logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಿಸಿಲಿನ ಝಳ, ಬೆಲ್ಲದ ಸವಿ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಜನವೋ ಜನ- ನುಡಿ ಜಾತ್ರೆಯ ಚಿತ್ರಪಟಗಳು

ಬಿಸಿಲಿನ ಝಳ, ಬೆಲ್ಲದ ಸವಿ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಜನವೋ ಜನ- ನುಡಿ ಜಾತ್ರೆಯ ಚಿತ್ರಪಟಗಳು

Dec 22, 2024 09:07 AM IST

ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡನೇ ದಿನ ಜನಸಾಗರವೇ ಹರಿದು ಬಂದಿತ್ತು. ಬಿಸಿಲಿನ ತಾಪದ ನಡುವೆಯೂ ಸಾಹಿತ್ಯ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಪುಸ್ತಕ ಮಳಿಗೆಗಳು, ವಾಣಿಜ್ಯ ಮಳಿಗೆಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು ಗಮನ ಸೆಳೆದವು. ಎರಡನೇ ದಿನ ಕಂಡ ದೃಶ್ಯ ಚಿತ್ರಣ ಇಲ್ಲಿದೆ.

  • ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡನೇ ದಿನ ಜನಸಾಗರವೇ ಹರಿದು ಬಂದಿತ್ತು. ಬಿಸಿಲಿನ ತಾಪದ ನಡುವೆಯೂ ಸಾಹಿತ್ಯ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಪುಸ್ತಕ ಮಳಿಗೆಗಳು, ವಾಣಿಜ್ಯ ಮಳಿಗೆಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು ಗಮನ ಸೆಳೆದವು. ಎರಡನೇ ದಿನ ಕಂಡ ದೃಶ್ಯ ಚಿತ್ರಣ ಇಲ್ಲಿದೆ.
ಸಕ್ಕರೆ ನಾಡಿನಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು (ಡಿಸೆಂಬರ್ 22) ಕೊನೆಯ ದಿನವಾಗಿದ್ದು, ಎರಡನೇ ದಿನ ಅಂದರೆ ನಿನ್ನೆ (ಡಿಸೆಂಬರ್ 21) ಸಾಹಿತ್ಯ ಹಬ್ಬದಲ್ಲಿ ಜನಸಾಗರವೇ ತುಂಬಿತ್ತು. ಸಾಹಿತ್ಯ ಸಮ್ಮೇಳನ ಅಂಗಳದ ಇಂಚಿಂಚಿನಲ್ಲೂ ಮಂಡ್ಯ ಸಂಸ್ಕೃತಿ, ಕನ್ನಡ ನಾಡಿನ ಸೊಬಗನ್ನು ಕಾಣಬಹುದಿತ್ತು. ಗೋಷ್ಠಿ ನಡೆಯುತ್ತಿದ್ದ ವೇದಿಕೆಗಳ ಮುಂದಷ್ಟೇ ಅಲ್ಲದೇ ಪುಸ್ತಕ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ಆಹಾರ ಮಳಿಗೆಗಳ ಮುಂದೆ ಜನ ಜಂಗುಳಿ ಕಾಣಬಹುದಿತ್ತು. ಸಾಹಿತ್ಯಾಸ್ತಕರ ಹಬ್ಬವಾಗಿರುವ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ದೃಶ್ಯವೈಭವ ಕಣ್ತುಂಬಿಕೊಳ್ಳಿ. 
(1 / 11)

ಸಾಹಿತ್ಯ ಸಮ್ಮೇಳನದ ಅಂಗಳಕ್ಕೆ ಕಾಲಿಡುವ ಮುನ್ನವೇ ಕನ್ನಡದ ಬಾವುಟಗಳು, ಸ್ವಾಗತ ಗೋಪುರ ನಮ್ಮನ್ನು ಸ್ವಾಗತಿಸುತ್ತದೆ. ದಾರಿಯುದ್ದಕ್ಕೂ ಜನರು, ಅದರಲ್ಲೂ ಶಾಲಾ ಮಕ್ಕಳು ಉತ್ಸಾಹದಿಂದ ಸಮ್ಮೇಳನದ ತಾಣಕ್ಕೆ ಸಾಗುತ್ತಿರುವುದು ಕಂಡುಬಂತು. ಮಕ್ಕಳು, ಮಹಿಳೆಯರು, ಹಿರಿಯರೆನ್ನದೇ ಎಲ್ಲಾ ವಯಸ್ಸಿನವರೂ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡರು. ಸಾಹಿತ್ಯಪ್ರೇಮಿಗಳಂತೂ ವಯಸ್ಸಿನ ಹಂಗಿಲ್ಲದೇ ಪುಸ್ತಕ ಮಳಿಗೆಗಳ ಮುಂದೆ ಸುತ್ತಾಡಿ, ಪುಸ್ತಕ ಖರೀದಿ ಮಾಡುತ್ತಿರುವ ದೃಶ್ಯವು ಸಾಮಾನ್ಯವಾಗಿತ್ತು. 
(2 / 11)

