logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmeesha Tolpadi: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ನೆಪದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿಗೆ ಫೋಟೊ ಗೌರವ

Lakshmeesha Tolpadi: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ನೆಪದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿಗೆ ಫೋಟೊ ಗೌರವ

Dec 22, 2023 07:17 AM IST

ಹಿರಿಯ ಲೇಖಕ, ಚಿಂತಕ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕ ನೆಪದಲ್ಲಿ ಅವರ ವಿವಿಧ ಭಾವ- ಭಂಗಿಗಳ ಫೋಟೋ ಗೌರವ ಇಲ್ಲಿದೆ. ಪ್ರಶಸ್ತಿಗೇ ಪ್ರಶಸ್ತಿ ಬಂದಂತಾಯಿತು ಎನ್ನುತ್ತಾ ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ ಅವರು ಕ್ಲಿಕ್ ಮಾಡಿದ ಲಕ್ಷ್ಮೀಶ ತೋಳ್ಪಾಡಿಯವರ ಚಿತ್ರಗಳ ಗುಚ್ಛ ಇಲ್ಲಿದೆ.

'ಭಾಷಣವೊಂದನ್ನು ಕೇಳಿದ ಮೇಲೆ ಅದೇ ಗುಂಗಿನಲ್ಲಿ ಇರುವಂತೆ ಮಾಡಿದ ಮತ್ತು ಮತ್ತೊಮ್ಮೆ ಆ ವಿಷಯವನ್ನು ಚಿಂತಿಸುವಂತೆ ಪರಿಣಾಮ ಬೀರುವ ಉಪನ್ಯಾಸ ನೀಡುವವರು ಇದ್ದರೆ ಅವರು ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರು' ಹೀಗನ್ನುತ್ತಾರೆ ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಕ್ಷ್ಮೀಶ ತೋಳ್ಪಾಡಿಯವರಿಗೆ ಬಂದದ್ದು, ಪ್ರಶಸ್ತಿಗೇ ಪ್ರಶಸ್ತಿ ಬಂದಂತಾಯಿತು ಎಂಬ ಅನಿಸಿಕೆ ಅವರದ್ದು. ಲಕ್ಷ್ಮೀಶ ತೋಳ್ಪಾಡಿಯವರ ಮತ್ತು ಅವರ ಕುಟುಂಬದ ಫೊಟೋಗಳನ್ನು ಶಿವಸುಬ್ರಹ್ಮಣ್ಯ ಕ್ಲಿಕ್ ಮಾಡಿದ್ದು, ಅವುಗಳು ಇಲ್ಲಿವೆ.
(1 / 7)
'ಭಾಷಣವೊಂದನ್ನು ಕೇಳಿದ ಮೇಲೆ ಅದೇ ಗುಂಗಿನಲ್ಲಿ ಇರುವಂತೆ ಮಾಡಿದ ಮತ್ತು ಮತ್ತೊಮ್ಮೆ ಆ ವಿಷಯವನ್ನು ಚಿಂತಿಸುವಂತೆ ಪರಿಣಾಮ ಬೀರುವ ಉಪನ್ಯಾಸ ನೀಡುವವರು ಇದ್ದರೆ ಅವರು ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರು' ಹೀಗನ್ನುತ್ತಾರೆ ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಕ್ಷ್ಮೀಶ ತೋಳ್ಪಾಡಿಯವರಿಗೆ ಬಂದದ್ದು, ಪ್ರಶಸ್ತಿಗೇ ಪ್ರಶಸ್ತಿ ಬಂದಂತಾಯಿತು ಎಂಬ ಅನಿಸಿಕೆ ಅವರದ್ದು. ಲಕ್ಷ್ಮೀಶ ತೋಳ್ಪಾಡಿಯವರ ಮತ್ತು ಅವರ ಕುಟುಂಬದ ಫೊಟೋಗಳನ್ನು ಶಿವಸುಬ್ರಹ್ಮಣ್ಯ ಕ್ಲಿಕ್ ಮಾಡಿದ್ದು, ಅವುಗಳು ಇಲ್ಲಿವೆ.(Photo Courtesy K Shiva Subramanya Sr. Journalist)
ಮೈಸೂರಿನಲ್ಲಿ ವಿದುಷಿ ಡಾ. ಕೃಪಾ ಫಡ್ಕೆಯವರ ನೃತ್ಯಗಿರಿ ಸಂಸ್ಥೆಯು ಲಕ್ಷ್ಮೀಶ ತೋಳ್ಪಾಡಿಯವರ ‘ಕೃಷ್ಣ ಕಥೆ’ ಕುರಿತ ಉಪನ್ಯಾಸವನ್ನು 3 ದಿನಗಳ ಕಾಲ ಆರು ತಿಂಗಲ ಹಿಂದೆ ಏರ್ಪಡಿಸಿತ್ತು. ಆಗ ತೋಳ್ಪಾಡಿ ಅವರನ್ನು ಪುತ್ತೂರಿನ ಶಾಂತಿಗೋಡು ಗ್ರಾಮದ ಮನೆಯಿಂದ ಮೈಸೂರಿಗೆ ಮತ್ತು ಮೈಸೂರಿನಿಂದ ಅವರ ಮನೆಗೆ ಕರೆದುಕೊಂಡು ಹೋಗಿ ಮುಟ್ಟಿಸುವ ಜವಾಬ್ದಾರಿಯನ್ನು ನಾನಾಗಿಯೇ ವಹಿಸಿಕೊಂಡಿದ್ದೆ. 75 ರ ಇಳಿವಯಸ್ಸಿನಲ್ಲೂ ಪ್ರಯಾಣದಲ್ಲಿ ನಿದ್ರೆ ಮಾಡಿದವರಲ್ಲ. ದಾರಿಯುದ್ದಕ್ಕೂ ಮಾತು ಮಾತು ಎಂಬುದನ್ನು ನೆನಪಿಸಿಕೊಂಡಿದ್ದಾರೆ ಕೆ.ಶಿವಸುಬ್ರಹ್ಮಣ್ಯ ಅವರು.
(2 / 7)

