logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  R Ashwin Net Worth: ನಿವೃತ್ತಿ ಹೊಂದಿದ ಆರ್​ ಅಶ್ವಿನ್ ಆಸ್ತಿ ಎಷ್ಟಿರಬಹುದು, ಐಷಾರಾಮಿ ಮನೆ ಬೆಲೆ ಎಷ್ಟು, ಯಾವೆಲ್ಲಾ ಕಾರುಗಳಿವೆ?

R Ashwin Net Worth: ನಿವೃತ್ತಿ ಹೊಂದಿದ ಆರ್​ ಅಶ್ವಿನ್ ಆಸ್ತಿ ಎಷ್ಟಿರಬಹುದು, ಐಷಾರಾಮಿ ಮನೆ ಬೆಲೆ ಎಷ್ಟು, ಯಾವೆಲ್ಲಾ ಕಾರುಗಳಿವೆ?

Dec 22, 2024 03:18 PM IST

Ravichandran Ashwin: ಟೀಮ್ ಇಂಡಿಯಾದ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಅವರ ನೆಟ್​ವರ್ತ್​ ಎಷ್ಟಿದೆ ಎನ್ನುವುದರ ಬಗ್ಗೆ ಹುಡುಕಾಟ ನಡೆಯುತ್ತಿದೆ.

