logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂದ್ಯಶ್ರೇಷ್ಠ ಪ್ರದರ್ಶನದೊಂದಿಗೆ ಆರ್​​ಸಿಬಿ ಪರ ವಿಶೇಷ ದಾಖಲೆ ಬರೆದ ಎಲ್ಲಿಸ್ ಪೆರ್ರಿ; ಈ ಸಾಧನೆ ಮಾಡಿದ ಬೆಂಗಳೂರು ಮೊದಲ ಆಟಗಾರ್ತಿ

ಪಂದ್ಯಶ್ರೇಷ್ಠ ಪ್ರದರ್ಶನದೊಂದಿಗೆ ಆರ್​​ಸಿಬಿ ಪರ ವಿಶೇಷ ದಾಖಲೆ ಬರೆದ ಎಲ್ಲಿಸ್ ಪೆರ್ರಿ; ಈ ಸಾಧನೆ ಮಾಡಿದ ಬೆಂಗಳೂರು ಮೊದಲ ಆಟಗಾರ್ತಿ

Mar 16, 2024 07:30 AM IST

Ellyse Perry record: ವುಮೆನ್ಸ್ ಪ್ರೀಮಿಯರ್​ ಲೀಗ್​ನ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆ ಬರೆದಿದ್ದಾರೆ.

