logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪುಟ್ಟ ಮಗುವಿನ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಿದೆಯೇ? ಪಾಪುವಿನ ಹೊಟ್ಟೆ ನೋವು ಕಡಿಮೆ ಮಾಡೋಕೆ 6 ಸಿಂಪಲ್ ಟ್ರಿಕ್ಸ್‌

ಪುಟ್ಟ ಮಗುವಿನ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಿದೆಯೇ? ಪಾಪುವಿನ ಹೊಟ್ಟೆ ನೋವು ಕಡಿಮೆ ಮಾಡೋಕೆ 6 ಸಿಂಪಲ್ ಟ್ರಿಕ್ಸ್‌

Sep 18, 2024 06:36 PM IST

ನಿಮ್ಮ ಮನೆಯಲ್ಲಿ ಪುಟ್ಟ ಪಾಪು ಇದ್ದು, ಅದರ ಹೊಟ್ಟೇಲಿ ಗ್ಯಾಸ್ ತುಂಬುವ ಸಮಸ್ಯೆ ಇದ್ದರೆ ಚಿಂತೆ ಮಾಡಬೇಡಿ. ಇದು ಸಹಜ. ಈ ಸಮಸ್ಯೆಯಿಂದ ಮಗುವನ್ನು ಪಾರುಮಾಡುವುದಕ್ಕೆ ಸಿಂಪಲ್ ಟ್ರಿಕ್ಸ್ ಇವೆ. ಅದನ್ನು ಡಾಕ್ಟರ್ ಅರ್ಪಿತ್ ಗುಪ್ತಾ ಅವರು ವಿವರಿಸಿದ್ದಾರೆ. ಈ ಸಲಹೆ ನಿಮಗೂ ಉಪಯೋಗಕ್ಕೆ ಬರಬಹುದು.

ನಿಮ್ಮ ಮನೆಯಲ್ಲಿ ಪುಟ್ಟ ಪಾಪು ಇದ್ದು, ಅದರ ಹೊಟ್ಟೇಲಿ ಗ್ಯಾಸ್ ತುಂಬುವ ಸಮಸ್ಯೆ ಇದ್ದರೆ ಚಿಂತೆ ಮಾಡಬೇಡಿ. ಇದು ಸಹಜ. ಈ ಸಮಸ್ಯೆಯಿಂದ ಮಗುವನ್ನು ಪಾರುಮಾಡುವುದಕ್ಕೆ ಸಿಂಪಲ್ ಟ್ರಿಕ್ಸ್ ಇವೆ. ಅದನ್ನು ಡಾಕ್ಟರ್ ಅರ್ಪಿತ್ ಗುಪ್ತಾ ಅವರು ವಿವರಿಸಿದ್ದಾರೆ. ಈ ಸಲಹೆ ನಿಮಗೂ ಉಪಯೋಗಕ್ಕೆ ಬರಬಹುದು.
ಮನೆಯಲ್ಲಿ ಪುಟ್ಟ ಪಾಪು ಇದ್ದರೆ ನೀವು ಗಮನಿಸಿರಬಹುದು, ಹಸಿವಾದಾಗ ಮಾತ್ರವಲ್ಲ ಹೊಟ್ಟೆ ಗ್ಯಾಸ್ ತುಂಬಿದರೆ ಅದರ ನೋವಿಗೆ ಅಳಲಾರಂಭಿಸುತ್ತದೆ. ಕೂಡಲೇ ಅಮ್ಮನೋ, ಅಜ್ಜಿಯೋ ಮಗುವನ್ನು ಹೆಗಲಿಗೆ ಹಾಕಿಕೊಂಡು ಹೊಟ್ಟೆ ಗ್ಯಾಸ್ ತೆಗೆಯಲಯ ಪ್ರಯತ್ನಿಸುವುದನ್ನು ಗಮನಿಸಿರಬಹುದು.ಇದಕ್ಕೆ ಸಂಬಂಧಿಸಿದಂತೆ,  ಡಾ.ಅರ್ಪಿತ್ ಗುಪ್ತಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೆಲವು ವ್ಯಾಯಾಮಗಳ ಸಹಾಯದಿಂದ ನೀವು ಮಕ್ಕಳ ಹೊಟ್ಟೆಯ ಗ್ಯಾಸ್ ಅನ್ನು ಹೇಗೆ ಹೊರಹಾಕಬಹುದು ಎಂಬ ಮಾಹಿತಿ ನೀಡಿದ್ದಾರೆ.
