logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mi Vs Kkr: ಚೊಚ್ಚಲ ಶತಕ ಸಿಡಿಸಿ 15 ವರ್ಷಗಳ ದಾಖಲೆ ಸರಿಗಟ್ಟಿದ ವೆಂಕಟೇಶ್​ ಅಯ್ಯರ್​; ನೂತನ ರೆಕಾರ್ಡ್​ ಸೃಷ್ಟಿಸಿದ ರೋಹಿತ್​​

MI vs KKR: ಚೊಚ್ಚಲ ಶತಕ ಸಿಡಿಸಿ 15 ವರ್ಷಗಳ ದಾಖಲೆ ಸರಿಗಟ್ಟಿದ ವೆಂಕಟೇಶ್​ ಅಯ್ಯರ್​; ನೂತನ ರೆಕಾರ್ಡ್​ ಸೃಷ್ಟಿಸಿದ ರೋಹಿತ್​​

Apr 16, 2023 11:30 PM IST

IPL 2023, Match 22: ಕೆಕೆಆರ್​​ ವಿರುದ್ಧ ಮುಂಬೈ ಇಂಡಿಯನ್ಸ್​​ ಭರ್ಜರಿ ಗೆಲುವು ಸಾಧಿಸಿತು. ಐದು ವಿಕೆಟ್​ಗಳಿಂದ ಗೆದ್ದ ಮುಂಬೈ ಪಲ್ಟಾನ್ಸ್​, ಸತತ 2ನೇ ಜಯ ಸಾಧಿಸಿತು. ಈ ಪಂದ್ಯದಲ್ಲಿ ದಾಖಲಾದ ಪ್ರಮುಖ ದಾಖಲೆಗಳನ್ನು ಈ ಮುಂದೆ ನೋಡೋಣ.

