logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಿ ಪ್ರತಿಭಟಿಸಿದ ಸಂಘಟನೆಗಳು, ಪೊಲೀಸರ ವಶಕ್ಕೆ ಮಾಂಸಾಹಾರದ ಡಬ್ಬಗಳು

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಿ ಪ್ರತಿಭಟಿಸಿದ ಸಂಘಟನೆಗಳು, ಪೊಲೀಸರ ವಶಕ್ಕೆ ಮಾಂಸಾಹಾರದ ಡಬ್ಬಗಳು

Dec 22, 2024 04:22 PM IST

ಮಂಡ್ಯ ಕನ್ನಡ  ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ, ಮೊಟ್ಟೆ ವಿತರಿಸುವ ಮೂಲಕ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಗಳು ಆಹಾರ ಸಂಸ್ಕೃತಿ ವಿರುದ್ದ ನಡೆಗೆ ಆಕ್ರೋಶ ಹೊರ ಹಾಕಿದರು. ಅವರ ಪ್ರತಿಭಟನೆಯ ರೂಪ ಹೀಗಿತ್ತು.

  • ಮಂಡ್ಯ ಕನ್ನಡ  ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ, ಮೊಟ್ಟೆ ವಿತರಿಸುವ ಮೂಲಕ ಪ್ರಗತಿಪರ ಸಂಘಟನೆಗಳ ಪ್ರತಿಭಟನೆಗಳು ಆಹಾರ ಸಂಸ್ಕೃತಿ ವಿರುದ್ದ ನಡೆಗೆ ಆಕ್ರೋಶ ಹೊರ ಹಾಕಿದರು. ಅವರ ಪ್ರತಿಭಟನೆಯ ರೂಪ ಹೀಗಿತ್ತು.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಿಸಬೇಕು ಎನ್ನುವ ಬೇಡಿಕೆಯೊಂದಿಗೆ ಪ್ರಗತಿಪರ ಸಂಘಟನೆಗಳು ವಿಶಿಷ್ಟವಾಗಿ ಪ್ರತಿಭಟಿಸಿದರು.
(1 / 7)

ಬಾಕ್ಸ್‌ಗಳಲ್ಲಿ ಮುದ್ದೆ, ಮಾಂಸಾಹಾರ, ಮೊಟ್ಟೆಗಳನ್ನು ತಂದು ಸಮ್ಮೇಳನ ನಡೆದ ಸ್ಥಳದಲ್ಲಿ ವಿತರಣೆ ಮಾಡಿದರು.ಹಲವರು ಮಾಂಸಾಹಾರ ಪಡೆದರು.
(2 / 7)

ಮಂಡ್ಯ ಸಾಹಿತ್ಯ ಸಮ್ಮೇಳನ ಸಮಿತಿಯಿಂದ ಮಾತ್ರ ಮೊಟ್ಟೆ ನೀಡುವುದಾಗಿ ಹೇಳಿದ್ದರೂ ಭಾನುವಾರ ರಾತ್ರಿ ಊಟದ ಜತೆಗೆ ವಿತರಿಸುವ ಸಾಧ್ಯತೆಯಿದೆ. ಇದರ ನಡುವೆ ಸಂಘಟನೆಗಳು ನಮ್ಮ ಆಹಾರ ನಮ್ಮ ಹಕ್ಕು ಎಂದು ಪ್ರತಿಭಟಿಸಿದವು
(3 / 7)

ಎರಡು ವಾರದಿಂದಲೂ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡುವಂತೆ ಒತ್ತಾಯಿಸುತ್ತಲೇ ಇದ್ದರೂ ಸಮಿತಿ ಸಮ್ಮತಿ ನೀಡಿರಲಿಲ್ಲ. ಇದರಿಂದ ಹೋರಾಟಗಾರರು ಕೋಳಿ ಸಂಗ್ರಹಿಸಿ ಬಾಡೂಟ ವಿತರಿಸುವ ನಿರ್ಧಾರ ಮಾಡಿದ್ದರು.
(4 / 7)

ಸಮ್ಮೇಳನಕ್ಕೆ ಬಂದಿದ್ದ ಹಲವು ಪ್ರತಿನಿಧಿಗಳು ಬಾಡೂಟವನ್ನು ಹಾಕಿಸಿಕೊಂಡು ಸವಿದಿದ್ದು ಕಂಡು ಬಂದಿತು.
(5 / 7)

ಕೆಲವರು ತಾ ಮುಂದೆ ನಾ ಮುಂದು ಎಂದು ಮಾಂಸಾಹಾರವನ್ನು ಹಾಕಿಸಿಕೊಂಡು ಸವಿದರು. ಆದರೆ ಪೂರ್ತಿ ವಿತರಣೆ ಮಾಡುವ ಮುನ್ನವೇ ಆಹಾರದ ಡಬ್ಬಗಳನ್ನು ಪೊಲೀಸರು ವಶಕ್ಕೆ ಪಡೆದರು.
(6 / 7)

ಸಾಹಿತ್ಯ ಸಮ್ಮೇಳನ ಸಮಿತಿ ಆಯೋಜಿಸಿರುವ ಊಟದ ಅಂಗಳದಲ್ಲಿ ಇಂದು ಗೋಧಿ ಹುಗ್ಗಿ, ಗೀರೈಸ್‌, ಬಾದೂಷ , ಅನ್ನ ಹಾಗೂ ಸಾಂಬಾರ್‌ ಅನ್ನು ನೀಡಲಾಯಿತು.
(7 / 7)

    ಹಂಚಿಕೊಳ್ಳಲು ಲೇಖನಗಳು