logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sakshi Malik:ನಾವು ಬೀದಿಯಲ್ಲಿ ಥಳಿತಕ್ಕೆ ಒಳಗಾಗ್ತಿದ್ರೆ, ನಮ್ಮ ಪ್ರಧಾನಿ ಮೋದಿ ಪೋಟೋಗೆ ಪೋಸ್​ ಕೊಡೋದ್ರಲ್ಲಿ ಬ್ಯುಸಿಯಿದ್ರು; ಸಾಕ್ಷಿ ಮಲಿಕ್

Sakshi Malik:ನಾವು ಬೀದಿಯಲ್ಲಿ ಥಳಿತಕ್ಕೆ ಒಳಗಾಗ್ತಿದ್ರೆ, ನಮ್ಮ ಪ್ರಧಾನಿ ಮೋದಿ ಪೋಟೋಗೆ ಪೋಸ್​ ಕೊಡೋದ್ರಲ್ಲಿ ಬ್ಯುಸಿಯಿದ್ರು; ಸಾಕ್ಷಿ ಮಲಿಕ್

May 29, 2023 06:00 AM IST

ಪ್ರತಿಭಟನೆ ನಡೆಸುತ್ತಿದ್ದ ನಮ್ಮನ್ನು ಪೊಲೀಸರು ಥಳಿಸುತ್ತಿದ್ದರು. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಪೋಟೋ ಶೂಟ್​​ನಲ್ಲಿ ಬ್ಯುಸಿಯಾಗಿದ್ದರು ಎಂದು ಕುಸ್ತಿಪಟು ಸಾಕ್ಷಿ ಮಲಿಕ್​ ಬೇಸರ ವ್ಯಕ್ತಪಡಿಸಿದ್ದಾರೆ.

  • ಪ್ರತಿಭಟನೆ ನಡೆಸುತ್ತಿದ್ದ ನಮ್ಮನ್ನು ಪೊಲೀಸರು ಥಳಿಸುತ್ತಿದ್ದರು. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಪೋಟೋ ಶೂಟ್​​ನಲ್ಲಿ ಬ್ಯುಸಿಯಾಗಿದ್ದರು ಎಂದು ಕುಸ್ತಿಪಟು ಸಾಕ್ಷಿ ಮಲಿಕ್​ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದ ಕುಸ್ತಿ ಫೆಡರೇಷನ್​ ಮುಖ್ಯಸ್ಥ ಬ್ರಿಜ್​ ಭೂಷಣ್​ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸದಾಗಿ ನಿರ್ಮಿಸಲಾದ ಸಂಸತ್​ ಭವನದ ಕಡೆ ಮೆರವಣಿಗೆಗೆ ಯತ್ನಿಸಿದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದರು.
(1 / 9)

ಒಲಿಂಪಿಯನ್ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರನ್ನು ಬಂಧಿಸಿದ ನಂತರ ದೆಹಲಿ ಪೊಲೀಸರು ನಗರದ ಮೂರು ವಿಭಿನ್ನ ಸ್ಥಳಗಳಿಗೆ ಕರೆದೊಯ್ದಿದ್ದಾರೆ.
(2 / 9)

ಐಎಎನ್‌ಎಸ್‌ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸಾಕ್ಷಿ ಮಲಿಕ್​, ನನ್ನನ್ನು ಉತ್ತರ ದೆಹಲಿ ಬುರಾರಿ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿದರು ಎಂದು ಹೇಳಿದ್ದಾರೆ.
(3 / 9)

ನಾನು ಬುರಾರಿಯಲ್ಲಿದ್ದೆ. ಹಾಗಾಗಿ ಇತರ ಕುಸ್ತಿಪಟುಗಳನ್ನು ಸಂಪರ್ಕಿಸುವುದು ಕಷ್ಟವಾಗಿತ್ತು. ನ್ಯಾಯವು ಜಯಗಳಿಸುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
(4 / 9)

ನಮಗೆ ಏನಾಯಿತು ಎಂದು ಇಡೀ ಭಾರತವೇ ನೋಡಿದೆ. ಯಾರೂ ಎಂದಿಗೂ ಮರೆಯುವುದಿಲ್ಲ. ದೆಹಲಿಯಲ್ಲಿ ನಾವು ಹುಡುಗಿಯರು ರಸ್ತೆಯಲ್ಲಿ ಥಳಿತಕ್ಕೆ ಒಳಗಾಗುತ್ತಿದ್ದರೆ ನಮ್ಮ ಪ್ರಧಾನಿ ಫೋಟೋಗಳಿಗೆ ಪೋಸ್ ನೀಡುವುದರಲ್ಲಿ ನಿರತರಾಗಿದ್ದರು ಎಂದು ಕಿಡಿಕಾರಿದ್ದಾರೆ.
(5 / 9)

ಬಜರಂಗ್ ಪುನಿಯಾರನ್ನು ಮಯೂರ್ ವಿಹಾರ್ ಪೊಲೀಸ್ ಠಾಣೆಗೆ, ವಿನೇಶ್ ಮತ್ತು ಅವರ ಸಹೋದರಿ ಸಂಗೀತಾ ಫೋಗಟ್​ರನ್ನು ಕಲ್ಕಾಜಿ ಠಾಣಾಗೆ ಕರೆದೊಯ್ಯಲಾಗಿತ್ತು ಎಂದು ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.
(6 / 9)

ಬೆಂಬಲಿಗರು, ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಮಹಿಳಾ ಸಮ್ಮಾನ್ ಮಹಾ ಚಾಯತ್ ಸದಸ್ಯರನ್ನು ಹೊಸ ಸಂಸತ್ ಭವನದ ಹೊರಗೆ ತಮ್ಮ ಯೋಜಿತ ಪ್ರತಿಭಟನೆಗಳಿಗೂ ಮುಂಚಿತವಾಗೇ ದೆಹಲಿ ಪೊಲೀಸರು ಬಂಧಿಸಿದ್ದರು.
(7 / 9)

ಇದಾದ ಕೆಲವು ಗಂಟೆಗಳ ನಂತರ, ಫೋಗಟ್ ಸಹೋದರಿಯರು, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಇತರ ಪ್ರತಿಭಟನಾ ಕುಸ್ತಿಪಟುಗಳನ್ನೂ ಪ್ರತಿಭಟನಾ ಸ್ಥಳದಿಂದ ಬಂಧಿಸಲಾಯಿತು. ಇದೀಗ ಅವರ ಮೇಲೆ ಪ್ರಕರಣ ದಾಖಲಾಗಿದೆ.
(8 / 9)

ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳ ವಸ್ತುಗಳನ್ನು ಕೆಡವಿದ್ದಾರೆ. ಮ್ಯಾಟ್‌ಗಳು, ಟೆಂಟ್‌ಗಳು ಮತ್ತು ಕೂಲರ್‌ಗಳನ್ನು ಬಿಸಾಡಿದ್ದಾರೆ ಎಂದು ವರದಿಯಾಗಿದೆ.
(9 / 9)

    ಹಂಚಿಕೊಳ್ಳಲು ಲೇಖನಗಳು