IPL 2023, Match 22: ಕೆಕೆಆರ್​​ ವಿರುದ್ಧ ಮುಂಬೈ ಇಂಡಿಯನ್ಸ್​​ ಭರ್ಜರಿ ಗೆಲುವು ಸಾಧಿಸಿತು. ಐದು ವಿಕೆಟ್​ಗಳಿಂದ ಗೆದ್ದ ಮುಂಬೈ ಪಲ್ಟಾನ್ಸ್​, ಸತತ 2ನೇ ಜಯ ಸಾಧಿಸಿತು. ಈ ಪಂದ್ಯದಲ್ಲಿ ದಾಖಲಾದ ಪ್ರಮುಖ ದಾಖಲೆಗಳನ್ನು ಈ ಮುಂದೆ ನೋಡೋಣ.
ದಿಗ್ಗಜ ಸಚಿನ್​ ತೆಂಡೂಲ್ಕರ್​​ ಪುತ್ರ ಅರ್ಜುನ್​ ತೆಂಡೂಲ್ಕರ್​​ ಮುಂಬೈ ಇಂಡಿಯನ್ಸ್​ ತಂಡಕ್ಕೆ ಪದಾರ್ಪಣೆ ಮಾಡಿದರು. ಕ್ಯಾಪ್ಟನ್​ ರೋಹಿತ್​ ಶರ್ಮಾ ಐಪಿಎಲ್​ ಡೆಬ್ಯೂ ಕ್ಯಾಪ್​ ನೀಡಿದರು.
(1 / 6)
ದಿಗ್ಗಜ ಸಚಿನ್​ ತೆಂಡೂಲ್ಕರ್​​ ಪುತ್ರ ಅರ್ಜುನ್​ ತೆಂಡೂಲ್ಕರ್​​ ಮುಂಬೈ ಇಂಡಿಯನ್ಸ್​ ತಂಡಕ್ಕೆ ಪದಾರ್ಪಣೆ ಮಾಡಿದರು. ಕ್ಯಾಪ್ಟನ್​ ರೋಹಿತ್​ ಶರ್ಮಾ ಐಪಿಎಲ್​ ಡೆಬ್ಯೂ ಕ್ಯಾಪ್​ ನೀಡಿದರು.(IPL/Twitter)
ರೋಹಿತ್​ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್​ ಯಾದವ್​ ನಾಯಕನಾಗಿ ತಂಡವನ್ನು ಮುನ್ನಡೆಸಿದರು. ಬ್ಯಾಟಿಂಗ್​​ನಲ್ಲೂ 43 ರನ್​ ಗಳಿಸಿ ಗಮನ ಸೆಳೆದರು.
(2 / 6)
ರೋಹಿತ್​ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್​ ಯಾದವ್​ ನಾಯಕನಾಗಿ ತಂಡವನ್ನು ಮುನ್ನಡೆಸಿದರು. ಬ್ಯಾಟಿಂಗ್​​ನಲ್ಲೂ 43 ರನ್​ ಗಳಿಸಿ ಗಮನ ಸೆಳೆದರು.(AP)
ಕೆಕೆಆರ್ ತಂಡದ ನಾಯಕ ನಿತೀಶ್​ ರಾಣಾ, ಬೌಲರ್​​ ಹೃತೀಕ್​ ಶೋಕಿನ್​ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.
(3 / 6)
ಕೆಕೆಆರ್ ತಂಡದ ನಾಯಕ ನಿತೀಶ್​ ರಾಣಾ, ಬೌಲರ್​​ ಹೃತೀಕ್​ ಶೋಕಿನ್​ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.(PTI)
ವೆಂಕಟೇಶ್​ ಅಯ್ಯರ್​​​ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿದರು. ಆ ಮೂಲಕ ಕೆಕೆಆರ್​ ತಂಡದ ಪರ ಶತಕ ಸಿಡಿಸಿದ 2ನೇ ಆಟಗಾರ ಎನಿಸಿದ್ದಾರೆ. 15 ವರ್ಷಗಳ ಬಳಿಕ ಈ ಸಾಧನೆ ಮಾಡಿದ್ದಾರೆ.
(4 / 6)
ವೆಂಕಟೇಶ್​ ಅಯ್ಯರ್​​​ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿದರು. ಆ ಮೂಲಕ ಕೆಕೆಆರ್​ ತಂಡದ ಪರ ಶತಕ ಸಿಡಿಸಿದ 2ನೇ ಆಟಗಾರ ಎನಿಸಿದ್ದಾರೆ. 15 ವರ್ಷಗಳ ಬಳಿಕ ಈ ಸಾಧನೆ ಮಾಡಿದ್ದಾರೆ.(Twitter)
ಕೆಕೆಆರ್ ತಂಡದ ಪರ 2008ರಲ್ಲಿ ಬ್ರೆಂಡನ್​ ಮೆಕಲಮ್ ಚೊಚ್ಚಲ ಶತಕ ಸಿಡಿಸಿದ್ದರು. ಆ ಮೂಲಕ ಕೋಲ್ಕತ್ತಾ ತಂಡದ ಪರ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿದ್ದರು.
(5 / 6)
ಕೆಕೆಆರ್ ತಂಡದ ಪರ 2008ರಲ್ಲಿ ಬ್ರೆಂಡನ್​ ಮೆಕಲಮ್ ಚೊಚ್ಚಲ ಶತಕ ಸಿಡಿಸಿದ್ದರು. ಆ ಮೂಲಕ ಕೋಲ್ಕತ್ತಾ ತಂಡದ ಪರ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿದ್ದರು.(Twitter)
ರೋಹಿತ್​ ಶರ್ಮಾ ಕೂಡ ಈ ಪಂದ್ಯದಲ್ಲಿ ಹೊಸ ದಾಖಲೆ ಬರೆದರು. ಐಪಿಎಲ್​​ನಲ್ಲಿ ತಂಡವೊಂದರ ಪರ ಹೆಚ್ಚು ರನ್​​ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಈ ಪಂದ್ಯದಲ್ಲಿ 20 ರನ್​ ಗಳಿಸಿದ ರೋಹಿತ್​, ಕೋಲ್ಕತಾ ಎದುರು ಹೆಚ್ಚು ರನ್​ ಗಳಿಸಿದ ಮೊದಲ ಆಟಗಾರ ಎನಿಸಿದರು. ಸಿಎಸ್​ಕೆ ವಿರುದ್ಧ ಶಿಖರ್ ಧವನ್​ 1029 ರನ್​, ಕೆಕೆಆರ್​ ಎದುರು ಡೇವಿಡ್​​ ವಾರ್ನರ್​​ 1018 ರನ್​, ಸಿಎಸ್​ಕೆ ವಿರುದ್ಧ ವಿರಾಟ್​ ಕೊಹ್ಲಿ 979 ರನ್​​ ಗಳಿಸಿದ್ದಾರೆ.
(6 / 6)
ರೋಹಿತ್​ ಶರ್ಮಾ ಕೂಡ ಈ ಪಂದ್ಯದಲ್ಲಿ ಹೊಸ ದಾಖಲೆ ಬರೆದರು. ಐಪಿಎಲ್​​ನಲ್ಲಿ ತಂಡವೊಂದರ ಪರ ಹೆಚ್ಚು ರನ್​​ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಈ ಪಂದ್ಯದಲ್ಲಿ 20 ರನ್​ ಗಳಿಸಿದ ರೋಹಿತ್​, ಕೋಲ್ಕತಾ ಎದುರು ಹೆಚ್ಚು ರನ್​ ಗಳಿಸಿದ ಮೊದಲ ಆಟಗಾರ ಎನಿಸಿದರು. ಸಿಎಸ್​ಕೆ ವಿರುದ್ಧ ಶಿಖರ್ ಧವನ್​ 1029 ರನ್​, ಕೆಕೆಆರ್​ ಎದುರು ಡೇವಿಡ್​​ ವಾರ್ನರ್​​ 1018 ರನ್​, ಸಿಎಸ್​ಕೆ ವಿರುದ್ಧ ವಿರಾಟ್​ ಕೊಹ್ಲಿ 979 ರನ್​​ ಗಳಿಸಿದ್ದಾರೆ.(Twitter)

    ಹಂಚಿಕೊಳ್ಳಲು ಲೇಖನಗಳು