Ellyse Perry record: ವುಮೆನ್ಸ್ ಪ್ರೀಮಿಯರ್​ ಲೀಗ್​ನ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆ ಬರೆದಿದ್ದಾರೆ.
ವುಮೆನ್ಸ್ ಪ್ರೀಮಿಯರ್​ ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಲ್​ರೌಂಡ್ ಪ್ರದರ್ಶನ ನೀಡಿದ ಆರ್​ಸಿಬಿ ತಂಡದ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
(1 / 6)
ವುಮೆನ್ಸ್ ಪ್ರೀಮಿಯರ್​ ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಲ್​ರೌಂಡ್ ಪ್ರದರ್ಶನ ನೀಡಿದ ಆರ್​ಸಿಬಿ ತಂಡದ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.(PTI)
ಬ್ಯಾಟಿಂಗ್​​ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಪೆರ್ರಿ 50 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತಿ 66 ರನ್ ಗಳಿಸಿದ್ದರು. ಬೌಲಿಂಗ್​​​ನಲ್ಲೂ 1 ವಿಕೆಟ್ ಪಡೆದು ಮಿಂಚಿದರು.
(2 / 6)
ಬ್ಯಾಟಿಂಗ್​​ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಪೆರ್ರಿ 50 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತಿ 66 ರನ್ ಗಳಿಸಿದ್ದರು. ಬೌಲಿಂಗ್​​​ನಲ್ಲೂ 1 ವಿಕೆಟ್ ಪಡೆದು ಮಿಂಚಿದರು.(PTI)
ಪೆರ್ರಿ ಆಟದ ಮುಂದೆ ಮಂಡಿಯೂರಿದ ಮುಂಬೈ ಇಂಡಿಯನ್ಸ್ ಸತತ ಎರಡನೇ ಫೈನಲ್​ಗೇರುವ ಅವಕಾಶವನ್ನು ಕಳೆದುಕೊಂಡಿತು. ಎಲಿಮಿನೇಟರ್​ ಪಂದ್ಯದಲ್ಲಿ ಜಯಿಸಿದ ಆರ್​ಸಿಬಿ ಚೊಚ್ಚಲ ಫೈನಲ್ ಪ್ರವೇಶಿಸಿದೆ.
(3 / 6)
ಪೆರ್ರಿ ಆಟದ ಮುಂದೆ ಮಂಡಿಯೂರಿದ ಮುಂಬೈ ಇಂಡಿಯನ್ಸ್ ಸತತ ಎರಡನೇ ಫೈನಲ್​ಗೇರುವ ಅವಕಾಶವನ್ನು ಕಳೆದುಕೊಂಡಿತು. ಎಲಿಮಿನೇಟರ್​ ಪಂದ್ಯದಲ್ಲಿ ಜಯಿಸಿದ ಆರ್​ಸಿಬಿ ಚೊಚ್ಚಲ ಫೈನಲ್ ಪ್ರವೇಶಿಸಿದೆ.(PTI)
ಸದ್ಯ ಪೆರ್ರಿ ಬ್ಯಾಟಿಂಗ್​​​ನಲ್ಲಿ ಭರ್ಜರಿ ದಾಖಲೆಯೊಂದನ್ನು ಬರೆದಿದ್ದಾರೆ. ಡಬ್ಲ್ಯುಪಿಎಲ್​ನಲ್ಲಿ ಪೆರ್ರಿ 500+ ರನ್ ಕಲೆ ಹಾಕಿದ ಆರ್​ಸಿಬಿಯ ಮೊದಲ ಆಟಗಾರ್ತಿ ಎಂಬ ದಾಖಲೆಗೆ ಒಳಗಾಗಿದ್ದಾರೆ.
(4 / 6)
ಸದ್ಯ ಪೆರ್ರಿ ಬ್ಯಾಟಿಂಗ್​​​ನಲ್ಲಿ ಭರ್ಜರಿ ದಾಖಲೆಯೊಂದನ್ನು ಬರೆದಿದ್ದಾರೆ. ಡಬ್ಲ್ಯುಪಿಎಲ್​ನಲ್ಲಿ ಪೆರ್ರಿ 500+ ರನ್ ಕಲೆ ಹಾಕಿದ ಆರ್​ಸಿಬಿಯ ಮೊದಲ ಆಟಗಾರ್ತಿ ಎಂಬ ದಾಖಲೆಗೆ ಒಳಗಾಗಿದ್ದಾರೆ.(PTI)
ಡಬ್ಲ್ಯುಪಿಎಲ್​ನಲ್ಲಿ 500 ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಪೆರ್ರಿ ಮೂರನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್​​ಪ್ರೀತ್ ಕೌರ್ ಈ ಮೊದಲು ಡಬ್ಲ್ಯುಪಿಎಲ್​ನಲ್ಲಿ 500+ ರನ್ ಗಳಿಸಿದ್ದಾರೆ.
(5 / 6)
ಡಬ್ಲ್ಯುಪಿಎಲ್​ನಲ್ಲಿ 500 ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಪೆರ್ರಿ ಮೂರನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್​​ಪ್ರೀತ್ ಕೌರ್ ಈ ಮೊದಲು ಡಬ್ಲ್ಯುಪಿಎಲ್​ನಲ್ಲಿ 500+ ರನ್ ಗಳಿಸಿದ್ದಾರೆ.(PTI)
ಆರ್​ಸಿಬಿ ಒಟ್ಟಾರೆ 565 ರನ್ ಕಲೆ ಹಾಕಿದ ಪೆರ್ರಿ 2ನೇ ಆವೃತ್ತಿಯಲ್ಲಿ 312 ರನ್, ಮೊದಲ ಆವೃತ್ತಿಯಲ್ಲಿ 253 ರನ್ ಕಲೆ ಹಾಕಿದ್ದಾರೆ. ಬೆಂಗಳೂರು ಪರ ಆವೃತ್ತಿಯೊಂದರಲ್ಲಿ 300+ ರನ್ ಗಳಿಸಿದ ಪ್ರಥಮ ಆಟಗಾರ್ತಿಯೂ ಹೌದು.
(6 / 6)
ಆರ್​ಸಿಬಿ ಒಟ್ಟಾರೆ 565 ರನ್ ಕಲೆ ಹಾಕಿದ ಪೆರ್ರಿ 2ನೇ ಆವೃತ್ತಿಯಲ್ಲಿ 312 ರನ್, ಮೊದಲ ಆವೃತ್ತಿಯಲ್ಲಿ 253 ರನ್ ಕಲೆ ಹಾಕಿದ್ದಾರೆ. ಬೆಂಗಳೂರು ಪರ ಆವೃತ್ತಿಯೊಂದರಲ್ಲಿ 300+ ರನ್ ಗಳಿಸಿದ ಪ್ರಥಮ ಆಟಗಾರ್ತಿಯೂ ಹೌದು.(PTI)

    ಹಂಚಿಕೊಳ್ಳಲು ಲೇಖನಗಳು