(1 / 11)
ಮನೆಯಲ್ಲಿ ಪುಟ್ಟ ಪಾಪು ಇದ್ದರೆ ನೀವು ಗಮನಿಸಿರಬಹುದು, ಹಸಿವಾದಾಗ ಮಾತ್ರವಲ್ಲ ಹೊಟ್ಟೆ ಗ್ಯಾಸ್ ತುಂಬಿದರೆ ಅದರ ನೋವಿಗೆ ಅಳಲಾರಂಭಿಸುತ್ತದೆ. ಕೂಡಲೇ ಅಮ್ಮನೋ, ಅಜ್ಜಿಯೋ ಮಗುವನ್ನು ಹೆಗಲಿಗೆ ಹಾಕಿಕೊಂಡು ಹೊಟ್ಟೆ ಗ್ಯಾಸ್ ತೆಗೆಯಲಯ ಪ್ರಯತ್ನಿಸುವುದನ್ನು ಗಮನಿಸಿರಬಹುದು.ಇದಕ್ಕೆ ಸಂಬಂಧಿಸಿದಂತೆ,  ಡಾ.ಅರ್ಪಿತ್ ಗುಪ್ತಾ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೆಲವು ವ್ಯಾಯಾಮಗಳ ಸಹಾಯದಿಂದ ನೀವು ಮಕ್ಕಳ ಹೊಟ್ಟೆಯ ಗ್ಯಾಸ್ ಅನ್ನು ಹೇಗೆ ಹೊರಹಾಕಬಹುದು ಎಂಬ ಮಾಹಿತಿ ನೀಡಿದ್ದಾರೆ.(Pexel)
ನವಜಾತ ಶಿಶುಗಳು ಹಸಿವಾದಾಗ ಮಾತ್ರ ಅಳುವುದಿಲ್ಲ. ಹೊಟ್ಟೆಯಲ್ಲಿ ಅನಿಲ ರಚನೆಯಿಂದ ಉಂಟಾಗುವ ನೋವಿನಿಂದ ಅನೇಕ ಬಾರಿ ಸಣ್ಣ ಮಕ್ಕಳು ಅಳಲು ಪ್ರಾರಂಭಿಸುತ್ತಾರೆ. ಮಗುವಿನ ಹೊಟ್ಟೆಯಿಂದ ಅನಿಲವನ್ನು ಹೊರಹಾಕಲು ಪಾಲಕರು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಯಾವುದೇ ಗಮನಾರ್ಹ ಪ್ರಯೋಜನವನ್ನು ಕಾಣುವುದಿಲ್ಲ. ನಿಮ್ಮ ಮಗು ಚಿಕ್ಕದಾಗಿದ್ದರೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಿ ರೂಪುಗೊಳ್ಳುತ್ತಿದ್ದರೆ, ಡಾ. ಅರ್ಪಿತ್ ಗುಪ್ತಾ ಅವರ ಸಲಹೆಯು ನಿಮಗೆ ಉಪಯುಕ್ತವಾಗಬಹುದು.
