logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತತ್ಸಮ ತದ್ಭವ, ಪರಿಮಳಾ ಡಿಸೋಜಾ ಸೇರಿ ಈ ವಾರ ತೆರೆ ಕಾಣುತ್ತಿರುವ ಸಿನಿಮಾಗಳ ಲಿಸ್ಟ್‌ ಇಲ್ಲಿದೆ

ತತ್ಸಮ ತದ್ಭವ, ಪರಿಮಳಾ ಡಿಸೋಜಾ ಸೇರಿ ಈ ವಾರ ತೆರೆ ಕಾಣುತ್ತಿರುವ ಸಿನಿಮಾಗಳ ಲಿಸ್ಟ್‌ ಇಲ್ಲಿದೆ

Sep 13, 2023 03:29 PM IST

ಗುರುವಾರ, ಶುಕ್ರವಾರ ಎಂದರೆ ಆ ದಿನ ಸಿನಿಪ್ರಿಯರಿಗೆ ಹಬ್ಬ. ಹೊಸ ಹೊಸ ಸಿನಿಮಾಗಳು ಪ್ರತಿ ‍ಶುಕ್ರವಾರ ತೆರೆ ಕಾಣುತ್ತದೆ. ಕೆಲವೊಂದು ಗುರುವಾರ ಕೂಡಾ ರಿಲೀಸ್‌ ಆಗುತ್ತವೆ. 

ಸೆಪ್ಟೆಂಬರ್‌ 15  ನಾಲ್ಕು ಕನ್ನಡ ಸಿನಿಮಾಗಳು ಸೇರಿ ತೆಲುಗು, ಮಲಯಾಳಂ, ತಮಿಳಿನಲ್ಲಿ ಕೆಲವೊಂದು ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಈ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ. 
(1 / 12)

ಮೇಘನಾ ರಾಜ್‌ ಸರ್ಜಾ ಕಮ್‌ ಬ್ಯಾಕ್‌ ಸಿನಿಮಾ 'ತತ್ಸಮ ತದ್ಭವ' ಸಿನಿಮಾ ಸೆಪ್ಟೆಂಬರ್‌ 15ಕ್ಕೆ ತೆರೆ ಕಾಣುತ್ತಿದೆ. ಕೊಲೆಯೊಂದರ ಸುತ್ತ ಸುತ್ತುವ ಕಥೆ ಹೊಂದಿರುವ ಈ ಚಿತ್ರದಲ್ಲಿ ಮೇಘನಾ ರಾಜ್‌, ಪ್ರಜ್ವಲ್‌ ದೇವರಾಜ್‌, ನಾಗಾಭರಣ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಿಬಿ ಸ್ಟುಡಿಯೋಸ್‌ ಅನ್ವಿತ್‌ ಸಿನಿಮಾಸ್‌ ಬ್ಯಾನರ್‌ ಅಡಿ 'ತತ್ಸಮ ತದ್ಭವ' ಚಿತ್ರವನ್ನು ಪನ್ನಗಾಭರಣ, ಸ್ಫೂರ್ತಿ ಅನಿಲ್‌, ಚೇತನ್‌ ನಂಜುಂಡಯ್ಯ ಜೊತೆ ಸೇರಿ ನಿರ್ಮಿಸಿದ್ದಾರೆ. ವಿಶಾಲ್‌ ಆತ್ರೇಯ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, 
(2 / 12)

ಶ್ರುತಿ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ '13' ಸಿನಿಮಾ ಇದೇ ಶುಕ್ರವಾರ ರಿಲೀಸ್‌ ಆಗುತ್ತಿದೆ.  ರಾಘವೇಂದ್ರ ರಾಜಕುಮಾರ್‌, ಶ್ರುತಿ, ಪ್ರಮೋದ್‌ ಶೆಟ್ಟಿ , ವೇದಾಂತ್‌ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕೆ ನರೇಂದ್ರ ಬಾಬು ಆಕ್ಷನ್‌ ಕಟ್‌ ಹೇಳಿದ್ದಾರೆ. 
(3 / 12)

