logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾದಗಳು ಟ್ಯಾನ್ ಆಗಿವೆಯೇ; ಪಾದಗಳ ಸೌಂದರ್ಯ ಹೆಚ್ಚಿಸಲು ಈ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ

ಪಾದಗಳು ಟ್ಯಾನ್ ಆಗಿವೆಯೇ; ಪಾದಗಳ ಸೌಂದರ್ಯ ಹೆಚ್ಚಿಸಲು ಈ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ

Oct 08, 2024 05:31 PM IST

ಮುಖದ ಸೌಂದರ್ಯ ಮಾತ್ರವಲ್ಲ ಪಾದಗಳ ಸೌಂದರ್ಯದ ಬಗ್ಗೆಯೂ ಬಹುತೇಕ ಹೆಣ್ಮಕ್ಕಳು ಕಾಳಜಿ ವಹಿಸುತ್ತಾರೆ. ಸೂರ್ಯನ ಬಿಸಿಲಿನಿಂದ ಪಾದಗಳು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇದಕ್ಕಾಗಿ ಕೆಲವರು ಬ್ಯೂಟಿಪಾರ್ಲರ್‌ಗಳ ಮೊರೆ ಹೋಗುತ್ತಾರೆ. ಮನೆಯಲ್ಲೇ ಇರುವ ಕೆಲ ಪದಾರ್ಥಗಳನ್ನು ಬಳಸಿ ಈ ಟ್ಯಾನ್ ತೆಗೆಯಬಹುದು.

