logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಚೆ ಚೀಟಿ ನೋಡಿ ಅ ಅರಸ, ಈ ಈಟಿ ಎಂದು ಓದಿ; ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಚೆ ಇಲಾಖೆಯ ಅಕ್ಷರ ಪ್ರೀತಿ

ಅಂಚೆ ಚೀಟಿ ನೋಡಿ ಅ ಅರಸ, ಈ ಈಟಿ ಎಂದು ಓದಿ; ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಚೆ ಇಲಾಖೆಯ ಅಕ್ಷರ ಪ್ರೀತಿ

Dec 22, 2024 10:12 AM IST

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಾಸಕ್ತರ ಕಣ್ಣಿಗೆ ಹಬ್ಬವೋ ಹಬ್ಬ. ಎಲ್ಲಿ ನೋಡಿದರೂ ಅಲ್ಲಿ ಕನ್ನಡ ಮಾತುಗಳು, ಕನ್ನಡ ಅಕ್ಷರಗಳ ಜಾತ್ರೆ. ಭಾರತೀಯ ಅಂಚೆ ಇಲಾಖೆಯೂ "ಅಂಚೆ ಚೀಟಿಗಳಿಂದ ಕನ್ನಡ ಅಕ್ಷರ ಮಾಲೆ" ಎಂಬ ಪರಿಕಲ್ಪನೆಯಡಿ ಕನ್ನಡ ಪ್ರೀತಿ ತೋರಿಸಿತ್ತು. ಜತೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಚೆ ಕವರ್‌ ಅನ್ನೂ ಬಿಡುಗಡೆ ಮಾಡಿತ್ತು.

  • ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಾಸಕ್ತರ ಕಣ್ಣಿಗೆ ಹಬ್ಬವೋ ಹಬ್ಬ. ಎಲ್ಲಿ ನೋಡಿದರೂ ಅಲ್ಲಿ ಕನ್ನಡ ಮಾತುಗಳು, ಕನ್ನಡ ಅಕ್ಷರಗಳ ಜಾತ್ರೆ. ಭಾರತೀಯ ಅಂಚೆ ಇಲಾಖೆಯೂ "ಅಂಚೆ ಚೀಟಿಗಳಿಂದ ಕನ್ನಡ ಅಕ್ಷರ ಮಾಲೆ" ಎಂಬ ಪರಿಕಲ್ಪನೆಯಡಿ ಕನ್ನಡ ಪ್ರೀತಿ ತೋರಿಸಿತ್ತು. ಜತೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಚೆ ಕವರ್‌ ಅನ್ನೂ ಬಿಡುಗಡೆ ಮಾಡಿತ್ತು.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಾಸಕ್ತರ ಕಣ್ಣಿಗೆ ಹಬ್ಬವೋ ಹಬ್ಬ. ಎಲ್ಲಿ ನೋಡಿದರೂ ಅಲ್ಲಿ ಕನ್ನಡ ಮಾತುಗಳು, ಕನ್ನಡ ಅಕ್ಷರಗಳ ಜಾತ್ರೆ. ಭಾರತೀಯ ಅಂಚೆ ಇಲಾಖೆಯೂ "ಅಂಚೆ ಚೀಟಿಗಳಿಂದ ಕನ್ನಡ ಅಕ್ಷರ ಮಾಲೆ" ಎಂಬ ಪರಿಕಲ್ಪನೆಯಡಿ ಕನ್ನಡ ಪ್ರೀತಿ ತೋರಿಸಿತ್ತು. ಜತೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಚೆ ಕವರ್‌ ಅನ್ನೂ ಬಿಡುಗಡೆ ಮಾಡಿತ್ತು. ಅಂಚೆ ಚೀಟಿಗಳಿಂದ ಕನ್ನಡ ಅಕ್ಷರ ಮಾಲೆ ಹೇಗೆ ಎಂಬ ಕುತೂಹಲ ನಿಮ್ಮಲ್ಲಿರಬಹುದು.  ಮುಂದಿನ ಫೋಟೋಗಳನ್ನು ಗಮನಿಸಿ.
(1 / 7)