ಟೇಲ್ಸ್‌ ಆಫ್‌ ಮಹಾನಗರ ಕನ್ನಡ ಸಿನಿಮಾ ಕೂಡಾ ಇದೇ ವಾರ ತೆರೆಗೆ ಬರುತ್ತಿದೆ. ಅಥರ್ವ್‌, ರೆಮೋಲಾ, ಪ್ರತಿಭಾ, ಆರ್‌ಜೆ ಅನೂಪ್‌ ಹಾಗು ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಗೆಜ್ಜೆನಾದ ವಿಜಯ್‌ ನಿರ್ಮಾಣದ ಚಿತ್ರಕ್ಕೆ ಕಿರಣ್‌ ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ 15ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ. 
(4 / 12)

ಸಸ್ಪೆನ್ಸ್‌ ಥ್ರಿಲ್ಲರ್‌ 'ಪರಿಮಳಾ ಡಿಸೋಜಾ' ಚಿತ್ರ ಇದೇ 15ಕ್ಕೆ ರಿಲೀಸ್‌ ಆಗ್ತಿದೆ. ವಿಲೇಜ್ ರೋಡ್ ಫಿಲ್ಮ್ಸ್‌ ಬ್ಯಾನರ್‌ ಅಡಿ ಈ ಚಿತ್ರವನ್ನು ನಿರ್ಮಿಸಿ ನಟಿಸಿದ್ದಾರೆ. ಡಾ ಗಿರಿಧರ್ ಹೆಚ್‌ಟಿ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ ಭವ್ಯ, ಶ್ರೀನಿವಾಸ್‌ ಪ್ರಭು, ಕೋಮಲ ಬನವಾಸೆ, ಸುನೀಲ್ ಮೋಹಿತ್, ರೋಹಿಣಿ ಜಗನ್ನಾಥ, ಚಂದನಾ ಶ್ರೀನಿವಾಸ ಹಾಗೂ ಇನ್ನಿತರರು ನಟಿಸಿದ್ದಾರೆ. 
(5 / 12)

ಶಿವ ಎಂಎಸ್‌ಕೆ ನಿರ್ಮಾಣದಲ್ಲಿ ಅಭಯ ಬೆತ್ತಿಗಂಟಿ ನಿರ್ದೇಶನದ 'ರಾಮಣ್ಣ ಯೂತ್‌' ತೆಲುಗು ಸಿನಿಮಾ ಶುಕ್ರವಾರ ರಿಲೀಸ್‌ ಆಗುತ್ತಿದೆ. ನಿರ್ದೇಶಕ ಅಭಯ್‌ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ತಾಕುಬೋತು ರಮೇಶ್‌, ವಿಷ್ಣು, ಶ್ರೀಕಾಂತ್‌ ಅಯ್ಯಂಗಾರ್‌ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. 
(6 / 12)

ಕಾರ್ತಿಕ್‌ ರತ್ನ, ಗೋಲ್ಡಿ ನಿಸ್ಸಿ, ಎಸ್ತರ್‌ ನರೊಹ, ರವಿ ಬಾಬು, ಸತ್ಯ ನಟನೆಯ 'ಛಾಂಗುರೇ ಬಂಗಾರುಬಾಬು' ಸಿನಿಮಾ ಸೆಪ್ಟೆಂಬರ್‌ 15ಕ್ಕೆ ತೆರೆ ಕಾಣುತ್ತಿದೆ. ಆರ್‌ಟಿ ಟೀಮ್‌ ವರ್ಕ್ಸ್‌ ಬ್ಯಾನರ್‌ ಅಡಿ ಮಾಸ್‌ ಮಹಾರಾಜ ರವಿತೇಜ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸತೀಶ್‌ ವರ್ಮಾ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 
(7 / 12)

ವಿಶಾಲ್‌ ಅಭಿನಯದ ಬಹುನಿರೀಕ್ಷಿತ 'ಮಾರ್ಕ್‌ ಆಂಟೋನಿ' ಶುಕ್ರವಾರ ರಿಲೀಸ್‌ ಆಗುತ್ತಿದೆ. ಎಸ್‌ ವಿನೋದ್‌ ಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದು ಅಧಿಕ್‌ ರವಿಚಂದ್ರನ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಶಾಲ್‌‌ ,ಎಸ್‌ಜೆ ಸೂರ್ಯ, ಸುನಿಲ್‌, ರಿತು ವರ್ಮಾ, ಅಭಿನಯದ ಹಾಗೂ ಇನ್ನಿತರರು ನಟಿಸಿದ್ದಾರೆ. 
(8 / 12)

