠಾಕ್ರೆ ಭಾಗವಹಿಸಿದ್ದು ದೇಶದ ಗಮನ ಸೆಳೆದಿದೆ.

  • ಮುಂಬೈ: ಶಿವಸೇನೆ ಪಕ್ಷ ಸ್ಥಾಪನೆಯಾಗಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಪಕ್ಷದ ಎರಡು ಭಿನ್ನ ಬಣಗಳಿಂದ ಪ್ರತ್ಯೇಕ ದಸರಾ ರ‍್ಯಾಲಿ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಈ ಬಾರಿ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜಿದ್ದವು. ಮಹಾರಾಷ್ಟ್ರ ರಾಜಧಾನಿ ಮುಂಬೈನ ಬಾಂದ್ರಾದಲ್ಲಿರುವ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಏಕನಾಥ್‌ ಶಿಂಧೆ ಬಣ ಆಯೋಜಿಸಿದ್ದ ದಸರಾ ರ‍್ಯಾಲಿಯಲ್ಲಿ, ಶಿವಸೇನೆ ಸಂಸ್ಥಾಪಕ ಭಾಳ್‌ ಸಾಹೇಬ್‌ ಠಾಕ್ರೆ ಅವರ ಎರಡನೇ ಪುತ್ರ ಮತ್ತು ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರ ಅಣ್ಣ  ಜೈದೇವ್‌ ಠಾಕ್ರೆ ಭಾಗವಹಿಸಿದ್ದು ದೇಶದ ಗಮನ ಸೆಳೆದಿದೆ.
ಭಾಳ್‌ ಸಾಹೇಬ್ ಸಾಹೇಬ್ ಠಾಕ್ರೆ ಅವರ ಎರಡನೇ ಪುತ್ರ ಜೈದೇವ್ ಠಾಕ್ರೆ ಅವರು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನೇ ನೈಜ ಶಿವಸೇನೆ ಎಂದು ಕರೆದಿದ್ದಾರೆ. ಭಾಳ್‌ ಠಾಕ್ರೆ ಅವರ ಸಿದ್ಧಾಂತವನ್ನು ಅನುಸರಿಸುತ್ತಿರುವ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದಿರುವ ಜೈದೇವ್‌ ಠಾಕ್ರೆ, ತಮ್ಮ ಸಹೋದರ ಉದ್ಧವ್‌ ಠಾಕ್ರೆ ವಿರುದ್ಧ ಕಿಡಿಕಾರಿದ್ದಾರೆ.
(1 / 5)
ಭಾಳ್‌ ಸಾಹೇಬ್ ಸಾಹೇಬ್ ಠಾಕ್ರೆ ಅವರ ಎರಡನೇ ಪುತ್ರ ಜೈದೇವ್ ಠಾಕ್ರೆ ಅವರು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವನ್ನೇ ನೈಜ ಶಿವಸೇನೆ ಎಂದು ಕರೆದಿದ್ದಾರೆ. ಭಾಳ್‌ ಠಾಕ್ರೆ ಅವರ ಸಿದ್ಧಾಂತವನ್ನು ಅನುಸರಿಸುತ್ತಿರುವ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದಿರುವ ಜೈದೇವ್‌ ಠಾಕ್ರೆ, ತಮ್ಮ ಸಹೋದರ ಉದ್ಧವ್‌ ಠಾಕ್ರೆ ವಿರುದ್ಧ ಕಿಡಿಕಾರಿದ್ದಾರೆ.(ANI)
ಅಧಿಕಾರಕ್ಕಾಗಿ ನನ್ನ ಕಿರಿಯ ಸಹೋದರ (ಉದ್ಧವ್‌ ಠಾಕ್ರೆ)  ಶಿವಸೇನೆಯ ಸೈದ್ಧಾಂತಿಕ ವಿರೋಧಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದರು. ಆದರೆ ಏಕನಾಥ್ ಶಿಂಧೆ ನೇತೃತ್ವದ ಬಣ ಶಿವಸೇನೆಯ ಹಿಂದುತ್ವ ಸಿದ್ಧಾಂತಕ್ಕಾಗಿ ಬಂಡಾಯವೇಳುವ ಮೂಲಕ ಪಕ್ಷವನ್ನು ರಕ್ಷಿಸಿದೆ ಎಂದು ಜೈದೇವ್‌ ಠಾಕ್ರೆ ಇದೇ ವೇಳೆ ಅಭಿಪ್ರಾಯಪಟ್ಟರು.
(2 / 5)
ಅಧಿಕಾರಕ್ಕಾಗಿ ನನ್ನ ಕಿರಿಯ ಸಹೋದರ (ಉದ್ಧವ್‌ ಠಾಕ್ರೆ)  ಶಿವಸೇನೆಯ ಸೈದ್ಧಾಂತಿಕ ವಿರೋಧಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದರು. ಆದರೆ ಏಕನಾಥ್ ಶಿಂಧೆ ನೇತೃತ್ವದ ಬಣ ಶಿವಸೇನೆಯ ಹಿಂದುತ್ವ ಸಿದ್ಧಾಂತಕ್ಕಾಗಿ ಬಂಡಾಯವೇಳುವ ಮೂಲಕ ಪಕ್ಷವನ್ನು ರಕ್ಷಿಸಿದೆ ಎಂದು ಜೈದೇವ್‌ ಠಾಕ್ರೆ ಇದೇ ವೇಳೆ ಅಭಿಪ್ರಾಯಪಟ್ಟರು.(ANI)
ರಾಜ್ಯದ ಜನತೆ ಶಿಂಧೆ ಅವರ ಕೈಬಿಡಬಾರದು, ಅವರು ರೈತರಿಗಾಗಿ ಮತ್ತು ಜನಸಾಮಾನ್ಯರಿಗಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಜೈದೇವ್‌ ಠಾಕ್ರೆ ಇದೇ ವೇಳೆ ಮನವಿ ಮಾಡಿದರು.
