logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yuva Movie: ಯಾರಿವರು ಗೋಪಾಲಕೃಷ್ಣ ದೇಶಪಾಂಡೆ? ಯುವ ಸಿನಿಮಾದಲ್ಲಿ ಗಮನಸೆಳೆದ ಪ್ರಿನ್ಸಿಪಾಲ್‌, ಸೀರಿಯಸ್‌ಗೂ ಸೈ ನಗಿಸಲೂ ಸೈ

Yuva Movie: ಯಾರಿವರು ಗೋಪಾಲಕೃಷ್ಣ ದೇಶಪಾಂಡೆ? ಯುವ ಸಿನಿಮಾದಲ್ಲಿ ಗಮನಸೆಳೆದ ಪ್ರಿನ್ಸಿಪಾಲ್‌, ಸೀರಿಯಸ್‌ಗೂ ಸೈ ನಗಿಸಲೂ ಸೈ

Mar 29, 2024 09:07 PM IST

ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದ ಪೋಷಕ ಪಾತ್ರಗಳಲ್ಲಿ ಅಚ್ಯುತ್‌ ಕುಮಾರ್‌ ಮಾತ್ರವಲ್ಲದೆ ಇನ್ನೊಬ್ಬ ನಟ ಪ್ರೇಕ್ಷಕರ ಗಮನಸೆಳೆದಿದ್ದಾರೆ. ಖಡಕ್‌ ಪ್ರಿನ್ಸಿಪಾಲ್‌ ಆಗಿ ನಟಿಸಿದ್ದ ಗೋಪಾಲಕೃಷ್ಣ ದೇಶಪಾಂಡೆ  ಹಾಸ್ಟೆಲ್‌ಗೆ ನುಗ್ಗಿ ಮಾಡಿದ ಕಾಮಿಡಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾರು ಗುರು ಇವರು? ಎಂದು ಪ್ರಶ್ನಿಸುತ್ತಿದ್ದಾರೆ.

  • ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದ ಪೋಷಕ ಪಾತ್ರಗಳಲ್ಲಿ ಅಚ್ಯುತ್‌ ಕುಮಾರ್‌ ಮಾತ್ರವಲ್ಲದೆ ಇನ್ನೊಬ್ಬ ನಟ ಪ್ರೇಕ್ಷಕರ ಗಮನಸೆಳೆದಿದ್ದಾರೆ. ಖಡಕ್‌ ಪ್ರಿನ್ಸಿಪಾಲ್‌ ಆಗಿ ನಟಿಸಿದ್ದ ಗೋಪಾಲಕೃಷ್ಣ ದೇಶಪಾಂಡೆ  ಹಾಸ್ಟೆಲ್‌ಗೆ ನುಗ್ಗಿ ಮಾಡಿದ ಕಾಮಿಡಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾರು ಗುರು ಇವರು? ಎಂದು ಪ್ರಶ್ನಿಸುತ್ತಿದ್ದಾರೆ.
ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾದ ಪೋಷಕ ಪಾತ್ರಗಳಲ್ಲಿ ಅಚ್ಯುತ್‌ ಕುಮಾರ್‌ ಮಾತ್ರವಲ್ಲದೆ ಇನ್ನೊಬ್ಬ ನಟ ಪ್ರೇಕ್ಷಕರ ಗಮನಸೆಳೆದಿದ್ದಾರೆ.  ಖಡಕ್‌ ಪ್ರಿನ್ಸಿಪಾಲ್‌ ಆಗಿ ನಟಿಸಿದ್ದ ಗೋಪಾಲಕೃಷ್ಣ ದೇಶಪಾಂಡೆ ಅವರು ಹಾಸ್ಟೆಲ್‌ಗೆ ನುಗ್ಗಿ ಮಾಡಿದ ಕಾಮಿಡಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾರು ಗುರು ಇವರು? ಸೀರಿಯಸ್‌ಗೂ ಸೈ ನಗಿಸಲೂ ಸೈ ಎಂದು ಪ್ರಶ್ನಿಸುತ್ತಿದ್ದಾರೆ. ಬನ್ನಿ ನಟ ಗೋಪಾಲಕೃಷ್ಣ ದೇಶಪಾಂಡೆಯವರ ಬಗ್ಗೆ ಒಂದಿಷ್ಟು ವಿವರ ತಿಳಿದುಕೊಳ್ಳೋಣ. 
(1 / 11)