  • Ravichandran Ashwin: ಟೀಮ್ ಇಂಡಿಯಾದ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಅವರ ನೆಟ್​ವರ್ತ್​ ಎಷ್ಟಿದೆ ಎನ್ನುವುದರ ಬಗ್ಗೆ ಹುಡುಕಾಟ ನಡೆಯುತ್ತಿದೆ.
ರವಿಚಂದ್ರನ್ ಅಶ್ವಿನ್ ಭಾರತದ ಅತ್ಯುತ್ತಮ ಆಲ್​​ರೌಂಡರ್​ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (537) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಶ್ವಿನ್, ಬ್ರಿಸ್ಬೇನ್ ಟೆಸ್ಟ್​ ನಂತರ ಡಿಸೆಂಬರ್​​​ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.
(1 / 5)
ರವಿಚಂದ್ರನ್ ಅಶ್ವಿನ್ ಭಾರತದ ಅತ್ಯುತ್ತಮ ಆಲ್​​ರೌಂಡರ್​ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (537) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಶ್ವಿನ್, ಬ್ರಿಸ್ಬೇನ್ ಟೆಸ್ಟ್​ ನಂತರ ಡಿಸೆಂಬರ್​​​ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.(AFP)
ನಿವೃತ್ತಿಯಾಗಿ ಕೆಲವೇ ದಿನಗಳಾದರೂ ರವಿಚಂದ್ರನ್ ಅಶ್ವಿನ್ ಎಷ್ಟು ಆಸ್ತಿ ಹೊಂದಿದ್ದಾರೆ ಎನ್ನುವುದರ ಕುರಿತು ಗೂಗಲ್​​ನಲ್ಲಿ ಸರ್ಚಿಂಗ್ ನಡೆಯುತ್ತಿದೆ. ಅಶ್ವಿನ್ ಅವರು ಸುಮಾರು 135 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಅವರ ಆಸ್ತಿಯ ಮೊತ್ತ ಭಾರತೀಯ ಕರೆನ್ಸಿಯಲ್ಲಿ 117 ಕೋಟಿ ರೂಪಾಯಿ ಇತ್ತು. ಈ ವರ್ಷ ಅದು ಸುಮಾರು 18 ಕೋಟಿ ರೂ ಹೆಚ್ಚಾಗಿದೆ.
(2 / 5)
ನಿವೃತ್ತಿಯಾಗಿ ಕೆಲವೇ ದಿನಗಳಾದರೂ ರವಿಚಂದ್ರನ್ ಅಶ್ವಿನ್ ಎಷ್ಟು ಆಸ್ತಿ ಹೊಂದಿದ್ದಾರೆ ಎನ್ನುವುದರ ಕುರಿತು ಗೂಗಲ್​​ನಲ್ಲಿ ಸರ್ಚಿಂಗ್ ನಡೆಯುತ್ತಿದೆ. ಅಶ್ವಿನ್ ಅವರು ಸುಮಾರು 135 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಅವರ ಆಸ್ತಿಯ ಮೊತ್ತ ಭಾರತೀಯ ಕರೆನ್ಸಿಯಲ್ಲಿ 117 ಕೋಟಿ ರೂಪಾಯಿ ಇತ್ತು. ಈ ವರ್ಷ ಅದು ಸುಮಾರು 18 ಕೋಟಿ ರೂ ಹೆಚ್ಚಾಗಿದೆ.(HT_PRINT)
ಭಾರತೀಯ ಕ್ರಿಕೆಟ್​​​ನಿಂದಲೂ ಅಶ್ವಿನ್ ಉತ್ತಮ ಸಂಬಳ ಪಡೆಯುತ್ತಿದ್ದರು. ಅಶ್ವಿನ್ ಬಿಸಿಸಿಐನೊಂದಿಗೆ ಗ್ರೇಡ್ ಎ ಒಪ್ಪಂದ ಪಡೆದಿದ್ದಾರೆ. ಅಂದರೆ, ಅವರು ವಾರ್ಷಿಕ 5 ಕೋಟಿ ರೂಪಾಯಿಗಳ ಸಂಬಳ ಪಡೆಯುತ್ತಿದ್ದರು. ಪಂದ್ಯದ ಶುಲ್ಕ ಸೇರಿದಂತೆ ಮಂಡಳಿಯಿಂದ ಸುಮಾರು 10 ಕೋಟಿ ರೂಪಾಯಿ ಗಳಿಸುತ್ತಿದ್ದರು.
(3 / 5)
ಭಾರತೀಯ ಕ್ರಿಕೆಟ್​​​ನಿಂದಲೂ ಅಶ್ವಿನ್ ಉತ್ತಮ ಸಂಬಳ ಪಡೆಯುತ್ತಿದ್ದರು. ಅಶ್ವಿನ್ ಬಿಸಿಸಿಐನೊಂದಿಗೆ ಗ್ರೇಡ್ ಎ ಒಪ್ಪಂದ ಪಡೆದಿದ್ದಾರೆ. ಅಂದರೆ, ಅವರು ವಾರ್ಷಿಕ 5 ಕೋಟಿ ರೂಪಾಯಿಗಳ ಸಂಬಳ ಪಡೆಯುತ್ತಿದ್ದರು. ಪಂದ್ಯದ ಶುಲ್ಕ ಸೇರಿದಂತೆ ಮಂಡಳಿಯಿಂದ ಸುಮಾರು 10 ಕೋಟಿ ರೂಪಾಯಿ ಗಳಿಸುತ್ತಿದ್ದರು.(HT_PRINT)
ರವಿಚಂದ್ರನ್ ಅಶ್ವಿನ್ ಐಪಿಎಲ್​ನಲ್ಲಿ ಉತ್ತಮ ಆದಾಯ ಗಳಿಸಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 9.75 ಕೋಟಿ ರೂ.ಗೆ ಖರೀದಿಸಿತು. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಪ್ರತಿ ಆವೃತ್ತಿಯಲ್ಲೂ 5 ಕೋಟಿ ರೂ.ಗಳನ್ನು ಪಡೆಯುತ್ತಿದ್ದರು. ಜಾಹೀರಾತು ಮೂಲಕವೂ ಕೋಟಿಗಟ್ಟಲೆ ಆದಾಯ ಪಡೆಯುತ್ತಿದ್ದರು ಎಂದು ವರದಿಯಾಗಿದೆ.
(4 / 5)
ರವಿಚಂದ್ರನ್ ಅಶ್ವಿನ್ ಐಪಿಎಲ್​ನಲ್ಲಿ ಉತ್ತಮ ಆದಾಯ ಗಳಿಸಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿನಲ್ಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 9.75 ಕೋಟಿ ರೂ.ಗೆ ಖರೀದಿಸಿತು. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಪ್ರತಿ ಆವೃತ್ತಿಯಲ್ಲೂ 5 ಕೋಟಿ ರೂ.ಗಳನ್ನು ಪಡೆಯುತ್ತಿದ್ದರು. ಜಾಹೀರಾತು ಮೂಲಕವೂ ಕೋಟಿಗಟ್ಟಲೆ ಆದಾಯ ಪಡೆಯುತ್ತಿದ್ದರು ಎಂದು ವರದಿಯಾಗಿದೆ.(HT_PRINT)
ಅಷ್ಟೇ ಅಲ್ಲ, ಕ್ರಿಕೆಟಿಗ ಚೆನ್ನೈನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದರ ಬೆಲೆ ಸುಮಾರು 9 ಕೋಟಿ. ಇದಲ್ಲದೆ, ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಸುಮಾರು 26 ಕೋಟಿ ರೂಪಾಯಿ. ಅವರು ರೋಲ್ಸ್ ರಾಯ್ಸ್ ಮತ್ತು ಆಡಿಯಂತಹ ಬ್ರಾಂಡ್​ಗಳ ಕಾರುಗಳನ್ನು ಸಹ ಹೊಂದಿದ್ದಾರೆ ಎಂದು ವರದಿಯಾಗಿದೆ.
(5 / 5)
ಅಷ್ಟೇ ಅಲ್ಲ, ಕ್ರಿಕೆಟಿಗ ಚೆನ್ನೈನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದರ ಬೆಲೆ ಸುಮಾರು 9 ಕೋಟಿ. ಇದಲ್ಲದೆ, ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಸುಮಾರು 26 ಕೋಟಿ ರೂಪಾಯಿ. ಅವರು ರೋಲ್ಸ್ ರಾಯ್ಸ್ ಮತ್ತು ಆಡಿಯಂತಹ ಬ್ರಾಂಡ್​ಗಳ ಕಾರುಗಳನ್ನು ಸಹ ಹೊಂದಿದ್ದಾರೆ ಎಂದು ವರದಿಯಾಗಿದೆ.(ANI)

    ಹಂಚಿಕೊಳ್ಳಲು ಲೇಖನಗಳು