logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shankaracharya Statue: ಮಧ್ಯಪ್ರದೇಶದಲ್ಲಿ ಎಲೆ ಎತ್ತಿದ 108 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿ : ಹೀಗಿದೆ ಕಂಚಿನ ಮೂರ್ತಿಯ ನೋಟ

Shankaracharya Statue: ಮಧ್ಯಪ್ರದೇಶದಲ್ಲಿ ಎಲೆ ಎತ್ತಿದ 108 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿ : ಹೀಗಿದೆ ಕಂಚಿನ ಮೂರ್ತಿಯ ನೋಟ

Sep 22, 2023 10:58 AM IST

108 ಅಡಿ ಎತ್ತರದ 12 ವರ್ಷದ ವಯಸ್ಸಿನ ಬಾಲ ಶಂಕರಾಚಾರ್ಯರ ಬೃಹತ್‌ ಕಂಚಿನ ಮೂರ್ತಿ(Adi Shankaracharya statue) ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ ತಲೆ ಎತ್ತಿದೆ. ಆರು ವರ್ಷದ ಹಿಂದೆ ರೂಪಿಸಿದ್ದ ಯೋಜನೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಚಾಲನೆ ನೀಡಿದ್ದಾರೆ. ಹಸಿರು ಬೆಟ್ಟಗಳ ನಡುವೆ ನಿಂತಿರುವ ಬೃಹತ್‌ ಮೂರ್ತಿ ವೀಕ್ಷಣೆಯೇ ಚೆಂದ.

  • 108 ಅಡಿ ಎತ್ತರದ 12 ವರ್ಷದ ವಯಸ್ಸಿನ ಬಾಲ ಶಂಕರಾಚಾರ್ಯರ ಬೃಹತ್‌ ಕಂಚಿನ ಮೂರ್ತಿ(Adi Shankaracharya statue) ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ ತಲೆ ಎತ್ತಿದೆ. ಆರು ವರ್ಷದ ಹಿಂದೆ ರೂಪಿಸಿದ್ದ ಯೋಜನೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಚಾಲನೆ ನೀಡಿದ್ದಾರೆ. ಹಸಿರು ಬೆಟ್ಟಗಳ ನಡುವೆ ನಿಂತಿರುವ ಬೃಹತ್‌ ಮೂರ್ತಿ ವೀಕ್ಷಣೆಯೇ ಚೆಂದ.
ಮಧ್ಯಪ್ರದೇಶದ ಪ್ರಮುಖ ಧಾರ್ಮಿಕ ಸ್ಥಳ ಓಂಕಾರೇಶ್ವರದಲ್ಲಿ ಆರು ವರ್ಷದ ಹಿಂದೆ ಶಂಕರಾಚಾರ್ಯರ 108 ಅಡಿ ಎತ್ತರದ ಮೂರ್ತಿ ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು.
(1 / 8)

ಕೇರಳದ ಕಾಲಡಿಯಲ್ಲಿ ಜನಿಸಿದರೂ ಶಂಕರಾಚಾರ್ಯರು ಮಧ್ಯಪ್ರದೇಶದ ಓಂಕಾರೇಶ್ವರ ಭಾಗದಲ್ಲಿ ಓಡಾಡಿದ್ದರು. ಕೆಲ ದಿನ ಇಲ್ಲಿಯೇ ತಂಗಿದ್ದರು ಎನ್ನುವ ಕಾರಣಕ್ಕೆ ಇಲ್ಲಿ ಮೂರ್ತಿ ಸ್ಥಾಪನೆಗೆ ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿತ್ತು.
(2 / 8)

ಶಂಕರಾಚಾರ್ಯರು ಇಲ್ಲಿಗೆ ಬಂದಾಗ ಅವರಿಗೆ ಹನ್ನೆರಡು ವರ್ಷ ಎನ್ನುವ ಕಾರಣಕ್ಕೆ ಬಾಲ ಶಂಕರಾಚಾರ್ಯರ ಮೂರ್ತಿಯನ್ನು ಇಲ್ಲಿ ರೂಪಿಸಲಾಗಿದೆ. ಮಂದಾತ ಅರಣ್ಯ, ನರ್ಮದಾ ನದಿ ಹಿನ್ನೋಟ ಇಡೀ ಮೂರ್ತಿ ವೀಕ್ಷಣೆಗೆ ಹಸಿರು ಸ್ಪರ್ಶ ನೀಡುತ್ತದೆ.
(3 / 8)

ಇಡೀ ಕಂಚಿನ ಮೂರ್ತಿ 108 ಅಡಿ  ಎತ್ತರ ಇದ್ದರೂ ಪಾದದಿಂದ 54 ಅಡಿ ಎತ್ತರದಲ್ಲಿರುವುದು ಇದರ ವಿಶೇಷ. ಏಕತ್ವದ ಪ್ರತಿಮೆ ಎಂದು ಕರೆಯಲಾಗಿರುವ ಈ ಸ್ಥಳ ಇಂದೋರ್‌ನಿಂದ 80 ಕಿ.ಮಿ ದೂರದಲ್ಲಿದೆ. 
(4 / 8)

ಈ ಮೂರ್ತಿಗೆ ಹೊಂದಿಕೊಂಡಂತೆ ಇಡೀ ಪ್ರದೇಶವನ್ನು ಅದ್ವೈತ ಲೋಕ ಮ್ಯೂಸಿಯಂ ಆಗಿ ರೂಪಿಸಲಾಗುತ್ತಿದೆ. ಅಂತರಾಷ್ಟ್ರೀಯ ವೇದಾಂತ ಸಂಸ್ಥೆ ಈ ಯೋಜನೆ ರೂಪಿಸಿದ್ದು ಮಧ್ಯಪ್ರದೇಶ ರಾಜ್ಯ ಸರ್ಕಾರ ಸಂಪೂರ್ಣ ಆರ್ಥಿಕ ನೆರವು ನೀಡಲಿದೆ. 
(5 / 8)

ಓಂಕಾರೇಶ್ವರದಲ್ಲಿ ರೂಪಿಸಿರುವ ಶಂಕರಾಚಾರ್ಯರ ಕಂಚಿನಮೂರ್ತಿಯನ್ನು ಉದ್ಘಾಟಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮೂರ್ತಿಯ ಪಾದಕ್ಕೆ ನಮಸ್ಕರಿಸಿದರು.
(6 / 8)

ಮಧ್ಯಪ್ರದೇಶದಲ್ಲಿ ರೂಪಿಸಲಾಗಿರುವ ಶಂಕರಾಚಾರ್ಯರ ಕಂಚಿನ ಮೂರ್ತಿಯ ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ಚಟುವಟಿಕೆಗಳು ಜರುಗಿದವು. ಧಾರ್ಮಿಕ ಗುರುಗಳ ಉಪಸ್ಥಿತಿಯಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್‌ ದಂಪತಿ ಪೂಜೆ ಸಲ್ಲಿಸಿದರು.
(7 / 8)

ಒಂಕಾರೇಶ್ವರದಲ್ಲಿ ಆದಿ ಶಂಕರಾಚಾರ್ಯರ ಮೂರ್ತಿ ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ಮ ನಡೆಸಿಕೊಟ್ಟರು. 
(8 / 8)

    ಹಂಚಿಕೊಳ್ಳಲು ಲೇಖನಗಳು