ಇದು ಕನ್ನಡ ಅಂಚೆ ಚೀಟಿಗಳು ಅಲ್ಲ. ಆದರೆ, ಕನ್ನಡ ಅಕ್ಷರ ಮಾಲೆಗಳನ್ನು ಅಂಚೆ ಚೀಟಿಗಳಲ್ಲಿರುವ ಚಿತ್ರಗಳಿಗೆ ಹೋಲಿಕೆ ಮಾಡಿ ಜೋಡಿಸಲಾಗಿತ್ತು. ಅಂದರೆ, ಅ ಅಕ್ಷರಕ್ಕೆ ಅರಸನ ಚಿತ್ರವಿರುವ ಅಂಚೆ ಚೀಟಿ, ಆಲದ ಮರ, ಆನೆ, ಆಭರಣ ಇರುವ ಚಿತ್ರಗಳಿಗೆ ಆ ಅಕ್ಷರ ಮಾಲೆ ತೋರಿಸಲಾಯಿತು. ಈಟಿ ಚಿತ್ರಕ್ಕೆ ಈ ಅಕ್ಷರ, ಉಪಗ್ರಹ ಚಿತ್ರಕ್ಕೆ ಉ ಅಕ್ಷರ ನೀಡಲಾಗಿದೆ. 
(2 / 7)

ಋ ಅಕ್ಷರಕ್ಕೆ ಋಷಿ,ಎಮ್ಮೆ ಚಿತ್ರಕ್ಕೆ ಎ,ಒಲಿಂಪಿಕ್‌ ಚಿತ್ರಕ್ಕೆ ಒ ಅಕ್ಷರ, ಓದು ಚಿತ್ರಕ್ಕೆ ಓ ಅಕ್ಷರ ಹೀಗೆ ಅಕ್ಷರ ಮಾಲೆಗಳಿಗೆ ತಕ್ಕಂತೆ ಅಂಚೆ ಚೀಟಿಗಳ ಚಿತ್ರವಿತ್ತು. ಪುಸ್ತಕ ಮೇಳದಲ್ಲಿದ್ದ ಈ ಮಳಿಗೆ ಸಾಕಷ್ಟು ಜನರ ಗಮನ ಸೆಳೆಯಿತು. ವಿಶೇಷವಾಗಿ ಶಾಲಾ ಮಕ್ಕಳ ಈ ಅಂಚೆ ಚೀಟಿಗಳ ಚಿತ್ರ ನೋಡಿ ಸಂಭ್ರಮಿಸಿದರು.
(3 / 7)

ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಸಾಕಷ್ಟು ಪುಸ್ತಕದ ಅಂಗಡಿಗಳು ಇದ್ದವು. ಇದೇ ಸಮಯದಲ್ಲಿ ಅವುಗಳ ನಡುವೆ ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕನ್ನಡ ಪ್ರೀತಿಯೂ ಗಮನ ಸೆಳೆದಿದೆ. 
(4 / 7)

ಸಾಹಿತ್ಯ ಸಮ್ಮೇಳನದ ಮೊದಲ ದಿನ ಅಂಚೆ ಇಲಾಖೆಯು ಸಾಹಿತ್ಯ ಸಮ್ಮೇಳನದ ಅಂಚೆ ಕವರ್‌ ಬಿಡುಗಡೆ ಮಾಡಿತ್ತು. 20 ರೂಪಾಯಿ ಬೆಲೆಯ ಈ ಅಂಚೆ ಕವರ್‌ ಅನ್ನು ಸಾಹಿತ್ಯ ಸಮ್ಮೇಳನದ ಅಂಚೆ ಕಚೇರಿಯ ಮಳಿಗೆಯಲ್ಲಿ ಖರೀದಿಸಬಹುದು.
(5 / 7)

ಇದರೊಂದಿಗೆ ಅಂಚೆ ಇಲಾಖೆಯ ಕೆಲವು ಉತ್ಪನ್ನಗಳನ್ನೂ ಅಲ್ಲಿ ಖರೀದಿಸಲು ಅವಕಾಶವಿತ್ತು. ಅಲ್ಲಿ ಗಂಗಾಜಲವೂ ಇತ್ತು. ಇಂದು ಸಾಹಿತ್ಯ ಸಮ್ಮೇಳನಕ್ಕೆ ಭೇಟಿ ನೀಡುವವರು ಇವುಗಳನ್ನು ಗಮನಿಸಬಹುದು. 
(6 / 7)

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರವಾದ ಇಂದು ಕೊನೆಯ ದಿನವಾಗಿದ್ದು, ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದೆ. ಮಂಡ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮೈಸೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ಮೂಲೆಮೂಲೆಗಳಿಂದ ಸಾಹಿತ್ಯಾಸಕ್ತರು ಆಗಮಿಸುತ್ತಿದ್ದಾರೆ.
(7 / 7)

    ಹಂಚಿಕೊಳ್ಳಲು ಲೇಖನಗಳು