logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಿಸ್‌ ಯೂನಿವರ್ಸ್‌ 2024 ಸ್ಪರ್ಧೆಗೆ ಭಾರತದಿಂದ ಆಯ್ಕೆಯಾದ ಗುಜರಾತ್‌ ಸುಂದರಿ ರಿಯಾ ಸಿಂಘಾ: ಈ ಬ್ಯೂಟಿಗೆ ಇನ್ನೂ 19 ಅಷ್ಟೇ

ಮಿಸ್‌ ಯೂನಿವರ್ಸ್‌ 2024 ಸ್ಪರ್ಧೆಗೆ ಭಾರತದಿಂದ ಆಯ್ಕೆಯಾದ ಗುಜರಾತ್‌ ಸುಂದರಿ ರಿಯಾ ಸಿಂಘಾ: ಈ ಬ್ಯೂಟಿಗೆ ಇನ್ನೂ 19 ಅಷ್ಟೇ

Sep 24, 2024 02:02 PM IST

ಪ್ರತಿ ವರ್ಷವೂ ಮಿಸ್‌ ಯೂನಿವರ್ಸ್‌ ಹಾಗೂ ಮಿಸ್‌ ವರ್ಲ್ಡ್‌ ಸ್ಪರ್ಧೆ ನಡೆಯುತ್ತದೆ. ಭಾರತದಿಂದ ಕೂಡಾ ಪ್ರತಿ ವರ್ಷ ಆಯ್ಕೆಯಾದ ಚೆಲುವೆಯರು ಅಂತಿಮ ಸ್ಪರ್ಧೆಗೆ ಭಾಗವಹಿಸುತ್ತಾರೆ. 

ಮಿಸ್‌ ಯೂನಿವರ್ಸ್‌ ಸ್ಪರ್ಧೆ ಇದೇ ವರ್ಷ ನಡೆಯುತ್ತಿತ್ತು. ಭಾರತದಿಂದ ಗುಜರಾತಿ ಹುಡುಗಿ  ರಿಯಾ ಸಿಂಘಾ ಆಯ್ಕೆಯಾಗಿದ್ದಾರೆ. ಭುವನ ಸುಂದರಿ ಸ್ಪರ್ಧೆಗೆ ರಿಯಾ, ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
(1 / 9)
ಮಿಸ್‌ ಯೂನಿವರ್ಸ್‌ ಸ್ಪರ್ಧೆ ಇದೇ ವರ್ಷ ನಡೆಯುತ್ತಿತ್ತು. ಭಾರತದಿಂದ ಗುಜರಾತಿ ಹುಡುಗಿ  ರಿಯಾ ಸಿಂಘಾ ಆಯ್ಕೆಯಾಗಿದ್ದಾರೆ. ಭುವನ ಸುಂದರಿ ಸ್ಪರ್ಧೆಗೆ ರಿಯಾ, ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.(PC: Rhea Singha Instagram)
ರಾಜಸ್ಥಾನದ ಜೈಪುರದಲ್ಲಿ ಭಾನುವಾರ ಸೆಪ್ಟೆಂಬರ್ 22 ನಡೆದ ಕಾರ್ಯಕ್ರಮದಲ್ಲಿ ರಿಯಾ, ಮಿಸ್‌ ಯೂನಿವರ್ಸ್‌ ಇಂಡಿಯಾ 2024 ಆಗಿ ಆಯ್ಕೆಯಾಗಿದ್ದಾರೆ. ಸ್ಪರ್ಧೆಗೆ ಇತರ ರಾಜ್ಯಗಳಿಂದ ಬಂದ ಚೆಲುವೆಯರನ್ನು ಹಿಂದಿಕ್ಕಿದ್ದಾರೆ.  
(2 / 9)

ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಊರ್ವಶಿ ರೌಟೇಲಾ   ರಿಯಾ ಸಿಂಘಾಗೆ ತಾಜ್‌ ಮಹಲ್‌ ಕಿರೀಟ ತೊಡಿಸಿದ್ದಾರೆ. 
(3 / 9)

ಇದೇ ವರ್ಷ ನವೆಂಬರ್‌ನಲ್ಲಿ ಮೆಕ್ಸಿಕೋದಲ್ಲಿ ಮಿಸ್‌ ಯೂನಿವರ್ಸ್‌ ಸ್ಪರ್ಧೆ ನಡೆಯುತ್ತಿದೆ. ಈ ಕಂಟೆಸ್ಟ್‌ಗೆ ಸ್ಪರ್ಧಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. 
(4 / 9)

ರಿಯಾ ಸಿಂಘಾಗೆ ಇನ್ನೂ 19 ವರ್ಷ ವಯಸ್ಸು. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಿಯಾ, ಗುಜರಾತ್‌ ಮೂಲದವರು.   
(5 / 9)

ಮಿಸ್‌ ಯೂನಿವರ್ಸ್‌ 2024 ಇಂಡಿಯಾ ಕಾರ್ಯಕ್ರಮದ ಫೋಟೋ, ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ರಿಯಾಗೆ ಎಲ್ಲರೂ ಕಂಗ್ರಾಜುಲೇಶನ್ಸ್‌ ಹೇಳಿದ್ದಾರೆ. ಭುವನ ಸುಂದರಿ ಪಟ್ಟ ಗೆದ್ದು ಬನ್ನಿ ಎಂದು ಹಾರೈಸುತ್ತಿದ್ದಾರೆ. 
(6 / 9)

ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್​ ಆಗಿ ಪ್ರಂಜಲ್ ಪ್ರಿಯಾ, ಎರಡನೇ ರನ್ನರ್‌ ಅಪ್‌ ಆಗಿ ಚವಿ ವರ್ಗ್​ , ಹಾಗೂ ಸುಷ್ಮಿತಾ ರಾಯ್  ಮೂರನೇ ರನ್ನರ್‌ ಅಪ್‌ ಆಗಿದ್ದಾರೆ. 
(7 / 9)

ರಿಯಾ, ತನ್ನ 16ನೇ ವಯಸ್ಸಿಗೆ ಮಾಡೆಲಿಂಗ್‌ ಲೋಕಕ್ಕೆ ಕಾಲಿಟ್ಟರು. ಮಿಸ್ ಟೀನ್ ಗುಜರಾತ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ರಿಯಾಗೆ ಈಗಾಗಲೇ ಜಾಹೀರಾತು, ಸಿನಿಮಾದಲ್ಲಿ ಆಫರ್‌ಗಳು ಬರುತ್ತಿವೆಯಂತೆ. 
(8 / 9)

ನವೆಂಬರ್‌ನಲ್ಲಿ ಮೆಕ್ಸಿಕೋದಲ್ಲಿ ನಡೆಯಲಿರುವ ಭುವನ ಸುಂದರಿ ಸ್ಪರ್ಧೆಯಲ್ಲೂ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
(9 / 9)

    ಹಂಚಿಕೊಳ್ಳಲು ಲೇಖನಗಳು