logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangaluru Auto Blast: ಮಂಗಳೂರು ಬಾಂಬ್‌ ಸ್ಟೋಟ ಪ್ರಕರಣ: ಅಲೋಕ್‌ ಕುಮಾರ್‌ ಹೇಳಿದ್ದೇನು?

Mangaluru Auto Blast: ಮಂಗಳೂರು ಬಾಂಬ್‌ ಸ್ಟೋಟ ಪ್ರಕರಣ: ಅಲೋಕ್‌ ಕುಮಾರ್‌ ಹೇಳಿದ್ದೇನು?

Nov 21, 2022 12:56 PM IST

ಮಂಗಳೂರು: ಮಂಗಳೂರಿನಲ್ಲಿ ಆಟೋ ರಿಕ್ಷಾವೊಂದರಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಭಯೋತ್ಪಾದನಾ ಕೃತ್ಯದ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಈ ಕುರಿತಾದ ಮಾಹಿತಿ ಇಲ್ಲಿದೆ..

  • ಮಂಗಳೂರು: ಮಂಗಳೂರಿನಲ್ಲಿ ಆಟೋ ರಿಕ್ಷಾವೊಂದರಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಭಯೋತ್ಪಾದನಾ ಕೃತ್ಯದ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದರು. ಈ ಕುರಿತಾದ ಮಾಹಿತಿ ಇಲ್ಲಿದೆ..
ಬಾಂಬ್‌ ಸ್ಫೋಟ ಪಪ್ರಕರಣದ ಆರೋಪಿಯ ವಿರುದ್ಧ ಮಂಗಳೂರಿನಲ್ಲಿ ಎರಡು ಮತ್ತು ಶಿವಮೊಗ್ಗದಲ್ಲಿ ಮೂರು ಪ್ರಕರಣಗಳಿವೆ. ಎರಡು ಪ್ರಕರಣಗಳಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರನೇ ಪ್ರಕರಣವೊಂದರಲ್ಲಿ ನಾಪತ್ತೆಯಾಗಿದ್ದ ಆತನಿಗಾಗಿ ಪೊಲೀಡರು ಹುಡುಕಾಟ ನಡೆಸಿದ್ದರು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
(1 / 5)
ಬಾಂಬ್‌ ಸ್ಫೋಟ ಪಪ್ರಕರಣದ ಆರೋಪಿಯ ವಿರುದ್ಧ ಮಂಗಳೂರಿನಲ್ಲಿ ಎರಡು ಮತ್ತು ಶಿವಮೊಗ್ಗದಲ್ಲಿ ಮೂರು ಪ್ರಕರಣಗಳಿವೆ. ಎರಡು ಪ್ರಕರಣಗಳಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರನೇ ಪ್ರಕರಣವೊಂದರಲ್ಲಿ ನಾಪತ್ತೆಯಾಗಿದ್ದ ಆತನಿಗಾಗಿ ಪೊಲೀಡರು ಹುಡುಕಾಟ ನಡೆಸಿದ್ದರು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.(ANI)
ಪ್ರಯಾಣಿಕರೊಬ್ಬರು ಆಟೋದಲ್ಲಿ ಕುಕ್ಕರ್ ಬಾಂಬ್ ಇರುವ ಬ್ಯಾಗ್ ಅನ್ನು ಹೊತ್ತೊಯ್ದಿದ್ದರು. ಇದು ಸ್ಫೋಟಗೊಂಡಿದ್ದು, ಪ್ರಯಾಣಿಕರಿಗೆ ಹಾಗೂ ಆಟೋ ಚಾಲಕನಿಗೆ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕ ಪುರಷೋತ್ತಮ ಪೂಜಾರಿ ಮತ್ತು ಪ್ರಯಾಣಿಕನನ್ನು ಶಾರೀಕ್ ಎಂದು ಗುರುತಿಸಲಾಗಿದೆ ಈತನೇ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.
(2 / 5)
ಪ್ರಯಾಣಿಕರೊಬ್ಬರು ಆಟೋದಲ್ಲಿ ಕುಕ್ಕರ್ ಬಾಂಬ್ ಇರುವ ಬ್ಯಾಗ್ ಅನ್ನು ಹೊತ್ತೊಯ್ದಿದ್ದರು. ಇದು ಸ್ಫೋಟಗೊಂಡಿದ್ದು, ಪ್ರಯಾಣಿಕರಿಗೆ ಹಾಗೂ ಆಟೋ ಚಾಲಕನಿಗೆ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕ ಪುರಷೋತ್ತಮ ಪೂಜಾರಿ ಮತ್ತು ಪ್ರಯಾಣಿಕನನ್ನು ಶಾರೀಕ್ ಎಂದು ಗುರುತಿಸಲಾಗಿದೆ ಈತನೇ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.(ANI)
