logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mint In Summer: ನೀವು ಪುದಿನಾ ಪ್ರಿಯರೇ? ಬೇಸಿಗೆಯಲ್ಲಿ ಪುದಿನಾದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Mint in Summer: ನೀವು ಪುದಿನಾ ಪ್ರಿಯರೇ? ಬೇಸಿಗೆಯಲ್ಲಿ ಪುದಿನಾದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Apr 11, 2023 05:17 PM IST

Mint in Summer: ಬೇಸಿಗೆಯಲ್ಲಿ ಪುದಿನಾ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದು ದೇಹ ಹಾಗೂ ಮನಸ್ಸಿಗೆ ಚೈತನ್ಯ ಸಿಗುವಂತೆ ಮಾಡುತ್ತದೆ. ಇಷ್ಟಲ್ಲದೆ ಇನ್ನೂ ಏನೇನು ಪ್ರಯೋಜನಗಳಿವೆ ನೋಡೋಣ.

  • Mint in Summer: ಬೇಸಿಗೆಯಲ್ಲಿ ಪುದಿನಾ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದು ದೇಹ ಹಾಗೂ ಮನಸ್ಸಿಗೆ ಚೈತನ್ಯ ಸಿಗುವಂತೆ ಮಾಡುತ್ತದೆ. ಇಷ್ಟಲ್ಲದೆ ಇನ್ನೂ ಏನೇನು ಪ್ರಯೋಜನಗಳಿವೆ ನೋಡೋಣ.
ಪುರಾತನ ಕಾಲದಿಂದಲೂ ಪುದಿನಾವನ್ನು ಅಡುಗೆಯಲ್ಲಿ ಬಳಸುತ್ತಿದ್ದರು. ಇದು ಖಾದ್ಯಗಳ ರುಚಿ ಹಾಗೂ ಪರಿಮಳವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇದರೊಂದಿಗೆ ಹಲವು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. 
(1 / 6)
ಪುರಾತನ ಕಾಲದಿಂದಲೂ ಪುದಿನಾವನ್ನು ಅಡುಗೆಯಲ್ಲಿ ಬಳಸುತ್ತಿದ್ದರು. ಇದು ಖಾದ್ಯಗಳ ರುಚಿ ಹಾಗೂ ಪರಿಮಳವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇದರೊಂದಿಗೆ ಹಲವು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. (Pixabay)
ಒತ್ತಡವನ್ನು ನಿವಾರಿಸುತ್ತದೆ: ಪುದಿನಾದಲ್ಲಿ ಮನಸ್ಸಿನ ಚೈತನ್ಯ ಹೆಚ್ಚಿಸುವ ಸುವಾಸನೆ ಇದೆ. ಇದು ಒತ್ತಡವನ್ನು ನಿವಾರಿಸುತ್ತದೆ. ಜೊತೆಗೆ ದೇಹ ಹಾಗೂ ಮನಸ್ಸು ರಿಫ್ರೆಶ್‌ ಆಗುವಂತೆ ಮಾಡುತ್ತದೆ. ಇದರಲ್ಲಿನ ಅಪೊಪ್ಟೋಜೆನಿಕ್ ಚಟುವಟಿಕೆಯು ರಕ್ತದ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ನೈಸರ್ಗಿಕವಾಗಿ ದೇಹದಲ್ಲಿ ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ. 
(2 / 6)
ಒತ್ತಡವನ್ನು ನಿವಾರಿಸುತ್ತದೆ: ಪುದಿನಾದಲ್ಲಿ ಮನಸ್ಸಿನ ಚೈತನ್ಯ ಹೆಚ್ಚಿಸುವ ಸುವಾಸನೆ ಇದೆ. ಇದು ಒತ್ತಡವನ್ನು ನಿವಾರಿಸುತ್ತದೆ. ಜೊತೆಗೆ ದೇಹ ಹಾಗೂ ಮನಸ್ಸು ರಿಫ್ರೆಶ್‌ ಆಗುವಂತೆ ಮಾಡುತ್ತದೆ. ಇದರಲ್ಲಿನ ಅಪೊಪ್ಟೋಜೆನಿಕ್ ಚಟುವಟಿಕೆಯು ರಕ್ತದ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ನೈಸರ್ಗಿಕವಾಗಿ ದೇಹದಲ್ಲಿ ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ. (Pixabay)
ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ: ಪುದಿನಾ ಎಲೆಗಳಲ್ಲಿ ರೋಸ್ಮರಿನಿಕ್ ಆಮ್ಲವಿದ್ದು, ಇವು ಉತ್ಕರ್ಷಣ ವಿರೋಧಿಯಾಗಿವೆ. ಇದು ಚರ್ಮದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಹಾಗೂ ತೇವಾಂಶ ನೀಡುವಲ್ಲಿ ಸಹಕರಿಸುತ್ತದೆ. ಇದು ಫ್ರಿ ರಾಡಿಕಲ್ಸ್‌ ವಿರುದ್ಧ ಹೋರಾಡಿ ಚರ್ಮಕ್ಕೆ ಹಾನಿಯುಂಟಾಗುವುದನ್ನು ತಡೆಯುತ್ತದೆ. ಚರ್ಮದ ಸುಕ್ಕನ್ನು ನಿವಾರಿಸುತ್ತದೆ. ಪುದೀನ ಎಲೆಯಲ್ಲಿರುವ ಸ್ಯಾಲಿಸಿಲಿಕ್ ಆಮ್ಲ ಮತ್ತು ವಿಟಮಿನ್ ಎ ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸುತ್ತದೆ.
(3 / 6)
ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ: ಪುದಿನಾ ಎಲೆಗಳಲ್ಲಿ ರೋಸ್ಮರಿನಿಕ್ ಆಮ್ಲವಿದ್ದು, ಇವು ಉತ್ಕರ್ಷಣ ವಿರೋಧಿಯಾಗಿವೆ. ಇದು ಚರ್ಮದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಹಾಗೂ ತೇವಾಂಶ ನೀಡುವಲ್ಲಿ ಸಹಕರಿಸುತ್ತದೆ. ಇದು ಫ್ರಿ ರಾಡಿಕಲ್ಸ್‌ ವಿರುದ್ಧ ಹೋರಾಡಿ ಚರ್ಮಕ್ಕೆ ಹಾನಿಯುಂಟಾಗುವುದನ್ನು ತಡೆಯುತ್ತದೆ. ಚರ್ಮದ ಸುಕ್ಕನ್ನು ನಿವಾರಿಸುತ್ತದೆ. ಪುದೀನ ಎಲೆಯಲ್ಲಿರುವ ಸ್ಯಾಲಿಸಿಲಿಕ್ ಆಮ್ಲ ಮತ್ತು ವಿಟಮಿನ್ ಎ ಚರ್ಮದಲ್ಲಿ ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸುತ್ತದೆ.(Pixabay)
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಪುದಿನಾವು ಪಿತ್ತರಸದ ಹರಿವನ್ನು ಹೆಚ್ಚಿಸಲು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾದಾಗ, ಚಯಾಪಚಯ ಪ್ರಮಾಣ ಹೆಚ್ಚುತ್ತದೆ. ಚಯಾಪಚಯವು ತೂಕನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
(4 / 6)
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಪುದಿನಾವು ಪಿತ್ತರಸದ ಹರಿವನ್ನು ಹೆಚ್ಚಿಸಲು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾದಾಗ, ಚಯಾಪಚಯ ಪ್ರಮಾಣ ಹೆಚ್ಚುತ್ತದೆ. ಚಯಾಪಚಯವು ತೂಕನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.(Pexels)
ಕೆಮ್ಮು-ಶೀತ ನಿವಾರಣೆ: ಪುದಿನಾದಲ್ಲಿ ಮೆಂಥಾಲ್‌ ಅಂಶವಿದೆ. ಇದು ಕೆಮ್ಮು ಹಾಗೂ ಶೀತ ನಿವಾರಣೆಗೆ ಸಹಾಯ ಮಾಡುತ್ತದೆ. 
(5 / 6)
ಕೆಮ್ಮು-ಶೀತ ನಿವಾರಣೆ: ಪುದಿನಾದಲ್ಲಿ ಮೆಂಥಾಲ್‌ ಅಂಶವಿದೆ. ಇದು ಕೆಮ್ಮು ಹಾಗೂ ಶೀತ ನಿವಾರಣೆಗೆ ಸಹಾಯ ಮಾಡುತ್ತದೆ. (Unsplash)
ರಕ್ತದೊತ್ತಡ ನಿಯಂತ್ರಣ: ಇದರಲ್ಲಿನ ಮೆಂಥಾಲ್‌ ಅಂಶವು ರಕ್ತದೊತ್ತಡವನ್ನು ನಿವಾರಿಸುತ್ತದೆ. ಅಧಿಕರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸುವುದು ಉತ್ತಮ. 
(6 / 6)
ರಕ್ತದೊತ್ತಡ ನಿಯಂತ್ರಣ: ಇದರಲ್ಲಿನ ಮೆಂಥಾಲ್‌ ಅಂಶವು ರಕ್ತದೊತ್ತಡವನ್ನು ನಿವಾರಿಸುತ್ತದೆ. ಅಧಿಕರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸುವುದು ಉತ್ತಮ. (Freepik)

    ಹಂಚಿಕೊಳ್ಳಲು ಲೇಖನಗಳು