logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Valentine's Week 2023: ಲವ್‌ ಮಾಡ್ತಿದ್ದೀರಾ..ಇಂದಿನಿಂದ ಶುರುವಾಗ್ತಿದೆ ವ್ಯಾಲೆಂಟೈನ್‌ ವೀಕ್‌...ಯಾವ ದಿನ ಏನು ವಿಶೇಷ? ಇಲ್ಲಿದೆ ಮಾಹಿತಿ

Valentine's Week 2023: ಲವ್‌ ಮಾಡ್ತಿದ್ದೀರಾ..ಇಂದಿನಿಂದ ಶುರುವಾಗ್ತಿದೆ ವ್ಯಾಲೆಂಟೈನ್‌ ವೀಕ್‌...ಯಾವ ದಿನ ಏನು ವಿಶೇಷ? ಇಲ್ಲಿದೆ ಮಾಹಿತಿ

Feb 07, 2023 12:52 PM IST

ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ. ಪ್ರತಿ ವರ್ಷವೂ ಈ ವಿಶೇಷ ದಿನಕ್ಕಾಗಿ ಪ್ರೇಮಿಗಳು ಕಾಯುತ್ತಿರುತ್ತಾರೆ. ಕೆಲವರಿಗೆ ಇದು ಬಹಳ ವಿಶೇಷವಾದ ದಿನ ಎಂದೇ ಹೇಳಬಹುದು. ಎಷ್ಟೋ ಮಂದಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಈ ವಿಶೇಷ ದಿನಕ್ಕಾಗಿ ಎದುರು ನೋಡುತ್ತಾರೆ.

  • ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ. ಪ್ರತಿ ವರ್ಷವೂ ಈ ವಿಶೇಷ ದಿನಕ್ಕಾಗಿ ಪ್ರೇಮಿಗಳು ಕಾಯುತ್ತಿರುತ್ತಾರೆ. ಕೆಲವರಿಗೆ ಇದು ಬಹಳ ವಿಶೇಷವಾದ ದಿನ ಎಂದೇ ಹೇಳಬಹುದು. ಎಷ್ಟೋ ಮಂದಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಈ ವಿಶೇಷ ದಿನಕ್ಕಾಗಿ ಎದುರು ನೋಡುತ್ತಾರೆ.
ಫೆಬ್ರವರಿ 14 ವ್ಯಾಲೆಂಟೈನ್‌ ಡೇ ಆದರೆ, ಒಂದು ವಾರದ ಹಿಂದಿನಿಂದ ವಿವಿಧ ದಿನಗಳನ್ನು ಆಚರಿಸಲಾಗುತ್ತದೆ. ಫೆಬ್ರವರಿ 7ರಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗುತ್ತಿದೆ.  ಈ ದಿನದಿಂದ ಫೆ.14 ವರೆಗೂ ಒಂದೊಂದು ದಿನ ಒಂದೊಂದು ದಿನವನ್ನಾಗಿ ಆಚರಿಸಲಾಗುವುದು. ಯಾವ ದಿನ ಏನು ವಿಶೇಷ ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.  
(1 / 9)
ಫೆಬ್ರವರಿ 14 ವ್ಯಾಲೆಂಟೈನ್‌ ಡೇ ಆದರೆ, ಒಂದು ವಾರದ ಹಿಂದಿನಿಂದ ವಿವಿಧ ದಿನಗಳನ್ನು ಆಚರಿಸಲಾಗುತ್ತದೆ. ಫೆಬ್ರವರಿ 7ರಿಂದ ವ್ಯಾಲೆಂಟೈನ್‌ ವೀಕ್‌ ಆರಂಭವಾಗುತ್ತಿದೆ.  ಈ ದಿನದಿಂದ ಫೆ.14 ವರೆಗೂ ಒಂದೊಂದು ದಿನ ಒಂದೊಂದು ದಿನವನ್ನಾಗಿ ಆಚರಿಸಲಾಗುವುದು. ಯಾವ ದಿನ ಏನು ವಿಶೇಷ ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.  (PC: Unsplash)
ಫೆಬ್ರವರಿ 7, ರೋಸ್‌ ಡೇ: ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಯೋಚಿಸಿದರೆ ಮೊದಲು ನೆನಪಿಗೆ ಬರುವುದು ಗುಲಾಬಿ. ಈ ಸುಂದರ ಹೂ ಪ್ರೀತಿಗೆ ಒಂದು ವಿಶೇಷ ಅರ್ಥವನ್ನೇ ನೀಡುತ್ತದೆ. ನೀವು ಮೊದಲ ಬಾರಿ ಪ್ರಪೋಸ್‌ ಮಾಡುತ್ತಿದ್ದರೆ ನಿಮ್ಮಾಕೆಗೆ ಕೆಂಪು ಗುಲಾಬಿ ನೀಡಿ ನಿಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ಅಥವಾ ನೀವು ಈಗಾಗಲೇ ಪ್ರೀತಿಯಲ್ಲಿದ್ದು ನಿಮ್ಮ ಪ್ರೇಮಿಯೊಂದಿಗೆ ಮನಸ್ತಾಪವಾಗಿದ್ದರೆ ಆಕೆಗೆ ಬಿಳಿ ಗುಲಾಬಿ ನೀಡಬಹುದು. ಒಂದೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥ ಇದೆ. ಅದನ್ನು ತಿಳಿದುಕೊಂಡು ನಿಮ್ಮವರಿಗೆ ರೋಸ್‌ ನೀಡಬಹುದು.   
(2 / 9)

