logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಂಡ ಕೃಷಿ ಬದುಕು; ಬಂಡೂರು ಕುರಿ, ಮನೆ ಮುಂದಲ ಬಾವಿಯ ಭಿನ್ನ ನೋಟ, ತೊಟ್ಟಿ ಮನೆಯ ಪ್ರದರ್ಶನ

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅನಾವರಣಗೊಂಡ ಕೃಷಿ ಬದುಕು; ಬಂಡೂರು ಕುರಿ, ಮನೆ ಮುಂದಲ ಬಾವಿಯ ಭಿನ್ನ ನೋಟ, ತೊಟ್ಟಿ ಮನೆಯ ಪ್ರದರ್ಶನ

Dec 22, 2024 07:30 AM IST

Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಬದುಕನ್ನು ಅನಾವರಣಗೊಳಿಸುವ ನೋಟ ವಸ್ತು ಪ್ರದರ್ಶನದಲ್ಲಿದೆ. ಅದರ ಚಿತ್ರ ನೋಟ ಇಲ್ಲಿದೆ.

ಮನೆ ಎಂದರೆ ಹಿಂದೆಲ್ಲಾ ಬಾವಿಗಳು ಕಾಯಂ. ಮನೆಯ ಮುಂದೆ ಇಲ್ಲವೇ ಹಿಂದೆ ಬಾವಿ ಕಟ್ಟಿಸಿಕೊಳ್ಳುತ್ತಿದ್ದರು. ಆ ಬಾವಿಗಳಿಗೆ ನಿತ್ಯದ ನೀರೆಗೆ ಆಸರೆ. ನೀರು ಸೇದುವುದು ಒಂದು ಬದುಕಿನ ಭಾಗವೇ ಆಗಿತ್ತು. ಅದನ್ನು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮರ್ಥವಾಗಿ ಅನಾವರಣಗೊಳಿಸಲಾಗಿದೆ.
(1 / 7)

ಹಿಂದೆಲ್ಲಾ ತೊಟ್ಟಿ ಮನೆಗಳೇ ಊರಿನ ವಿಶೇಷ ಎನ್ನಿಸುತ್ತಿದ್ದವು. ಈಗ ಇಂತಹ ಮನೆಗಳು ಅಪರೂಪ. ಆಸಕ್ತಿ ಇದ್ದವರು ತೊಟ್ಟಿ ಮನೆ ಕಟ್ಟಿಸುತ್ತಾರೆ. ಆದರೆ ಆ ಸಂಸ್ಕೃತಿಯನ್ನು ಅನಾವರಣಗೊಳಿಸುವ ಕೆಲಸವನ್ನು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಮಾಡಲಾಗಿದೆ.
(2 / 7)

ಮಂಡ್ಯ ಎಂದರೆ ಕೃಷಿ ಬದುಕು. ಅಲ್ಲಿ ಮನೆ ಮುಂದೆ ಎತ್ತುಗಳು, ಹುಲ್ಲು, ಧವಸ ಧಾನ್ಯಗಳು. ಮಂಡ್ಯದ ಕೃಷಿ ಬದುಕಿನ ಸಮರ್ಥ ಅನಾವರಣ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಡಲಾಗಿದೆ.
(3 / 7)

ಕೃಷಿಗೆ ಬಳಸುತ್ತಿದ್ದ ವಸ್ತುಗಳಿವೆ. ಕೃಷಿಯೂ ಈಗ ಆಧುನಿಕ ತಂತ್ರಜ್ಞಾನದ ಭಾಗವೇ ಆಗಿದೆ. ಆದರೂ ಹಿಂದೆ ಬಳಸುತ್ತಿದ್ದ ಆ ವಸ್ತುಗಳು ಸಿಗುವುದು ಅಪರೂಪವೇ. ಅವುಗಳನ್ನು ಸಮ್ಮೇಳನದ ವಸ್ತು ಪ್ರದರ್ಶನದಲ್ಲಿ ಇಡಲಾಗಿದೆ.
(4 / 7)

ಹಿಂದೆಲ್ಲಾ ಮನೆಯಲ್ಲಿ ಬಳಸುತ್ತಿದ್ದ ಉಪಕರಣಗಳು ಆಧುನಿಕ ಭರಾಟೆಯಲ್ಲಿ ಕಾಣೆಯಾಗಿವೆ. ಈಗ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಆಗ ಬಳಸುತ್ತಿದ್ದ ಒಲೆ, ಸೊಡ್ಲು, ಮಣೆ ಸಹಿತ ಹಲವು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
(5 / 7)

ಮಂಡ್ಯ ಜಿಲ್ಲೆಯಲ್ಲಿ ವಿವಿಧ ತಳಿಯ ಮೇಕೆಗಳನ್ನೂ ಬೆಳೆಯಲಾಗುತ್ತದೆ. ಅವುಗಳನ್ನೂ ಇಲ್ಲಿನ ವಸ್ತು ಪ್ರದರ್ಶನದಲ್ಲಿ ಇಡಲಾಗಿದೆ.
(6 / 7)

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ಸಿಗುವ ಬಂಡೂರು ಕುರಿ ತಳಿಗಳು ಮಾಂಸಕ್ಕೆ ಬಲು ಪ್ರಸಿದ್ದಿ. ಈ ತಳಿಗಳು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರದರ್ಶನದ ಅಂಗಳಕ್ಕೆ ಬಂದು ಗಮನ ಸೆಳೆದಿವೆ.
(7 / 7)

    ಹಂಚಿಕೊಳ್ಳಲು ಲೇಖನಗಳು