logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕ್ರಿಸ್‌ಮಸ್‌, ನ್ಯೂ ಇಯರ್‌ಗೆ ಟ್ರಿಪ್ ಪ್ಲಾನ್ ಮಾಡಿದ್ದೀರಾ; ಡಿಸೆಂಬರ್ ಅಂತ್ಯಕ್ಕೆ ಭೇಟಿ ನೀಡಲು ಬೆಸ್ಟ್ ಎನ್ನಿಸುವ ಭಾರತದ 10 ತಾಣಗಳಿವು

ಕ್ರಿಸ್‌ಮಸ್‌, ನ್ಯೂ ಇಯರ್‌ಗೆ ಟ್ರಿಪ್ ಪ್ಲಾನ್ ಮಾಡಿದ್ದೀರಾ; ಡಿಸೆಂಬರ್ ಅಂತ್ಯಕ್ಕೆ ಭೇಟಿ ನೀಡಲು ಬೆಸ್ಟ್ ಎನ್ನಿಸುವ ಭಾರತದ 10 ತಾಣಗಳಿವು

Dec 19, 2024 12:42 PM IST

2024ರ ಅಂತ್ಯದಲ್ಲಿ ನಾವಿದ್ದೇವೆ. 2025ಕ್ಕೆ ಕಾಲಿಡುವ ಮುನ್ನ ಕ್ರಿಸ್‌ಮಸ್‌, ವರ್ಷಾಂತ್ಯವನ್ನು ಸಂಭ್ರಮಿಸಬೇಕಿದೆ. ಸಾಮಾನ್ಯವಾಗಿ ಕ್ರಿಸ್‌ಮಸ್‌ ರಜೆಗಳು ಇರುವ ಕಾರಣ ಈ ಸಮಯದಲ್ಲಿ ಹಲವರು ಟ್ರಿಪ್ ಪ್ಲಾನ್ ಮಾಡ್ತಾರೆ. ಕ್ರಿಸ್‌ಮಸ್‌ ವರ್ಷಾಂತ್ಯದ ಸೊಬಗನ್ನು ಸವಿಯಲು ನೀವು ಫಾರಿನ್‌ಗೆ ಹೋಗಬೇಕು ಅಂತಿಲ್ಲ. ಭಾರತದಲ್ಲೇ ಇರುವ ಈ 10 ತಾಣಗಳಿಗೆ ಟ್ರಿಪ್ ಪ್ಲಾನ್ ಮಾಡಿ.

  • 2024ರ ಅಂತ್ಯದಲ್ಲಿ ನಾವಿದ್ದೇವೆ. 2025ಕ್ಕೆ ಕಾಲಿಡುವ ಮುನ್ನ ಕ್ರಿಸ್‌ಮಸ್‌, ವರ್ಷಾಂತ್ಯವನ್ನು ಸಂಭ್ರಮಿಸಬೇಕಿದೆ. ಸಾಮಾನ್ಯವಾಗಿ ಕ್ರಿಸ್‌ಮಸ್‌ ರಜೆಗಳು ಇರುವ ಕಾರಣ ಈ ಸಮಯದಲ್ಲಿ ಹಲವರು ಟ್ರಿಪ್ ಪ್ಲಾನ್ ಮಾಡ್ತಾರೆ. ಕ್ರಿಸ್‌ಮಸ್‌ ವರ್ಷಾಂತ್ಯದ ಸೊಬಗನ್ನು ಸವಿಯಲು ನೀವು ಫಾರಿನ್‌ಗೆ ಹೋಗಬೇಕು ಅಂತಿಲ್ಲ. ಭಾರತದಲ್ಲೇ ಇರುವ ಈ 10 ತಾಣಗಳಿಗೆ ಟ್ರಿಪ್ ಪ್ಲಾನ್ ಮಾಡಿ.
