logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ui Movie: ಉಪೇಂದ್ರ ಯುಐ ಸಿನಿಮಾದ ನಾಯಕಿ ರೀಷ್ಮಾ ನಾಣಯ್ಯ ಬಗ್ಗೆ ನಿಮಗೆಷ್ಟು ಗೊತ್ತು? ಕೊಡವ ಸುಂದರಿಯ ಪರಿಚಯ

UI movie: ಉಪೇಂದ್ರ ಯುಐ ಸಿನಿಮಾದ ನಾಯಕಿ ರೀಷ್ಮಾ ನಾಣಯ್ಯ ಬಗ್ಗೆ ನಿಮಗೆಷ್ಟು ಗೊತ್ತು? ಕೊಡವ ಸುಂದರಿಯ ಪರಿಚಯ

Dec 18, 2024 02:24 PM IST

ui movie:ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಾಯಕಿಯಾಗಿ ಕೊಡಗಿನ ಸುಂದರಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಏಕ್‌ ಲವ್‌ ಯಾ, ರಣಾ, ಸ್ಪೂಕಿ ಕಾಲೇಜು, ಬಾನ ದಾರಿಯಲ್ಲಿ, ಯುಐ ಸಿನಿಮಾಗಳಲ್ಲಿ ನಟಿಸಿರುವ ಇವರ ಕೈಯಲ್ಲಿ ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳು ಇವೆ.

  • ui movie:ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಾಯಕಿಯಾಗಿ ಕೊಡಗಿನ ಸುಂದರಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಏಕ್‌ ಲವ್‌ ಯಾ, ರಣಾ, ಸ್ಪೂಕಿ ಕಾಲೇಜು, ಬಾನ ದಾರಿಯಲ್ಲಿ, ಯುಐ ಸಿನಿಮಾಗಳಲ್ಲಿ ನಟಿಸಿರುವ ಇವರ ಕೈಯಲ್ಲಿ ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳು ಇವೆ.
ui movie:ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಾಯಕಿಯಾಗಿ ಕೊಡಗಿನ ಸುಂದರಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಏಕ್‌ ಲವ್‌ ಯಾ, ರಣಾ, ಸ್ಪೂಕಿ ಕಾಲೇಜು, ಬಾನ ದಾರಿಯಲ್ಲಿ, ಯುಐ ಸಿನಿಮಾಗಳಲ್ಲಿ ನಟಿಸಿರುವ ಇವರ ಕೈಯಲ್ಲಿ ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳು ಇವೆ.
(1 / 10)

ಬೆಂಗಳೂರಿನಲ್ಲಿ ನೆಲೆಸಿರುವ ರೀಷ್ಮಾ ನಾಣಯ್ಯ ಕೊಡಗಿನ ಬೆಡಗಿ. ಕೊಡವ ಕುಟುಂಬದಲ್ಲಿ ಜನಿಸಿದ ಇವರು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಓದಿದ್ದು ಬೆಂಗಳೂರಿನಲ್ಲಿ. ಮಾಡೆಲಿಂಗ್‌ ಮೂಲಕ ವೃತ್ತಿ ಜೀವನ ಆರಂಭಿಸಿದರು. 
(2 / 10)

ಡಿಸೆಂಬರ್‌ 20ರಂದು ರೀಷ್ಮಾ ನಟನೆಯ ಯುಐ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಯುಐ ಸಿನಿಮಾದ ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ ಹಾಡಿನಲ್ಲಿ ರೀಷ್ಮಾ ಸಖತ್‌ ಡ್ಯಾನ್ಸ್‌ ಮಾಡಿದ್ದರು.
(3 / 10)

ದಿ ಲಿವನ್ ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್‌ನಲ್ಲಿ ರನ್ನರ್‌ ಅಪ್‌ ಆಗಿರುವ ಇವರು ಬಳಿಕ ಚಿತ್ರರಂಗದಲ್ಲಿ ಅವಕಾಶ ಪಡೆದರು. ಪ್ರೇಮ್‌ ನಿರ್ದೇಶನದ ಏಕ್ ಲವ್ ಯಾ (2022) ಚಿತ್ರದ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು.
(4 / 10)

ಇದಾದ ಬಳಿಕ ಇವರು ನಂದ ಕಿಶೋರ್‌ ನಿರ್ದೇಶನದ ರಾಣಾ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ 2022ರಲ್ಲಿ ಬಿಡುಗಡೆಯಾಗಿತ್ತು. 2023ರಲ್ಲಿ ಹಾರರ್‌ಸಿನಿಮಾ ಸ್ಪೂಕಿ ಕಾಲೇಜಿನಲ್ಲಿ ಮೆಲ್ಲುಸಿರೆ ಸವಿಗಾನ ಹಾಡಿನಲ್ಲಿ ಕಾಣಿಸಿಕೊಂಡರು. 
(5 / 10)