(2 / 11)
ನವಜಾತ ಶಿಶುಗಳು ಹಸಿವಾದಾಗ ಮಾತ್ರ ಅಳುವುದಿಲ್ಲ. ಹೊಟ್ಟೆಯಲ್ಲಿ ಅನಿಲ ರಚನೆಯಿಂದ ಉಂಟಾಗುವ ನೋವಿನಿಂದ ಅನೇಕ ಬಾರಿ ಸಣ್ಣ ಮಕ್ಕಳು ಅಳಲು ಪ್ರಾರಂಭಿಸುತ್ತಾರೆ. ಮಗುವಿನ ಹೊಟ್ಟೆಯಿಂದ ಅನಿಲವನ್ನು ಹೊರಹಾಕಲು ಪಾಲಕರು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಯಾವುದೇ ಗಮನಾರ್ಹ ಪ್ರಯೋಜನವನ್ನು ಕಾಣುವುದಿಲ್ಲ. ನಿಮ್ಮ ಮಗು ಚಿಕ್ಕದಾಗಿದ್ದರೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಿ ರೂಪುಗೊಳ್ಳುತ್ತಿದ್ದರೆ, ಡಾ. ಅರ್ಪಿತ್ ಗುಪ್ತಾ ಅವರ ಸಲಹೆಯು ನಿಮಗೆ ಉಪಯುಕ್ತವಾಗಬಹುದು.(shutterstock)
ಹೊಟ್ಟೆಯಲ್ಲಿ ಗ್ಯಾಸ್ ತುಂಬಲು ಕಾರಣ: ಮಗುವಿನ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಲು ಹಲವು ಕಾರಣಗಳಿರಬಹುದು. ಉದಾಹರಣೆಗೆ ಸರಿಯಾಗಿ ನಿದ್ದೆ ಮಾಡದಿರುವುದು, ಸಮಯಕ್ಕೆ ಸರಿಯಾಗಿ ಹಾಲು ಕುಡಿಯದಿರುವುದು ಇತ್ಯಾದಿ. ಮಗುವಿನ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಗ್ಯಾಸ್ ಹೊರ ಹಾಕುವುದಕ್ಕೆ ಡಾಕ್ಟರ್ ಅರ್ಪಿತ್ ಗುಪ್ತಾ 6 ಸಿಂಪಲ್  ವ್ಯಾಯಾಮಗಳ ಚಿತ್ರ ಶೇರ್ ಮಾಡಿದ್ದಾರೆ.
(3 / 11)
ಹೊಟ್ಟೆಯಲ್ಲಿ ಗ್ಯಾಸ್ ತುಂಬಲು ಕಾರಣ: ಮಗುವಿನ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಲು ಹಲವು ಕಾರಣಗಳಿರಬಹುದು. ಉದಾಹರಣೆಗೆ ಸರಿಯಾಗಿ ನಿದ್ದೆ ಮಾಡದಿರುವುದು, ಸಮಯಕ್ಕೆ ಸರಿಯಾಗಿ ಹಾಲು ಕುಡಿಯದಿರುವುದು ಇತ್ಯಾದಿ. ಮಗುವಿನ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಗ್ಯಾಸ್ ಹೊರ ಹಾಕುವುದಕ್ಕೆ ಡಾಕ್ಟರ್ ಅರ್ಪಿತ್ ಗುಪ್ತಾ 6 ಸಿಂಪಲ್  ವ್ಯಾಯಾಮಗಳ ಚಿತ್ರ ಶೇರ್ ಮಾಡಿದ್ದಾರೆ.(dr.arpitgupta11 instagram)
ಆರು ಸರಳ ವ್ಯಾಯಾಮಗಳ ಪೈಕಿ ಮೊದಲ ಎರಡು ಹೀಗಿದೆ
(4 / 11)
ಆರು ಸರಳ ವ್ಯಾಯಾಮಗಳ ಪೈಕಿ ಮೊದಲ ಎರಡು ಹೀಗಿದೆ
ಎರಡನೇ ಸೆಟ್ ವ್ಯಾಯಾಮಗಳು ಹೀಗಿವೆ
(5 / 11)
ಎರಡನೇ ಸೆಟ್ ವ್ಯಾಯಾಮಗಳು ಹೀಗಿವೆ
ಮೂರನೇ ಸೆಟ್ ವ್ಯಾಯಾಮಗಳು ಹೀಗಿವೆ.