ಪ್ರಪಂಚದಾದ್ಯಂತ ಕ್ರಿಸ್‌ಮಸ್ ಸಂಭ್ರಮ ಜೋರಾಗಿದೆ. ವರ್ಷಾಂತ್ಯವೂ ಸಮೀಪದಲ್ಲೇ ಇದ್ದು ಈ ಸಮಯದಲ್ಲಿ ಬಹುತೇಕರು ಪ್ರವಾಸ ಪ್ಲಾನ್ ಮಾಡುತ್ತಾರೆ. ಇಯರ್‌ ಎಂಡ್‌ ಜೊತೆಗೆ ಕ್ರಿಸ್‌ಮಸ್ ಸೊಬಗನ್ನೂ ಸವಿಯಲು ನೀವು ವಿದೇಶದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು ಅಂತೇನಿಲ್ಲ. ಭಾರತದಲ್ಲೇ ಇರುವ ಈ 10 ತಾಣಗಳು ಕ್ರಿಸ್‌ಮಸ್‌ ಹಾಗೂ ವರ್ಷಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ್ದು. ನೀವು ಜೀವನದಲ್ಲಿ ಒಮ್ಮೆಯಾದರೂ ಈ ಜಾಗಗಳಲ್ಲಿ ಕ್ರಿಸ್‌ಮಸ್‌, ಇಯರ್‌ ಎಂಡ್ ಸಡಗರವನ್ನು ಕಣ್ತುಂಬಿಕೊಳ್ಳಬೇಕು. 
(1 / 12)

ಬೆಂಗಳೂರು: ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಜೊತೆ ವರ್ಷಾಂತ್ಯದ ಸಂಭ್ರಮದ ಬಲು ಜೋರು. ಇಲ್ಲಿನ ಬೀದಿ ಬೀದಿಗಳಲ್ಲೂ ಸಡಗರ ಕಾಣಿಸುತ್ತದೆ. ಬಣ್ಣ ಬಣ್ಣದ ದೀಪಗಳಿಂದ ಪ್ರಮುಖ ದೀಪಗಳನ್ನು ಅಲಂಕರಿಸಿರುತ್ತಾರೆ. ಬ್ರಿಗೇಡ್‌ ರೋಡ್‌, ಎಂಜಿ ರೋಡ್‌, ಇಂದಿರಾನಗರದಂತಹ ಪ್ರಮುಖ ತಾಣಗಳಲ್ಲಿ ವರ್ಷಾಂತ್ಯದ ಸಂಭ್ರಮವನ್ನು ನೋಡುವುದೇ ಹಬ್ಬ. ಇಲ್ಲಿನ ಮಾಲ್‌, ಪಬ್‌ಗಳಲ್ಲಿ ವರ್ಷಾಂತ್ಯ ಆಚರಣೆಗೆಂದೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಈ ವರ್ಷಾಂತ್ಯಕ್ಕೆ ನೀವು ಬೆಂಗಳೂರು ಟ್ರಿಪ್ ಪ್ಲಾನ್ ಮಾಡಬಹುದು. 
(2 / 12)
ಬೆಂಗಳೂರು: ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಜೊತೆ ವರ್ಷಾಂತ್ಯದ ಸಂಭ್ರಮದ ಬಲು ಜೋರು. ಇಲ್ಲಿನ ಬೀದಿ ಬೀದಿಗಳಲ್ಲೂ ಸಡಗರ ಕಾಣಿಸುತ್ತದೆ. ಬಣ್ಣ ಬಣ್ಣದ ದೀಪಗಳಿಂದ ಪ್ರಮುಖ ದೀಪಗಳನ್ನು ಅಲಂಕರಿಸಿರುತ್ತಾರೆ. ಬ್ರಿಗೇಡ್‌ ರೋಡ್‌, ಎಂಜಿ ರೋಡ್‌, ಇಂದಿರಾನಗರದಂತಹ ಪ್ರಮುಖ ತಾಣಗಳಲ್ಲಿ ವರ್ಷಾಂತ್ಯದ ಸಂಭ್ರಮವನ್ನು ನೋಡುವುದೇ ಹಬ್ಬ. ಇಲ್ಲಿನ ಮಾಲ್‌, ಪಬ್‌ಗಳಲ್ಲಿ ವರ್ಷಾಂತ್ಯ ಆಚರಣೆಗೆಂದೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಈ ವರ್ಷಾಂತ್ಯಕ್ಕೆ ನೀವು ಬೆಂಗಳೂರು ಟ್ರಿಪ್ ಪ್ಲಾನ್ ಮಾಡಬಹುದು. (PC: HT File Photo)
ಕೇರಳ: ದೇವರ ನಾಡು ಕೇರಳದಲ್ಲೂ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮ ಬಲು ಜೋರು. ಇಲ್ಲಿನ ಹಿನ್ನೀರಿನ ಪ್ರದೇಶಗಳಲ್ಲಿ ಬೋಟ್ ರೈಡ್ ಮಾಡುತ್ತಾ, ಇಲ್ಲಿನ ಪ್ರವಾಸಿ ತಾಣಗಳಲ್ಲಿ ಸಮಯ ಕಳೆಯುತ್ತಾ ನೀವು ಪ್ರವಾಸವನ್ನು ಎಂಜಾಯ್ ಮಾಡಬಹುದು. ಕೇರಳದಲ್ಲಿ ಕ್ರಿಸ್‌ಮಸ್ ಸಂಭ್ರಮವೂ ಬಲು ಜೋರು. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಅಧಿಕವಿರುವ ಕೇರಳದಲ್ಲಿ ನೀವು ಕ್ರಿಸ್‌ಮಸ್ ಸಂಭ್ರಮದ ಜೊತೆಗೆ ಇಯರ್ ಎಂಡ್‌ ಪಾರ್ಟಿಯನ್ನು ಖುಷಿಯಿಂದ ಸಂಭ್ರಮಿಸಬಹುದು. 
