logo
ಕನ್ನಡ ಸುದ್ದಿ  /  Photo Gallery  /  King Charles Iii Proclaimed As New King Of Britain

King Charles III: ಹೀಗಿತ್ತು ಬ್ರಿಟನ್‌ ನೂತನ ದೊರೆ ಕಿಂಗ್‌ ಚಾರ್ಲ್ಸ್‌ III ಪಟ್ಟಾಭಿಷೇಕ!

Sep 10, 2022 05:08 PM IST

ಲಂಡನ್:‌ ಬ್ರಿಟನ್‌ ರಾಣಿ ಕ್ವೀನ್‌ ಎಲಿಜಬೆತ್‌ II ನಿಧನದ ಬಳಿಕ, ಅವರ ಪುತ್ರ ಚಾರ್ಲ್ಸ್‌ ಬ್ರಿಟನ್‌ ನೂತನ ದೊರೆಯಾಗಿ ಪ್ರಮಾಣವಚನ ಸ್ವೀಕರಿಸಿದ್ಧಾರೆ. ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಕಿಂಗ್‌ ಚಾರ್ಲ್ಸ್‌ III ಅವರ ಪಟ್ಟಾಭಿಷೇಕ ವಿದ್ಯುಕ್ತವಾಗಿ ನೆರವೇರಿದೆ. ಅರಮನೆ ಪ್ರವೇಶ ಮಂಡಳಿ ಕಿಂಗ್‌ ಚಾರ್ಲ್ಸ್‌ III ಪಟ್ಟಾಭಿಷೇಕ ನೆರವೇರಿಸಿದ್ದು, ಈ ವೇಳೆ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೂಡ ಉಪಸ್ಥಿತರಿದ್ದರು. ಹಾಗಾದರೆ ಬ್ರಿಟನ್‌ ನೂತನ ದೊರೆಯ ಪಟ್ಟಾಭಿಷೇಕದ ಬೆಳವಣಿಗೆಗಳತ್ತ ಗಮನಹರಿಸುವುದಾದರೆ...