ಫೆಬ್ರವರಿ 8, ಪ್ರಪೋಸ್‌ ಡೇ: ಈ ದಿನ ನಿಮ್ಮ ಮನಸ್ಸಿನ ಭಾವನೆಯನ್ನು ನಿಮ್ಮ ಮನಸ್ಸಿನಲ್ಲಿರುವವರೊಂದಿಗೆ ಹೇಳಿಕೊಳ್ಳುವ ದಿನ. ನಿಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾದ ಗಿಫ್ಟ್‌ಗಳನ್ನು ನೀಡಿ ಅವರನ್ನು ಪ್ರಪೋಸ್‌ ಮಾಡಬಹುದು. ನಿಮ್ಮ ಪ್ರೀತಿ ಪಾತ್ರರನ್ನು ಡಿನ್ನರ್‌ಗೆ ಕೂಡಾ ಕರೆದೊಯ್ಯಬಹುದು.   
(3 / 9)

 ಫೆಬ್ರವರಿ 9, ಚಾಕೊಲೇಟ್ ದಿನ: ಪುಟ್ಟ ಮಕ್ಕಳಿಂದ ದೊಡ್ಡವರೂ ಬಹಳ ಇಷ್ಟ ಪಟ್ಟು ತಿನ್ನುವ ಸಿಹಿ ಎಂದರೆ ಅದು ಚಾಕೊಲೇಟ್.‌ ಇದಕ್ಕಾಗಿ ನೀವು ಹೆಚ್ಚು ಹಣ ಖರ್ಚು ಮಾಡುವ ಅಗತ್ಯ ಕೂಡಾ ಇಲ್ಲ. ಈ ವಿಶೇಷ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಚಾಕೊಲೇಟ್‌ ನೀಡಿ ಅವರನ್ನು ಇಂಪ್ರೆಸ್‌ ಮಾಡಬಹುದು. ಅಥವಾ ಬಹಳ ಸರಳವಾಗಿ ನಿಮ್ಮ ಕೈಯಾರೆ ನೀವೇ ಚಾಕೊಲೇಟ್‌ ತಯಾರಿಸಬಹುದು.   
(4 / 9)

 ಫೆಬ್ರವರಿ 10, ಟೆಡ್ಡಿ ಡೇ:  ಟೆಡ್ಡಿ ಬೇರ್, ಮುಗ್ಧ ಪ್ರೀತಿಯ ಸಂಕೇತವಾಗಿದೆ. ನಿಮ್ಮ ಸಂಗಾತಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ನೀವು ಪ್ರೀತಿಯನ್ನು ಆಚರಿಸಬಹುದು. ಹುಡುಗಿಯರು ವಿಶೇಷವಾಗಿ ಟೆಡ್ಡಿ ಬೇರ್‌ಗಳನ್ನು ಬಹಳ ಇಷ್ಟಪಡುತ್ತಾರೆ.   
(5 / 9)