(3 / 12)
ಕೇರಳ: ದೇವರ ನಾಡು ಕೇರಳದಲ್ಲೂ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮ ಬಲು ಜೋರು. ಇಲ್ಲಿನ ಹಿನ್ನೀರಿನ ಪ್ರದೇಶಗಳಲ್ಲಿ ಬೋಟ್ ರೈಡ್ ಮಾಡುತ್ತಾ, ಇಲ್ಲಿನ ಪ್ರವಾಸಿ ತಾಣಗಳಲ್ಲಿ ಸಮಯ ಕಳೆಯುತ್ತಾ ನೀವು ಪ್ರವಾಸವನ್ನು ಎಂಜಾಯ್ ಮಾಡಬಹುದು. ಕೇರಳದಲ್ಲಿ ಕ್ರಿಸ್‌ಮಸ್ ಸಂಭ್ರಮವೂ ಬಲು ಜೋರು. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಅಧಿಕವಿರುವ ಕೇರಳದಲ್ಲಿ ನೀವು ಕ್ರಿಸ್‌ಮಸ್ ಸಂಭ್ರಮದ ಜೊತೆಗೆ ಇಯರ್ ಎಂಡ್‌ ಪಾರ್ಟಿಯನ್ನು ಖುಷಿಯಿಂದ ಸಂಭ್ರಮಿಸಬಹುದು. (PC: Wonderon)
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಕೂಡ ಇಯರ್‌ ಎಂಡ್ ಸಂಭ್ರಮಾಚರಣೆಗೆ ಪ್ರಸಿದ್ಧಿ ಪಡೆದಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿ ಬೀದಿ ಬೀದಿಗಳನ್ನು ದೀಪಗಳಿಂದ ಅಲಂಕಾರ ಮಾಡಿರುತ್ತಾರೆ. ದೀಪಗಳ ರಂಗಿನೊಂದಿಗೆ ಪಟಾಕಿ ಚಿತ್ತಾರ, ಸದ್ದು ನಿಮಗೆ ಬೇರೆಯದೇ ಲೋಕಕ್ಕೆ ಕರೆದೊಯ್ದದಂತೆ ಭಾಸವಾಗಬಹುದು. ಇಲ್ಲಿ ಕ್ರಿಸ್‌ಮಸ್ ಅನ್ನು ಕೂಡ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.
