logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suttur Jatre 2024: ಊರಿಗೆ ಬಂದವರು ಸುತ್ತೂರಿಗೆ ಬರದೇ ಇರ್ತಾರ, ಜಾತ್ರೆಗೆ ಗಣ್ಯರ ದಂಡು, ಎರಡು ದಿನದಲ್ಲಿ ಬಂದವರು ಯಾರು

Suttur Jatre 2024: ಊರಿಗೆ ಬಂದವರು ಸುತ್ತೂರಿಗೆ ಬರದೇ ಇರ್ತಾರ, ಜಾತ್ರೆಗೆ ಗಣ್ಯರ ದಂಡು, ಎರಡು ದಿನದಲ್ಲಿ ಬಂದವರು ಯಾರು

Feb 08, 2024 07:00 AM IST

ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆ ಜನಜನಿತ. ಒಂದು ವಾರ ಕಾಲ ನಡೆಯುವ ಆದಿಜಗದ್ಗುರು ಶಿವರಾತ್ರೀಶ್ವರ ಜಯಂತಿಗೆ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶದಿಂದ ಗಣ್ಯರು ಬರುತ್ತಾರೆ. ಅದರಲ್ಲಿ ಎಲ್ಲಾ ಪಕ್ಷದ ನಾಯಕರು, ಸಚಿವರು, ಅಧಿಕಾರಿಗಳು, ಧರ್ಮಗುರುಗಳ ಸಹಿತ ಬಹುಪಾಲು ಆಹ್ವಾನಿತರು ತಪ್ಪಿಸಿಕೊಳ್ಳುವುದಿಲ್ಲ.ಎರಡೇ ದಿನದಲ್ಲಿ ಹೀಗೆ ಬಂದ ಗಣ್ಯರ ನೋಟ ಇಲ್ಲಿದೆ.

  • ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆ ಜನಜನಿತ. ಒಂದು ವಾರ ಕಾಲ ನಡೆಯುವ ಆದಿಜಗದ್ಗುರು ಶಿವರಾತ್ರೀಶ್ವರ ಜಯಂತಿಗೆ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶದಿಂದ ಗಣ್ಯರು ಬರುತ್ತಾರೆ. ಅದರಲ್ಲಿ ಎಲ್ಲಾ ಪಕ್ಷದ ನಾಯಕರು, ಸಚಿವರು, ಅಧಿಕಾರಿಗಳು, ಧರ್ಮಗುರುಗಳ ಸಹಿತ ಬಹುಪಾಲು ಆಹ್ವಾನಿತರು ತಪ್ಪಿಸಿಕೊಳ್ಳುವುದಿಲ್ಲ.ಎರಡೇ ದಿನದಲ್ಲಿ ಹೀಗೆ ಬಂದ ಗಣ್ಯರ ನೋಟ ಇಲ್ಲಿದೆ.
ಕರ್ನಾಟಕದ ಹಿರಿಯ ನೇತಾರ  ಹಾಗೂ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರು ಕೂಡ ಸುತ್ತೂರು ಮಠಕ್ಕೆ ತಪ್ಪದೇ ಬರುತ್ತಾರೆ. ಸುತ್ತೂರು ಜಾತ್ರೆಗೂ ಈ ಬಾರಿ ಬಂದರು. ಇಳಿವಯಸ್ಸಿನಲ್ಲೂ ಉತ್ಸಾಹದಿಂದಲೇ ಭಾಗಿಯಾಗಿ ಮಾತನಾಡಿದರು. ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಆಶಿರ್ವಾದವನ್ನೂ ಪಡೆದುಕೊಂಡರು.
(1 / 10)

ಸುತ್ತೂರು ಗ್ರಾಮ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ದೆಹಲಿಯಲ್ಲಿ ಪ್ರತಿಭಟನೆಗೆ ತೆರಳಿದ್ದರಿಂದ ಬೆಳಗಿನ ಸಾಮೂಹಿಕ ವಿವಾಹ ಚಟುವಟಿಕೆಯಲ್ಲಿ ಭಾಗಿಯಾಗದ ಸಿಎಂ ಸಿದ್ದರಾಮಯ್ಯ ದೆಹಲಿಯಿಂದಲೇ ವಿಶೇಷ ವಿಮಾನದಲ್ಲಿ ಸಂಪುಟದ ಹಲವರೊಂದಿಗೆ ಆಗಮಿಸಿ ಜಾತ್ರೆ ಚಟುವಟಿಕೆಯಲ್ಲಿ ಭಾಗಿಯಾದರು. ಸಿದ್ದರಾಮಯ್ಯ ಪ್ರತಿ ವರ್ಷವೂ ಜಾತ್ರೆಗೆ ಬಂದು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ.
(2 / 10)

