logo
ಕನ್ನಡ ಸುದ್ದಿ  /  Photo Gallery  /  See The Best Nasa Astronomy Pictures Of The Week

NASA Astronomy Pictures: ವಾರದ ಅತ್ಯುತ್ತಮ ನಾಸಾ ಖಗೋಳೀಯ ಚಿತ್ರಗಳು: ಬನ್ನಿ ಬ್ರಹ್ಮಾಂಡದ ಭಾಗವಾಗಿ..

Mar 31, 2023 02:21 PM IST

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿರುವ ನಾಸಾ, ದಿನನಿತ್ಯದ ತನ್ನ ಅತ್ಯುತ್ತಮ ಖಗೋಳಶಾಸ್ತ್ರೀಯ ಚಿತ್ರಗಳನ್ನು ಬಿಡುಗಡೆ ಮಾಡುತ್ತದೆ. ಪ್ರಪಂಚದಾದ್ಯಂತದ ಖಗೋಳ ಛಾಯಾಗ್ರಾಹಕರು ಕ್ಲಿಕ್ಕಿಸಿ ಈ ಮೋಡಿ ಮಾಡುವ ಛಾಯಾಚಿತ್ರಗಳು, ಮಾನವನ ಬ್ರಹ್ಮಾಂಡದ ಅರಿವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿರುವ ನಾಸಾ, ದಿನನಿತ್ಯದ ತನ್ನ ಅತ್ಯುತ್ತಮ ಖಗೋಳಶಾಸ್ತ್ರೀಯ ಚಿತ್ರಗಳನ್ನು ಬಿಡುಗಡೆ ಮಾಡುತ್ತದೆ. ಪ್ರಪಂಚದಾದ್ಯಂತದ ಖಗೋಳ ಛಾಯಾಗ್ರಾಹಕರು ಕ್ಲಿಕ್ಕಿಸಿ ಈ ಮೋಡಿ ಮಾಡುವ ಛಾಯಾಚಿತ್ರಗಳು, ಮಾನವನ ಬ್ರಹ್ಮಾಂಡದ ಅರಿವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
ಭೂಕಾಂತೀಯ ಚಂಡಮಾರುತವು ಅರೋರಾಗಳನ್ನು ಹುಟ್ಟುಹಾಕುತ್ತದೆ. ಅದೇ ರೀತಿ ಮಾರ್ಚ್ 27ರಂದು ಪ್ರಬಲ ಭೂಕಾಂತೀಯ ಚಂಡಮಾರುತದಿಂದ ಪ್ರಚೋದಿಸಲ್ಪಟ್ಟ ಭವ್ಯವಾದ, ಅರೋರಾ ಅಮೆರಿಕದಲ್ಲಿ ಕಂಡುಬಂದಿತು. ಮಾರ್ಚ್ 27ರಂದು ನಾಸಾದ ಈ ಖಗೋಳಶಾಸ್ತ್ರೀಯ ಚಿತ್ರವು, ಲಕ್ಷಾಂತರ ಲೈಕ್ಸ್‌ಗಳನ್ನು ಪಡೆದಿದೆ.
(1 / 4)
ಭೂಕಾಂತೀಯ ಚಂಡಮಾರುತವು ಅರೋರಾಗಳನ್ನು ಹುಟ್ಟುಹಾಕುತ್ತದೆ. ಅದೇ ರೀತಿ ಮಾರ್ಚ್ 27ರಂದು ಪ್ರಬಲ ಭೂಕಾಂತೀಯ ಚಂಡಮಾರುತದಿಂದ ಪ್ರಚೋದಿಸಲ್ಪಟ್ಟ ಭವ್ಯವಾದ, ಅರೋರಾ ಅಮೆರಿಕದಲ್ಲಿ ಕಂಡುಬಂದಿತು. ಮಾರ್ಚ್ 27ರಂದು ನಾಸಾದ ಈ ಖಗೋಳಶಾಸ್ತ್ರೀಯ ಚಿತ್ರವು, ಲಕ್ಷಾಂತರ ಲೈಕ್ಸ್‌ಗಳನ್ನು ಪಡೆದಿದೆ.(NASA/Cari Letelier)
ಇದು ಕಳೆದ ಏಪ್ರಿಲ್‌ನಲ್ಲಿ ಚಿಲಿಯ ಸೆರೊ ಟೊಲೊಲೊ ಇಂಟರ್-ಅಮೆರಿಕನ್ ವೀಕ್ಷಣಾಲಯದಿಂದ ಸೆರೆಹಿಡಿಯಲಾದ ಬಹು ಹಸಿರು ಫ್ಲಾಶ್ ಸೂರ್ಯಾಸ್ತದ ಆಕರ್ಷಕ ಸ್ನ್ಯಾಪ್‌ಶಾಟ್ ಆಗಿದೆ. ಸೂರ್ಯನು ದಿಗಂತದಲ್ಲಿ ಅಸ್ತಮಿಸಿದಾಗ, ಕೆಲವೊಮ್ಮೆ ಹಸಿರು ಮಿಂಚು ಕಾಣಿಸಿಕೊಳ್ಳಬಹುದು. ಈ ಚಿತ್ರವನ್ನು ಮಾರ್ಚ್‌ 28ರಂದು ನಾಸಾ ಬಿಡುಗಡೆ ಮಾಡಿದೆ.