ಮುಖದ ಸೌಂದರ್ಯ ಮಾತ್ರವಲ್ಲ ಪಾದಗಳ ಸೌಂದರ್ಯದ ಬಗ್ಗೆಯೂ ಬಹುತೇಕ ಹೆಣ್ಮಕ್ಕಳು ಕಾಳಜಿ ವಹಿಸುತ್ತಾರೆ. ಸೂರ್ಯನ ಬಿಸಿಲಿನಿಂದ ಪಾದಗಳು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇದಕ್ಕಾಗಿ ಕೆಲವರು ಬ್ಯೂಟಿಪಾರ್ಲರ್‌ಗಳ ಮೊರೆ ಹೋಗುತ್ತಾರೆ. ಮನೆಯಲ್ಲೇ ಇರುವ ಕೆಲ ಪದಾರ್ಥಗಳನ್ನು ಬಳಸಿ ಈ ಟ್ಯಾನ್ ತೆಗೆಯಬಹುದು.
ತ್ವಚೆಯ ಆರೈಕೆಯ ರೀತಿಯೇ ಪಾದಗಳ ಆರೈಕೆ ಮಾಡಿದ, ಪಾದಗಳು ಹೊಳೆಯುತ್ತವೆ. ಇಲ್ಲದಿದ್ದಲ್ಲಿ ಪಾದಗಳು ಟ್ಯಾನ್ ಆಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಪಾದಗಳ ಸೌಂದರ್ಯಕ್ಕಾಗಿ ಮನೆಯಲ್ಲೇ ಸುಲಭವಾಗಿ ಸಿಗುವ ಮನೆಮದ್ದು ಉಪಯೋಗಿಸಿ ಪಾದಗಳ ಕಾಂತಿಯನ್ನು ಹೆಚ್ಚಿಸಬಹುದು. ಪಾದಗಳಿಂದ ಕಂದುಬಣ್ಣವನ್ನು ಹೋಗಲಾಡಿಸಲು ನೈಸರ್ಗಿಕ ವಿಧಾನಗಳು ಇಲ್ಲಿವೆ:
(1 / 9)
ತ್ವಚೆಯ ಆರೈಕೆಯ ರೀತಿಯೇ ಪಾದಗಳ ಆರೈಕೆ ಮಾಡಿದ, ಪಾದಗಳು ಹೊಳೆಯುತ್ತವೆ. ಇಲ್ಲದಿದ್ದಲ್ಲಿ ಪಾದಗಳು ಟ್ಯಾನ್ ಆಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಪಾದಗಳ ಸೌಂದರ್ಯಕ್ಕಾಗಿ ಮನೆಯಲ್ಲೇ ಸುಲಭವಾಗಿ ಸಿಗುವ ಮನೆಮದ್ದು ಉಪಯೋಗಿಸಿ ಪಾದಗಳ ಕಾಂತಿಯನ್ನು ಹೆಚ್ಚಿಸಬಹುದು. ಪಾದಗಳಿಂದ ಕಂದುಬಣ್ಣವನ್ನು ಹೋಗಲಾಡಿಸಲು ನೈಸರ್ಗಿಕ ವಿಧಾನಗಳು ಇಲ್ಲಿವೆ:(freepik)
ಓಟ್ ಮೀಲ್ ಮತ್ತು ಮಜ್ಜಿಗೆ: ಓಟ್ ಮೀಲ್ ಮತ್ತು ಮಜ್ಜಿಗೆ ಮಿಶ್ರಣ ಮಾಡಿ. ಈ ನೈಸರ್ಗಿಕ ಪೇಸ್ಟ್ ಅನ್ನು ಚರ್ಮದ ಕಂದುಬಣ್ಣದ ಪ್ರದೇಶಗಳಿಗೆ ಹಚ್ಚಿ, ಕೆಲವು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. 20 ರಿಂದ 30 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ತಂಪಾದ ನೀರಿನಿಂದ ತೊಳೆಯಿರಿ. 
(2 / 9)
ಓಟ್ ಮೀಲ್ ಮತ್ತು ಮಜ್ಜಿಗೆ: ಓಟ್ ಮೀಲ್ ಮತ್ತು ಮಜ್ಜಿಗೆ ಮಿಶ್ರಣ ಮಾಡಿ. ಈ ನೈಸರ್ಗಿಕ ಪೇಸ್ಟ್ ಅನ್ನು ಚರ್ಮದ ಕಂದುಬಣ್ಣದ ಪ್ರದೇಶಗಳಿಗೆ ಹಚ್ಚಿ, ಕೆಲವು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. 20 ರಿಂದ 30 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ತಂಪಾದ ನೀರಿನಿಂದ ತೊಳೆಯಿರಿ. (freepik)
ಮೊಸರು ಮತ್ತು ಅರಿಶಿನ: ಒಂದು ಚಮಚ ಮೊಸರು ಮತ್ತು ಸ್ವಲ್ಪ ಅರಿಶಿನವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪಾದಗಳಿಗೆ ಅನ್ವಯಿಸಿ. ಅದನ್ನು ತೊಳೆಯುವ ಮೊದಲು 20 ರಿಂದ 30 ನಿಮಿಷಗಳ ಕಾಲ ಬಿಡಿ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಚರ್ಮದ ಕಿರಿಕಿರಿಯನ್ನು ತಪ್ಪಿಸುತ್ತದೆ. ಅರಿಶಿನವು ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(3 / 9)
ಮೊಸರು ಮತ್ತು ಅರಿಶಿನ: ಒಂದು ಚಮಚ ಮೊಸರು ಮತ್ತು ಸ್ವಲ್ಪ ಅರಿಶಿನವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪಾದಗಳಿಗೆ ಅನ್ವಯಿಸಿ. ಅದನ್ನು ತೊಳೆಯುವ ಮೊದಲು 20 ರಿಂದ 30 ನಿಮಿಷಗಳ ಕಾಲ ಬಿಡಿ. ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು, ಚರ್ಮದ ಕಿರಿಕಿರಿಯನ್ನು ತಪ್ಪಿಸುತ್ತದೆ. ಅರಿಶಿನವು ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.(freepik)
ಅಲೋವೆರಾ ಜೆಲ್: ಮಲಗುವ ಮುನ್ನ ತಾಜಾ ಅಲೋವೆರಾ ಜೆಲ್ ಅನ್ನು ನೇರವಾಗಿ ನಿಮ್ಮ ಟ್ಯಾನ್ ಆದ ಪಾದಗಳಿಗೆ ಅನ್ವಯಿಸಿ. ನಂತರ ಬೆಳಿಗ್ಗೆ ಎದ್ದ ನಂತರ ಪಾದಗಳನ್ನು ತೊಳೆಯಿರಿ. ಅಲೋವೆರಾ ಪಿಗ್ಮೆಂಟೇಶನ್ ಅನ್ನು ಕೂಡ ಕಡಿಮೆ ಮಾಡಬಹುದು.
(4 / 9)