ದೇವೇಗೌಡರ ಕುಟುಂಬ ಸುತ್ತೂರು ಜಾತ್ರೆಯ ಚಟುವಟಿಕೆಯನ್ನು ತಪ್ಪಿಸಿಕೊಳ್ಳುವುದಿಲ್ಲ. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕೂಡ ಜಾತ್ರೆಗೆ ಈ ಬಾರಿ ಬಂದು ಸ್ವಾಮೀಜಿ ಆಶಿರ್ವಾದ ಪಡೆದರು.
(3 / 10)

ಸುತ್ತೂರು ಸಮೀಪವೇ ಇರುವ ಹದಿನಾರು ಗ್ರಾಮದವರಾದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಈ ಹಿಂದೆ ಸುತ್ತೂರು ಒಳಗೊಂಡ ತಿ.ನರಸೀಪುರ ಶಾಸಕರು. ಈಗಲೂ ಮಠದೊಂದಿಗೆ ವಿಶೇಷ ನಂಟು ಇಟ್ಟುಕೊಂಡಿದ್ದಾರೆ. 
(4 / 10)

ಕಂದಾಯ ಸಚಿವ ಕೃಷ್ಣಬೈರೇಗೌಡ ಕೂಡ ಸುತ್ತೂರು ಜಾತ್ರೆಯ ದಿನ ಸುತ್ತೂರಿಗೆ ಬಂದಿದ್ದರು. ಹಲವಾರು ವಿಷಯಗಳನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು.
(5 / 10)

ಸುತ್ತೂರು ಜಾತ್ರೆಯಲ್ಲಿ ಆರೋಗ್ಯ ತಪಾಸಣೆ ಹಾಗೂ ಆರೋಗ್ಯಮೇಳವನ್ನು ಸಚಿವ ದಿನೇಶ ಗುಂಡೂರಾವ್‌ ಉದ್ಘಾಟಿಸಿ ನಂತರ ಸನ್ಮಾಣ ಸ್ವೀಕರಿಸಿದರು.
(6 / 10)

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಮಂಗಳವಾರ ಸುತ್ತೂರು ಜಾತ್ರೆಗೆ ಆಗಮಿಸಿದ್ದರು. ಅವರನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ಮಾನಿಸಿದರು.
(7 / 10)

ಮಂಡ್ಯ ಸಂಸದರೂ ಆಗಿರುವ ನಟಿ ಸುಮಲತಾ ಅಂಬರೀಷ್‌ ಅವರು ಬುಧವಾರ ಸುತ್ತೂರು ಜಾತ್ರೆಗೆ ಬಂದಿದ್ದರು. ಅಂಬರೀಷ್‌ ಅವರ ಕಾಲದಿಂದಲೂ ಸುತ್ತೂರು ಮಠದೊಂದಿಗೆ ಕುಟುಂಬದ ನಂಟು ಇದೆ. 
(8 / 10)

ಕಾರವಾರ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೂಪಾಲಿ ನಾಯ್ಕ ಸುತ್ತೂರು ಜಾತ್ರೆಯಲ್ಲಿ ಕೃಷಿ ಮೇಳ ಉದ್ಘಾಟಿಸಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು.
(9 / 10)

ನಟ ಹಾಗೂ ನಿರ್ದೇಶಕ ಮೈಸೂರಿನವರೇ ಆದ ಡಾರ್ಲಿಂಗ್‌ ಕೃಷ್ಣ ಬುಧವಾರ ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಚನ ಪಡೆದರು.
(10 / 10)

    ಹಂಚಿಕೊಳ್ಳಲು ಲೇಖನಗಳು