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ ಬಾನದಾರಿಯಲ್ಲಿ ನಟಿಸಿದರು. ಇದೀಗ ರೀಷ್ಮಾ ನಾಣಯ್ಯ ನಟನೆಯ ಯುಐ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.
(6 / 10)

ಧನಂಜಯ್‌ ಜತೆ ಅಣ್ಣಾ ಫ್ರಂ ಮೆಕ್ಸಿಕೊ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲ, ಕೆಡಿ ದಿ ಡೆವಿಲ್‌ ಸಿನಿಮಾದಲ್ಲಿಯೂ ಇವರು ನಟಿಸುತ್ತಿದ್ದಾರೆ. ಹೀಗೆ ಸ್ಯಾಂಡಲ್‌ವುಡ್‌ನ ಹೊಸ ಭರವಸೆಯ ನಟಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. 
(7 / 10)

ಯುಐ ಸಿನಿಮಾದಲ್ಲಿ ಉಪೇಂದ್ರ, ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್, ಸಾಧು ಕೋಕಿಲ, ಜಿಶು ಸೆಂಗುಪ್ತ, ಮುರಳಿ ಶರ್ಮಾ, ಇಂದ್ರಜಿತ್ ಲಂಕೇಶ್, ನಿಧಿ ಸುಬ್ಬಯ್ಯ, ಓಂ ಸಾಯಿ ಪ್ರಕಾಶ್, ದಿವಂಗತ ಗುರುಪ್ರಸಾದ್ ಮುಂತಾದವರು ನಟಿಸಿದ್ದಾರೆ. ಗುರುಪ್ರಸಾದ್‌ ಇತ್ತೀಚೆಗೆ ಸ್ವಹತ್ಯೆ ಮಾಡಿಕೊಂಡಿದ್ದರು.
(8 / 10)

ಯುಐ ಸಿನಿಮಾದ ಶುಕ್ರವಾರದ ಟಿಕೆಟ್‌ ಬುಕ್ಕಿಂಗ್‌ ಕೆಲವೆಡೆ ಆರಂಭವಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಬೆಳಗ್ಗಿನ ಶೋಗಳು ಹೌಸ್‌ಫುಲ್‌ ಕಾಣಿಸುತ್ತಿದೆ. ಉಪೇಂದ್ರರ ಸಿನಿಮಾದ ಕುರಿತು ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದೆ.  
(9 / 10)

ಈ ವರ್ಷ ಮಾರ್ಚ್‌ ತಿಂಗಳಲ್ಲಿ ಯುಐ ಸಿನಿಮಾದ "ಟ್ರೋಲಾಗುತ್ತೆ ಟ್ರೋಲಾಗುತ್ತೆ" ಹಾಡು ಬಿಡುಗಡೆಯಾಗಿತ್ತು. ರೀಷ್ಮಾ ನಾಣಯ್ಯ ಡ್ಯಾನ್ಸ್‌ ಮತ್ತು ಟ್ರೋಲ್‌ ಹಾಡು ವೈರಲ್‌ ಆಗಿತ್ತು. ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ, ಇನ್‌ಸ್ಟಾದಲ್ಲಿ ತುಂಬಾ ರೀಲ್ಸ್‌ ಆಗುತ್ತೆ, ಕೆಲ್ಸ ಇಲ್ಲದವರಿಗೆ ಟೈಂಪಾಸ್‌ ಆಗುತ್ತೆ...., ಫೇಮಸ್‌ ಆಗಲು ಟ್ರೋಲ್‌ ಆಗೋದು ಸಹಜ ಕಣೇ, ಇಲ್ದಿದ್ರೆ ನೋವು ಕಣೇ, ಟ್ರೆಂಡ್‌ ಆಗ್ಲಿ, ಲೈಕ್ಸ್‌ ಬರ್ಲಿ, ಇನ್ನು ಜಾಸ್ತಿ ಶೇರ್‌ ಆಗ್ಲಿ, ಇದು ಅವನಿಗೂ ರೀಚ್‌ ಆಗ್ಲಿ ಎಂಬ ಹಾಡಿನ ಮೂಲಕ ಯುಐ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಿಸಲಾಗಿತ್ತು.
(10 / 10)

    ಹಂಚಿಕೊಳ್ಳಲು ಲೇಖನಗಳು