ಅಲೋವೆರಾ ಜೆಲ್: ಮಲಗುವ ಮುನ್ನ ತಾಜಾ ಅಲೋವೆರಾ ಜೆಲ್ ಅನ್ನು ನೇರವಾಗಿ ನಿಮ್ಮ ಟ್ಯಾನ್ ಆದ ಪಾದಗಳಿಗೆ ಅನ್ವಯಿಸಿ. ನಂತರ ಬೆಳಿಗ್ಗೆ ಎದ್ದ ನಂತರ ಪಾದಗಳನ್ನು ತೊಳೆಯಿರಿ. ಅಲೋವೆರಾ ಪಿಗ್ಮೆಂಟೇಶನ್ ಅನ್ನು ಕೂಡ ಕಡಿಮೆ ಮಾಡಬಹುದು.(freepik)
ಆಲೂಗಡ್ಡೆ: ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಹಿಂಡಿ. ಆಲೂಗಡ್ಡೆ ರಸವನ್ನು ಟ್ಯಾನ್ ಆದ ಪ್ರದೇಶಗಳಿಗೆ ಹಚ್ಚಿ, 20 ರಿಂದ 30 ನಿಮಿಷಗಳ ಕಾಲ ಬಿಡಿ. ಆಲೂಗಡ್ಡೆ ರಸವು ಕಿಣ್ವಗಳನ್ನು ಹೊಂದಿರುತ್ತದೆ. ಅದು ಚರ್ಮವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.
(5 / 9)
ಆಲೂಗಡ್ಡೆ: ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಹಿಂಡಿ. ಆಲೂಗಡ್ಡೆ ರಸವನ್ನು ಟ್ಯಾನ್ ಆದ ಪ್ರದೇಶಗಳಿಗೆ ಹಚ್ಚಿ, 20 ರಿಂದ 30 ನಿಮಿಷಗಳ ಕಾಲ ಬಿಡಿ. ಆಲೂಗಡ್ಡೆ ರಸವು ಕಿಣ್ವಗಳನ್ನು ಹೊಂದಿರುತ್ತದೆ. ಅದು ಚರ್ಮವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.(freepik)
ಟೊಮೆಟೊ: ತಾಜಾ ಟೊಮೆಟೊ ತಿರುಳನ್ನು ಟ್ಯಾನ್ ಮಾಡಿದ ಪಾದಗಳಿಗೆ ಅನ್ವಯಿಸಿ. 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತೊಳೆಯಿರಿ. ಟೊಮೆಟೊ ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಅದು ಟ್ಯಾನ್ ಅನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.
(6 / 9)
ಟೊಮೆಟೊ: ತಾಜಾ ಟೊಮೆಟೊ ತಿರುಳನ್ನು ಟ್ಯಾನ್ ಮಾಡಿದ ಪಾದಗಳಿಗೆ ಅನ್ವಯಿಸಿ. 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತೊಳೆಯಿರಿ. ಟೊಮೆಟೊ ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಅದು ಟ್ಯಾನ್ ಅನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.(freepik)
ಕಡಲೆ ಹಿಟ್ಟು ಮತ್ತು ಅರಿಶಿನ: ಒಂದು ಚಿಟಿಕೆ ಅರಿಶಿನ ಮತ್ತು ಹಾಲಿನೊಂದಿಗೆ ಕಡಲೇ ಹಿಟ್ಟನ್ನು ಮಿಶ್ರಣ ಮಾಡಿ. ಈ ಪೇಸ್ಟ್ ದಪ್ಪವಾಗಿರಲಿ. ಇದನ್ನು ಪಾದಗಳಿಗೆ ಹಚ್ಚಿ, ಒಣಗುವವರೆಗೆ ಹಾಗೆಯೇ ಬಿಡಿ. ನಂತರ ಅದನ್ನು ನಿಧಾನವಾಗಿ ಸ್ಕ್ರಬ್ ಮಾಡಿ ನೀರಿನಿಂದ ತೊಳೆಯಿರಿ. 
(7 / 9)
ಕಡಲೆ ಹಿಟ್ಟು ಮತ್ತು ಅರಿಶಿನ: ಒಂದು ಚಿಟಿಕೆ ಅರಿಶಿನ ಮತ್ತು ಹಾಲಿನೊಂದಿಗೆ ಕಡಲೇ ಹಿಟ್ಟನ್ನು ಮಿಶ್ರಣ ಮಾಡಿ. ಈ ಪೇಸ್ಟ್ ದಪ್ಪವಾಗಿರಲಿ. ಇದನ್ನು ಪಾದಗಳಿಗೆ ಹಚ್ಚಿ, ಒಣಗುವವರೆಗೆ ಹಾಗೆಯೇ ಬಿಡಿ. ನಂತರ ಅದನ್ನು ನಿಧಾನವಾಗಿ ಸ್ಕ್ರಬ್ ಮಾಡಿ ನೀರಿನಿಂದ ತೊಳೆಯಿರಿ. (freepik)
ಸೌತೆಕಾಯಿ: ಸೌತೆಕಾಯಿಯನ್ನು ತುರಿದು ಅದರ ರಸವನ್ನು ಕಂದುಬಣ್ಣದ ಚರ್ಮಕ್ಕೆ ಹಚ್ಚಿ. ಸೌತೆಕಾಯಿಯ ರಸವನ್ನು ಪಾದಗಳ ಮೇಲೆ ಸುಮಾರು 20 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ತೊಳೆಯಿರಿ. ಸೌತೆಕಾಯಿಯು ಚರ್ಮವನ್ನು ತಂಪಾಗಿಸುತ್ತದೆ ಮತ್ತು ಟ್ಯಾನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(8 / 9)
ಸೌತೆಕಾಯಿ: ಸೌತೆಕಾಯಿಯನ್ನು ತುರಿದು ಅದರ ರಸವನ್ನು ಕಂದುಬಣ್ಣದ ಚರ್ಮಕ್ಕೆ ಹಚ್ಚಿ. ಸೌತೆಕಾಯಿಯ ರಸವನ್ನು ಪಾದಗಳ ಮೇಲೆ ಸುಮಾರು 20 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ತೊಳೆಯಿರಿ. ಸೌತೆಕಾಯಿಯು ಚರ್ಮವನ್ನು ತಂಪಾಗಿಸುತ್ತದೆ ಮತ್ತು ಟ್ಯಾನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.(freepik)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
(9 / 9)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ

    ಹಂಚಿಕೊಳ್ಳಲು ಲೇಖನಗಳು