(4 / 12)
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಕೂಡ ಇಯರ್‌ ಎಂಡ್ ಸಂಭ್ರಮಾಚರಣೆಗೆ ಪ್ರಸಿದ್ಧಿ ಪಡೆದಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಲ್ಲಿ ಬೀದಿ ಬೀದಿಗಳನ್ನು ದೀಪಗಳಿಂದ ಅಲಂಕಾರ ಮಾಡಿರುತ್ತಾರೆ. ದೀಪಗಳ ರಂಗಿನೊಂದಿಗೆ ಪಟಾಕಿ ಚಿತ್ತಾರ, ಸದ್ದು ನಿಮಗೆ ಬೇರೆಯದೇ ಲೋಕಕ್ಕೆ ಕರೆದೊಯ್ದದಂತೆ ಭಾಸವಾಗಬಹುದು. ಇಲ್ಲಿ ಕ್ರಿಸ್‌ಮಸ್ ಅನ್ನು ಕೂಡ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.(PC: HT File Photo)
ಗೋವಾ: ಭಾರತದಲ್ಲಿ ಕ್ರಿಸ್‌ಮಸ್‌ ಹಾಗೂ ವರ್ಷಾಂತ್ಯದ ಸೊಬಗನ್ನು ಸವಿಯಲು ಗೋವಾಕ್ಕಿಂತ ಉತ್ತಮ ತಾಣ ಇನ್ನೊಂದಿಲ್ಲ. ಗೋವಾದಲ್ಲಿ ನೀವು ವಿದೇಶದ ವೈಬ್ ಅನುಭವಿಸಬಹುದು. ಇಲ್ಲಿನ ಕಡಲತೀರಗಳಲ್ಲಿ ಸಮಯ ಕಳೆಯುತ್ತಾ ಎಂಜಾಯ್ ಮಾಡಲು ಕ್ರಿಸ್‌ಮಸ್, ನ್ಯೂ ಇಯರ್ ಹೇಳಿ ಮಾಡಿಸಿದಂತಿದೆ. ಈ ಸಮಯದಲ್ಲಿ ಇಲ್ಲಿ ವಿಶೇಷ ಪಾರ್ಟಿಗಳನ್ನು ಕೂಡ ಆಯೋಜಿಸಲಾಗುತ್ತದೆ. 
(5 / 12)
ಗೋವಾ: ಭಾರತದಲ್ಲಿ ಕ್ರಿಸ್‌ಮಸ್‌ ಹಾಗೂ ವರ್ಷಾಂತ್ಯದ ಸೊಬಗನ್ನು ಸವಿಯಲು ಗೋವಾಕ್ಕಿಂತ ಉತ್ತಮ ತಾಣ ಇನ್ನೊಂದಿಲ್ಲ. ಗೋವಾದಲ್ಲಿ ನೀವು ವಿದೇಶದ ವೈಬ್ ಅನುಭವಿಸಬಹುದು. ಇಲ್ಲಿನ ಕಡಲತೀರಗಳಲ್ಲಿ ಸಮಯ ಕಳೆಯುತ್ತಾ ಎಂಜಾಯ್ ಮಾಡಲು ಕ್ರಿಸ್‌ಮಸ್, ನ್ಯೂ ಇಯರ್ ಹೇಳಿ ಮಾಡಿಸಿದಂತಿದೆ. ಈ ಸಮಯದಲ್ಲಿ ಇಲ್ಲಿ ವಿಶೇಷ ಪಾರ್ಟಿಗಳನ್ನು ಕೂಡ ಆಯೋಜಿಸಲಾಗುತ್ತದೆ. (PC: HT File Photo)
ಶಿಲ್ಲಾಂಗ್: ಚಳಿಗಾಲದಲ್ಲಿ ಹಿಮಚ್ಛಾದಿತ ಪ್ರದೇಶದಲ್ಲಿ ನೀವು ಕ್ರಿಸ್‌ಮಸ್‌ ಹಾಗೂ ಇಯರ್‌ ಎಂಡ್‌ ಸಂಭ್ರಮವನ್ನು ಸವಿಯಲು ಬಯಸಿದರೆ ಮೇಘಾಲಯದ ಶಿಲ್ಲಾಂಗ್‌ ಬೆಸ್ಟ್ ತಾಣ. ಇಲ್ಲಿನ ಕ್ರಿಸ್‌ಮಸ್‌ ಸಂಭ್ರಮವನ್ನು ನೀವು ಜೀವನದಲ್ಲಿ ಒಮ್ಮೆಯಾದ್ರೂ ಕಣ್ತುಂಬಿಕೊಳ್ಳಲೇಬೇಕು. ಇಲ್ಲಿನ ಯುರೋಪಿಯನ್ ಶೈಲಿಯ ಚರ್ಚ್‌ಗಳು ಭಾರತದಲ್ಲಿ ಎಲ್ಲೂ ಸಿಗದ ಕ್ರಿಸ್‌ಮಸ್‌ ಸಡಗರವನ್ನು ನಿಮಗೆ ಕಾಣುವಂತೆ ಮಾಡುತ್ತವೆ. ಇಲ್ಲಿನ ರೆಸ್ಟೋರೆಂಟ್‌ಗಳಲ್ಲೂ ಹೊಸ ವರ್ಷದ ಆಚರಣೆ ಜೋರಾಗಿರುತ್ತದೆ.