ಯುವ ಸಿನಿಮಾದಲ್ಲಿ ಕಾಲೇಜು ಸ್ಟೋರಿ ಇದೆ. ಕಾಲೇಜ್‌ನ ಹಾಸ್ಟೆಲ್‌ ಹುಡುಗರು ಮತ್ತು ಲೋಕಲ್‌ ಹುಡುಗರ ನಡುವೆ ದೊಡ್ಡ ಮಟ್ಟದ ಯುದ್ಧ ನಡೆಯುತ್ತಿದೆ. ಈ ಸಮಯದಲ್ಲಿ ಕಾಲೇಜಿನ ಶಿಸ್ತನ್ನು ಕಾಪಾಡುವ ಹೊಣೆ ಪ್ರಿನ್ಸಿಪಾಲ್‌ ಅವರದ್ದು. ಆಡಳಿತ ಮಂಡಳಿಯ ಒತ್ತಡಕ್ಕೂ ಬಗ್ಗದೆ ಖಡಕ್‌ ನಿರ್ಧಾರ ಕೈಗೊಳ್ಳುತ್ತಾರೆ.
(2 / 11)

ಪ್ರಿನ್ಸಿಪಾಲ್‌ ಆಗಿ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಇವರದ್ದು ಸೀರಿಯಸ್‌ ಪಾತ್ರ. ತನ್ನ ಗಂಭೀರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಇಂತಹ ಗೋಪಾಲಕೃಷ್ಣ ದೇಶಪಾಂಡೆಗೆ ಆಡಳಿತ ಮಂಡಳಿಯ ನಿರ್ಧಾರವೊಂದು ಸರಿಎನಿಸುವುದಿಲ್ಲ. 
(3 / 11)

ಈ ಸಮಯದಲ್ಲಿ ಯುವ ಇರುವ ಹಾಸ್ಟೆಲ್‌ನೊಳಗೆ ಆಗಮಿಸಿ ಯುವನನ್ನೇ ಮುಂದೆ ಕೂರಿಸಿ ಪೆಗ್‌ ಕುಡಿಯುತ್ತಾರೆ. ಈ ಸಂದರ್ಭದಲ್ಲಿ ಇವರ ಮಾತುಗಳು, ಇವರ ನಟನೆ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದೆ. ಇದೇ ಕಾರಣಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ "ಯಾರಿವರು ಪ್ರಿನ್ಸಿಪಾಲ್‌, ಸೀರಿಯಸ್‌ಗೂ ಸೈ, ನಗಿಸಲೂ ಸೈ" ಎಂದೆಲ್ಲ ಸಿನಿಮಾ ವೀಕ್ಷಿಸಿದವರು ಕೇಳುತ್ತಿದ್ದಾರೆ.
(4 / 11)

ಇವರ ಹೆಸರು ಗೋಪಾಲಕೃಷ್ಣ ದೇಶಪಾಂಡೆ. ಇತ್ತೀಚಿನ ಶಾಖಾಹಾರಿ, ಸಪ್ತ ಸಾಗರದಾಚೆ ಎಲ್ಲೋ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಿವರು ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಹುನಗುಂದದವರು.  ಬಾಲ್ಯದಲ್ಲಿ ನೀನಾಸಂ ನಂಟು, ಬಳಿಕ ಸಿನಿಮಾದಲ್ಲಿ ಅಭಿನಯಸಿದ್ದಾರೆ. ನಾಟಕರಂಗದಲ್ಲಿ ಹಲವು ವರ್ಷ ತಿರುಗಾಟ ಮಾಡಿದ್ದಾರೆ.
(5 / 11)