(3 / 5)
ರಾಜ್ಯದ ಜನತೆ ಶಿಂಧೆ ಅವರ ಕೈಬಿಡಬಾರದು, ಅವರು ರೈತರಿಗಾಗಿ ಮತ್ತು ಜನಸಾಮಾನ್ಯರಿಗಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಜೈದೇವ್‌ ಠಾಕ್ರೆ ಇದೇ ವೇಳೆ ಮನವಿ ಮಾಡಿದರು.(ANI)
ಇದಕ್ಕೂ ಮೊದಲು ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ, ಮುಖ್ಯಮಂತ್ರಿ ಕುರ್ಚಿಗಾಗಿ ಉದ್ಧವ್‌ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸುವ ಮೂಲಕ ಪಕ್ಷದ ಮೂಲ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದರು ಎಂದು ಕಿಡಿಕಾರಿದ್ದರು.
(4 / 5)
ಇದಕ್ಕೂ ಮೊದಲು ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ, ಮುಖ್ಯಮಂತ್ರಿ ಕುರ್ಚಿಗಾಗಿ ಉದ್ಧವ್‌ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸುವ ಮೂಲಕ ಪಕ್ಷದ ಮೂಲ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದರು ಎಂದು ಕಿಡಿಕಾರಿದ್ದರು.(ANI)
ಶಿವಸೇನೆ ಸಂಸ್ಥಾಪಕ ದಿವಂಗತ ಭಾಳ್‌ ಸಾಹೇಭ್‌ ಠಾಕ್ರೆ ಅವರ ಎರಡನೇ ಪುತ್ರರಾಗಿರುವ ಜೈದೇವ್‌ ಠಾಕ್ರೆ, ರಾಜಕಾರಣದಲ್ಲಿ ಅಷ್ಟಾಗಿ ಗುರುತಿಸಿಕೊಂಡವರಲ್ಲ. ಆದರೆ ಆರಂಭದಿಂದಲೂ ಶಿವಸೇನೆ-ಕಾಂಗ್ರೆಸ್‌ ಹಾಗೂ ಎನ್‌ಸಿಪಿ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಮೈತ್ರಿಯನ್ನು ವಿರೋಧಿಸುತ್ತಿದ್ದರು. ಹಿಂದುತ್ವ ಪಕ್ಷವಾದ ಶಿವಸೇನೆಗೆ ಬಿಜೆಪಿಯೇ ಸದಾ ಮಿತ್ರಪಕ್ಷ ಎಂದು ಜೈದೇವ್‌ ಠಾಕ್ರೆ ಪ್ರತಿಪಾದಿಸುತ್ತಾ ಬಂದಿದ್ದಾರೆ. ಭಾಳ್‌ ಠಾಕ್ರೆ ಅವರ ಹಿರಿಯ ಪುತ್ರ ದಿವಂಗತ ಬಿಂದುಮಾಧವ್‌ ಠಾಕ್ರೆ ಅವರ ಪುತ್ರ ನಿಹಾರ್‌ ಠಾಕ್ರೆ ಕೂಡ ಏಕಾನಾಥ್‌ ಶಿಂಧೆ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
(5 / 5)
ಶಿವಸೇನೆ ಸಂಸ್ಥಾಪಕ ದಿವಂಗತ ಭಾಳ್‌ ಸಾಹೇಭ್‌ ಠಾಕ್ರೆ ಅವರ ಎರಡನೇ ಪುತ್ರರಾಗಿರುವ ಜೈದೇವ್‌ ಠಾಕ್ರೆ, ರಾಜಕಾರಣದಲ್ಲಿ ಅಷ್ಟಾಗಿ ಗುರುತಿಸಿಕೊಂಡವರಲ್ಲ. ಆದರೆ ಆರಂಭದಿಂದಲೂ ಶಿವಸೇನೆ-ಕಾಂಗ್ರೆಸ್‌ ಹಾಗೂ ಎನ್‌ಸಿಪಿ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಮೈತ್ರಿಯನ್ನು ವಿರೋಧಿಸುತ್ತಿದ್ದರು. ಹಿಂದುತ್ವ ಪಕ್ಷವಾದ ಶಿವಸೇನೆಗೆ ಬಿಜೆಪಿಯೇ ಸದಾ ಮಿತ್ರಪಕ್ಷ ಎಂದು ಜೈದೇವ್‌ ಠಾಕ್ರೆ ಪ್ರತಿಪಾದಿಸುತ್ತಾ ಬಂದಿದ್ದಾರೆ. ಭಾಳ್‌ ಠಾಕ್ರೆ ಅವರ ಹಿರಿಯ ಪುತ್ರ ದಿವಂಗತ ಬಿಂದುಮಾಧವ್‌ ಠಾಕ್ರೆ ಅವರ ಪುತ್ರ ನಿಹಾರ್‌ ಠಾಕ್ರೆ ಕೂಡ ಏಕಾನಾಥ್‌ ಶಿಂಧೆ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.(HT)

    ಹಂಚಿಕೊಳ್ಳಲು ಲೇಖನಗಳು