ಆರೋಪಿ‌ ಶಾರೀಕ್ ಮನೆಯನ್ನು ಶೋಧಿಸಿದಾಗ ಸಾಕಷ್ಟು ಸ್ಫೋಟಕ ಸಾಮಗ್ರಿಗಳು, ಬೆಂಕಿಕಡ್ಡಿಗಳು, ನಟ್ ಬೋಲ್ಟ್‌ಗಳು, ಸರ್ಕ್ಯೂಟ್‌ಗಳು ಪತ್ತೆಯಾಗಿವೆ. ಈ ಪೈಕಿ ಕೆಲವು ವಸ್ತುಗಳನ್ನು ಆತ ಆನ್‌ಲೈನ್‌ನಲ್ಲಿ ಮತ್ತು ಇನ್ನೂ ಕೆಲವು ವಸ್ತುಗಳನ್ನು ನೇರವಾಗಿ ಖರೀದಿ ಮಾಡಿದ್ದಾನೆ. ನಾವು ಅದರ ಮೂಲಗಳನ್ನು ತಿಳಿದುಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟಪಡಿಸಿದರು.
(3 / 5)
ಆರೋಪಿ‌ ಶಾರೀಕ್ ಮನೆಯನ್ನು ಶೋಧಿಸಿದಾಗ ಸಾಕಷ್ಟು ಸ್ಫೋಟಕ ಸಾಮಗ್ರಿಗಳು, ಬೆಂಕಿಕಡ್ಡಿಗಳು, ನಟ್ ಬೋಲ್ಟ್‌ಗಳು, ಸರ್ಕ್ಯೂಟ್‌ಗಳು ಪತ್ತೆಯಾಗಿವೆ. ಈ ಪೈಕಿ ಕೆಲವು ವಸ್ತುಗಳನ್ನು ಆತ ಆನ್‌ಲೈನ್‌ನಲ್ಲಿ ಮತ್ತು ಇನ್ನೂ ಕೆಲವು ವಸ್ತುಗಳನ್ನು ನೇರವಾಗಿ ಖರೀದಿ ಮಾಡಿದ್ದಾನೆ. ನಾವು ಅದರ ಮೂಲಗಳನ್ನು ತಿಳಿದುಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟಪಡಿಸಿದರು.(ANI)
ತನಿಖೆ ಈಗ ಪ್ರಗತಿಯ ಹಂತದಲ್ಲಿದ್ದು, ಎಲ್ಲಾ ವಿವರಗಳನ್ನು ಈಗಲೇ ಹಂಚಿಕೊಳ್ಳಲು ಸಾಧ್ಯವಿಲ್ಲ. ತನಿಖೆ ಮುಂದುವರೆದಂತೆಲ್ಲಾ ನಾವು ಅವಶ್ಯಕ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು. ಆದರೆ ಪ್ರಾಥಮಿಕ ತನಿಖೆಯಿಂದ ಆರೋಪಿ ಶಾರೀಕ್‌ಗೆ ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸಂಪರ್ಕವಿತ್ತು ಎಂಬುದು ತಿಳಿದುಬಂದಿದೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.
(4 / 5)
ತನಿಖೆ ಈಗ ಪ್ರಗತಿಯ ಹಂತದಲ್ಲಿದ್ದು, ಎಲ್ಲಾ ವಿವರಗಳನ್ನು ಈಗಲೇ ಹಂಚಿಕೊಳ್ಳಲು ಸಾಧ್ಯವಿಲ್ಲ. ತನಿಖೆ ಮುಂದುವರೆದಂತೆಲ್ಲಾ ನಾವು ಅವಶ್ಯಕ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತೇವೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು. ಆದರೆ ಪ್ರಾಥಮಿಕ ತನಿಖೆಯಿಂದ ಆರೋಪಿ ಶಾರೀಕ್‌ಗೆ ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸಂಪರ್ಕವಿತ್ತು ಎಂಬುದು ತಿಳಿದುಬಂದಿದೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.(ANI)
ಇದಕ್ಕೂ ಮೊದಲು ಮಂಗಳೂರು ಆಟೋರಿಕ್ಷಾ ಸ್ಫೋಟದ ಆರೋಪಿ ಶಾರೀಖ್ ನಿವಾಸದಿಂದ ವಶಪಡಿಸಿಕೊಂಡ ವಸ್ತುಗಳನ್ನು‌, ಮಂಗಳೂರು ಪೊಲೀಸರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.
(5 / 5)
ಇದಕ್ಕೂ ಮೊದಲು ಮಂಗಳೂರು ಆಟೋರಿಕ್ಷಾ ಸ್ಫೋಟದ ಆರೋಪಿ ಶಾರೀಖ್ ನಿವಾಸದಿಂದ ವಶಪಡಿಸಿಕೊಂಡ ವಸ್ತುಗಳನ್ನು‌, ಮಂಗಳೂರು ಪೊಲೀಸರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.(ANI)

    ಹಂಚಿಕೊಳ್ಳಲು ಲೇಖನಗಳು