logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೂತನ ವರ್ಷಕ್ಕೆ ದಿನಗಣನೆ ಹಿನ್ನೆಲೆ: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಮಾಗಿ ಉತ್ಸವಕ್ಕೆ ಚಾಲನೆ

ನೂತನ ವರ್ಷಕ್ಕೆ ದಿನಗಣನೆ ಹಿನ್ನೆಲೆ: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಮಾಗಿ ಉತ್ಸವಕ್ಕೆ ಚಾಲನೆ

Dec 21, 2024 06:00 PM IST

ನೂತನ ವರ್ಷಕ್ಕೆ ದಿನಗಣನೆ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಮಾಗಿ ಉತ್ಸವಕ್ಕೆ ಚಾಲನೆ ದೊರೆತಿದೆ. 

  • ನೂತನ ವರ್ಷಕ್ಕೆ ದಿನಗಣನೆ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಮಾಗಿ ಉತ್ಸವಕ್ಕೆ ಚಾಲನೆ ದೊರೆತಿದೆ. 
ಹೊಸ ವರ್ಷ, ಅಂದರೆ 2025ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಮನರಂಜನಾ ಚಟುವಟಿಕೆಗಳು ಗರಿಗೆದರಿವೆ. ರಜಾದಿನಗಳ ಮೂಡ್‌ನಲ್ಲಿ ಮುಳುಗುವವರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾಸಿಗರ ಓಡಾಟ ಹೆಚ್ಚುತ್ತಿದೆ. 
(1 / 12)

ಇದೇ ವೇಳೆ ಆಗಮಿಸುವ ಪ್ರವಾಸಿಗರಿಗೆ ಸಂಭ್ರಮ ನೀಡಲು ಸಾಂಸ್ಕೃತಿಕ ನಗರ ಮೈಸೂರು ಸಜ್ಜಾಗಿದೆ. ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ (ಡಿಸೆಂಬರ್ 21) 5 ಗಂಟೆಗೆ ಮಾಗಿ ಉತ್ಸವಕ್ಕೆ ಚಾಲನೆ ದೊರೆತಿದೆ.
(2 / 12)

ಮಾಗಿ ಉತ್ಸವದ ಹಿನ್ನೆಲೆಯಲ್ಲಿ 10ನೇ ವರ್ಷದ ಪುಷ್ಪ ಪ್ರದರ್ಶನ, ಸಂಗೀತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಡು ಮಾಡಲಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇಂದಿನಿಂದ ಡಿಸೆಂಬರ್ 31ರವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. 
(3 / 12)

ಪ್ರವಾಸಿಗರು, ಸ್ಥಳೀಯರಿಗೆ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಪುಷ್ಪ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪುಷ್ಪ ಪ್ರದರ್ಶನಕ್ಕೆ ಚಾಲನೆ ದೊರೆತ ವೇಳೆಯಲ್ಲೇ ವರಾಹ ಉದ್ಯಾನವನದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟನೆಯಾಗಿದೆ.  
(4 / 12)

ಮಾಗಿ ಉತ್ಸವದ ನಿಮಿತ್ತ 25 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಹೂಕುಂಡಗಳು, ಬೋನ್ಸಾಯ್ ಗಿಡಗಳು, 35 ಜಾತಿಯ ಹೂವಿನ ಗಿಡಗಳ ಪ್ರದರ್ಶನ ಇರಲಿದೆ. 6 ಲಕ್ಷಕ್ಕೂ ಹೆಚ್ಚು ಹೂಗಳಿಂದ ವಿವಿಧ ಆಕೃತಿಗಳನ್ನು ‌‌ನಿರ್ಮಿಸಲಾಗಿದೆ. 
(5 / 12)

ನವದೆಹಲಿಯ ಅಕ್ಷರಧಾಮ‌ ದೇಗುಲ, ಮುಮ್ಮಡಿ ಕೃಷ್ಣರಾಜ ಒಡೆಯರ್, ನಂಜನಗೂಡಿನ ನಂಜುಂಡೇಶ್ವರಸ್ವಾಮಿ ದೇಗುಲ, ನಂದಿ, ಹದ್ದು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಗಂಡಭೇರುಂಡ, ಕಾರ್ಗಿಲ್ ಯುದ್ದ ಸ್ಮಾರಕ, ನವಿಲು, ಸಂವಿಧಾನ ಪೀಠಿಕೆ ಸೇರಿದಂತೆ ವಿವಿಧ ಬಗೆಯ ಆಕೃತಿಗಳು ಹೂವುಗಳಿಂದ  ನಿರ್ಮಾಣ ಮಾಡಲಾಗಿದೆ.  
(6 / 12)

ಡಿಸೆಂಬರ್ 21ರಿಂದ 25ರ ವರೆಗೆ ಸಂಗೀತ ಕಾರ್ಯಕ್ರಮ ಏರ್ಪಾಡು ಮಾಡಲಾಗಿದ್ದು, ಪ್ರವಾಸಿಗರಿಗೆ ಇಷ್ಟವಾಗಬಲ್ಲ ಕಾರ್ಯಕ್ರಮಗಳು ಇರಲಿವೆ. ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಸಂಗೀತ ಕಾರ್ಯಕ್ರಮ ಈ ಬಾರಿಯ ಮಾಗಿ ಉತ್ಸವದ ಆಕರ್ಷಣೆಯಾಗಿದೆ. 
(7 / 12)