(6 / 12)

ಕೋಲ್ಕತ್ತಾ: ಇಲ್ಲಿನ ನೈಟ್‌ಲೈಫ್ ವರ್ಷಾಂತ್ಯ ಹಾಗೂ ಕ್ರಿಸ್‌ಮಸ್ ಸಂಭ್ರಮದ ನಡುವೆ ವಿದೇಶದ ಫೀಲ್ ಕೊಡುವುದು ಸುಳ್ಳಲ್ಲ. ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಲು ಸೂಕ್ತವಾದ ಭಾರತದ ಪ್ರಸಿದ್ಧ ಪ್ರವಾಸಿ ತಾಣ ಇದಾಗಿದೆ. ಇಲ್ಲಿನ ಪ್ರಸಿದ್ಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಡಗರವನ್ನು ನೀವು ಕಣ್ತುಂಬಿಕೊಳ್ಳಲೇಬೇಕು. 2011ರಿಂದ ಕೊಲ್ಕೂತ್ತಾ ರಾಜ್ಯ ಸರ್ಕಾರವು ಹೊಸ ವರ್ಷದ ದಿನದವರೆಗೆ ಕ್ರಿಸ್ಮಸ್ ಕಾರ್ನಿವಲ್ ಅನ್ನು ಆಯೋಜಿಸುತ್ತದೆ. ಇಲ್ಲಿನ ಸಂಗೀತ ಸಂಜೆಗಳು, ಸ್ಥಳೀಯ ಆಹಾರಗಳ ಸವಿಯೊಂದಿಗೆ ನೀವು ಕೊಲ್ಕತ್ತಾ ಪ್ರವಾಸವನ್ನು ಎಂಜಾಯ್ ಮಾಡಬಹುದು. 
(7 / 12)

ಉದಯಪುರ: ಹೊಸ ವರ್ಷಾಚರಣೆಗೆ ಉದಯಪುರ ಹೇಳಿ ಮಾಡಿಸಿದ ತಾಣ. ಅರಮನೆಗಳು, ಸುಂದರ ಕಟ್ಟಡಗಳಿಂದ ತುಂಬಿರುವ ಉದಯಪುರದಲ್ಲಿ ಕ್ರಿಸ್‌ಮಸ್‌ ಸೊಬಗು ಕೂಡ ವಿಭಿನ್ನವಾಗಿರುತ್ತದೆ. ಇಲ್ಲಿನ ಐತಿಹಾಸಿಕ ಶೆಫರ್ಡ್ ಮೆಮೋರಿಯಲ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು.
(8 / 12)

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲೂ ಕೂಡ ಹೊಸ ವರ್ಷಾಚರಣೆ ಬಲು ಜೋರು. ಬಾಂದ್ರಾದಲ್ಲಿ ಕ್ರಿಸ್‌ಮಸ್‌ ಜೊತೆ ಇಯರ್‌ ಎಂಡ್ ವೈಬ್ ಎನ್ನು ನೀವು ಒಮ್ಮೆಯಾದ್ರೂ ನೋಡಲೇಬೇಕು. ಸಾಂತಾಕ್ಲಾಸ್‌, ಕ್ರಿಸ್ಮಸ್‌ ಟ್ರೀಗಳು, ಪ್ಲಮ್‌ ಕೇಕ್‌ ಪರಿಮಳ ಈ ಎಲ್ಲವೂ ನಿಮಗೆ ಮುಂಬೈನಲ್ಲಿ ಕಾಣಸಿಗುತ್ತವೆ. ಮುಂಬೈನ ಸ್ಥಳೀಯ ಆಹಾರಗಳ ಸವಿಯನ್ನೂ ಸವಿಯಲು ನೀವು ಮುಂಬೈಗೆ ಭೇಟಿ ನೀಡಬೇಕು. 
