logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್‌ಸಿಬಿಯ ಹೊಸ ಜೆರ್ಸಿ ಅನಾವರಣ, ಈ ಬಾರಿ ನೀಲಿ-ಕೆಂಪು ಬಣ್ಣದ ಥೀಮ್‌ನಲ್ಲಿ ಕಣಕ್ಕಿಳಿಯಲಿದೆ ನಮ್ಮ ಬೆಂಗಳೂರು

ಆರ್‌ಸಿಬಿಯ ಹೊಸ ಜೆರ್ಸಿ ಅನಾವರಣ, ಈ ಬಾರಿ ನೀಲಿ-ಕೆಂಪು ಬಣ್ಣದ ಥೀಮ್‌ನಲ್ಲಿ ಕಣಕ್ಕಿಳಿಯಲಿದೆ ನಮ್ಮ ಬೆಂಗಳೂರು

Mar 19, 2024 09:36 PM IST

ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹೊಸ ಜೆರ್ಸಿ ಬಿಡುಗಡೆಯಾಗಿದೆ. ಹೌದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಖುದ್ದು ವಿರಾಟ್‌ ಕೊಹ್ಲಿಯೇ ಕನ್ನಡದಲ್ಲಿ ಹೇಳಿದ್ದಾರೆ. ಈವರೆಗೆ ಜೆರ್ಸಿಯಲ್ಲಿದ್ದ ಕಪ್ಪು ಬಣ್ಣದ ಬದಲಿಗೆ ನೀಲಿ ಬಣ್ಣ ಕಾಣಿಸಿಕೊಂಡಿದೆ. ನೀಲಿ ಹಾಗೂ ಕೆಂಪು ಬಣ್ಣದ ಥೀಮ್‌ ಎದ್ದುಕಾಣುತ್ತಿದೆ.

  • ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹೊಸ ಜೆರ್ಸಿ ಬಿಡುಗಡೆಯಾಗಿದೆ. ಹೌದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಖುದ್ದು ವಿರಾಟ್‌ ಕೊಹ್ಲಿಯೇ ಕನ್ನಡದಲ್ಲಿ ಹೇಳಿದ್ದಾರೆ. ಈವರೆಗೆ ಜೆರ್ಸಿಯಲ್ಲಿದ್ದ ಕಪ್ಪು ಬಣ್ಣದ ಬದಲಿಗೆ ನೀಲಿ ಬಣ್ಣ ಕಾಣಿಸಿಕೊಂಡಿದೆ. ನೀಲಿ ಹಾಗೂ ಕೆಂಪು ಬಣ್ಣದ ಥೀಮ್‌ ಎದ್ದುಕಾಣುತ್ತಿದೆ.
ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ, ಬಹುನಿರೀಕ್ಷಿತ ಹೊಸ ಜೆರ್ಸಿ ಬಿಡುಗಡೆಯಾಗಿದೆ. ಕಡುನೀಲಿ ಬಣ್ಣದ ಜೆರ್ಸಿಯೊಂದಿಗೆ ಈ ಬಾರಿ ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದೆ.
(1 / 7)

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಹಲವು ಹೊಸತನಗಳೊಂದಿಗೆ ಕಣಕ್ಕಿಳಿಯಲಿದೆ. ಜೆರ್ಸಿ ಹಾಗೂ ಹೆಸರು ಹೊಸತಾಗಿದೆ. ಇದರೊಂದಿಗೆ ಡಬ್ಲ್ಯೂಪಿಎಲ್‌ನಲ್ಲಿ ವನಿತೆಯರ ತಂಡ ಕಪ್‌ ಗೆದ್ದ ಸಂಭ್ರಮವೂ ಇದೆ.
(2 / 7)

ಆರ್‌ಸಿಬಿ ವನಿತೆಯರ ತಂಡದ ನಾಯಕಿ ಸ್ಮೃತಿ ಮಂಧಾನ, ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಜೆರ್ಸಿ ಅನಾವರಣ ಸಂದರ್ಭ ಹಾಜರಿದ್ದರು. ಇದೇ ವೇಳೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಗೌರವ ಉಪಸ್ಥಿತಿ ವಹಿಸಿದರು.
(3 / 7)

ಅಧಿಕೃತವಾಗಿ ಜೆರ್ಸಿ ಅನಾವರಣಕ್ಕೂ ಮುಂಚಿತವಾಗಿಯೇ ಕೆಲವೊಂದು ಫೋಟೋಗಳು ಸೋರಿಕೆಯಾಗಿದ್ದವು. ಅದರಂತೆಯೇ ಕಪ್ಪು ಬದಲಿಗೆ ನೀಲಿ ಮತ್ತು ಕೆಂಪು ಬಣ್ಣಗಳ ಸಂಯೋಜನೆಯ ಜೆರ್ಸಿ ಬಿಡುಗಡೆ ಮಾಡಲಾಗಿದೆ. 
(4 / 7)

ಕೊಹ್ಲಿ ಮತ್ತು ಡು ಪ್ಲೆಸಿಸ್ ಅವರು ತಮ್ಮ ಟ್ರ್ಯಾಕ್ ಸೂಟ್‌ಗಳನ್ನು ತೆಗೆದು ಹೊಸ ಜೆರ್ಸಿಯನ್ನು ಅನಾವರಣ ಮಾಡಿದ್ದಾರೆ.
(5 / 7)

ಜೆರ್ಸಿ ಅನಾವರಣ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಕನ್ನಡದಲ್ಲಿ ಹೇಳಿದ್ದಾರೆ. 
(6 / 7)

ಕಾರ್ಯಕ್ರಮದಲ್ಲಿ ತಂಡದ ಹೆಸರನ್ನು ಕೂಡಾ ಅಧಿಕೃತವಾಗಿ ಬದಲಾಯಿಸಲಾಗಿದೆ. ರಾಯಲ್‌ ಚಾಲೆಂಜರ್ಸ್‌ ಬ್ಯಾಂಗಲೂರ್‌ ಬದಲಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಂದು ಹೆಸರಿಸಲಾಗಿದೆ.
(7 / 7)

    ಹಂಚಿಕೊಳ್ಳಲು ಲೇಖನಗಳು