ಪ್ರೀತಿ ಶಂಕರ್‌, ಹರಿ ಉತ್ರ ನಿರ್ಮಾಣದಲ್ಲಿ ಶರತ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ವಾತಿಯಾರ್ ಕಲ್ಪಂತಟ್ಟ ಕುಜು' ತಮಿಳು ಸಿನಿಮಾ 15 ರಂದು ರಿಲೀಸ್‌ ಆಗುತ್ತಿದೆ. ಚಿತ್ರವನ್ನು ಹರಿ ಉತ್ರ ನಿರ್ದೇಶಿಸಿದ್ದು ಆರ್ಯ ಜೈನ್‌, ಕುರುಪ್ಪು, ಮದನ್‌ ಹಾಗೂ ಇನ್ನಿತರರು ನಟಿಸಿದ್ದಾರೆ. 
(9 / 12)

ಮಲಯಾಳಂನ ಆಕ್ಷನ್‌ ಕ್ರೈಂ ಸಿನಿಮಾ 'ಕಾಸರಗೋಲ್ಡ್‌' ಇದೇ ವಾರ ಬಿಡುಗಡೆ ಆಗುತ್ತಿದೆ. ವಿಕ್ರಮ್‌ ಮೆಹ್ರಾ, ಸೂರಜ್‌ ಕುಮಾರ್‌, ಸಿದ್ದಾರ್ಥ್‌ ಆನಂದ್‌ ಮೂವರೂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೃದುಲ್‌ ನಾಯರ್‌ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಆಸಿಫ್‌ ಅಲಿ, ಸನ್ನಿ, ವಿನಾಯಕನ್‌, ಮಾಳವಿಕಾ ಶ್ರೀನಾಥ್‌ ಹಾಗೂ ಇನ್ನಿತರರು ನಟಿಸಿದ್ದಾರೆ. 
(10 / 12)

ಕ್ರೈಂ, ಹಾರರ್‌ ಕಥೆ ಹೊಂದಿರುವ 'ಎ ಹಂಟಿಂಗ್‌ ಇನ್‌ ವೆನಿಸ್‌' ಹಾಲಿವುಡ್‌ ಸಿನಿಮಾ ಸೆ.15ಕ್ಕೆ ರಿಲೀಸ್‌ ಆಗುತ್ತಿದೆ. ಸಿಮನ್‌ ಕಿನ್‌ಬರ್ಗ್‌, ರಿಡ್ಲೆ ಸ್ಕಾಟ್‌ ಚಿತ್ರವನ್ನು ನಿರ್ಮಿಸಿದ್ದು ಕೆನ್ನಿತ್‌ ಬ್ರನಗ್‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕೆನ್ನಿತ್‌ ಬ್ರನಗ್‌, ಕೆಮಿಲಿ ಕೊತಿನ್‌, ಕೆಲ್ಲಿ ರಿಲೆ, ಟೀನಾ ಫೆ ಹಾಗೂ ಇನ್ನಿತರರು ನಟಿಸಿದ್ದಾರೆ. 
(11 / 12)

ಇವುಗಳನ್ನು ಹೊರತುಪಡಿಸಿ 'ಬಾಂಬೈ ಮೇರಿ ಜಾನ್‌' ವೆಬ್‌ ಸೀರೀಸ್‌ ಸೆಪ್ಟೆಂಬರ್‌ 14 ರಂದು ಅಮೆಜಾನ್‌ ಪ್ರೈಂನಲ್ಲಿ ರಿಲೀಸ್‌ ಆಗುತ್ತಿದೆ. ಕೆಕೆ ಮನೆನ್‌, ಅವಿನಾಶ್‌ ತಿವಾರಿ, ನಿವೇದಿತಾ ಭಟ್ಟಾಚಾರ್ಯ ಈ ಸೀರೀಸ್‌ನಲ್ಲಿ ನಟಿಸಿದ್ದಾರೆ. ಸುಜಾತ್‌ ಸೌದಾಗರ್‌, ಈ ಸೀರೀಸ್‌ ನಿರ್ದೇಶನ ಮಾಡಿದ್ದಾರೆ. 
(12 / 12)

    ಹಂಚಿಕೊಳ್ಳಲು ಲೇಖನಗಳು