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ತೊಟ್ಟಿ ಮನೆ ಸೆಂಟರ್ ಆಫ್ ಅರ್ಟ್ಯಾಕ್ಷನ್ ಆಗಿತ್ತು. ಕೈ ಹಂಚಿನ ಮನೆ ಎಂದೂ ಇದನ್ನು ಕರೆಯಲಾಗುತ್ತದೆ. ಬಂದವರೆಲ್ಲಾ ಈ ಮನೆಯೊಳಗೆ ಹೋಗಿ ಹಳ್ಳಿಯ ಸಂಸ್ಕೃತಿ, ಸಂಪ್ರದಾಯದ ಸೊಡಗನ್ನು ಕಣ್ತುಂಬಿಕೊಂಡರು. ಆ ಮನೆಯೊಳಗೆ ನೇಗಿಲು ನೊಗದಿಂದ ಕೋಳಿ ಗೂಡಿನವರೆಗೆ ಒಂದು ಹಳ್ಳಿ ಮನೆ ಎಂದರೆ ಏನೆಲ್ಲಾ ಇರುತ್ತಿತ್ತು ಎಂಬುದನ್ನು ತೋರಿಸಲಾಗಿದೆ.
(3 / 11)

ತೊಟ್ಟಿ ಮನೆಯ ಹೊರಗೆ ಹಳ್ಳಿಕಾರ್ ಎತ್ತನ್ನು ಕಟ್ಟಿಹಾಕಲಾಗಿತ್ತು. ಜನರೆಲ್ಲಾ ಹಳ್ಳಿಕಾರ್ ಎತ್ತಿನ ಮುಂದೆ ಫೋಟೊ ತೆಗೆದುಕೊಂಡು ಸಂಭ್ರಮಿಸಿದರು. ಮಂಡ್ಯದ ಯಾವ ಭಾಗದಲ್ಲಿ ಏನೆಲ್ಲಾ ಬೆಳೆಯುತ್ತಾರೆ ಎಂಬುದರ ಚಿತ್ರಣವನ್ನು ಮೂಡಿಸಿದ್ದು, ಅದು ಕೂಡ ನೆರೆದವರ ಗಮನ ಸೆಳೆಯಿತು. 
(4 / 11)

ಮಂಡ್ಯ ಎಂದರೆ ಕಬ್ಬು, ಬೆಲ್ಲಕ್ಕೆ ಸಖತ್ ಫೇಮಸ್‌. ಆ ಕಾರಣಕ್ಕೆ ಮಂಡ್ಯವನ್ನು ಸಕ್ಕರೆನಾಡು ಎಂದು ಕರೆಯುತ್ತಾರೆ. ಮಂಡ್ಯದಲ್ಲಿ ತಯಾರಾಗುವ ವಿವಿಧ ರೀತಿಯ ಬೆಲ್ಲಗಳನ್ನು ಸುಂದರವಾಗಿ ಜೋಡಿಸಿ, ಮಂಡ್ಯಬೆಲ್ಲ ಎಂದು ಬೆಲ್ಲದಲ್ಲೇ ಬರೆದು ಜೋಡಿಸಿದ್ದ ರೀತಿ ಬಹಳ ಚೆನ್ನಾಗಿತ್ತು. ಇದು ಕೂಡ ಮಂಡ್ಯ ಸಾಹಿತ್ಯ ಸಮ್ಮೇಳನದ ಹೈಲೈಟ್ ಎನ್ನಬಹುದು. ಇಷ್ಟು ಮಾತ್ರವಲ್ಲದೆ ಅಲ್ಲೇ ಬಿಸಿಬಿಸಿ ಬೆಲ್ಲ ತಯಾರಿಸಿ ಸಾಹಿತ್ಯಸಕ್ತರಿಗೆ ನೀಡಲಾಗುತ್ತಿತ್ತು
(5 / 11)

ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿ ಪುಸ್ತಕ ಮಳಿಗೆಗಳ ಮುಂದೆಯೂ ಜನಸಾಗರ ತುಂಬಿರುವುದನ್ನು ಕಾಣಬಹುದು. ಆದರೆ ಪುಸ್ತಕ ಮಳಿಗೆಯವರು ಮಾತ್ರ ನೋಡಿದವರು ಜಾಸ್ತಿ, ಖರೀದಿ ಮಾಡುವವರು ಕಡಿಮೆ ಎಂಬ ಅಳಲು ತೋಡಿಕೊಳ್ಳುತ್ತಿದ್ದರು. 
(6 / 11)