ಡಿ. 21ರಂದು ಸಂಜೆ 5:30ಕ್ಕೆ ಸಿ ಆರ್ ರಾಘವೇಂದ್ರ ‌ರಾವ್ ಅವರಿಂದ ವಾದ್ಯ ಸಂಗೀತ, ರಾತ್ರಿ 7ಕ್ಕೆ ಎ ಆರ್ ಕಲಾ ಅವರಿಂದ ನಾಡಗೀತೆ, ಸಂಸ್ಥಾನ ಗೀತೆ ಗಾಯನ, 7:30ರಿಂದ ಮಧುಬಾಲಕೃಷ್ಣನ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. 
(8 / 12)

ಡಿ. 22ರಂದು ಸಂಜೆ 6ಕ್ಕೆ ರಘು ಮತ್ತು ತಂಡದಿಂದ ಗೀತ ಗಾಯನ, 6:45ಕ್ಕೆ ಭಾರತೀಯ ವಿದ್ಯಾಭವನದ ವಿದ್ಯಾರ್ಥಿಗಳಿಂದ ನೃತ್ಯ ರೂಪಕ, 7:30 ರಿಂದ ವಿಜಯಪ್ರಕಾಶ್ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಡಿ. 23ರಂದು ಸಂಜೆ 6ಕ್ಕೆ ಎಂ ಡಿ ಆಯುಷ್ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ, 7ರಿಂದ ಆನೂರು ಅನಂತಕೃಷ್ಣಶರ್ಮ ಅವರಿಂದ ಲಯ-ಲಾವಣ್ಯ ಕಾರ್ಯಕ್ರಮ ಅನಾವರಣಗೊಳ್ಳಲಿದೆ.  
(9 / 12)

ಡಿ. 24ರಂದು ಸಂಜೆ 6ಕ್ಕೆ ಶಡಜ್ ಗೋಡ್ಕಿಂಡಿ, ಅಪೂರ್ವ ಕೃಷ್ಣ ಅವರಿಂದ ಕೊಳಲು- ವಯಲಿನ್ ಫ್ಯೂಷನ್ ಸಂಗೀತ, 7ಕ್ಕೆ ಹಿಂದೂಸ್ಥಾನಿ ಸಂಗೀತ- ಸಿದ್ದಾರ್ಥ ಬೆಲ್ಮಣ್ಣು, ಗಂಜೀಫ ರಘುಪತಿ ಭಟ್ ಅವರಿಂದ ದಾಸವಾಣಿ ಚಿತ್ರಣ, 8ಕ್ಕೆ ಚಂಪಕ ಅಕಾಡೆಮಿ ಅವರಿಂದ ನೃತ್ಯರೂಪಕ ಕಾರ್ಯಕ್ರಮ ಅನಾವರಣಗೊಳ್ಳಲಿದೆ. 
(10 / 12)

ಡಿ. 25ರಂದು ಸಂಜೆ 5:45ರಿಂದ ನಾಹರ್ ಗುರುದತ್ತ ಅವರಿಂದ ಶಾಸ್ತ್ರೀಯ ಸಂಗೀತ, ಕೇಶವಚಂದ್ರ ಅವರಿಂದ ದ್ವಂದ್ವ ವೇಣು ವಾದನ, ಗಾಯಕರಾದ ದರ್ಶನ್ ನಾರಾಯಣ್, ಐಶ್ವರ್ಯ ರಂಗರಾಜನ್, ಸುನಿಲ್ ಗುಜಗೊಂಡ್, ವಸುಶ್ರೀ ಹಳೆಮನೆ, ಜ್ಞಾನಗುರುರಾಜ್ ಅವರಿಂದ ಸಂಗೀತ ಯಾನ ಕಾರ್ಯಕ್ರಮ ಆಯೋಜನೆಯಾಗಿದೆ. 
(11 / 12)

ಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ವಯಸ್ಕರಿಗೆ 30 ರೂಪಾಯಿ, 10 ರಿಂದ 18 ವರ್ಷದೊಳಗಿನವರಿಗೆ 20 ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿದೆ. 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ದೊರೆಯಲಿದೆ. ಡಿಸೆಂಬರ್ 31ರಂದು ರಾತ್ರಿ‌ 11 ರಿಂದ 12ಗಂಟೆಯವರೆಗೆ ಪೊಲೀಸ್ ಬ್ಯಾಂಡ್ ವಾದ್ಯ ಸಂಗೀತದ ನಿನಾದ ಕಾರ್ಯಕ್ರ ಇರಲಿದೆ. ರಾತ್ರಿ 12 ರಿಂದ 12:15ರವರೆಗೆ ಹಸಿರು ಪಟಾಕಿಯ ಬಾಣ ಬಿರುಸುಗಳನ್ನು ಸಿಡಿಸುವ ಮೂಲಕ ನೂತನ ವರ್ಷಕ್ಕೆ ಸ್ವಾಗತ ಕೋರುವ ಕಾರ್ಯಕ್ರಮ ಆಕರ್ಷಣೆಯಾಗಲಿದೆ.  ವರದಿ: ಹರೀಶ್ ಮಾಂಬಾಡಿ
(12 / 12)

    ಹಂಚಿಕೊಳ್ಳಲು ಲೇಖನಗಳು