ಸುಮಾರು ಒಂದು ದಶಕದ ಹಿಂದೆ ಇವರು ಬೆಂಗಳೂರಿಗೆ ಬಂದಿದ್ದರು. ಪುಟ್ಟಗೌರಿ ಮದುವೆ ಎಂಬ ಸೀರಿಯಲ್‌ನಲ್ಲಿ ಅವಕಾಶ ಪಡೆದರು. ಇದಾದ ಬಳಿಕ ಅಳಿಗುಳಿ ಮನೆ ಸೀರಿಯಲ್‌ನಲ್ಲಿ ಕಾಣಿಸಿಕೊಂಡರು. ಈ ಮೂಲಕ ಇವರು ಕನ್ನಡ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದರು.
(6 / 11)

ಇವರು ಸ್ಯಾಂಡಲ್‌ವುಡ್‌ಗೆ ಸಾಹೇಬ ಎಂಬ ಸಿನಿಮಾದ ಮೂಲಕ ಎಂಟ್ರಿ ನೀಡಿದರು. ತಾಯಿಗೆ ತಕ್ಕ ಮಗ ಸಿನಿಮಾದಲ್ಲಿಯೂ ನಟಿಸಿದ್ದರು. ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿಯೂ ನಟಿಸಿದ್ದಾರೆ. 
(7 / 11)

ಇದಾದ ಬಳಿಕ ಗೋಪಾಲಕೃಷ್ಣ ದೇಶಪಾಂಡೆ ಹತ್ತು ಹಲವು ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದಾರೆ. ಈಗಿನ ಬಹುಬೇಡಿಕೆಯ ಪೋಷಕ ನಟ ಎಂದರೂ ತಪ್ಪಾಗದು. ಇತ್ತೀಚೆಗೆ ಇವರು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿಯಲ್ಲಿ ನಟಿಸಿದ್ದರು. ಮಂಗಳವಾರ ರಜಾದಿನ, ಟೋಬಿ ಸಿನಿಮಾಗಳಲ್ಲೂ ನಟಿಸಿದ್ದಾರೆ.
(8 / 11)

ನಿರ್ದೇಶಕ ಹೇಮಂತ್‌ ರಾವ್‌ ಜತೆ ಸಪ್ತ ಸಾಗರದಾಚೆ  ಎಲ್ಲೋ ಸಿನಿಮಾದಲ್ಲಿ  ಖೈದಿ ಪಾತ್ರ ಮಾಡಿದ್ದಾರೆ. ರಕ್ಷಿತ್‌ ಶೆಟ್ಟಿ ಆಪ್ತನಾಗಿ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ಹೆಚ್ಚು ಸೀನ್‌ಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಶಾಖಾಹಾರಿ ಸಿನಿಮಾದಲ್ಲೂ ನಟಿಸಿದ್ದಾರೆ. 
(9 / 11)

ಮುಂಬರುವ ಹಲವು ಸಿನಿಮಾಗಳಲ್ಲಿಯೂ ಗೋಪಾಲ್‌ ಕೃಷ್ಣ ದೇಶ್‌ಪಾಂಡೆ ಅವಕಾಶ ಪಡೆದಿದ್ದಾರೆ. ಭೈರತಿ ರಣಗಲ್‌, ಗ್ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  
(10 / 11)

ಕನ್ನಡ ಸಿನಿಮಾ ಸುದ್ದಿ, ಸಿನಿಮಾ ವಿಮರ್ಶೆ, ಒಟಿಟಿ ಅಪ್‌ಡೇಟ್‌, ಸೀರಿಯಲ್‌ ವಿವರಗಳನ್ನು ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ. 
(11 / 11)

    ಹಂಚಿಕೊಳ್ಳಲು ಲೇಖನಗಳು