ಸಾಹಿತ್ಯ ಸಮ್ಮೇಳನಕ್ಕೆ ಬಂದವರಿಗೆಲ್ಲಾ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಊಟ ಬಡಿಸುವ ಸ್ಥಳದಲ್ಲಿ ನೂಕು ನುಗ್ಗಲು ಸಹಜವಾಗಿತ್ತು. ಅಕ್ಕಿರೊಟ್ಟಿ, ಅವರೆಕಾಳು ಸಾರು, ಲಾಡು, ಮಜ್ಜಿಗೆ ಊಟದ ಘಮಕ್ಕೆ ಸಮ್ಮೇಳನಕ್ಕೆ ಬಂದವರು ಮನ ಸೋತಿದ್ದರು. 
(7 / 11)

ಸಮ್ಮೇಳನ ವೇದಿಕೆಯ ಮುಂದೆಯೂ ಜನ ಕಿಕ್ಕಿರಿದು ತುಂಬಿದ್ದರು. ಸಾಹಿತ್ಯಾಸ್ತಕರ ಜೊತೆಗೆ ಮಕ್ಕಳು ಕೂಡ ಗೋಷ್ಠಿಗಳನ್ನ ಆಸಕ್ತಿಯಿಂದ ನೋಡುತ್ತಿರುವ, ಕೇಳುತ್ತಿರುವ ದೃಶ್ಯಗಳು ಕಂಡು ಬಂದಿತ್ತು. ವಿವಿಧ ಕಡೆಗಳಿಂದ ಬಂದಿದ್ದ ಸಾಹಿತ್ಯಾಸಕ್ತರು ಸಾಹಿತ್ಯ ಹಬ್ಬದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು. ಬಿಸಿಲಿನ ತಾಪದ ನಡುವೆಯು ಪ್ರತಿ ಸ್ಟಾಲ್‌ಗಳಿಗೂ ಭೇಟಿ ನೀಡಿ ಪುಸ್ತಕ ಖರೀದಿಯಲ್ಲಿ ತೊಡಗಿರುವ ದೃಶ್ಯಗಳನ್ನು ಕಾಣಬಹುದಾಗಿತ್ತು. 
(8 / 11)

ಸಾಹಿತ್ಯ ಸಂಭ್ರಮದ ಪ್ರಧಾನ ವೇದಿಕೆಯ ಮುಂಭಾಗ ಮಂಡ್ಯ, ಮೈಸೂರು ಕಲಾವೈಭವಗಳ ಪ್ರತಿಕೃತಿಗಳು, ಕನ್ನಡಾಂಬೆಯ ಪ್ರತಿಕೃತಿ, ಕನ್ನಡ ತೇರುಗಳನ್ನು ಇರಿಸಲಾಗಿದ್ದು, ನೆರೆದಿದ್ದ ಜನರು, ಮಕ್ಕಳು ಅದರ ಮುಂದೆ ಫೋಟೊ ತೆಗೆಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿರುವ ದೃಶ್ಯವೂ ಕಂಡುಬಂದಿತು. 
(9 / 11)

ಈ ನಡುವೆ ಆಹಾರ ಮೇಳದಲ್ಲೂ ಬಗೆ ಬಗೆಯ ಖಾದ್ಯಗಳು ಜನರ ಗಮನ ಸೆಳೆದವು. ತಟ್ಟೆಯಗಲ ಮುಂಬೈ ಹಪ್ಪಳ, ಬಣ್ಣ ಬಣ್ಣದ ಹಣ್ಣಿನ ಜ್ಯೂಸ್‌ಗಳು, ಮಂಡ್ಯದ ಬೆಲ್ಲ, ಬೊಂಡಾ ಬಜ್ಜಿ ಸ್ಟಾಲ್‌ಗಳ ಮುಂದೆ ಜನ ತುಂಬಿರುವುದು ಕಾಣಬಹುದಿತ್ತು. 
(10 / 11)

ಎರಡನೇ ದಿನ ‘ಸದನದಲ್ಲಿ ರಾಜಕೀಯ, ರಾಜಕೀಯದಲ್ಲಿ ಸದನ‘, ‘ನೆಲ–ಜಲ ಸಾಕ್ಷರತೆ ಅವಲೋಕನ‘ ‘ಕರ್ನಾಟಕ ಪ್ರಕೃತಿ ವಿಕೋಪದ ಆತಂಕಗಳು‘ ‘ರಂಗಭೂಮಿ ಚಲನಚಿತ್ರ ಕಿರುತೆರೆ ಗೋಷ್ಟಿಗಳು‘ ಮುಂತಾದ ವಿಚಾರಗಳ ಮೇಲೆ ನಡೆದ ವಿಚಾರಗೋಷ್ಠಿಗಳು ಗಮನ ಸೆಳೆದವು. ಶನಿವಾರ ಸಂಜೆ  ಅರ್ಜುನ್ ಜನ್ಯ ಸಾರಥ್ಯದಲ್ಲಿ ನಡೆದ  ಸ್ವರಯಾನ ಕಾರ್ಯಕ್ರಮವು ಯುವ ಮನಸ್ಸುಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಸುಳ್ಳಲ್ಲ. 
(11 / 11)

    ಹಂಚಿಕೊಳ್ಳಲು ಲೇಖನಗಳು