(6 / 11)
ಮೂರನೇ ಸೆಟ್ ವ್ಯಾಯಾಮಗಳು ಹೀಗಿವೆ.
ಮಗುವು ಹಾಲಿನೊಂದಿಗೆ ಗಾಳಿಯನ್ನು ಸಹ ಸೇವಿಸುವುದರಿಂದ ಈ ಸಮಸ್ಯೆ. ಹೀಗಾಗಿ ಮಗುವಿನ ಹೊಟ್ಟೆಯಲ್ಲಿ ಗ್ಯಾಸ್ ತುಂಬುತ್ತದೆ.
(7 / 11)
ಮಗುವು ಹಾಲಿನೊಂದಿಗೆ ಗಾಳಿಯನ್ನು ಸಹ ಸೇವಿಸುವುದರಿಂದ ಈ ಸಮಸ್ಯೆ. ಹೀಗಾಗಿ ಮಗುವಿನ ಹೊಟ್ಟೆಯಲ್ಲಿ ಗ್ಯಾಸ್ ತುಂಬುತ್ತದೆ.(shutterstock)
ಆಂಟಿ-ಕ್ಲಾಕ್ ವ್ಯಾಯಾಮ: ಮಗುವಿನ ಹೊಟ್ಟೆಯನ್ನು ಪ್ರದಕ್ಷಿಣಾಕಾರವಾಗಿ ಮಸಾಜ್ ಮಾಡಿ. ಮಸಾಜ್ ಮಾಡುವಾಗ, ಹೆಚ್ಚು ಒತ್ತಡವನ್ನು ಅನ್ವಯಿಸಬೇಡಿ, ಬದಲಿಗೆ ಲಘು ಕೈಯಿಂದ ವೃತ್ತಾಕಾರದ ಚಲನೆಯಲ್ಲಿ ಮಗುವನ್ನು ಮಸಾಜ್ ಮಾಡಿ. ಆಗ ಗ್ಯಾಸ್‌ ಹೊರ ಹೋಗುತ್ತದೆ.
(8 / 11)
ಆಂಟಿ-ಕ್ಲಾಕ್ ವ್ಯಾಯಾಮ: ಮಗುವಿನ ಹೊಟ್ಟೆಯನ್ನು ಪ್ರದಕ್ಷಿಣಾಕಾರವಾಗಿ ಮಸಾಜ್ ಮಾಡಿ. ಮಸಾಜ್ ಮಾಡುವಾಗ, ಹೆಚ್ಚು ಒತ್ತಡವನ್ನು ಅನ್ವಯಿಸಬೇಡಿ, ಬದಲಿಗೆ ಲಘು ಕೈಯಿಂದ ವೃತ್ತಾಕಾರದ ಚಲನೆಯಲ್ಲಿ ಮಗುವನ್ನು ಮಸಾಜ್ ಮಾಡಿ. ಆಗ ಗ್ಯಾಸ್‌ ಹೊರ ಹೋಗುತ್ತದೆ.(shutterstock)
ಜಂಪಿಂಗ್ ಲೆಗ್ ವ್ಯಾಯಾಮ: ಈ ವ್ಯಾಯಾಮ ಮಾಡುವಾಗ, ಮಗುವಿನ ಎರಡೂ ಕಾಲುಗಳನ್ನು ಒಟ್ಟಿಗೆ ಮಡಚಿ, ಹೊಟ್ಟೆಯ ತನಕ ತೊಡೆಗಳನ್ನು ತೆಗೆದುಕೊಂಡು ನಂತರ ಅವುಗಳನ್ನು ವಾಪಸ್ ಯಥಾಸ್ಥಿತಿಗೆ ತನ್ನಿ. ಇದು ಕೂಡ ಹೊಟ್ಟೆ ಗ್ಯಾಸ್ ಹೊರ ಹಾಕುತ್ತದೆ.
