logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hair Fall Solution: ಕೂದಲು ಉದುರುವಿಕೆಗೆ ಉತ್ತಮ ಪರಿಹಾರ ಈ ಎಣ್ಣೆ, ಮನೆಯಲ್ಲೇ ನೀವೂ ಮಾಡಿ

Hair Fall Solution: ಕೂದಲು ಉದುರುವಿಕೆಗೆ ಉತ್ತಮ ಪರಿಹಾರ ಈ ಎಣ್ಣೆ, ಮನೆಯಲ್ಲೇ ನೀವೂ ಮಾಡಿ

Sep 03, 2022 07:31 PM IST

Kalonji Oil: ಕಪ್ಪು ಜೀರಿಗೆ ಎಣ್ಣೆಯನ್ನು ರಾತ್ರಿ ವೇಳೆ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲು ಉತ್ತಮವಾಗಿ ಬೆಳೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದನ್ನು ತಯಾರಿಸುವುದು ತುಂಬಾ ಸುಲಭ. ನೀವು ಮನೆಯಲ್ಲೇ ಈ ಎಣ್ಣೆಯನ್ನು  ಮಾಡಬಹುದು. ಇದನ್ನು ಮಾಡುವುದು ಹೇಗೆ? ಕೂದಲು ಉದುರುವಿಕೆ ಕಡಿಮೆ ಮಾಡಲು ಏನು ಮಾಡಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

  • Kalonji Oil: ಕಪ್ಪು ಜೀರಿಗೆ ಎಣ್ಣೆಯನ್ನು ರಾತ್ರಿ ವೇಳೆ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲು ಉತ್ತಮವಾಗಿ ಬೆಳೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದನ್ನು ತಯಾರಿಸುವುದು ತುಂಬಾ ಸುಲಭ. ನೀವು ಮನೆಯಲ್ಲೇ ಈ ಎಣ್ಣೆಯನ್ನು  ಮಾಡಬಹುದು. ಇದನ್ನು ಮಾಡುವುದು ಹೇಗೆ? ಕೂದಲು ಉದುರುವಿಕೆ ಕಡಿಮೆ ಮಾಡಲು ಏನು ಮಾಡಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.
ಕೂದಲು ಬಾಚಿದ ಬಳಿಕ ಬಾಚಣಿಗೆಗೆ ಅಂಟಿಕೊಂಡಿರುವ ಕೂದಲನ್ನು ನೋಡಿ ಎಲ್ಲರಿಗೂ ಬೇಸರವಾಗುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು. ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು ಕಪ್ಪು ಜೀರಿಗೆ ಎಣ್ಣೆಯನ್ನು ಬಳಸಬಹುದು. ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಉತ್ತಮವಾದ ವಿಷಯವೆಂದರೆ ಇದನ್ನು ಕಡಿಮೆ ವೆಚ್ಚದಲ್ಲಿ ಮನೆಯಲ್ಲಿಯೇ ತಯಾರಿಸಬಹುದು.
(1 / 5)

ಈ ಕಪ್ಪು ಬೀಜದ ಎಣ್ಣೆಯಲ್ಲಿರುವ ಥೈಮೋಕ್ವಿನೋನ್ ಅಂಶವು, ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೂದಲಿಗೆ ವಯಸ್ಸಾಗುವ ಸಮಸ್ಯೆಯನ್ನು ತಡೆಯುತ್ತದೆ. ಇದು ಕೂದಲನ್ನು ಬುಡದಿಂದ ಗಟ್ಟಿಯಾಗಿಸುತ್ತದೆ. ಕಪ್ಪು ಜೀರಿಗೆ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ತಲೆಹೊಟ್ಟು ವಿರುದ್ಧವೂ ಹೋರಾಡುತ್ತದೆ.
(2 / 5)

ಈಗ ಕಲೋಂಜಿ ಅಥವಾ ಕರಿ ಜೀರಿಗೆ ಎಣ್ಣೆಯನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ. ಇದನ್ನು ತಯಾರಿಸಲು ನಿಮಗೆ ತೆಂಗಿನ ಎಣ್ಣೆ, ಕಪ್ಪು ಜೀರಿಗೆ ಮತ್ತು ಮೆಂತ್ಯ ಬೀಜಗಳು ಬೇಕಾಗುತ್ತವೆ. ಕಪ್ಪು ಜೀರಿಗೆ ಮತ್ತು ಮೆಂತ್ಯ ಪುಡಿಯನ್ನು ಪ್ರತ್ಯೇಕವಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ದೊಡ್ಡ ಪ್ಯಾನ್ ತೆಗೆದುಕೊಂಡು, ನೀರನ್ನು ಸುರಿಯಿರಿ ಮತ್ತು ಅದನ್ನು ಬಿಸಿ ಮಾಡಿ. ಒಂದು ಬೌಲ್ ಅನ್ನು ಡಬಲ್ ಬಾಯ್ಲರ್‌ ಕ್ರಮದಲ್ಲಿ ಅಥವಾ ಹಬೆಯಲ್ಲಿ ಇರಿಸಿ. ಅದಕ್ಕೆ ತೆಂಗಿನ ಎಣ್ಣೆ, ಮೆಂತ್ಯ ಪುಡಿ ಮತ್ತು ಕಪ್ಪು ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಶಾಖ ಕಡಿಮೆಯಾಗುವವರೆಗೆ ಕಾದು ಬಳಿಕ ಒಲೆಯಿಂದ ಇಳಿಸಿ. ಅದರ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಬೇಕು.
(3 / 5)

ಈ ಎಣ್ಣೆಯನ್ನು ಸ್ನಾನ ಮಾಡುವ 3 ಗಂಟೆಗಳ ಮೊದಲು ಕೂದಲಿಗೆ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಪ್ರಯೋಜನವಾಗುತ್ತದೆ.
(4 / 5)

ಕಪ್ಪು ಜೀರಿಗೆ ಬೀಜಗಳನ್ನು ದೇಹಕ್ಕೆ ಸ್ಕ್ರಬ್ ಆಗಿಯೂ ಬಳಸಬಹುದು. ಇದು ಟ್ಯಾನ್ ಅನ್ನು ಸ್ವಚ್ಛಗೊಳಿಸುತ್ತದೆ. ಇದರೊಂದಿಗೆ ನಿಮ್ಮ ಇಡೀ ದೇಹವನ್ನು ವಾರಕ್ಕೆ ಎರಡು ಬಾರಿಯಾದರೂ ಸ್ಕ್ರಬ್ ಮಾಡಿ. ಇದು ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ.
(5 / 5)

    ಹಂಚಿಕೊಳ್ಳಲು ಲೇಖನಗಳು