(2 / 4)
ಇದು ಕಳೆದ ಏಪ್ರಿಲ್‌ನಲ್ಲಿ ಚಿಲಿಯ ಸೆರೊ ಟೊಲೊಲೊ ಇಂಟರ್-ಅಮೆರಿಕನ್ ವೀಕ್ಷಣಾಲಯದಿಂದ ಸೆರೆಹಿಡಿಯಲಾದ ಬಹು ಹಸಿರು ಫ್ಲಾಶ್ ಸೂರ್ಯಾಸ್ತದ ಆಕರ್ಷಕ ಸ್ನ್ಯಾಪ್‌ಶಾಟ್ ಆಗಿದೆ. ಸೂರ್ಯನು ದಿಗಂತದಲ್ಲಿ ಅಸ್ತಮಿಸಿದಾಗ, ಕೆಲವೊಮ್ಮೆ ಹಸಿರು ಮಿಂಚು ಕಾಣಿಸಿಕೊಳ್ಳಬಹುದು. ಈ ಚಿತ್ರವನ್ನು ಮಾರ್ಚ್‌ 28ರಂದು ನಾಸಾ ಬಿಡುಗಡೆ ಮಾಡಿದೆ.(NASA/T. Slovinský/P. Horálek/CTIO)
ದು ಡಾಲ್ಫಿನ್-ಹೆಡ್ ನೀಹಾರಿಕೆಯಾಗಿದ್ದು, ಭೂಮಿಯಿಂದ ಸುಮಾರು 5,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಕ್ಯಾನಿಸ್ ಮೇಜರ್ ನಕ್ಷತ್ರಪುಂಜದಲ್ಲಿ ಇದೆ. ಇದನ್ನು ಬಿಗ್ ಡಾಗ್ ಎಂದೂ ಕರೆಯುತ್ತಾರೆ. ಈ ವಿಲಕ್ಷಣವಾದ ಆಕರ್ಷಕ ನೀಹಾರಿಕೆಯು, ಸುಮಾರು 70,000 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಸುಮಾರು 60 ಜ್ಯೋತಿರ್ವರ್ಷಗಳಷ್ಟು ದೂರ ವ್ಯಾಪಿಸಿದೆ. ಡಾಲ್ಫಿನ್-ಹೆಡ್ ನೀಹಾರಿಕೆಯನ್ನು Sh2-308 ಎಂದು ವರ್ಗೀಕರಿಸಲಾಗಿದೆ. ಈ ಚಿತ್ರವನ್ನು ನಾಸಾ ಮಾರ್ಚ್‌ 29ರಂದು ಬಿಡುಗಡರ ಮಾಡಿದೆ.
(3 / 4)
ದು ಡಾಲ್ಫಿನ್-ಹೆಡ್ ನೀಹಾರಿಕೆಯಾಗಿದ್ದು, ಭೂಮಿಯಿಂದ ಸುಮಾರು 5,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಕ್ಯಾನಿಸ್ ಮೇಜರ್ ನಕ್ಷತ್ರಪುಂಜದಲ್ಲಿ ಇದೆ. ಇದನ್ನು ಬಿಗ್ ಡಾಗ್ ಎಂದೂ ಕರೆಯುತ್ತಾರೆ. ಈ ವಿಲಕ್ಷಣವಾದ ಆಕರ್ಷಕ ನೀಹಾರಿಕೆಯು, ಸುಮಾರು 70,000 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಸುಮಾರು 60 ಜ್ಯೋತಿರ್ವರ್ಷಗಳಷ್ಟು ದೂರ ವ್ಯಾಪಿಸಿದೆ. ಡಾಲ್ಫಿನ್-ಹೆಡ್ ನೀಹಾರಿಕೆಯನ್ನು Sh2-308 ಎಂದು ವರ್ಗೀಕರಿಸಲಾಗಿದೆ. ಈ ಚಿತ್ರವನ್ನು ನಾಸಾ ಮಾರ್ಚ್‌ 29ರಂದು ಬಿಡುಗಡರ ಮಾಡಿದೆ.(NASA/Aleix Roig (AstroCatInfo))
ಇದು ಡಾರ್ಕ್ ದೂಡಾಡ್ ನೀಹಾರಿಕೆಯಾಗಿದ್ದು, ಇದು ಗೋಳಾಕಾರದ ನಕ್ಷತ್ರ ಸಮೂಹದ ಪಕ್ಕದ ಎನ್‌ಜಿಸಿ 4372ನಲ್ಲಿ ನೆಲೆ ಕಂಡಿದೆ. ಇದನ್ನು ಕಾಲ್ಡ್‌ವೆಲ್ 108 ಎಂದೂ ಕರೆಯಲಾಗುತ್ತದೆ, ಗ್ಲೋಬ್ಯುಲರ್ ಸ್ಟಾರ್ ಕ್ಲಸ್ಟರ್ ಮ್ಯೂಕಾದಲ್ಲಿ ಸುಮಾರು 19,000 ಬೆಳಕಿನ ವರ್ಷಗಳ ದೂರದಲ್ಲಿದೆ . ಇದನ್ನು 1826ರಲ್ಲಿ ಸ್ಕಾಟಿಷ್ ಖಗೋಳಶಾಸ್ತ್ರಜ್ಞ ಜೇಮ್ಸ್ ಡನ್‌ಲಾಪ್ ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ವೀಕ್ಷಣಾ ಪೋಸ್ಟ್‌ನಿಂದ ಕಂಡುಹಿಡಿದರು. ಈ ಚಿತ್ರವನ್ನು ನಾಸಾ ಮಾರ್ಚ್ 30ರಂದು ಬಿಡುಗಡೆ ಮಾಡಿದೆ.