(9 / 11)
ಜಂಪಿಂಗ್ ಲೆಗ್ ವ್ಯಾಯಾಮ: ಈ ವ್ಯಾಯಾಮ ಮಾಡುವಾಗ, ಮಗುವಿನ ಎರಡೂ ಕಾಲುಗಳನ್ನು ಒಟ್ಟಿಗೆ ಮಡಚಿ, ಹೊಟ್ಟೆಯ ತನಕ ತೊಡೆಗಳನ್ನು ತೆಗೆದುಕೊಂಡು ನಂತರ ಅವುಗಳನ್ನು ವಾಪಸ್ ಯಥಾಸ್ಥಿತಿಗೆ ತನ್ನಿ. ಇದು ಕೂಡ ಹೊಟ್ಟೆ ಗ್ಯಾಸ್ ಹೊರ ಹಾಕುತ್ತದೆ.(shutterstock)
ನಿಮ್ಮ ಮಗುವಿನ ಹೊಟ್ಟೆಯ ಮೇಲೆ ಪ್ರದಕ್ಷಿಣಾಕಾರವಾಗಿ ಮಸಾಜ್ ಮಾಡಿ, ಸೈಕಲ್ ಸವಾರಿ ರೀತಿ ಕಾಲುಗಳನ್ನು ತಿರುಗಿಸಿ. ಇದು ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಸ್ವಲ್ಪ ಒತ್ತಡ ಕೊಟ್ಟು ಗ್ಯಾಸ್ ಹೊರ ಹೋಗುವಂತೆ ಮಾಡುತ್ತದೆ.
(10 / 11)
ನಿಮ್ಮ ಮಗುವಿನ ಹೊಟ್ಟೆಯ ಮೇಲೆ ಪ್ರದಕ್ಷಿಣಾಕಾರವಾಗಿ ಮಸಾಜ್ ಮಾಡಿ, ಸೈಕಲ್ ಸವಾರಿ ರೀತಿ ಕಾಲುಗಳನ್ನು ತಿರುಗಿಸಿ. ಇದು ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಸ್ವಲ್ಪ ಒತ್ತಡ ಕೊಟ್ಟು ಗ್ಯಾಸ್ ಹೊರ ಹೋಗುವಂತೆ ಮಾಡುತ್ತದೆ.(shutterstock)
ಸೈಕಲ್ ವ್ಯಾಯಾಮ: ಈ ವ್ಯಾಯಾಮ ಮಾಡುವಾಗ ಮಗುವಿನ ಎರಡೂ ಕಾಲುಗಳನ್ನು ಹಿಡಿದುಕೊಂಡು ಒಂದೊಂದಾಗಿ ಮೇಲೆ ಕೆಳಗೆ ಚಲಿಸಬೇಕು, ಸೈಕಲ್ ಓಡಿಸುವಾಗ ಒಂದೊಂದು ಕಾಲನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುವಂತೆ ಮಾಡಬೇಕು ಬೈಸಿಕಲ್ನಂತೆ. ಇದು ಕೂಡ ಹೊಟ್ಟೆ ಗ್ಯಾಸ್ ಹೊರ ಹಾಕಲು ಸಹಕಾರಿ.
(11 / 11)
ಸೈಕಲ್ ವ್ಯಾಯಾಮ: ಈ ವ್ಯಾಯಾಮ ಮಾಡುವಾಗ ಮಗುವಿನ ಎರಡೂ ಕಾಲುಗಳನ್ನು ಹಿಡಿದುಕೊಂಡು ಒಂದೊಂದಾಗಿ ಮೇಲೆ ಕೆಳಗೆ ಚಲಿಸಬೇಕು, ಸೈಕಲ್ ಓಡಿಸುವಾಗ ಒಂದೊಂದು ಕಾಲನ್ನು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುವಂತೆ ಮಾಡಬೇಕು ಬೈಸಿಕಲ್ನಂತೆ. ಇದು ಕೂಡ ಹೊಟ್ಟೆ ಗ್ಯಾಸ್ ಹೊರ ಹಾಕಲು ಸಹಕಾರಿ.(shutterstock)

    ಹಂಚಿಕೊಳ್ಳಲು ಲೇಖನಗಳು