ಅವರು ನೀಡುವ ಉಪನ್ಯಾಸದಲ್ಲಿ, ಅವರ ಬರಹದಲ್ಲಿ ಕಾಣುವ ವಿಶೇಷ ಚಿಂತನೆಗಳು ಮತ್ತು ಮುಗ್ಧತೆ ಎರಡೂ ನಿಜಕ್ಕೂ ಓದುಗರಾಗಿ ನಮಗೆ ಬೆರಗು ಹುಟ್ಟಿಸುವಂತಾದ್ದು ಎಂದು ಹೇಳುತ್ತ ಶಿವಸುಬ್ರಹ್ಮಣ್ಯ ಅವರು, ಲಕ್ಷ್ಮೀ ತೋಳ್ಪಾಡಿ ಅವರದೇ ವಿವಿಧ ಭಾವ ಭಂಗಿಯ ಫೋಟೋಗಳನ್ನು ಕ್ಲಿಕ್ಕಿಸಿ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
(3 / 7)

ಪುತ್ರ ಪರೀಕ್ಷಿತ್ ಮತ್ತು ಮೊಮ್ಮಗ ಪಾರ್ಥ ಅವರೊಂದಿಗೆ ಲಕ್ಷ್ಮೀಶ ತೋಳ್ಪಾಡಿ
(4 / 7)
ಪುತ್ರ ಪರೀಕ್ಷಿತ್ ಮತ್ತು ಮೊಮ್ಮಗ ಪಾರ್ಥ ಅವರೊಂದಿಗೆ ಲಕ್ಷ್ಮೀಶ ತೋಳ್ಪಾಡಿ
ಮನೆಯ ಎದುರು ಕುಟುಂಬ ಸದಸ್ಯರೊಂದಿಗೆ ಮತ್ತು ಇನ್ನೊಂದು ಚಿತ್ರದಲ್ಲಿ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಲಕ್ಷ್ಮೀಶ ತೋಳ್ಪಾಡಿ
(5 / 7)

ಪುತ್ರಿ ಮಾಳವಿಕರೊಂದಿಗೆ ಲಕ್ಷ್ಮೀಶ ತೋಳ್ಪಾಡಿ
(6 / 7)
ಪುತ್ರಿ ಮಾಳವಿಕರೊಂದಿಗೆ ಲಕ್ಷ್ಮೀಶ ತೋಳ್ಪಾಡಿ
ಪುತ್ತೂರು ಬಳಿಯ ಚಂದ್ರಣ್ಣನವರ ಸೌಗಂಧಿಕಾದಲ್ಲಿ  ಹಿರಿಯ ಪತ್ರಕರ್ತ ಕೆ.ಶಿವಸುಬ್ರಹ್ಮಣ್ಯ ಅವರ ಛಾಯಾಚಿತ್ರಗಳ ಪ್ರದರ್ಶನಕ್ಕೆ ಪತ್ನಿ ಮತ್ತು ಮಗಳ ಜತೆ ಭೇಟಿ ನೀಡಿದ್ದ ಲಕ್ಷ್ಮೀಶ ತೋಳ್ಪಾಡಿ
(7 / 7)

    ಹಂಚಿಕೊಳ್ಳಲು ಲೇಖನಗಳು