(9 / 12)
ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲೂ ಕೂಡ ಹೊಸ ವರ್ಷಾಚರಣೆ ಬಲು ಜೋರು. ಬಾಂದ್ರಾದಲ್ಲಿ ಕ್ರಿಸ್‌ಮಸ್‌ ಜೊತೆ ಇಯರ್‌ ಎಂಡ್ ವೈಬ್ ಎನ್ನು ನೀವು ಒಮ್ಮೆಯಾದ್ರೂ ನೋಡಲೇಬೇಕು. ಸಾಂತಾಕ್ಲಾಸ್‌, ಕ್ರಿಸ್ಮಸ್‌ ಟ್ರೀಗಳು, ಪ್ಲಮ್‌ ಕೇಕ್‌ ಪರಿಮಳ ಈ ಎಲ್ಲವೂ ನಿಮಗೆ ಮುಂಬೈನಲ್ಲಿ ಕಾಣಸಿಗುತ್ತವೆ. ಮುಂಬೈನ ಸ್ಥಳೀಯ ಆಹಾರಗಳ ಸವಿಯನ್ನೂ ಸವಿಯಲು ನೀವು ಮುಂಬೈಗೆ ಭೇಟಿ ನೀಡಬೇಕು. (PC: Revv)
ಪಾಂಡಿಚೇರಿ: ತಮಿಳುನಾಡಿನ ಪ್ರಸಿದ್ಧ ಪ್ರವಾಸಿತಾಣ ಪಾಂಡಿಚೇರಿಯಲ್ಲಿ ನೀವು ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮವನ್ನು ಸವಿಯಬಹುದು. ಇಲ್ಲಿ ಕ್ರಿಸ್‌ಮಸ್ ಸಡಗರವೂ ಜೋರಿರುತ್ತದೆ. ಪಟ್ಟಣದ ಆಕರ್ಷಕ ಕಡಲತೀರಗಳು ಮತ್ತು ವಿಲಕ್ಷಣವಾದ ಕೆಫೆಗಳು ಮತ್ತು ಬೇಕರಿಗಳು ಹೊಸ ವರ್ಷ, ಕ್ರಿಸ್‌ಮಸ್‌ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ನಗರದ ಬೆರಗುಗೊಳಿಸುವ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳುತ್ತಾ ಬೀಚ್‌ನಲ್ಲಿ ಹೊಸ ವರ್ಷದ ಪಾರ್ಟಿಯನ್ನು ಎಂಜಾಯ್ ಮಾಡಬಹುದು. 
(10 / 12)
ಪಾಂಡಿಚೇರಿ: ತಮಿಳುನಾಡಿನ ಪ್ರಸಿದ್ಧ ಪ್ರವಾಸಿತಾಣ ಪಾಂಡಿಚೇರಿಯಲ್ಲಿ ನೀವು ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮವನ್ನು ಸವಿಯಬಹುದು. ಇಲ್ಲಿ ಕ್ರಿಸ್‌ಮಸ್ ಸಡಗರವೂ ಜೋರಿರುತ್ತದೆ. ಪಟ್ಟಣದ ಆಕರ್ಷಕ ಕಡಲತೀರಗಳು ಮತ್ತು ವಿಲಕ್ಷಣವಾದ ಕೆಫೆಗಳು ಮತ್ತು ಬೇಕರಿಗಳು ಹೊಸ ವರ್ಷ, ಕ್ರಿಸ್‌ಮಸ್‌ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ನಗರದ ಬೆರಗುಗೊಳಿಸುವ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳುತ್ತಾ ಬೀಚ್‌ನಲ್ಲಿ ಹೊಸ ವರ್ಷದ ಪಾರ್ಟಿಯನ್ನು ಎಂಜಾಯ್ ಮಾಡಬಹುದು. (PC: Travel Triangle)
ಶಿಮ್ಲಾ: ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಸಂಭ್ರಮ ಶಿಲ್ಲಾಂಗ್‌ನಂತೆ ಶಿಮ್ಲಾದಲ್ಲೂ ಬಲು ಜೋರು. ಕುಫ್ರಿ ಮತ್ತು ನರಕಂದದಂತಹ ಇತರ ಸುಂದರ ಪ್ರವಾಸಿ ತಾಣಗಳಲ್ಲಿ ನೀವು ಡಿಸೆಂಬರ್ ಚಳಿಯನ್ನು ಎಂಜಾಯ್ ಮಾಡಬಹುದು. ಇಲ್ಲಿನ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಪ್ರವಾಸ ಮಾಡುವುದು ನಿಜಕ್ಕೂ ನಿಮಗೆ ಅದ್ಭುತ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ. ದೇಶದ ಅತ್ಯಂತ ಸುಂದರವಾದ ರೈಲು ಪ್ರಯಾಣಗಳಲ್ಲಿ ಒಂದಾದ ಪಾರಂಪರಿಕ ಕಲ್ಕಾ-ಶಿಮ್ಲಾ ರೈಲ್ವೆಯನ್ನು ಸವಾರಿ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ.
(11 / 12)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(12 / 12)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

    ಹಂಚಿಕೊಳ್ಳಲು ಲೇಖನಗಳು