  • ಲಂಡನ್:‌ ಬ್ರಿಟನ್‌ ರಾಣಿ ಕ್ವೀನ್‌ ಎಲಿಜಬೆತ್‌ II ನಿಧನದ ಬಳಿಕ, ಅವರ ಪುತ್ರ ಚಾರ್ಲ್ಸ್‌ ಬ್ರಿಟನ್‌ ನೂತನ ದೊರೆಯಾಗಿ ಪ್ರಮಾಣವಚನ ಸ್ವೀಕರಿಸಿದ್ಧಾರೆ. ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಕಿಂಗ್‌ ಚಾರ್ಲ್ಸ್‌ III ಅವರ ಪಟ್ಟಾಭಿಷೇಕ ವಿದ್ಯುಕ್ತವಾಗಿ ನೆರವೇರಿದೆ. ಅರಮನೆ ಪ್ರವೇಶ ಮಂಡಳಿ ಕಿಂಗ್‌ ಚಾರ್ಲ್ಸ್‌ III ಪಟ್ಟಾಭಿಷೇಕ ನೆರವೇರಿಸಿದ್ದು, ಈ ವೇಳೆ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೂಡ ಉಪಸ್ಥಿತರಿದ್ದರು. ಹಾಗಾದರೆ ಬ್ರಿಟನ್‌ ನೂತನ ದೊರೆಯ ಪಟ್ಟಾಭಿಷೇಕದ ಬೆಳವಣಿಗೆಗಳತ್ತ ಗಮನಹರಿಸುವುದಾದರೆ...
ಬ್ರಿಟನ್‌ ರಾಣಿ ಕ್ವೀನ್‌ ಎಲಿಜಬೆತ್‌ II ನಿಧನ ಬಳಿಕ, ಅವರ ಪುತ್ರ 73 ವರ್ಷದ ಚಾರ್ಲ್ಸ್ ಅವರು ಅಧಿಕೃತವಾಗಿ ಬ್ರಿಟನ್‌ ದೊರೆಯಾಗಿ ಅಧಿಕಾರ ಸ್ವೀಕರಿಸಿದರು. ಇನ್ನು ಮುಂದೆ ಅವರನ್ನು ಕಿಂಗ್‌ ಚಾರ್ಲ್ಸ್‌ III ಎಂದು ಕರೆಯಲಾಗುತ್ತದೆ. ಕಿಂಗ್‌ ಚಾರ್ಲ್ಸ್‌ ಬ್ರಿಟನ್‌ ರಾಜಮನೆತನದ ಸಾರ್ವಭೌಮತ್ವದ ಕರ್ತವ್ಯಗಳು ಮತ್ತು ಗುರುತರ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.
(1 / 5)
ಬ್ರಿಟನ್‌ ರಾಣಿ ಕ್ವೀನ್‌ ಎಲಿಜಬೆತ್‌ II ನಿಧನ ಬಳಿಕ, ಅವರ ಪುತ್ರ 73 ವರ್ಷದ ಚಾರ್ಲ್ಸ್ ಅವರು ಅಧಿಕೃತವಾಗಿ ಬ್ರಿಟನ್‌ ದೊರೆಯಾಗಿ ಅಧಿಕಾರ ಸ್ವೀಕರಿಸಿದರು. ಇನ್ನು ಮುಂದೆ ಅವರನ್ನು ಕಿಂಗ್‌ ಚಾರ್ಲ್ಸ್‌ III ಎಂದು ಕರೆಯಲಾಗುತ್ತದೆ. ಕಿಂಗ್‌ ಚಾರ್ಲ್ಸ್‌ ಬ್ರಿಟನ್‌ ರಾಜಮನೆತನದ ಸಾರ್ವಭೌಮತ್ವದ ಕರ್ತವ್ಯಗಳು ಮತ್ತು ಗುರುತರ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.(AP)
ಕಿಂಗ್‌ ಚಾರ್ಲ್ಸ್‌ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಬ್ರಿಟನ್‌ ನೂತನ ಪ್ರಧಾನಿ ಲಿಜ್‌ ಟ್ರಸ್‌, ಮಾಜಿ ಪ್ರಧಾನಮಂತ್ರಿಗಳು, ಕಿಂಗ್‌ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ ಮತ್ತು ಕಿಂಗ್‌ ಚಾರ್ಲ್ಸ್ ಅವರ ಹಿರಿಯ ಮಗ ಮತ್ತು ಉತ್ತರಾಧಿಕಾರಿ ವಿಲಿಯಂ ಸೇರಿದಂತೆ ನೂರಾರು ಖಾಸಗಿ ಕೌನ್ಸಿಲರ್‌ಗಳು ಭಾಗವಹಿಸಿದ್ದರು.‌
(2 / 5)
ಕಿಂಗ್‌ ಚಾರ್ಲ್ಸ್‌ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಬ್ರಿಟನ್‌ ನೂತನ ಪ್ರಧಾನಿ ಲಿಜ್‌ ಟ್ರಸ್‌, ಮಾಜಿ ಪ್ರಧಾನಮಂತ್ರಿಗಳು, ಕಿಂಗ್‌ ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ ಮತ್ತು ಕಿಂಗ್‌ ಚಾರ್ಲ್ಸ್ ಅವರ ಹಿರಿಯ ಮಗ ಮತ್ತು ಉತ್ತರಾಧಿಕಾರಿ ವಿಲಿಯಂ ಸೇರಿದಂತೆ ನೂರಾರು ಖಾಸಗಿ ಕೌನ್ಸಿಲರ್‌ಗಳು ಭಾಗವಹಿಸಿದ್ದರು.‌(AP)
ಪಟ್ಟಾಭಿಷೇಕದ ಬಳಿಕ ಮಾತನಾಡಿದ ಕಿಂಗ್‌ ಚಾರ್ಲ್ಸ್‌ III, ತಮ್ಮ ತಾಯಿ ದಿವಂಗತ ಎಲಿಜಬೆತ್‌ II ನಿಸ್ವಾರ್ಥ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದರು.
(3 / 5)
ಪಟ್ಟಾಭಿಷೇಕದ ಬಳಿಕ ಮಾತನಾಡಿದ ಕಿಂಗ್‌ ಚಾರ್ಲ್ಸ್‌ III, ತಮ್ಮ ತಾಯಿ ದಿವಂಗತ ಎಲಿಜಬೆತ್‌ II ನಿಸ್ವಾರ್ಥ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದರು.(REUTERS)
ಸದೀರ್ಘ ವರ್ಷಗಳ ವರೆಗೆ ಬ್ರಿಟನ್‌ ರಾಣಿಯಾಗಿ ಕರ್ತವ್ಯ ನಿರ್ವಹಿಸಿದ ತಾಯಿ ಎಲಿಜಬೆತ್‌ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ ಕಿಂಗ್‌ ಚಾರ್ಲ್ಸ್‌, ನಮ್ಮ ಹೊಸ ಕರ್ತವ್ಯ ನಿರ್ವಹಣೆಯಲ್ಲಿ ನಾನು ದೇಶದ ಜನರ ಸಹಕಾರ ಕೋರುವುದಾಗಿ ಹೇಳಿದರು.
(4 / 5)
ಸದೀರ್ಘ ವರ್ಷಗಳ ವರೆಗೆ ಬ್ರಿಟನ್‌ ರಾಣಿಯಾಗಿ ಕರ್ತವ್ಯ ನಿರ್ವಹಿಸಿದ ತಾಯಿ ಎಲಿಜಬೆತ್‌ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ ಕಿಂಗ್‌ ಚಾರ್ಲ್ಸ್‌, ನಮ್ಮ ಹೊಸ ಕರ್ತವ್ಯ ನಿರ್ವಹಣೆಯಲ್ಲಿ ನಾನು ದೇಶದ ಜನರ ಸಹಕಾರ ಕೋರುವುದಾಗಿ ಹೇಳಿದರು.(REUTERS)
ಇನ್ನು ಕಿಂಗ್‌ ಚಾರ್ಲ್ಸ್‌ ಬ್ರಿಟನ್‌ ನೂತನ ದೊರೆಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೇ, ಅರಮನೆ ಹೊರಗೆ ಜಯಘೋಷಗಳು ಮೊಳಗಿದವು. ʼಲಾಂಗ್‌ ಲೀವ್‌ ದಿ ಕಿಂಗ್‌ʼ ಹಾಡು ಎಲ್ಲೆಡೆ ಕೇಳಿಸಿತು.
(5 / 5)
ಇನ್ನು ಕಿಂಗ್‌ ಚಾರ್ಲ್ಸ್‌ ಬ್ರಿಟನ್‌ ನೂತನ ದೊರೆಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೇ, ಅರಮನೆ ಹೊರಗೆ ಜಯಘೋಷಗಳು ಮೊಳಗಿದವು. ʼಲಾಂಗ್‌ ಲೀವ್‌ ದಿ ಕಿಂಗ್‌ʼ ಹಾಡು ಎಲ್ಲೆಡೆ ಕೇಳಿಸಿತು.(AFP)

    ಹಂಚಿಕೊಳ್ಳಲು ಲೇಖನಗಳು