logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nanjangud Jatra 2024: ನಂಜನಗೂಡು ನಂಜುಂಡೇಶ್ವರನ ದೊಡ್ಡ ಜಾತ್ರೆಯ ಪಂಚ ಮಹಾರಥೋತ್ಸವ ನಾಳೆ Photos

Nanjangud Jatra 2024: ನಂಜನಗೂಡು ನಂಜುಂಡೇಶ್ವರನ ದೊಡ್ಡ ಜಾತ್ರೆಯ ಪಂಚ ಮಹಾರಥೋತ್ಸವ ನಾಳೆ photos

Mar 21, 2024 02:07 PM IST

ನಂಜನಗೂಡಿನ ಶ್ರೀಕಂಠೇಶ್ವರ ಪಂಚಮಹಾರಥೋತ್ಸವ ಶುಕ್ರವಾರ ನಡೆಯಲಿದೆ. ಇದಕ್ಕಾಗಿ ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡಿನಲ್ಲಿ ಸಿದ್ದತೆಗಳು ಪೂರ್ಣಗೊಂಡಿವೆ. ಚಿತ್ರ- ಮಾಹಿತಿ: ಪಿ.ರಂಗಸ್ವಾಮಿ ಮೈಸೂರು

  • ನಂಜನಗೂಡಿನ ಶ್ರೀಕಂಠೇಶ್ವರ ಪಂಚಮಹಾರಥೋತ್ಸವ ಶುಕ್ರವಾರ ನಡೆಯಲಿದೆ. ಇದಕ್ಕಾಗಿ ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡಿನಲ್ಲಿ ಸಿದ್ದತೆಗಳು ಪೂರ್ಣಗೊಂಡಿವೆ. 
  • ಚಿತ್ರ- ಮಾಹಿತಿ: ಪಿ.ರಂಗಸ್ವಾಮಿ ಮೈಸೂರು
 ಕರ್ನಾಟಕದ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯ ದೇವಾಲಯದಲ್ಲಿ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ (ಮಾರ್ಚ್ 22ರಂದು ಶುಕ್ರವಾರ) ಸಡಗರ, ಸಂಭ್ರಮ, ಶ್ರದ್ಧಾ ಭಕ್ತಿಗಳೊಂದಿಗೆ ಪಂಚಮಹಾರಥೋತ್ಸವ ಜರುಗಲಿದೆ. 
(1 / 7)

ಭಕ್ತರು ಲಕ್ಷ ಸಂಖ್ಯೆಯಲ್ಲಿ ನಂಜನಗೂಡಿಗೆ ಆಗಮಿಸಿ ಕಪಿಲಾ ನದಿಯಲ್ಲಿ ಸ್ನಾನ ಮಾಡುವುದರಿಂದ ದೇಗುಲ ಸಮೀಪದಲ್ಲಿಯೇ ಇರುವ ನದಿ ಸ್ನಾನಘಟ್ಟವನ್ನು ಸ್ವಚ್ಛಗೊಳಿಸಲಾಗುತ್ತಿದೆ.
(2 / 7)

ಶುಕ್ರವಾರ ಬೆಳಿಗ್ಗೆ ,6:30ರಿಂದ 6:50 ರೊಳಗಿನ ಶುಭ ಮೀನ ಲಗ್ನದಲ್ಲಿ ಈ ಬಾರಿಯ ಪಂಚಮಹಾರಥೋತ್ಸವ ಅದ್ದೂರಿಯಾಗಿ ನೆರವೇರಲಿದೆ. ದಕ್ಷಿಣಕಾಶಿ ನಂಜನಗೂಡು ಪಂಚ ಮಹಾರಥೋತ್ಸವ ನಡೆಯುವ ಏಕೈಕ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ರಥಗಳನ್ನು ಭಕ್ತರು ಹೊರಕ್ಕೆ ಎಳೆದರು.
(3 / 7)

ಅಂದಿನ ಆಳರಸರ ಕಾಲದಿಂದಲೂ ಅನೂಚಾನವಾಗಿ ಪಂಚಮಹಾರಥೋತ್ಸವ ನಡೆದುಕೊಂಡು ಬಂದಿದೆ. ಪಂಚಮಹಾರಥೋತ್ಸವದ ವೇಳೆ ಗಪಣತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಉತ್ಸವ ಮೂರ್ತಿಗಳನ್ನು ಹೊತ್ತು ಸಾಲು ಸಾಲಾಗಿ ರಥಗಳು ಸಾಗಲಿವೆ.
(4 / 7)

ಪಂಚ ಮಹಾರಥೋತ್ಸವ ವೀಕ್ಷಣೆಗಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಂಚಮಹಾರಥೋತ್ಸವ ಯಶಸ್ವಿಯಾಗಿ ನಡೆಸಲು ಸಜ್ಜಾಗಿದ್ದಾರೆ. ಕಪಿಲಾ ನದಿಯ ತೀರ ಮತ್ತು ಹಾಗೂ ರಥ ಸಂಚರಿಸುವ ಕಡೆ ಹೆಚ್ಚುವರಿ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ.  
(5 / 7)

ತಿ ವರ್ಷದಂತೆ ಈ ಬಾರಿಯೂ  ಭಕ್ತ ಸಾಗರ ನಂಜುಂಡೇಶ್ವರನ ದೊಡ್ಡ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ಭಾಗಿಯಾಗಲಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ವತಿಯಿಂದ ಕುಡಿಯುವ ನೀರು, ತಂಪು ಪಾನೀಯ, ತಾತ್ಕಾಲಿಕ ಶೌಚಾಲಯಗಳು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನಂಜುಂಡೇಶ್ವರನ ದೇವಾಲಯದ ಸುತ್ತಮುತ್ತ ಹಾಗೂ ನಂಜನಗೂಡು ಪಟ್ಟಣದ ರಥ ಬೀದಿಯಲ್ಲಿ ಸುಗಮವಾಗಿ ರಥ ಸಾಗಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 
(6 / 7)

ಪಂಚ ಮಹಾರಥೋತ್ಸವದ ಸಂದರ್ಭದಲ್ಲಿ ರಥ ಬೀದಿಯಲ್ಲಿ ಸಾಗುವ 108 ಅಡಿ ಎತ್ತರದ ಗೌತಮ ಪಂಚ ಮಹಾರಥೋತ್ಸವಕ್ಕೆ ದಕ್ಷಿಣಕಾಶಿ ನಂಜನಗೂಡು  ಮದುವಣಗಿತ್ತಿಯಂತೆ  ಸಿಂಗಾರಗೊಂಡಿದೆ.ಜೊತೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟೆಚರ ವಹಿಸಲಾಗಿದೆ. ಅಲ್ಲದೇ ರಥದ ದುರಸ್ತಿ ಹಾಗು ಸ್ವಚ್ಛತೆ ಸೇರಿದಂತೆ ದೇವಾಲಯದ ಸುತ್ತಮುತ್ತ ರಸ್ತೆ ದುರಸ್ತಿ ಕಾಮಗಾರಿ ಭರದಿಂದ ಸಾಗಿದೆ. ದೇವಾಲಯ ಹಾಗೂ ನಂಜನಗೂಡಿನ ಸೌಂದರ್ಯ ಹೆಚ್ಚಿಸಲು ಇಡೀ ನಂಜನಗೂಡು ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಇಡೀ ದಕ್ಷಿಣಕಾಶಿ ಕಂಗೊಳಿಸುತ್ತಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು