logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Devendra Fadnavis: ಅತೀ ಕಿರಿಯ ವಯಸ್ಸಿಗೆ ಮಹಾರಾಷ್ಟ್ರ ಸಿಎಂ ಆದ ದೇವೇಂದ್ರ ಫಡ್ನವೀಸ್‌ ಹಿನ್ನೆಲೆ ಏನು, ಹೈಕಮಾಂಡ್‌ ಮತ್ತೆ ಮಣೆ ಹಾಕಿದ್ದೇಕೆ

Devendra Fadnavis: ಅತೀ ಕಿರಿಯ ವಯಸ್ಸಿಗೆ ಮಹಾರಾಷ್ಟ್ರ ಸಿಎಂ ಆದ ದೇವೇಂದ್ರ ಫಡ್ನವೀಸ್‌ ಹಿನ್ನೆಲೆ ಏನು, ಹೈಕಮಾಂಡ್‌ ಮತ್ತೆ ಮಣೆ ಹಾಕಿದ್ದೇಕೆ

Dec 05, 2024 12:28 PM IST

Devendra Fadnavis as Maharashtra CM: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಅವರ ಕುರಿತಾದ ಚಿತ್ರನೋಟ ಇಲ್ಲಿದೆ.

  • Devendra Fadnavis as Maharashtra CM: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಅವರ ಕುರಿತಾದ ಚಿತ್ರನೋಟ ಇಲ್ಲಿದೆ.
ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ಬಿಜೆಪಿಯಲ್ಲಿ ದಶಕದಿಂದ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು, ಈಗಾಗಲೇ ಎರಡು ಬಾರಿ ಸಿಎಂ, ಪಕ್ಷದ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು ಫಡ್ನವೀಸ್‌.
(1 / 8)

ಫಡ್ನವೀಸ್‌ ಅವರು ಜನಿಸಿದ್ದು  1970ರ ಜುಲೈ 22 ರಂದು. ನಾಗಪುರ ಮೂಲದವರು. ತಂದೆ ಗಂಗಾಧರ ಫಡ್ನವೀಸ್‌ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿದ್ದವರು. ವಿಧಾನಪರಿಷತ್‌ ಸದಸ್ಯರೂ ಆಗಿದ್ದರು. ದೇವೇಂದ್ರ ಚಿಕ್ಕವರಿದ್ದಾಗಲೇ ತಂದೆ ತೀರಿಕೊಂಡರು.
(2 / 8)

ತಂದೆಯ ಹಿನ್ನೆಲೆ. ತಮ್ಮ ಆಸಕ್ತಿಯಿಂದಲೇ ಆರ್‌ಎಸ್‌ಎಸ್‌ ಜತೆ ನಂಟು, ಬಿಜೆಪಿಯೊಂದಿಗೆ ಸಂಬಂಧವನ್ನು ಬೆಳೆಸಿಕೊಂಡು ಬಂದವರ ದೇವೇಂದ್ರ ಫಡ್ನವೀಸ್‌. ಸಂಘಟನೆಯಲ್ಲಿಯೇ ಬೆಳೆಯುತ್ತಲೇ ಎರಡು ದಶಕದಲ್ಲಿ ಉನ್ನತ ಹಂತಕ್ಕೆ ಬೆಳೆದು ಮೂರನೇ ಬಾರಿಗೆ ಸಿಎಂ ಆಗುತ್ತಿದ್ದಾರೆ.
(3 / 8)

ತಮ್ಮ ಮೃದುಭಾಷೆ, ದ್ವೇಷವಿಲ್ಲದ ರಾಜಕಾರಣದಿಂದಲೇ ಎಲ್ಲಾ ಪಕ್ಷದವರೊಂದಿಗೂ ಒಡನಾಟ ಇಟ್ಟುಕೊಂಡು ಬಂದವರು. ದಶಕದ ಹಿಂದೆಯೇ ಸಿಎಂ ಆಗಿದ್ದವರು ಅವರು ಮಹಾರಾಷ್ಟ್ರದಲ್ಲಿ ಶರದ್‌ ಪವಾರ್‌ ನಂತರ ಸಿಎಂ ಆಗ ಅತ್ಯಂತ ಕಿರಿಯ ನಾಯಕ ಎನ್ನಿಸಿದ್ದಾರೆ.
(4 / 8)

ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರ ರಾಜಕಾರಣ ಉನ್ನತ ಹುದ್ದೆ ಏರುವ ಹಿಂದೆ ನರೇಂದ್ರ ಮೋದಿ ಅವರ ಒತ್ತಾಸೆಯೂ ಇದೆ. ದೇವೇಂದ್ರ ಅವರ ಕುಟುಂಬದ ಹಿನ್ನೆಲೆ, ಕೆಲಸ ಮಾಡುವ ಛಾತಿಯನ್ನು ಗುರುತಿಸಿ ಮೋದಿ ಅವರೇ ಗಟ್ಟಿ ಬೆಂಬಲ ನೀಡಿದ್ದರಿಂದ ಈ ಹಂತಕ್ಕೆ ಏರಿದ್ಧಾರೆ.
(5 / 8)

ಮೂರು ವರ್ಷದ ಹಿಂದೆ ಶಿವಸೇನೆ ವಿಭಜನೆಯಾದಾಗ ದೇವೇಂದ್ರ ಫಡ್ನವೀಸ್‌ ಉಪಮುಖ್ಯಮಂತ್ರಿಯಾದರೆ ಏಕನಾಥ ಶಿಂಧೆ ಸಿಎಂ ಆದರು. ಈಗ ಉಲ್ಟಾ. ದೇವೇಂದ್ರ ಸಿಎಂ ಆದರೆ ಏಕನಾಥ ಶಿಂಧೆ ಡಿಸಿಎಂ ಆಗುತ್ತಿದ್ದಾರೆ.
(6 / 8)

ದೇವೇಂದ್ರ ಫಡ್ನವೀಸ್‌ ಸಣ್ಣ ವಯಸ್ಸಿಗೆ ತಂದೆ ಕಳೆದುಕೊಂಡಿದ್ದರಿಂದ ತಾಯಿ ಸರಿತಾ ಫಡ್ನವೀಸ್‌ ಅವರ ಸುಪರ್ದಿಯಲ್ಲಿಬೆಳೆದಿದ್ದಾರೆ. ಈಗಲೂ ತಾಯಿ ಅವರ ಆಶೀರ್ವಾದ, ಹಾರೈಕೆ ಅವರಿಗಿದೆ.
(7 / 8)

ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ ಫಡ್ನವೀಸ್‌ ಬ್ಯಾಂಕ್‌ ಉದ್ಯೋಗಿ. ಪತಿಯ ರಾಜಕೀಯ ಹಾದಿಗೆ ಶಕ್ತಿ ತುಂಬಿದವರು ಅಮೃತಾ. ಮಗಳು ದಿವಿಜಾ ಇನ್ನೂ ವಿದ್ಯಾರ್ಥಿನಿ,
(8 / 8)

    ಹಂಚಿಕೊಳ್ಳಲು ಲೇಖನಗಳು