(4 / 4)
ಇದು ಡಾರ್ಕ್ ದೂಡಾಡ್ ನೀಹಾರಿಕೆಯಾಗಿದ್ದು, ಇದು ಗೋಳಾಕಾರದ ನಕ್ಷತ್ರ ಸಮೂಹದ ಪಕ್ಕದ ಎನ್‌ಜಿಸಿ 4372ನಲ್ಲಿ ನೆಲೆ ಕಂಡಿದೆ. ಇದನ್ನು ಕಾಲ್ಡ್‌ವೆಲ್ 108 ಎಂದೂ ಕರೆಯಲಾಗುತ್ತದೆ, ಗ್ಲೋಬ್ಯುಲರ್ ಸ್ಟಾರ್ ಕ್ಲಸ್ಟರ್ ಮ್ಯೂಕಾದಲ್ಲಿ ಸುಮಾರು 19,000 ಬೆಳಕಿನ ವರ್ಷಗಳ ದೂರದಲ್ಲಿದೆ . ಇದನ್ನು 1826ರಲ್ಲಿ ಸ್ಕಾಟಿಷ್ ಖಗೋಳಶಾಸ್ತ್ರಜ್ಞ ಜೇಮ್ಸ್ ಡನ್‌ಲಾಪ್ ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ವೀಕ್ಷಣಾ ಪೋಸ್ಟ್‌ನಿಂದ ಕಂಡುಹಿಡಿದರು. ಈ ಚಿತ್ರವನ್ನು ನಾಸಾ ಮಾರ್ಚ್ 30ರಂದು ಬಿಡುಗಡೆ ಮಾಡಿದೆ.(NASA/ESA/Hubble Telescope)
ಇದು ಟೈಟನ್‌ ಉಪಗ್ರಹದ 6 ವಿವಿಧ ಪಾರ್ಶ್ವಗಳನ್ನು ತೋರಿಸುವ ಸ್ನ್ಯಾಪ್‌ಶಾಟ್ ಆಗಿದೆ. ಟೈಟನ್ ಸುಮಾರು 2,575 ಕಿಲೋಮೀಟರ್ ತ್ರಿಜ್ಯವನ್ನು ಹೊಂದಿದೆ ಮತ್ತು ಭೂಮಿಯ ಚಂದ್ರನಿಗಿಂತ ಸುಮಾರು 50 ಪ್ರತಿಶತದಷ್ಟು ಅಗಲವಿದೆ. ಶನಿಯ ಹಿಮಾವೃತ ಚಂದ್ರನು ಶನಿಯಿಂದ ಸುಮಾರು 1.2 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ, ಅದು ಸೂರ್ಯನಿಂದ ಸುಮಾರು 1.4 ಶತಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ಚಿತ್ರವನ್ನು ನಾಸಾ ಮಾರ್ಚ್ 31ರಂಉ ಬಿಡುಗಡೆ ಮಾಡಿದೆ.
(5 / 4)
ಇದು ಟೈಟನ್‌ ಉಪಗ್ರಹದ 6 ವಿವಿಧ ಪಾರ್ಶ್ವಗಳನ್ನು ತೋರಿಸುವ ಸ್ನ್ಯಾಪ್‌ಶಾಟ್ ಆಗಿದೆ. ಟೈಟನ್ ಸುಮಾರು 2,575 ಕಿಲೋಮೀಟರ್ ತ್ರಿಜ್ಯವನ್ನು ಹೊಂದಿದೆ ಮತ್ತು ಭೂಮಿಯ ಚಂದ್ರನಿಗಿಂತ ಸುಮಾರು 50 ಪ್ರತಿಶತದಷ್ಟು ಅಗಲವಿದೆ. ಶನಿಯ ಹಿಮಾವೃತ ಚಂದ್ರನು ಶನಿಯಿಂದ ಸುಮಾರು 1.2 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ, ಅದು ಸೂರ್ಯನಿಂದ ಸುಮಾರು 1.4 ಶತಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ಚಿತ್ರವನ್ನು ನಾಸಾ ಮಾರ್ಚ್ 31ರಂಉ ಬಿಡುಗಡೆ ಮಾಡಿದೆ.(NASA/ESA/VIMS Team)

    ಹಂಚಿಕೊಳ್ಳಲು ಲೇಖನಗಳು