logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರು; ಯಾರ ಟೀಮ್‌ಗೆ ಯಾರು ಸೆಲೆಕ್ಟ್?‌ ಹೀಗಿದೆ ನಗು ಉಕ್ಕಿಸುವವರು ಪಟ್ಟಿ

ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರು; ಯಾರ ಟೀಮ್‌ಗೆ ಯಾರು ಸೆಲೆಕ್ಟ್?‌ ಹೀಗಿದೆ ನಗು ಉಕ್ಕಿಸುವವರು ಪಟ್ಟಿ

Apr 28, 2024 09:30 AM IST

ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರುವಾಗಿದೆ. ಈ ಸಲ ಒಂದಷ್ಟು ವಿಶೇಷತೆಗಳ ಜತೆಗೆ ಈ ಶೋ ಆಗಮಿಸುತ್ತಿದೆ. ವಾಹಿನಿಯ ಐವರು ನಿರೂಪಕರನ್ನೇ ಟೀಮ್‌ ಮಾಲೀಕರನ್ನಾಗಿ ಮಾಡಿ, ಅವರೇ ಹರಾಜಿನ ಮೂಲಕ ಹಾಸ್ಯ ಕಲಾವಿದರನ್ನು ಖರೀದಿಸಿ, ನಗಿಸುವ ಕಾಯಕಕ್ಕೆ ಚಾಲನೆ ನೀಡಿದ್ದಾರೆ. ಹಾಗಾದರೆ, ಈ ಸಲದ ಕಾಮಿಡಿ ಕಿಲಾಡಿಗಳು ಯಾರು?

  • ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರುವಾಗಿದೆ. ಈ ಸಲ ಒಂದಷ್ಟು ವಿಶೇಷತೆಗಳ ಜತೆಗೆ ಈ ಶೋ ಆಗಮಿಸುತ್ತಿದೆ. ವಾಹಿನಿಯ ಐವರು ನಿರೂಪಕರನ್ನೇ ಟೀಮ್‌ ಮಾಲೀಕರನ್ನಾಗಿ ಮಾಡಿ, ಅವರೇ ಹರಾಜಿನ ಮೂಲಕ ಹಾಸ್ಯ ಕಲಾವಿದರನ್ನು ಖರೀದಿಸಿ, ನಗಿಸುವ ಕಾಯಕಕ್ಕೆ ಚಾಲನೆ ನೀಡಿದ್ದಾರೆ. ಹಾಗಾದರೆ, ಈ ಸಲದ ಕಾಮಿಡಿ ಕಿಲಾಡಿಗಳು ಯಾರು?
ನಿರೂಪಕರುಗಳಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌, ಶ್ವೇತಾ ಚಂಗಪ್ಪ ಮತ್ತು ಕುರಿಪ್ರತಾಪ್‌ ಈ ಶೋನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಆಗಮಿಸುತ್ತಿದ್ದಾರೆ. ಶೋನ ಹೆಸರೇ ಹೇಳುವಂತೆ ಇಲ್ಲಿ ನಗುವಿನ ಲೀಗ್‌ ಮ್ಯಾಚ್‌ ನಡೆಯಲ್ಲಿದೆ. ಕ್ರಿಕೆಟ್‌ ತಂಡಗಳಂತೆ ಮಾಲೀಕರು, ಕ್ಯಾಪ್ಟನ್‌ಗಳು ಇಲ್ಲಿಯೂ ಇರಲಿದ್ದಾರೆ. ಹರಾಜಿನ ಮೂಲಕ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಐದು ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ. ಆ ಪೈಕಿ ಶನಿವಾರ ಐದು ತಂಡಗಳ ಕ್ಯಾಪ್ಟನ್‌ ಮತ್ತು ಇಂಪ್ಯಾಕ್ಟ್‌ ಪ್ಲೇಯರ್‌ಗಳನ್ನು ಆಯ್ಕೆ ಮಾಡಿದೆ. ಯಾರು ಯಾವ ತಂಡವನ್ನು ಸೇರಿಕೊಂಡರು? ಇಲ್ಲಿದೆ ವಿವರ. 
(1 / 8)

ಅಕುಲ್‌ ಬಾಲಾಜಿ ತಂಡದ ಮಾಲೀಕರಾದರೆ, ಅಪ್ಪಣ್ಣ ಈ ತಂಡದ ನಾಯಕ, ಆಶಾ ಭಟ್‌ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿದ್ದಾರೆ. 
(2 / 8)

ಅದೇ ರೀತಿ ಅನುಶ್ರೀ ತಂಡದಲ್ಲಿ ಹರೀಶ್‌ ನಾಯಕನಾದರೆ, ಹನುಮಂತ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿದ್ದಾರೆ. 
(3 / 8)

ಮಾಸ್ಟರ್‌ ಆನಂದ್‌ ಟೀಮ್‌ನಲ್ಲಿ ಗಿಲ್ಲಿನಟ ಕ್ಯಾಪ್ಟನ್‌. ಗೇಬ್ರಿಯಾಲ ಇಂಪ್ಯಾಕ್ಟ್‌ ಪ್ಲೇಯರ್
(4 / 8)

ಕುರಿ ಪ್ರತಾಪ್‌ ಟೀಮ್‌ನಲ್ಲಿ ಜಗ್ಗಪ್ಪ ಕ್ಯಾಪ್ಟನ್‌, ನವಾಜ್‌ ಇಂಪ್ಯಾಕ್ಟ್‌ ಪ್ಲೇಯರ್
(5 / 8)

ಶ್ವೇತಾ ಚೆಂಗಪ್ಪ ಟೀಮ್‌ನಲ್ಲಿ ನಯನ ನಾಯಕಿ. ಅನುಷಾ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿದ್ದಾರೆ. 
(6 / 8)

ಇದರ ಜತೆಗೆ ಗದಗ ಮೂಲದ ಸುಜಾತ ಸಹ ಈ ಕಾಮಿಡಿ ಕಿಲಾಡಿಗಳು ಶೋಗೆ ಆಯ್ಕೆಯಾಗಿದ್ದಾರೆ. 
(7 / 8)
ಇದರ ಜತೆಗೆ ಗದಗ ಮೂಲದ ಸುಜಾತ ಸಹ ಈ ಕಾಮಿಡಿ ಕಿಲಾಡಿಗಳು ಶೋಗೆ ಆಯ್ಕೆಯಾಗಿದ್ದಾರೆ. 
ವಿಜಯಪುರದ ಶಿವಪ್ರಸಾದ್‌ ತಮ್ಮ ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದು ಶೋಗೆ ಸೆಲೆಕ್ಟ್‌ ಆಗಿದ್ದಾರೆ. ಭಾನುವಾರವೂ ಇನ್ನಷ್ಟು ಕಲಾವಿದರ ಎಂಟ್ರಿಯಾಗಲಿದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು