logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೋಲ್ಕತ ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣ; ಕರಾವಳಿ ಕರ್ನಾಟಕದಲ್ಲೂ ಒಪಿಡಿ ಬಂದ್ ಮಾಡಿ ವೈದ್ಯರ ಮುಷ್ಕರ, ರೋಗಿಗಳಿಗೆ ತಟ್ಟಿದ ಬಿಸಿ-Photos

ಕೋಲ್ಕತ ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣ; ಕರಾವಳಿ ಕರ್ನಾಟಕದಲ್ಲೂ ಒಪಿಡಿ ಬಂದ್ ಮಾಡಿ ವೈದ್ಯರ ಮುಷ್ಕರ, ರೋಗಿಗಳಿಗೆ ತಟ್ಟಿದ ಬಿಸಿ-Photos

Aug 17, 2024 06:39 PM IST

ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವೈದ್ಯರ ಮುಷ್ಕರ ಶನಿವಾರ ನಡೆಯಿತು. ಹೊರರೋಗಿಗಳ ಘಟಕವನ್ನು ಬಂದ್ ಮಾಡಿ ಮುಷ್ಕರವನ್ನು ನಡೆಸಲಾಯಿತು. ಜಿಲ್ಲಾ ಕೇಂದ್ರಗಳಲ್ಲಿ ಸಭೆ ಸೇರಿದ ವೈದ್ಯರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು. (ಚಿತ್ರ ವರದಿ - ಹರೀಶ್ ಮಾಂಬಾಡಿ, ಮಂಗಳೂರು) 

ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ವೈದ್ಯರು, ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆಯ ಒಂದು ನೋಟ. ವೈದ್ಯರ ಮುಷ್ಕರದ ಕಾರಣ ವಿವಿಧ ಆಸ್ಪತ್ರೆಗಳಲ್ಲಿ ಒಪಿಡಿ ಕೆಲಸ ಮಾಡಿಲ್ಲ. ಕ್ಲಿನಿಕ್‌ಗಳೂ ಬಂದ್ ಆಗಿದ್ದವು. ಇದರಿಂದ ಹೊರ ರೋಗಿಗಳು ಕೊಂಚ ತೊಂದರೆ ಅನುಭವಿಸಿದರು.
(1 / 9)

ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ವೈದ್ಯರು, ವೈದ್ಯ ವಿದ್ಯಾರ್ಥಿಗಳು ಇಂದು (ಆಗಸ್ಟ್ 17) ಪ್ರತಿಭಟನೆ ನಡೆಸಿದರು.
(2 / 9)

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವೈದ್ಯರು, ವೈದ್ಯ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವೈದ್ಯರೊಬ್ಬರು ಫಲಕ ಹಿಡಿದಿರುವುದು.
(3 / 9)

ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಪ್ರತಿಭಟನೆಯ ಕುರಿತು ಮಾಹಿತಿ ಇದ್ದ ಕಾರಣ ಒಪಿಡಿ ಸೇವೆಗಳಿರುವ ಜಾಗಗಳಲ್ಲಿ ಜನರು ಹೆಚ್ಚಾಗಿ ಕಾಣಿಸಲಿಲ್ಲ.
(4 / 9)

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಮನವಿಯನ್ನು ವಿಟ್ಲದ ನಾಡಕಚೇರಿಗೆ ನೀಡಲಾಯಿತು.
(5 / 9)

ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರಿಗೆ ಉಡುಪಿ ಜಿಲ್ಲಾ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
(6 / 9)

ಉಡುಪಿ ಜಿಲ್ಲೆಯ ಆಸ್ಪತ್ರೆಯೊಂದರ ಮುಂಭಾಗ ಜನಸಂಖ್ಯೆಯೂ ವಿರಳವಾಗಿತ್ತು.
(7 / 9)
ಉಡುಪಿ ಜಿಲ್ಲೆಯ ಆಸ್ಪತ್ರೆಯೊಂದರ ಮುಂಭಾಗ ಜನಸಂಖ್ಯೆಯೂ ವಿರಳವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಆಗಿರುವುದು
(8 / 9)

ಮಂಗಳೂರಲ್ಲಿ ಆಯುಷ್ ವೈದ್ಯರು ಪ್ರತಿಭಟನೆ ನಡೆಸಿದರು
(9 / 9)
ಮಂಗಳೂರಲ್ಲಿ ಆಯುಷ್ ವೈದ್ಯರು ಪ್ರತಿಭಟನೆ ನಡೆಸಿದರು

    ಹಂಚಿಕೊಳ್ಳಲು ಲೇಖನಗಳು