ಫೆಬ್ರವರಿ 11, ಪ್ರಾಮಿಸ್ ಡೇ: ಪ್ರಾಮಿಸ್ ದಿನದಂದು ನಿಮ್ಮ ಪ್ರೇಮಿಗೆ ನೀವು ವಾಗ್ದಾನ ನೀಡಬಹುದು. ನಿನ್ನ ಕಷ್ಟ ಸುಖಗಳಲ್ಲಿ ಕೊನೆವರೆಗೂ ನಿನ್ನ‌ ಜೊತೆಯಾಗಿರುತ್ತೇನೆ ಎಂಬುದನ್ನು ನಿಮ್ಮ ಮಾತುಗಳಿಂದ ಆಕೆಗೆ ವ್ಯಕ್ತಪಡಿಸಬಹುದು. ಅಥವಾ ನಿಮ್ಮ ಭಾವನೆಯನ್ನು ಪತ್ರದ ಮುಖಾಂತರ ಅರ್ಥೈಸಬಹುದು. ಹುಡುಗಿಯರು ಕೂಡಾ ನಿಮ್ಮ ಸಂಗಾತಿಗೆ ವಾಗ್ದಾನ ನೀಡಿ ಅವರನ್ನು ಸಂತೋಷಗೊಳಿಸಿ. 
(6 / 9)

ಫೆಬ್ರವರಿ 12, ಅಪ್ಪುಗೆಯ ದಿನ: ಹಗ್‌ ಡೇ, ಪ್ರೀತಿಯ ಅತ್ಯಂತ ಸುಂದರವಾದ ರೂಪವಾಗಿದೆ. ಇದು ಇಬ್ಬರಿಗೂ ಸುರಕ್ಷಿತ ಭಾವನೆಯನ್ನು ನೀಡುತ್ತದೆ.   
(7 / 9)

 ಫೆಬ್ರವರಿ 13, ಕಿಸ್ ಡೇ: ಚುಂಬನವು ಪ್ರೀತಿಯ ಅತ್ಯಂತ ನಿಕಟ ಹಂತವಾಗಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಚುಂಬಿಸುವ ಮೂಲಕ ಅವರಿಗೆ ಮತ್ತಷ್ಟು ಹತ್ತಿರವಾಗಿ. ನೀವು ಕೆನ್ನೆ, ತುಟಿ ಅಥವಾ ಹಣೆಗೆ ಮುತ್ತಿಟ್ಟು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.   
(8 / 9)

ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ: ಇದು ಪ್ರೇಮಿಗಳಿಗೆ ಬಹಳ ಪ್ರಮುಖವಾದ ದಿನ.  ಇಷ್ಟು ದಿನದ ಪ್ರೀತಿಯನ್ನು ನೀವು ಒಟ್ಟಿಗೆ ಈ ದಿನ ಆಚರಿಸಬಹುದು. ನೀವು ವ್ಯಾಲೆಂಟೈನ್‌ ಡೇಯನ್ನು ಹೇಗೆ ಆಚರಿಸಬೇಕೆಂದುಕೊಂಡಿದ್ದೀರೆಂದು ಮೊದಲೇ ಪ್ಲಾನ್‌ ಮಾಡಿಕೊಳ್ಳಿ. ಇದಕ್ಕಾಗಿ ನೀವು ದೂರದ ಟ್ರಿಪ್‌ ಹೋಗಬಹುದು. ಸಾಧ್ಯವಾಗದಿದ್ದರೆ ನಿಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸಿ ವಿಶೇಷ ಫುಡ್‌ ತಯಾರಿಸಿ, ಕೇಕ್‌ ಕತ್ತರಿಸಿ, ಒಬ್ಬರಿಗೊಬ್ಬರು ಗಿಫ್ಟ್‌ ನೀಡ ಆಚರಿಸಬಹುದು.   
(9 / 9)

    ಹಂಚಿಕೊಳ್ಳಲು ಲೇಖನಗಳು