logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Harshika Poonacha In Market: ಸೊಪ್ಪಮ್ಮ ಸೊಪ್ಪು... ಸಾರಕ್ಕಿ ಮಾರ್ಕೇಟ್‌ನಲ್ಲಿ ತರಕಾರಿ ಮಾರಿದ ನಟಿ ಹರ್ಷಿಕಾ ಪೂಣಚ್ಚ

Harshika Poonacha in Market: ಸೊಪ್ಪಮ್ಮ ಸೊಪ್ಪು... ಸಾರಕ್ಕಿ ಮಾರ್ಕೇಟ್‌ನಲ್ಲಿ ತರಕಾರಿ ಮಾರಿದ ನಟಿ ಹರ್ಷಿಕಾ ಪೂಣಚ್ಚ

Mar 02, 2023 09:46 AM IST

Kasina Sara movie Promotion: ಹೆಬ್ಬೆಟ್ ರಾಮಕ್ಕ ಖ್ಯಾತಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನದ ‘ಕಾಸಿನ ಸರ’ ಚಿತ್ರ ಮಾ.3ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಜಯ ರಾಘವೇಂದ್ರ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ. ಹಾಡು, ಟ್ರೇಲರ್‌ ಮೂಲಕ ಗಮನ ಸೆಳೆದ ಈ ಸಿನಿಮಾ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. ಇದೀಗ ಚಿತ್ರದ ನಾಯಕಿ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿನ ಸಾರಕ್ಕಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿದ್ದಾರೆ.

  • Kasina Sara movie Promotion: ಹೆಬ್ಬೆಟ್ ರಾಮಕ್ಕ ಖ್ಯಾತಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನದ ‘ಕಾಸಿನ ಸರ’ ಚಿತ್ರ ಮಾ.3ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಜಯ ರಾಘವೇಂದ್ರ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ. ಹಾಡು, ಟ್ರೇಲರ್‌ ಮೂಲಕ ಗಮನ ಸೆಳೆದ ಈ ಸಿನಿಮಾ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. ಇದೀಗ ಚಿತ್ರದ ನಾಯಕಿ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿನ ಸಾರಕ್ಕಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿದ್ದಾರೆ.
ಕಾಸಿನ ಸರ ಸಿನಿಮಾ ಇದೇ ಶುಕ್ರವಾರ (ಮಾ. 3) ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕಿ ಹರ್ಷಿಕಾ ಪೂಣಚ್ಚ ಬೆಂಗಳೂರಿನ ಜೆಪಿ ನಗರದ ಸಾರಕ್ಕಿ ಮಾರುಕಟ್ಟೆಯಲ್ಲಿ ತರಕಾರಿ ಮಾರಿದ್ದಾರೆ.
(1 / 5)
ಕಾಸಿನ ಸರ ಸಿನಿಮಾ ಇದೇ ಶುಕ್ರವಾರ (ಮಾ. 3) ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕಿ ಹರ್ಷಿಕಾ ಪೂಣಚ್ಚ ಬೆಂಗಳೂರಿನ ಜೆಪಿ ನಗರದ ಸಾರಕ್ಕಿ ಮಾರುಕಟ್ಟೆಯಲ್ಲಿ ತರಕಾರಿ ಮಾರಿದ್ದಾರೆ.
ಕೆಂಪು ಹಸಿರು ವರ್ಣದ ಲಂಗ ದಾವಣಿ ಧರಿಸಿ ಕೊತ್ತಂಬರಿ, ಟೊಮೇಟೊ ಮಾರಾಟ ಮಾಡಿ, ‘ಕಾಸಿನ ಸರ’ ಸಿನಿಮಾ ಪ್ರಚಾರ ಮಾಡಿದ್ದಾರೆ.  
(2 / 5)
ಕೆಂಪು ಹಸಿರು ವರ್ಣದ ಲಂಗ ದಾವಣಿ ಧರಿಸಿ ಕೊತ್ತಂಬರಿ, ಟೊಮೇಟೊ ಮಾರಾಟ ಮಾಡಿ, ‘ಕಾಸಿನ ಸರ’ ಸಿನಿಮಾ ಪ್ರಚಾರ ಮಾಡಿದ್ದಾರೆ.  
ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಇರುವ ‘ಕಾಸಿನ ಸರ’ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ನಿರ್ದೇಶಕರು ಹೇಳಹೊರಟಿದ್ದಾರೆ.  
(3 / 5)
ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಇರುವ ‘ಕಾಸಿನ ಸರ’ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ನಿರ್ದೇಶಕರು ಹೇಳಹೊರಟಿದ್ದಾರೆ.  
ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಕೃಷಿ ವಿದ್ಯಾರ್ಥಿನಿ ಸಂಪಿಗೆಯ ಪಾತ್ರ ಮಾಡಿದ್ದಾರೆ. ಪದವಿ ಮುಗಿಸಿ ಗಂಡನಿಗೆ ಬೆಂಬಲವಾಗಿ ನಿಲ್ಲುವ ‌ಪಾತ್ರ ಅವರದ್ದು.
(4 / 5)
ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಕೃಷಿ ವಿದ್ಯಾರ್ಥಿನಿ ಸಂಪಿಗೆಯ ಪಾತ್ರ ಮಾಡಿದ್ದಾರೆ. ಪದವಿ ಮುಗಿಸಿ ಗಂಡನಿಗೆ ಬೆಂಬಲವಾಗಿ ನಿಲ್ಲುವ ‌ಪಾತ್ರ ಅವರದ್ದು.
'ಇಲ್ಲಿ ಕಾಸಿನ ಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಈ ಚಿತ್ರದ ಮೂಲಕ ಅದನ್ನು ಹೇಳಿದ್ದೇವೆ ಎಂಬುದು ನಿರ್ಮಾಪಕ ದೊಡ್ಡನಾಗಯ್ಯ ಮಾತು.
(5 / 5)
'ಇಲ್ಲಿ ಕಾಸಿನ ಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಈ ಚಿತ್ರದ ಮೂಲಕ ಅದನ್ನು ಹೇಳಿದ್ದೇವೆ ಎಂಬುದು ನಿರ್ಮಾಪಕ ದೊಡ್ಡನಾಗಯ್ಯ ಮಾತು.

    ಹಂಚಿಕೊಳ್ಳಲು ಲೇಖನಗಳು