logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara 2022: ಅದ್ಧೂರಿಯಾಗಿ ಸಂಪನ್ನಗೊಂಡ ದಸರಾ ಜಂಬೂಸವಾರಿ, ಫೋಟೋ ಕಣ್ತುಂಬಿಕೊಳ್ಳಿ

Mysuru Dasara 2022: ಅದ್ಧೂರಿಯಾಗಿ ಸಂಪನ್ನಗೊಂಡ ದಸರಾ ಜಂಬೂಸವಾರಿ, ಫೋಟೋ ಕಣ್ತುಂಬಿಕೊಳ್ಳಿ

Oct 05, 2022 07:48 PM IST

ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿಯಾಗಿ ನೆರವೇರಿತು. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನೊಳಗೊಂಡ ಸ್ವರ್ಣ ಅಂಬಾರಿಯನ್ನು ಹೊತ್ತ ಆನೆ ಅಭಿಮನ್ಯು ರಾಜಗಾಂಭೀರ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿದನು. ಇಂದು ಸಂಜೆ ಬನ್ನಿಮಂಟಪದ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತಿನೊಂದಿಗೆ ನಾಡಹಬ್ಬಕ್ಕೆ ತೆರೆ ಬೀಳಲಿದೆ.

  • ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಗೆ ಅದ್ಧೂರಿಯಾಗಿ ನೆರವೇರಿತು. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನೊಳಗೊಂಡ ಸ್ವರ್ಣ ಅಂಬಾರಿಯನ್ನು ಹೊತ್ತ ಆನೆ ಅಭಿಮನ್ಯು ರಾಜಗಾಂಭೀರ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿದನು. ಇಂದು ಸಂಜೆ ಬನ್ನಿಮಂಟಪದ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತಿನೊಂದಿಗೆ ನಾಡಹಬ್ಬಕ್ಕೆ ತೆರೆ ಬೀಳಲಿದೆ.
ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36ರಿಂದ 2.50ರವರೆಗೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿ ಧ್ವಜ ಪೂಜೆ ನೆರವೇರಿಸಿದರು. ಸಂಜೆ 5.38ರ ವೇಳೆಗೆ ಅಂಬಾರಿಗೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
(1 / 5)

ಚಾಮುಂಡೇಶ್ವರಿ ತಾಯಿಯನ್ನು ಅಂಬಾರಿಯಲ್ಲಿ ಹೊತ್ತ ಅಭಿಮನ್ಯು ಆನೆ ರಾಜಗಾಭೀರ್ಯದಿಂದ ವೇದಿಕೆ ಮುಂಭಾಗಕ್ಕೆ ಬಂದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸೇರಿದಂತೆ ವಿವಿಧ ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.
(2 / 5)

ಈ ವೇಳೆ ಸಚಿವ ಸುನೀಲ್ ಕುಮಾರ್, ಮೈಸೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ, ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಕೂಡಾ ಪಾಲ್ಗೊಂಡಿದ್ದರು.
(3 / 5)

ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಕಲಾತಂಡಗಳು ಭಾಗಿಯಾದವು. ನಾಡಿನ ಕಲೆ ಹಾಗೂ ಸಾಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ತಬ್ಧಚಿತ್ರಗಳ ಮೆರವಣಿಗೆಯೂ ನಡೆಯಿತು.
(4 / 5)

ಅರಮನೆ ಮುಂಭಾಗದಲ್ಲಿ ಸಿಎಂ ಸೇರಿದಂತೆ ಗಣ್ಯರ ದಂಡು
(5 / 5)
ಅರಮನೆ ಮುಂಭಾಗದಲ್ಲಿ ಸಿಎಂ ಸೇರಿದಂತೆ ಗಣ್ಯರ ದಂಡು

    ಹಂಚಿಕೊಳ್ಳಲು ಲೇಖನಗಳು