logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mumbai Fire Accident: ಬಹುಮಹಡಿ ಕಟ್ಟಡದಲ್ಲಿ ಬೆಂಕಿ, ಕಿಟಕಿ ಹೊರಗೆ ನೇತಾಡಿ ಪ್ರಾಣ ಉಳಿಸಿಕೊಂಡ ನಿವಾಸಿಗಳು

Mumbai fire accident: ಬಹುಮಹಡಿ ಕಟ್ಟಡದಲ್ಲಿ ಬೆಂಕಿ, ಕಿಟಕಿ ಹೊರಗೆ ನೇತಾಡಿ ಪ್ರಾಣ ಉಳಿಸಿಕೊಂಡ ನಿವಾಸಿಗಳು

Oct 08, 2022 08:49 PM IST

ಮುಂಬೈನ ಚೆಂಬೂರ್ ಪ್ರದೇಶದ ವಸತಿ ಕಟ್ಟಡದ 12ನೇ ಮಹಡಿಯಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಅವಘಡದಲ್ಲಿ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಮುಂಬೈನ ಚೆಂಬೂರ್ ಪ್ರದೇಶದ ವಸತಿ ಕಟ್ಟಡದ 12ನೇ ಮಹಡಿಯಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಅವಘಡದಲ್ಲಿ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿಯಿಂದ ಮಹಡಿ ತುಂಬಾ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲಿದ್ದ ನಿವಾಸಿಗಳು ಕಿಟಕಿಯ ಮೂಲಕ ನೇತಾಡಿ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
(1 / 7)
ಬೆಂಕಿಯಿಂದ ಮಹಡಿ ತುಂಬಾ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲಿದ್ದ ನಿವಾಸಿಗಳು ಕಿಟಕಿಯ ಮೂಲಕ ನೇತಾಡಿ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.(HT Photo)
ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
(2 / 7)
ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.(HT Photo)
ಮಹಡಿಯ ಗೋಡೆಗಳು, ಕೊಠಡಿಗಳು, ಟೆರೇಸ್‌ ಮತ್ತು ಮೆಟ್ಟಿಲುಗಳಲ್ಲಿ ನಿಂತು ಬೆಂಕಿಯಿಂದ ರಕ್ಷಣೆ ಪಡೆಯುತ್ತಿದ್ದ ಸುಮಾರು 33 ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
(3 / 7)
ಮಹಡಿಯ ಗೋಡೆಗಳು, ಕೊಠಡಿಗಳು, ಟೆರೇಸ್‌ ಮತ್ತು ಮೆಟ್ಟಿಲುಗಳಲ್ಲಿ ನಿಂತು ಬೆಂಕಿಯಿಂದ ರಕ್ಷಣೆ ಪಡೆಯುತ್ತಿದ್ದ ಸುಮಾರು 33 ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.(HT Photo)
ಕಟ್ಟಡದಲ್ಲಿ ಸಿಲುಕಿಕೊಂಡವರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ವೇಳೆ ಇತರ ನಿವಾಸಿಗಳು ಕಾಯುತ್ತಿರುವ ದೃಶ್ಯ.
(4 / 7)
ಕಟ್ಟಡದಲ್ಲಿ ಸಿಲುಕಿಕೊಂಡವರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ವೇಳೆ ಇತರ ನಿವಾಸಿಗಳು ಕಾಯುತ್ತಿರುವ ದೃಶ್ಯ.(HT Photo)
ಎರಡು ಅಗ್ನಿಶಾಮಕ ವಾಹನಗಳು, ಜಂಬೋ ವಾಟರ್ ಟ್ಯಾಂಕರ್ ಮತ್ತು ಆಂಬ್ಯುಲೆನ್ಸ್ ಅನ್ನು ಸ್ಥಳಕ್ಕೆ ಕರೆಸಿ, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. 
(5 / 7)
ಎರಡು ಅಗ್ನಿಶಾಮಕ ವಾಹನಗಳು, ಜಂಬೋ ವಾಟರ್ ಟ್ಯಾಂಕರ್ ಮತ್ತು ಆಂಬ್ಯುಲೆನ್ಸ್ ಅನ್ನು ಸ್ಥಳಕ್ಕೆ ಕರೆಸಿ, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. (HT Photo)
ರೈಲ್ ವ್ಯೂ ಹೌಸಿಂಗ್ ಸೊಸೈಟಿ ಎಂಬ ಕಟ್ಟಡದಲ್ಲಿ ಮಧ್ಯಾಹ್ನ 2:45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
(6 / 7)
ರೈಲ್ ವ್ಯೂ ಹೌಸಿಂಗ್ ಸೊಸೈಟಿ ಎಂಬ ಕಟ್ಟಡದಲ್ಲಿ ಮಧ್ಯಾಹ್ನ 2:45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.(ANI)
ಅವಘಡ ನಡೆದ ಸ್ಥಳದಲ್ಲಿ ಅಗ್ನಿಶಾಮಕ ಯಂತ್ರಗಳು.
(7 / 7)
ಅವಘಡ ನಡೆದ ಸ್ಥಳದಲ್ಲಿ ಅಗ್ನಿಶಾಮಕ ಯಂತ್ರಗಳು.(PTI)

    ಹಂಚಿಕೊಳ್ಳಲು ಲೇಖನಗಳು